ಕನ್ನಡ ರಾಪರ್ ಚಂದನ್ ಶೆಟ್ಟಿ ಅವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಇವರು ಇತ್ತೀಚೆಗೆ ವಿಚ್ಛೇದನದ ಕಾರಣಕ್ಕೆ ಹೆಚ್ಚು ಸುದ್ದಿಯಾಗಿದ್ದಾರೆ. ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಚಂದನ್ ಶೆಟ್ಟಿ, ಕಳೆದ ವರ್ಷ ವಿಚ್ಛೇದನ ನೀಡಿದರು. ಇಬ್ಬರು ಒಪ್ಪಿಕೊಂಡು, ಜೊತೆಯಲ್ಲಿ ಇರೋದಕ್ಕೆ ಸಾಧ್ಯ ಆಗೋದಿಲ್ಲ ಎಂದು ನಿರ್ಧಾರ ಮಾಡಿದ ನಂತರವೇ ವಿಚ್ಛೇದನ ಪಡೆದಿದ್ದು. ಆದರೆ ಕೆಲವು ದಿನಗಳಿಂದ ಈ ಜೋಡಿ ಬಗ್ಗೆ ಬೇರೆಯದೇ ಸುದ್ದಿ ಕೇಳಿಬರುತ್ತಿದೆ. ಚಂದನ್ ಹಾಗೂ ನಿವೇದಿತಾ ದೂರ ಆಗಿದ್ದಾಯ್ತು, ಚಂದನ್ ಶೆಟ್ಟಿ ಸಂಜನಾ ಆನಂದ್ ಮದುವೆ ಆಗ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಅದೆಲ್ಲವೂ ಒಂದು ಕಡೆಯಾದರೆ ಈಗ ಚಂದನ್ ಶೆಟ್ಟಿ ಅವರು ಎರಡನೇ ಮದುವೆ ಬಗ್ಗೆ ನೇರವಾಗಿ ಮಾತನಾಡಿದ್ದಾರೆ, ಹುಡುಗಿ ಹೇಗಿರಬೇಕು ಎಂದು ಕೂಡ ತಿಳಿಸಿದ್ದಾರೆ ಚಂದನ್ ಶೆಟ್ಟಿ.
ಈಗಿನ ಸೋಷಿಯಲ್ ಮೀಡಿಯಾ ಯುಗ ಹೇಗಿದೆ ಅಂದ್ರೆ, ಒಂದು ಸೆಲೆಬ್ರಿಟಿ ಜೋಡಿ ವಿಚ್ಛೇದನ ಪಡೆಯುತ್ತಾರೆ ಅಂದ್ರೆ, ಅವರ ಬಗ್ಗೆ ಇಲ್ಲ ಸಲ್ಲದ ವಿಚಾರಗಳನ್ನು ಹಬ್ಬಿಸುವುದು, ಇನ್ಯಾರದ್ದೋ ಜೊತೆಗೆ ಸಂಬಂಧ ಇದೆ ಅವರಿಬ್ಬರು ಮದುವೆ ಆಗುತ್ತಾರೆ ಎಂದು ಹೇಳುವುದು ಇದೆಲ್ಲವೂ ತುಂಬಾ ಕಾಮನ್ ಆಗಿದೆ. ಕೆಲವು ಸೆಲೆಬ್ರಿಟಿಗಳಿಗೆ ಇದರಿಂದ ತೊಂದರೆ ಆಗುತ್ತಿರುವುದು ನಿಜ. ಜನರು ಸುಮ್ಮನೆ ಗಾಸಿಪ್ ಹಬ್ಬಿಸಿ ಬಿಡುತ್ತಾರೆ. ಆದರೆ ಅವರ ಫ್ಯಾಮಿಲಿ ವಲಯದಲ್ಲಿ, ಸ್ನೇಹಿತರ ವಲಯದಲ್ಲಿ ಎಲ್ಲಾ ಕಡೆ ಇದೇ ವಿಚಾರ ಚರ್ಚೆ ಆಗೋ ಮೂಲಕ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವ ಸೂಕ್ಷ್ಮ ವಿಚಾರ ಈ ರೀತಿಯ ಸುದ್ದಿಗಳನ್ನು ಹಬ್ಬಿಸುವವರಿಗೆ ಗೊತ್ತಿರುವುದಿಲ್ಲ. ಚಂದನ್ ಶೆಟ್ಟಿ ಹಾಗೂ ಸಂಜನಾ ಆನಂದ್ ಅವರ ವಿಚಾರದಲ್ಲಿ ಸಹ ಹೀಗೆ ಆಗಿತ್ತು.

ಆ ಗಾಸಿಪ್ ಎಲ್ಲದಕ್ಕೂ ಸ್ವತಃ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದರು. ತಾವಿಬ್ಬರು ಒಂದು ಹಾಡಿನಲ್ಲಿ ನಟಿಸಿದ್ದು ಅಷ್ಟೇ, ಇನ್ನೇನು ಇಲ್ಲ ಎಂದಿದ್ದರು. ಸಂಜನಾ ಆನಂದ್ ಸಹ ಈ ವಿಚಾರಕ್ಕೆ ಸ್ಪಷ್ಟನೆ ಕೊಟ್ಟರು. ಇದರಿಂದ ತಿಳಿದು ಬರುವುದು ಏನೆಂದರೆ, ಒಳ್ಳೆಯ ವಿಚಾರಗಳು ಎಲ್ಲಿಯೂ ಬೇಗ ಹರಡುವುದಿಲ್ಲ. ಆದರೆ ಗಾಸಿಪ್ ಗಳು ಬಹಳ ಬೇಗ ಎಲ್ಲಾ ಕಡೆ ಪ್ರಯಾಣ ಮಾಡುತ್ತದೆ. ಚಂದನ್ ಶೆಟ್ಟಿ ಅವರ ವಿಚಾರದಲ್ಲಿ ಆಗುತ್ತಿರುವುದು ಕೂಡ ಅದೇ ಆಗಿದೆ.
ಇನ್ನು ಚಂದನ್ ಶೆಟ್ಟಿ ಅವರು ಕೆಲವು ದಿನಗಳ ಹಿಂದೆಯೇ ಈ ಎಲ್ಲಾ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದರು. ನಿವೇದಿತಾ ಹಾಗೂ ತಾವು ಪ್ರೀತಿಸಿ ಮದುವೆಯಾದ ಜೋಡಿ.. ಶುರುವಿನಲ್ಲಿ ಇವರ ಸಂಸಾರ ಚೆನ್ನಾಗಿಯೇ ನಡೆದುಕೊಂಡು ಹೋದರೂ ಸಹ, ನಂತರ ಇಬ್ಬರಿಗೆ ಬೇಕಿದ್ದು ಬೇರೆಯೇ ಆಯಿತು.
ಇಬ್ಬರಿಗು ತಮ್ಮ ಕೆರಿಯರ್ ಬಗ್ಗೆ ಗಮನ ಹರಿಸಬೇಕು ಎನ್ನುವ ಆಸಕ್ತಿ ಶುರುವಾಯಿತು. ಅದರಲ್ಲೂ ನಿವೇದಿತಾ ಅವರಿಗೆ ಈ ಆಸಕ್ತಿ ಹೆಚ್ಚಾಗಿದ್ದ ಕಾರಣ, ಚಂದನ್ ಅವರಿಗೂ ತಾವು ತಮ್ಮ ಕೆರಿಯರ್ ನಲ್ಲಿ ಬೆಳೀಬೇಕು ಎಂದು ಕನಸು ಇದ್ದ ಕಾರಣ ಇಬ್ಬರೂ ಕೂತು ಮಾತನಾಡಿ, ಬೇರೆ ಆಗುವ ನಿರ್ಧಾರ ಮಾಡಿದರಂತೆ. ದೂರ ಆಗೋದಕ್ಕೆ ಆರೋಪಗಳೇ ಬೇಕಿಲ್ಲ, ಕಾರಣ ಇದ್ದರೆ ಸಾಕು ಎನ್ನುತ್ತಾರೆ ಚಂದನ್ ಶೆಟ್ಟಿ. ಈ ರೀತಿಯಲ್ಲಿ ಈ ಜೋಡಿ ಬೇರೆ ಆಗಿದ್ದಾರೆ. ತಮ್ಮ ನಡುವೆ ಮುನಿಸು ಇಲ್ಲದ ಕಾರಣಕ್ಕೆ ಇಬ್ಬರೂ ಕೂಡ, ಫ್ರೆಂಡ್ಲಿ ಆಗಿ ಕೈಕೈ ಹಿಡಿದು ಕೋರ್ಟ್ ಇಂದ ಹೊರಗಡೆ ಹೋದರು. ಇನ್ನು ನಿವೇದಿತಾ ಎಲ್ಲೇ ಇದ್ರು ಚೆನ್ನಾಗಿರಲಿ ಅನ್ನೋದೇ ಚಂದನ್ ಶೆಟ್ಟಿ ಆಸೆ. ಇದನ್ನ ಕೇಳಿದ್ರೆ ಚಂದನ್ ಅವರ ಮನಸ್ಸಲ್ಲಿ ಇನ್ನೂ ಆ ಪ್ರೀತಿ ಇದೆ ಅನ್ನೋದು ಗೊತ್ತಾಗುತ್ತದೆ.

ಈ ಜೋಡಿ ಬಹಳ ಚೆನ್ನಾಗಿಯು ಇದ್ದರು, ಇವರ ಪೋಸ್ಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಸಹ ಆಗಿತ್ತು. ಎಲ್ಲಾ ಚೆನ್ನಾಗಿದೆ, ಇಬ್ಬರು ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡುತ್ತಾರೆ ಎಂದು ಎಲ್ಲರೂ ಅಂದುಕೊಳ್ಳುವ ವೇಳೆಗೆ ಇಬ್ಬರು ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಗೊತ್ತಾಯಿತು. ಕೊನೆಗೆ ಇಬ್ಬರು ಕೂಡ ಜೊತೆಯಾಗಿಯೇ ಬಂದು ವಿಚ್ಛೇದನ ಪಡೆದರು. ಈಗ ಪರಿಸ್ಥಿತಿ ಹೇಗಿದೆ ಅಂದ್ರೆ ಚಂದನ್ ಶೆಟ್ಟಿ ಅವರು ಎಲ್ಲಿಯೇ ಹೋದರೂ ಎರಡನೇ ಮದುವೆ ಬಗ್ಗೆ ಕೇಳುತ್ತಾರಂತೆ. ಯಾವಾಗ ಇನ್ನೊಂದು ಮದುವೆ ಆಗ್ತೀರಾ ಅನ್ನೋ ವಿಷಯ ಚರ್ಚೆಯಲ್ಲಿ ಇದ್ದೇ ಇರುತ್ತದೆ. ಚಂದನ್ ಅವರಿಗೆ ನೇರವಾಗಿ ಈ ಪ್ರಶ್ನೆ ಕೇಳಿರುವುದು ಇದೆ. ಆದರೆ ಚಂದನ್ ಅವರು ಎರಡನೇ ಮದುವೆ ಬಗ್ಗೆ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಚಂದನ್ ಅವರು ಹೇಳಿರುವುದು ಏನು ಎಂದರೆ.. ಒಂದು ಸಾರಿ ಮಾಡಿದ ತಪ್ಪನ್ನು ಮತ್ತೆ ಮಾಡುವುದಕ್ಕೆ ಇಷ್ಟವಿಲ್ಲ ಎಂದು ಚಂದನ್ ಅವರು ತಿಳಿಸಿದ್ದಾರೆ. ಇನ್ನು ಚಂದನ್ ಶೆಟ್ಟಿ ಅವರ ಮನೆಯಲ್ಲಿ ಅವರ ತಂದೆ ತಾಯಿ ಕೂಡ ನಮಗೂ ವಯಸ್ಸಾಯ್ತು ಬೇಗ ಜೀವನದಲ್ಲಿ ಸೆಟ್ಲ್ ಆಗು ಎಂದು ಎಮೋಷನಲ್ ಡೈಲಾಗ್ ಗಳನ್ನು ಹೇಳುತ್ತಾರಂತೆ. ಚಂದನ್ ಅವರಿಗೆ ಕೂಡ ಒಂಟಿಯಾಗಿ ಇರುವುದಕ್ಕೆ ಇಷ್ಟವಿಲ್ಲ, ಒಳ್ಳೆಯ ಹುಡುಗಿ ಸಿಕ್ಕರೆ ಖಂಡಿತವಾಗಿ ಮದುವೆ ಆಗುತ್ತೇನೆ ಎಂದು ಚಂದನ್ ಹೇಳಿದ್ದು, ತಾವು ಮದುವೆ ಆಗುವ ಹುಡುಗಿ ಹೇಗಿರಬೇಕು ಎಂದು ಇಂಟರ್ವ್ಯೂ ನಲ್ಲಿ ತಿಳಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇಲ್ಲದ ಹುಡುಗಿಯನ್ನು ಮದುವೆ ಆಗುವುದಕ್ಕೆ ಬಯಸಿದ್ದಾರೆ ಚಂದನ್ ಶೆಟ್ಟಿ. ಹೌದು, ಇದು ಒಂದು ರೀತಿ ಒಳ್ಳೆಯ ನಿರ್ಧಾರ ಆಗಿದೆ.
ಇಬ್ಬರೂ ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಗಳಾಗಿ ಬಿಟ್ಟರೆ, ಒಬ್ಬರ ಜೊತೆ ಒಬ್ಬರು ಹೆಚ್ಚು ಸಮಯ ಕಳೆಯೋಕೆ ಆಗೋದಿಲ್ಲ. ಇಬ್ಬರು ಹೊರಗಡೆ ಇರುವಾಗ, ಭೇಟಿಯಾಗೋದೇ ಕಡಿಮೆ ಆಗಿಬಿಡುತ್ತದೆ. ಹಾಗಾಗಿ ಸಾರ್ವಜನಿಕ ಜೀವನ ಇಲ್ಲದ ಹುಡುಗಿಯನ್ನು ಮದುವೆ ಆಗುವುದೇ ಒಳ್ಳೆಯದು ಎಂದು ಹೇಳುತ್ತಾರೆ ಚಂದನ್ ಶೆಟ್ಟಿ. ಇವರು ಇಷ್ಟಪಡುವಂಥ ಹುಡುಗಿ ಬೇಗ ಇವರ ಜೀವನಕ್ಕೆ ವಾಪಸ್ ಬಂದು, ಎಲ್ಲವೂ ಒಳ್ಳೆಯದಾಗಲಿ, ಚಂದನ್ ಶೆಟ್ಟಿ ಅವರು ಬೇಗ ಮತ್ತೆ ಮದುವೆಯಾಗಲಿ ಎಂದು ನಾವು ಸಹ ಹಾರೈಸೋಣ..



