ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಹೀರೋಯಿನ್ ಗಳಲ್ಲಿ ಸಿಮ್ರನ್ ಸಹ ಒಬ್ಬರು. ತಮಿಳು ಚಿತ್ರರಂಗವನ್ನು ಆಳಿದ ನಟಿಯರಲ್ಲಿ ಇವರು ಸಹ ಒಬ್ಬರು. ಇವತ್ತಿಗೂ ಕೂಡ ಸಿಮ್ರನ್ ಅವರಿಗೆ ಇರುವ ಫ್ಯಾನ್ ಬೇಸ್ ಸ್ವಲ್ಪ ಕೂಡ ಕಡಿಮೆ ಆಗಿಲ್ಲ. ಅದೇ ಗ್ರೇಸ್, ಅದೇ ಚಾರ್ಮ್ ಉಳಿಸಿಕೊಂಡು ಬಂದಿದ್ದಾರೆ ನಟಿ ಸಿಮ್ರನ್. ನಟಿ ಎಂದಮೇಲೆ ಆ ಜರ್ನಿ ಸುಲಭದ ಜರ್ನಿ ಆಗಿರುವುದಿಲ್ಲ, ಅವಮಾನಗಳು, ಕಷ್ಟಗಳು, ನೋವುಗಳು ಇದೆಲ್ಲವನ್ನು ಸಹಿಸಿಕೊಳ್ಳಲೇಬೇಕಾಗುತ್ತದೆ. ನಟಿ ಸಿಮ್ರನ್ ಅವರಿಗೂ ಇದು ತಪ್ಪಲಿಲ್ಲ, ಇತ್ತೀಚೆಗೆ ಸಹನಟಿ ಒಬ್ಬರಿಂದ ತಮಗೆ ಆದ ಅವಮಾನದ ಬಗ್ಗೆ ನಟಿ ಸಿಮ್ರನ್ ಅವರು ಮಾತನಾಡಿದ್ದಾರೆ. ಆ ಅವಮಾನಕ್ಕೆ ವೇದಿಕೆ ಮೇಲೆಯೇ ಉತ್ತರ ಕೊಟ್ಟಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನು? ಅಲ್ಲಿ ಆಗಿದ್ದೇನು? ಫುಲ್ ಡೀಟೇಲ್ಸ್ ಇಲ್ಲಿದೆ..

ನಟಿ ಸಿಮ್ರನ್ ಮೂಲತಃ ಉತ್ತರ ಭಾರತದವರು. ಆದರೆ ಇವರಿಗೆ ಹೆಸರು, ಕೀರ್ತಿ ಎಲ್ಲವನ್ನು ತಂದುಕೊಟ್ಟಿದ್ದು ದಕ್ಷಿಣ ಭಾರತ ಚಿತ್ರರಂಗ. ಕನ್ನಡ, ತಮಿಳು ಮತ್ತು ತೆಲುಗು ಹೀಗೆ ಎಲ್ಲಾ ಭಾಷೆಗಳಲ್ಲಿ ಸಹ ನಟಿಸಿ ಸಿಮ್ರನ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಕೀರ್ತಿ ಅಭಿಮಾನ ಗಳಿಸಿದ ನಟಿ. ಹಲವರಿಗೆ ಗೊತ್ತಿರದ ವಿಷಯ ಏನು ಎಂದರೆ ಇವರ ಕೆರಿಯರ್ ಶುರುವಾಗಿದ್ದು ಕನ್ನಡದಲ್ಲಿ. ಹೌದು, ಶಿವಣ್ಣ ಅವರ ಸಿಂಹದ ಮರಿ ಸಿಮ್ರನ್ ಅವರು ನಟಿಸಿದ ಮೊಟ್ಟ ಮೊದಲ ಸಿನಿಮಾ. ಈ ಸಿನಿಮಾ ನಂತರ ಅವರಿಗೆ ಬೇರೆ ಭಾಷೆಗಳಲ್ಲಿ ಅಭಿನಯಿಸುವುದಕ್ಕೆ ಅವಕಾಶ ಸಿಗುವುದಕ್ಕೆ ಶುರುವಾಯಿತು. ಸಿಮ್ರನ್ ಅವರು ತಮಿಳಿನಲ್ಲಿ ನಟಿಸುವುದಕ್ಕೆ ಶುರು ಮಾಡಿ, ಸ್ಟಾರ್ ನಟಿಯಾಗಿ ಬೆಳೆದು ನಿಂತರು. ಇವರ ವಿಶೇಷತೆ ಅಂದ್ರೆ ಡ್ಯಾನ್ಸ್.
ಬಹಳ ಗ್ರೇಸ್ ಫುಲ್ ಆದ ಡ್ಯಾನ್ಸರ್ ಸಿಮ್ರನ್ ಅವರು. ಇವರ ಡ್ಯಾನ್ಸ್ ಗೆ ಆಗಿನ ಹುಡುಗರು ಫಿದಾ ಆಗಿಬಿಡುತ್ತಿದ್ದರು. ಹುಡುಗರ ಆರಾಧ್ಯ ದೇವತೆ ಆಗಿದ್ದರು ಸಿಮ್ರನ್. ಆಗ ತಮಿಳಿನಲ್ಲಿದ್ದ ಬಹುತೇಕ ಎಲ್ಲಾ ಸ್ಟಾರ್ ಗಳ ಜೊತೆಗೆ ಹೀರೋಯಿನ್ ಆಗಿ ಸಿಮ್ರನ್ ಅವರು ನಟಿಸಿದ್ದಾರೆ. ವಿಜಯ್, ಅಜಿತ್, ಸೂರ್ಯ ಹೀಗೆ ಪ್ರಮುಖ ಯುವನಟರು ಮಾತ್ರವಲ್ಲದೇ ಕಮಲ್ ಹಾಸನ್ ಅವರ ಜೊತೆಗೆ ಕೂಡ ನಟಿಸಿದ್ದಾರೆ. ನಾಯಕಿಯಾಗಿ ಇದ್ದಾಗ ಬಹಳ ಬೇಡಿಕೆ ಹೊಂದಿದ್ದ ಇವರಿಗೆ ಫ್ಯಾನ್ ಬೇಸ್ ಏನು ಕಡಿಮೆ ಅಲ್ಲ. ಸಿಮ್ರನ್ ಅವರನ್ನು ಕಂಡರೆ ಎಲ್ಲರಿಗೂ ಅಷ್ಟರ ಮಟ್ಟಿಗೆ ಪ್ರೀತಿ ಇದೆ. ಇವತ್ತಿಗೂ ಅವರಿಗೆ ಇರುವ ಫ್ಯಾನ್ ಬೇಸ್ ಮಾತ್ರ ಕಡಿಮೆ ಆಗಿಲ್ಲ. ಈಗಿನ ಯೂತ್ ಗಳಿಗೆ ಸಹ ಬಹಳ ಇಷ್ಟ ಇವರು.

ಸಿಮ್ರನ್ ಅವರು ಚಿತ್ರರಂಗದ ಜೊತೆಗೆ ನಂಟನ್ನು ಕಳೆದುಕೊಂಡಿಲ್ಲ. ಈಗಲೂ ಸಹ ಒಳ್ಳೆಯ ಪಾತ್ರಗಳ ಮೂಲಕ ನಟಿಸುತ್ತಾರೆ, ಆಗಾಗ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ವರ್ಷಕ್ಕೆ ಸಿಮ್ರನ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 30 ವರ್ಷ ತುಂಬುತ್ತದೆ. ಹಾಗಾಗಿ ಇತ್ತೀಚೆಗೆ ನಡೆದ ಕಾರ್ಯಕ್ರಮ ಒಂದರಲ್ಲಿ ಅವರ 30 ವರ್ಷಗಳ ಜರ್ನಿಯನ್ನು ಗೌರವಿಸಿ, ಸನ್ಮಾನ ಮಾಡಲಾಯಿತು. ಇದರಲ್ಲಿ ಚಿತ್ರರಂಗದ ಈಗಿನ ಹೀರೋಯಿನ್ ಗಳು ಎಲ್ಲರೂ ಬಂದು ಸಿಮ್ರನ್ ಅವರನ್ನು ಗೌರವಿಸಿ, ಅವರಿಗೆ ಸನ್ಮಾನ ಮಾಡಿದರು, ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದರು. ಅಂದು ಕಾರ್ಯಕ್ರಮದಲ್ಲಿ ಸನ್ಮಾನ ಆದ ನಂತರ ಸಿಮ್ರನ್ ಅವರು ಮಾತನಾಡಿ, ಇತ್ತೀಚೆಗೆ ತಮಗೆ ಸಹನಟಿ ಇಂದ ಅವಮಾನದ ಬಗ್ಗೆ ತಿಳಿಸಿದ್ದಾರೆ. ಈ ವಿಡಿಯೋ ಸಧ್ಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು, ನಟಿ ಸಿಮ್ರನ್ ಅವರು ಹೇಳಿರುವ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ವೇದಿಕೆಯ ಮೇಲೆ ಮಾತು ಶುರು ಮಾಡಿದ ಸಿಮ್ರನ್ ಅವರು ಮೊದಲಿಗೆ ಎಲ್ಲರಿಗೂ ಧನ್ಯವಾದ ತಿಳಿಸಿ, ಅವಮಾನವಾದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ನನ್ನ ಸಹನಟಿ ಒಬ್ಬರ ಕೆಲಸ ಒಂದನ್ನು ನೋಡಿ ಅವರಿಗೆ ಮೆಸೇಜ್ ಹಾಕಿದ್ದೇ, ನಿಮ್ಮನ್ನ ಆ ಪಾತ್ರದಲ್ಲಿ ನೋಡಿ ಆಶ್ಚರ್ಯ ಆಯ್ತು, ತುಂಬಾ ಚೆನ್ನಾಗಿ ಮಾಡಿದ್ದೀರಿ ಅಂತ.. ಅದಕ್ಕೆ ಆಕೆ ತಕ್ಷಣವೇ ರಿಪ್ಲೈ ಮಾಡಿದರು, ಹಹಹ.. ಹೌದು ಆಂಟಿ ಪಾತ್ರಗಳಲ್ಲಿ ನಟಿಸುವುದಕ್ಕಿಂತ ಇದೇ ಬೆಟರ್ ಎಂದರು. ಹೌದು, ನಾನು ಆಂಟಿ ಪಾತ್ರಗಳಲ್ಲಿ ನಟಿಸುತ್ತೀನಿ, 25 ವರ್ಷದವರಿಗೆ ಅಮ್ಮನಾಗಿ ನಟಿಸಿದ್ದೀನಿ, ಮುಂಚೆ ಕೂಡ ನಟಿಸಿದ್ದೀನಿ. ಡಬ್ಬಾ ರೋಲ್ ಗಳಲ್ಲಿ ನಟಿಸುವುದಕ್ಕಿಂತ, ಒಳ್ಳೆಯ ಸಂದೇಶ ಕೊಡೋ ಆಂಟಿ ರೋಲ್ ಗಳಲ್ಲಿ ನಟಿಸುವುದೇ ಒಳ್ಳೆಯದು ಎಂದಿದ್ದಾರೆ..

ನಾನು ನಟಿಸುತ್ತಿರುವ ಆಂಟಿ ಪಾತ್ರಗಳ ಬಗ್ಗೆ ನನಗೆ ಗೌರವವಿದೆ, ಪಾತ್ರಗಳು ಚೆನ್ನಾಗಿವೆ. ನನ್ಗೆ ಫೆಮಿನಿಸ್ಟ್ ಎಂದು ಫೇಕ್ ಆಗಿ ಮಾತನಾಡುವವರ ಬಗ್ಗೆ ಗೌರವವಿಲ್ಲ, ನಾನು ಗಂಡಸರು, ಹೆಂಗಸರು ಎಲ್ಲರನ್ನು ಒಂದೇ ರೀತಿ ಗೌರವಿಸುತ್ತೇನೆ ಎಂದಿದ್ದಾರೆ. ಹಾಗೆಯೇ, ಇಷ್ಟು ವರ್ಷಗಳ ತಾವು ಬೆಳೆದು ಬಂದಿರುವುದು, ಜನರ ಪ್ರೀತಿ ಸಂಪಾದನೆ ಮಾಡಿರುವುದು ಎಲ್ಲವೂ ತಾವು ಸ್ವಂತವಾಗಿ ಮಾಡಿರುವುದು, ಯಾರೊಬ್ಬರ ಸಪೋರ್ಟ್ ಇಂದಲೂ ಯಾವುದನ್ನು ಮಾಡಿಲ್ಲ ಎಂದಿದ್ದಾರೆ ಸಿಮ್ರನ್. ಇದೀಗ ಈ ವಿಡಿಯೋ ಆಗಿದ್ದು, ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆಯುತ್ತಿದೆ.
ಸಿಮ್ರನ್ ಅವರಿಗೆ ಆ ರೀತಿ ಅವಮಾನ ಮಾಡಿದ ನಟಿ ಯಾರಿರಬಹುದು ಎನ್ನುವ ಪ್ರಶ್ನೆ ಶುರುವಾಯಿತು, ಅದಕ್ಕೆ ನೆಟ್ಟಿಗರು ಅದು ಜ್ಯೋತಿಕಾ ಅವರು ಎನ್ನುತ್ತಿದ್ದಾರೆ..
ಹೌದು, ಸಿಮ್ರನ್ ಅವರು ಮಾತನಾಡುವಾಗ ಡಬ್ಬಾ ಪಾತ್ರ ಒತ್ತು ಕೊಟ್ಟು ಎಂದು ಹೇಳಿದರು, ಇತ್ತೀಚೆಗೆ ಜ್ಯೋತಿಕಾ ಅವರು ಡಬ್ಬಾ ಕಾರ್ಟಲ್ ಎನ್ನುವ ಸೀರೀಸ್ ನಲ್ಲಿ ನಟಿಸಿದರು, ಹಾಗೆಯೇ ಜ್ಯೋತಿಕಾ ಅವರು ಮದುವೆಯಾದ ನಂತರ ಒಂದಷ್ಟು ವರ್ಷಗಳ ಕಾಲ ಬ್ರೇಕ್ ಪಡೆದು ಕಂಬ್ಯಾಕ್ ಮಾಡಿದಾಗ ಅವರಿಗೆ ಸಪೋರ್ಟಿವ್ ಆಗಿ ಗಂಡ ಸೂರ್ಯ ಇದ್ದರು. ಸೂರ್ಯ ಅವರೇ ಪತ್ನಿಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದರು. ಈಗ ಜ್ಯೋತಿಕಾ ಅವರು ಬಾಲಿವುಡ್ ಗೆ ಹೋಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಜ್ಯೋತಿಕಾ ಅವರೇ ಈ ರೀತಿ ಅವಮಾನ ಮಾಡಿರಬಹುದು ಎನ್ನುವುದು ನೆಟ್ಟಿಗರ ವಾದ ಆಗಿದೆ. ಏನೇ ಇರಲಿ, ಸಹನಟಿಯ ಬಗ್ಗೆ ಈ ರೀತಿ ಮಾತನಾಡುವುದು ತಪ್ಪು.