ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆದ ನಿವೇದಿತಾ ಗೌಡ ಇಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗೋರಲ್ಲಿ ಒಬ್ಬರು. ಇವರು ಒಂದು ವಿಡಿಯೋ ಪೋಸ್ಟ್ ಮಾಡಿದರೆ, ಸಾವಿರಾರು ನೆಗಟಿವ್ ಕಾಮೆಂಟ್ಸ್, ಕೆಟ್ಟ ಕಾಮೆಂಟ್ಸ್ ಗಳು ಬರುತ್ತಲೇ ಇರುತ್ತವೆ. ಆದರೆ ಇದಕ್ಕೆಲ್ಲಾ ನಿವೇದಿತಾ ಗೌಡ ತಲೆಕೆಡಿಸಿಕೊಳ್ಳುವುದೇ ಇಲ್ಲ. ಯಾವುದೇ ಕಾರಣಕ್ಕೆ ವಿಡಿಯೋ ಪೋಸ್ಟ್ ಮಾಡೋದನ್ನ ಬಿಡದ ನಿವೇದಿತಾ, ಇನ್ಸ್ಟಾಗ್ರಾಮ್ ನಲ್ಲಿ ದಿನಕ್ಕೊಂದು ರೀಲ್ಸ್ ಹಾಕುತ್ತಲೇ ಇರುತ್ತಾರೆ. ಇವರಿಗೆ ಬರುವ ನೆಗಟಿವ್ ಕಾಮೆಂಟ್ಸ್ ಗಳನ್ನು ಓದಿದರೆ ಎಂಥವರಿಗು ಯಪ್ಪಾ ಇದೆಲ್ಲಾ ಬೇಕಾ ಎಂದು ಅನ್ನಿಸದೆ ಇರದು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳೋದಿಲ್ಲ ನಿವೇದಿತಾ. ಇದೀಗ ಇವರು ಮತ್ತೆ ಶೇರ್ ಮಾಡಿರುವ ಬಾತ್ ರೂಮ್ ವಿಡಿಯೋ ಒಂದು ಸಿಕ್ಕಾಪಟ್ಟೆ ಟ್ರೋಲ್ ಆಗಿದೆ.

ಈ ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾದಾಗಿನಿಂದ ಜನರು ಎಲ್ಲರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಕಾಮೆಂಟ್ಸ್ ಬರೆಯುವುದು ಕೂಡ ಜಾಸ್ತಿಯೇ ಆಗಿದೆ. ಅದು ಸೆಲೆಬ್ರಿಟಿಯೇ ಆಗಿರಲಿ, ಅಥವಾ ಕಿರುತೆರೆಯಲ್ಲಿ ಗುರುತಿಸಿಕೊಂಡವರೆ ಆಗಿರಲಿ, ಅವರ ಬಗ್ಗೆ ಪಾಸಿಟಿವ್ ಗಿಂತ ನೆಗಟಿವ್ ಕಾಮೆಂಟ್ ಗಳು ಬರುವುದೇ ಜಾಸ್ತಿ. ಕೆಲವರು ಇದರ ಬಗ್ಗೆ ತಲೆಕೆಡಿಸಿಕೊಂಡು ಕೂತರೆ, ಇನ್ನು ಕೆಲವರು ತಮ್ಮ ಮನಸ್ಸಿಗೆ ಬಂದಿದ್ದನ್ನು ಮಾಡುತ್ತಾರೆ. ಅದೇ ವರ್ಗಕ್ಕೆ ಸೇರಿದವರು, ಇದುವರೆಗೂ ಎಷ್ಟೇ ನೆಗಟಿವ್ ಕಾಮೆಂಟ್ಸ್ ಗಳು ಬಂದಿದ್ದರು ಸಹ, ತಮ್ಮ ಪಾಡಿಗೆ ತಾವು ಇರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ನಿವೇದಿತಾ ಗೌಡ ಕೆಲವು ಸಾರಿ ಈ ರೀತಿ ಬರುವ ಕಾಮೆಂಟ್ಸ್ ಗಳಿಗೆ ರಿಪ್ಲೈ ಮಾಡುತ್ತಾರೆ. ನೆಗಟಿವ್ ಕಾಮೆಂಟ್ಸ್ ಹಾಕೋರಿಗೆ ಉತ್ತರ ಕೊಡುತ್ತಾರೆ. ಕೆಲವು ದಿನಗಳ ಹಿಂದೆ ಇದು ನಡೆದಿತ್ತು.
ನಿವೇದಿತಾ ಗೌಡ ಈಗ ಕಲರ್ಸ್ ಕನ್ನಡ ವಾಹಿನಿಯ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಶೋ ಇಂದ ಇವರಿಗೆ ಮತ್ತೆ ಲೈಮ್ ಲೈಟ್ ಸಿಗುತ್ತಿದೆ. ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ನಂತರ ನಿವೇದಿತಾ ಗೌಡ ಕಾಣಿಸಿಕೊಳ್ಳುತ್ತಿರುವ ಮೊದಲ ಶೋ ಇದು. ಮೊನ್ನೆಯಷ್ಟೇ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ನಿವೇದಿತಾ ಗೌಡ ತಮ್ಮ ತಂದೆಯ ಬಗ್ಗೆ ಮಾತನಾಡಿ ಭಾವುಕರಾದರು. ನಿವೇದಿತಾ ಅವರ ಲೈಫ್ ನಲ್ಲಿ ಅಪ್ಪನ ಸಪೋರ್ಟ್ ತುಂಬಾ ಇದೆ. ಆ ವಿಷಯದ ಬಗ್ಗೆ ಅವರು ಶೋನಲ್ಲಿ ಮಾತನಾಡಿ, ತಂದೆಯನ್ನು ನೆನೆದು ಕಣ್ಣೀರು ಹಾಕಿದ್ದರು. ಜೀವನದಲ್ಲಿ ಅನಿರೀಕ್ಷಿತವಾದ ಅಂದುಕೊಳ್ಳದ ಘಟನೆಗಳು ನಡೆದು, ನಿವೇದಿತಾ ಅವರು ಕುಗ್ಗಿದಾಗ, ಅವರ ತಂದೆ ಜೊತೆಯಲ್ಲಿ ನಿಂತು ಸಪೋರ್ಟ್ ಮಾಡಿದರಂತೆ. ಅಪ್ಪನ ಸಪೋರ್ಟ್ ಇಲ್ಲದೇ ಹೋಗಿದ್ದರೆ, ಇಂದು ನಾನು ಸ್ಟ್ರಾಂಗ್ ಆಗಿ ನಿಂತಿರೋದಕ್ಕೆ ಸಾಧ್ಯ ಆಗಿದೆ ಎಂದು ನಿವೇದಿತಾ ಗೌಗೌಡ ಹೇಳಿದರು.

ನಿವೇದಿತಾ ಅಪ್ಪನ ಬಗ್ಗೆ ಹೇಳಿದ ಮಾತುಗಳನ್ನ ಕೇಳಿ, ಇತರ ಸ್ಪರ್ಧಿಗಳು ಸಹ ಭಾವುಕರಾದರು. ಈ ಎಪಿಸೋಡ್ ಬಂದ ಒಂದೆರಡೇ ದಿನಕ್ಕೆ ನಿವೇದಿತಾ ಗೌಡ ತಮ್ಮ ತಂದೆಯವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದರು, ಅಲ್ಲದೇ ಮತ್ತೊಂದು ರೀಲ್ಸ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದರು. ಬ್ಲ್ಯಾಕ್ ಡ್ರೆಸ್ ಧರಿಸಿ ಬಾತ್ ರೂಮ್ ನಲ್ಲಿ ರೀಲ್ಸ್ ಮಾಡಿದ್ದು, ಸಖತ್ ಆಗಿ ಡ್ಯಾನ್ಸ್ ಮಾಡಿ, ಟ್ರೋಲ್ ಆಗಿದ್ದರು. ಈ ವಿಡಿಯೋ ಗೆ ನೆಗಟಿವ್ ಕಾಮೆಂಟ್ಸ್ ಬಂದಿದ್ದೇ ಹೆಚ್ಚು. ನಿವೇದಿತಾ ಗೌಡ ಯಾವಾಗಲೂ ಬಾತ್ ರೂಮ್ ನಲ್ಲೇ ರೀಲ್ಸ್ ಮಾಡುತ್ತಾರಲ್ಲಾ ಎಂದು ಒಬ್ಬರು ಹೇಳಿದರೆ, ಮೊನ್ನೆಯಷ್ಟೇ ವೇದಿಕೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿ, ಈಗ ಈ ಥರ ರೀಲ್ಸ್ ಶೇರ್ ಮಾಡೋದಾ ಎಂದು ಕಾಮೆಂಟ್ಸ್ ಗಳು ಬಂದಿದ್ದವು. ಈ ಥರ ಎಲ್ಲಾ ಆಡೋದಕ್ಕೆ ಚಂದನ್ ಶೆಟ್ಟಿ ಅವರನ್ನ ಬಿಟ್ಟು ಬಂದಿದ್ದಾ ಎಂದು ಇನ್ನು ಕೆಲವರು ಹೇಳಿದರು.
ನಿವೇದಿತಾ ಗೌಡ ಇಷ್ಟೆಲ್ಲಾ ನೆಗಟಿವ್ ಕಾಮೆಂಟ್ಸ್ ಗಳನ್ನು ಕೇಳುತ್ತಿದ್ದರೂ ಸಹ, ರೀಲ್ಸ್ ಹಾಕುವುದನ್ನು ಬಿಟ್ಟಿಲ್ಲ. ಈಗ ಮತ್ತೊಂದು ರೀಲ್ಸ್ ಅನ್ನು ಸಹ ಶೇರ್ ಮಾಡಿದ್ದು, ಅದು ಕೂಡ ಬಾತ್ ರೂಮ್ ಒಳಗೆ ಡ್ಯಾನ್ ಮಾಡಿರುವ ರೀಲ್ಸ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಮತ್ತೆ ಇವರನ್ನು ಟ್ರೋಲ್ ಮಾಡುತ್ತಿದ್ದಾರೆ. ರೀಲ್ಸ್ ಮಾಡೋಕೆ ಬಾತ್ ರೂಮ್ ಬಿಟ್ಟು ಬೇರೆ ಜಾಗ ಸಿಗೋದೇ ಇಲ್ವಾ ಎನ್ನುತ್ತಿದ್ದಾರೆ ನೆಟ್ಟಿಗರು. ಏನಾದರೂ ಬಯ್ಯೋಣ ಅಂದ್ರೆ ಇವಳಿಗೆ ಓದೋಕೆ ಬರೆಯೋಕೆ ಬರುತ್ತೋ ಇಲ್ಲವೋ ಎಂದು ಟ್ರೋಲ್ ಮಾಡುತ್ತಿದ್ದಾರೆ. ಹೀಗೆ ಜನರಿಗೆ ನಿವೇದಿತಾ ಗೌಡ ಅವರನ್ನು ಟ್ರೋಲ್ ಮಾಡುವುದು ಮಾತ್ರ ಕಡಿಮೆ ಅಗೋದೇ ಇಲ್ಲ. ಇದ್ಯಾವುದಕ್ಕೂ ತಲೆಕೆಡಿಸಿಕೊಲ್ಲದೇ ನಿವೇದಿತಾ ಗೌಡ ಸೊಂಟ ಬಳುಕಿಸಿ ಡ್ಯಾನ್ಸ್ ಮಾಡುತ್ತಲಿದ್ದಾರೆ.
ಇದೆಲ್ಲವೂ ಒಂದು ಕಡೆಯಾದರೆ, ಸಾಮಾನ್ಯವಾಗಿ ಮೈಸೂರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಹುಡುಗಿ ನಿವೇದಿತಾ ಗೌಡ ಇಂದು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು, ಸಿನಿಮಾದಲ್ಲಿ ನಟಿಸುತ್ತಿರುವುದನ್ನು ಮೆಚ್ಚಲೇಬೇಕು. ನಿವೇದಿತಾ ಗೌಡ ತಕ್ಕಮಟ್ಟಿಗೆ ಫೇಮಸ್ ಆದರೂ ಸಹ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿದ್ದು, ಎಲ್ಲರ ಬಾಯಲ್ಲಿ ಅವರ ಹೆಸರು ಬರೋದಕ್ಕೆ ಶುರುವಾಗಿದ್ದು ಚಂದನ್ ಶೆಟ್ಟಿ ಅವರೊಡನೆ ಮದುವೆಯಾದ ಬಳಿಕ. ಇವರಿಬ್ಬರು ಬಿಗ್ ಬಾಸ್ ನಲ್ಲಿ ಪರಿಚಿತರಾಗಿ, ಫ್ರೆಂಡ್ಶಿಪ್ ಶುರುವಾಗಿ, ಲವ್ ಆಗಿ, ಕೊನೆಗೆ ಮದುವೆಯಾದರು. ಮದುವೆ ನಂತರ ಚೆನ್ನಾಗಿಯೇ ಇದ್ದ ಜೋಡಿಗೆ ಇದ್ದಕ್ಕಿದ್ದಂತೆ ಏನಾಯ್ತು ಗೊತ್ತಿಲ್ಲ, ಕಳೆದ ವರ್ಷ ಇಬ್ಬರೂ ಜೊತೆಯಾಗೆ ಕೋರ್ಟ್ ಗೆ ಬಂದು ವಿಚ್ಛೇದನ ಪಡೆದರು. ಇಬ್ಬರು ದೂರವಾದ ನಂತರ ನಿವೇದಿತಾ ಗಡ ಮೊದಲಿಗಿಂತಲು ಹೆಚ್ಚು ಟ್ರೋಲ್ ಆಗುತ್ತಿದ್ದಾರೆ.
ಇವರು ಏನೇ ಪೋಸ್ಟ್ ಮಾಡಿದರು ನೆಗಟಿವ್ ಕಾಮೆಂಟ್ ಗಳು ಬರುತ್ತಲೇ ಇರುತ್ತವೆ. ಆದರೆ ನಿವೇದಿತಾ ಮಾತ್ರ ತಮ್ಮ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಸಿನಿಮಾದಲ್ಲಿ ಸಹ ನಿವೇದಿತಾ ನಾಯಕಿಯಾಗಿ ನಟಿಸುತ್ತಿದ್ದು, ಈ ಸಿನಿಮಾದ ಹೆಸರು ಮುದ್ದು ರಾಕ್ಷಸಿ. ಈ ಸಿನಿಮಾದಲ್ಲಿ ಚಂದನ್ ಶೆಟ್ಟಿ ಅವರೇ ನಾಯಕ ಆಗಿದ್ದು, ವಿಚ್ಛೇದನ ಪಡೆದ ನಂತರ ಸಹ ಇವರಿಬ್ಬರು ಜೊತೆಯಾಗಿ ನಟಿಸುತ್ತಿದ್ದಾರೆ. ಸಿನಿಮಾ ಇನ್ನು ಚಿತ್ರೀಕರಣ ಹಂತದಲ್ಲಿದ್ದು, ಯಾವಾಗ ಬಿಡುಗಡೆ ಆಗುತ್ತದೆ ಎಂದು ಕಾದು ನೋಡಬೇಕಿದೆ.