ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿನಿಮಾಗಳಲ್ಲಿ ಮಾನಸ ಸರೋವರ ಕೂಡ ಒಂದು. ಇದು ಕನ್ನಡದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶನ ಮಾಡಿದ ಅದ್ಭುತವಾದ ಸಿನಿಮಾಗಳಲ್ಲ ಒಂದು. ಶ್ರೀನಾಥ್ ಅವರು ನಾಯಕನಾಗಿ, ಪದ್ಮಾ ವಾಸಂತಿ ಅವರು ನಾಯಕಿಯಾಗಿ ಅಭಿನಯಿಸಿದ ಸೂಪರ್ ಹಿಟ್ ಸಿನಿಮಾ. ಈ ಸಿನಿಮಾವನ್ನು ಯಾರು ಕೂಡ ಇವತ್ತಿಗು ಮರೆಯುವುದಕ್ಕೆ ಸಾಧ್ಯವಿಲ್ಲ. ಇಂಥ ಸಿನಿಮಾಗಳು ಈಗ ಮತ್ತೆ ಬರುವುದು ಇಲ್ಲ ಎಂದು ಹೇಳಿದರೆ ತಪ್ಪಲ್ಲ. ಪದ್ಮಾ ವಾಸಂತಿ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸ್ಥಾನ ತಂದುಕೊಟ್ಟ ಚೈತ್ರ. ಇನ್ನು ಶ್ರೀನಾಥ್ ಅವರಿಗೆ ಮತ್ತೊಂದು ಬಾರಿ ದೊಡ್ಡ ಹೆಸರು ತಂದುಕೊಟ್ಟ ಸಿನಿಮಾ ಇದು. ಪುಟ್ಟಣ್ಣ ಕಣಗಾಲ್ ಅವರು ಇದಾದ ಬಳಿಕ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ.

ಮಾನಸ ಸರೋವರ ನಂತರ ಮಸಣದ ಹೂವು ಸಿನಿಮಾದಲ್ಲಿ ನಟಿಸಿದರು, ಬಳಿಕ ತೀರಿಹೋದರು. ಇನ್ನು ಮಾನಸ ಸರೋವರ ಸಿನಿಮಾ ಎಷ್ಟು ಸ್ಪೆಷಲ್ ಎಂದರೆ, ಪದ್ಮಾ ವಾಸಂತಿ ಅವರ ಮೊದಲ ಸಿನಿಮಾ ಇದು. ಮೊದಲ ಸಿನಿಮಾದಲ್ಲೇ ಅವರಿಗೆ ಅದ್ಭುತವಾದ ಪಾತ್ರ ಸಿಕ್ಕಿತು. ಹುಚ್ಚಿಯಾಗಿ ಅವರ ಅಭಿನಯ ಅದ್ಭುತ. ಇನ್ನು ಶ್ರೀನಾಥ್ ಅವರು ಡಾಕ್ಟರ್ ಆಗಿ, ವಾಸಂತಿಯನ್ನು ಸರಿಪಡಿಸುವ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಮತ್ತು ಕಥೆ ಬಗ್ಗೆ ಎಷ್ಟು ಬರೆಯುತ್ತಾ ಹೋದರು ಅದು ಕಡಿಮೆ ಅನ್ನಿಸುತ್ತದೆ. ಅಂಥಾ ಎವರ್ ಗ್ರೀನ್ ಸಿನಿಮಾ ಇದು. ಶ್ರೀನಾಥ್ ಹಾಗೂ ಪದ್ಮಾ ವಾಸಂತಿ ಅವರ ಜೋಡಿ ಮಾನಸ ಸರೋವರ ನಂತರ ಹಲವು ಸಿನಿಮಾಗಳಲ್ಲ ಕಾಣಿಸಿಕೊಂಡಿದ್ದಾರೆ, ಇದೀಗ ಮತ್ತೆ ಇವರಿಬ್ಬರು ಒಂದಾಗಿದ್ದಾರೆ.
ಹೌದು, ಶ್ರೀನಾಥ್ ಅವರು ಮತ್ತು ಪದ್ಮಾ ವಾಸಂತಿ ಅವರು 43 ವರ್ಷಗಳ ನಂತರ ಮಾನಸ ಸರೋವರ ಸಿನಿಮಾದ ಹಾಡಿನಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಾನಸ ಸರೋವರ, ಈ ನಿನ್ನ ಮನಸೇ ಮಾನಸ ಸರೋವರ ಹಾಡಿನಲ್ಲಿ ಇವರಿಬ್ಬರು ಕಾಣಿಸಿಕೊಂಡಿದ್ದಾರೆ. ಈ ಜೋಡಿ ಮತ್ತೆ ಒಂದಾಗಿರುವುದು ಗೌರಿ ಶಂಕರ ಧಾರಾವಾಹಿಗಾಗಿ. ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿ ಗೌರಿ ಶಂಕರ. ಈಗಾಗಲೇ ಈ ಧಾರಾವಾಹಿ ಒಳ್ಳೆಯ ಕಥೆ ಇಂದ ಜನರ ಮನಗೆದ್ದಿದೆ. ವೀಕ್ಷಕರ ಫೇವರೆಟ್ ಧಾರಾವಾಹಿಗಳಲ್ಲಿ ಇದು ಕೂಡ ಒಂದು. ಈ ಧಾರಾವಾಹಿಯಲ್ಲಿ ಈಗ ಹೊಸ ಅಧ್ಯಾಯ ಶುರುವಾಗಿದ್ದು, ಪ್ರೊಮೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರೊಮೋದಲ್ಲಿ ಪದ್ಮಾ ವಾಸಂತಿ ಅವರು ಮತ್ತು ಶ್ರೀನಾಥ್ ಅವರು ಕಾಣಿಸಿಕೊಂಡಿದ್ದಾರೆ.
ಈ ಪ್ರೊಮೋದಲ್ಲಿ ಇಬ್ಬರು ಮಾನಸ ಸರೋವರ ಹಾಡಿಗೆ ಹೆಜ್ಜೆ ಹಾಕಿದ್ದು ಬಹಳ ವರ್ಷಗಳ ನಂತರ ಈ ಜೋಡಿಯನ್ನು ಜನರು ನೋಡಿದ್ದು, ಇವರಿಬ್ಬರನ್ನು ಜೊತೆಯಾಗಿ ನೋಡಿ ಬಹಳ ಸಂತೋಷಪಟ್ಟಿದ್ದಾರೆ. ಪ್ರೊಮೋಗೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಹೊಸ ಅಧ್ಯಾಯದ ಈ ಹೊಸ ಕಥೆ ಯಾವ ರೀತಿ ಮುಂದುವರೆಯುತ್ತದೆ, ಈ ಜೋಡಿಯ ಕಥೆ ಹೇಗೆ ಸಾಗುತ್ತದೆ ಎಂದು ಕಾದು ನೋಡಬೇಕಿದೆ. ಇನ್ನು ಎವರ್ ಗ್ರೀನ್ ಜೋಡಿಯ ಬಗ್ಗೆ ಹೇಳುವುದಾದರೆ, ಶ್ರೀನಾಥ್ ಅವರು ಎಂಥಾ ಅದ್ಭುತವಾದ ನಟ ಎಂದು ನಮಗೆಲ್ಲಾ ಗೊತ್ತೇ ಇದೆ. ಕನ್ನಡ ಚಿತ್ರರಂಗದ ಹಿರಿಯ ಪ್ರತಿಭಾನ್ವಿತ ನಟರಲ್ಲಿ ಇವರು ಕೂಡ ಒಬ್ಬರು. ಹಲವಾರು ಒಳ್ಳೆಯ ಸಿನಿಮಾಗಳಲ್ಲ ನಾಯಕನಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಸಹ ನಟಿಸಿದ್ದಾರೆ ಶ್ರೀನಾಥ್ ಅವರು.
ಕಿರುತೆರೆ ಇವರಿಗೆ ಹೊಸದಲ್ಲ, ಶ್ರೀನಾಥ್ ಅವರು ನಿರೂಪಣೆ ಮಾಡುತ್ತಿದ್ದ ಆದರ್ಶ ದಂಪತಿಗಳು ಶೋ ಬಿಗ್ ಹಿಟ್, ಇವತ್ತಿಗೂ ಆ ಶೋ ಅನ್ನು ನೆನೆಯುವ ಜನರು ಇದ್ದಾರೆ. ಹಲವು ವರ್ಷಗಳ ಕಾಲ ಮೂಡಿಬಂದ ಕಾರ್ಯಕ್ರಮ ಅದು.. ಇದರ ಜೊತೆಗೆ ಹಲವು ಧಾರಾವಾಹಿಗಳಲ್ಲಿ ಸಹ ಶ್ರೀನಾಥ್ ಅವರು ನಟಿಸಿದ್ದಾರೆ. ಕೆಲವು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ, ಇನ್ನು ಕೆಲವು ಧಾರಾವಾಹಿಗಳಲ್ಲಿ ಅತಿಥಿ ಪಾತ್ರದಲ್ಲಿ ಸಹ ನಟಿಸಿದ್ದಾರೆ. ಇದೀಗ ಹಲವು ವರ್ಷಗಳ ನಂತರ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಶ್ರೀನಾಥ್ ಅವರು ಸಿನಿಮಾಗಳಲ್ಲಿ ಈಗ ನಟಿಸುವುದು ಸಹ ಕಡಿಮೆ ಆಗಿದೆ, ಅಪರೂಪಕ್ಕೊಮ್ಮೆ ಸಿನಿಮಾಗಳಲ್ಲಿ ನಟಿಸುತ್ತಾರೆ. ಇವರ ಮಗ ಸಹ ಈಗ ಕಿರುತೆರೆಯಲ್ಲಿ ಆಕ್ಟಿವ್ ಆಗಿದ್ದಾರೆ.
ಇನ್ನು ಪದ್ಮಾ ವಾಸಂತಿ ಅವರು ಇದುವರೆಗೂ 120 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಧಾರಾವಾಹಿಯಲ್ಲಿ ಸಹ ಆಕ್ಟಿವ್, ಕಮಲಿ ಧಾರಾವಾಹಿಯಲ್ಲಿ ಅಜ್ಜಿ ಅನ್ನಪೂರ್ಣ ಪಾತ್ರದಲ್ಲಿ ನಟಿಸಿದ್ದರು, ಈ ಧಾರಾವಾಹಿ ಎಲ್ಲರ ಮೆಚ್ಚಿನ ಧಾರಾವಾಹಿ, ಹಾಗೆಯೇ ಇವರ ಪಾತ್ರಕ್ಕೆ ಸಹ ಎಲ್ಲರ ಮೆಚ್ಚುಗೆ ಸಿಕ್ಕಿತ್ತು. ಕಮಲಿ ನಂತರ ಒಂದು ಬ್ರೇಕ್ ಪಡೆದು, ಉದಯ ಟಿವಿಯ ಪ್ರೀತಿಯ ಅರಸಿ ಧಾರಾವಾಹಿಯಲ್ಲಿ ನಾಯಕಿಯ ಅಜ್ಜಿಯ ಪಾತ್ರದಲ್ಲಿ ನಟಿಸಿದ್ದರು. ಆ ಧಾರಾವಾಹಿಯಲ್ಲಿ ಸಹ ಇವರ ಪ್ರೀತಿಯ ಅಜ್ಜಿಯ ಪಾತ್ರ ಸಖತ್ ಇಷ್ಟವಾಗಿತ್ತು. ಈಗ ಸ್ಟಾರ್ ಸುವರ್ಣ ಧಾರವಾಹಿಯಲ್ಲಿ ನಟಿಸುವ ಮೂಲಕ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಗೌರಿ ಶಂಕರ ಧಾರಾವಾಹಿ ಮೂಲಕ ಮತ್ತೆ ಕಿರುತೆರೆ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.
ಈಗ ಕಿರುತೆರೆ ಪಾಪ್ಯುಲಾರಿಟಿ ಹೇಗಿದೆ ಅಂದ್ರೆ, ಸಿನಿಮಾ ಕಲಾವಿದರೆಲ್ಲರನ್ನು ಕಿರುತೆರೆಗೆ ಕರೆತರುತ್ತಿದ್ದಾರೆ. ಹಲವು ಸ್ಟಾರ್ ಕಲಾವಿದರು ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದನ್ನು ನೋಡುತ್ತಿದ್ದೇವೆ. ಜನರು ಕಿರುತೆರೆಗೆ ಹೆಚ್ಚು ಕನೆಕ್ಟ್ ಆಗಿರುವ ಕಾರಣ, ಕಲಾವಿದರು ಸಹ ಕಿರುತೆರೆಯಲ್ಲಿ ನಟಿಸುವುದಕ್ಕೆ ಒಪ್ಪಿಗೆ ಕೊಡುತ್ತಿದ್ದಾರೆ. ಧಾರಾವಾಹಿಗಳು ರಿಯಾಲಿಟಿ ಶೋಗಳು, ಇದೆಲ್ಲದರ ಮೂಲಕ ಕಿರುತೆರೆ ಇಂದ ವೀಕ್ಷಕರಿಗೆ ಸಖತ್ ಮನರಂಜನೆ ಸಿಗುತ್ತಿದ್ದು, ವಾಹಿನಿಗಳು ಜನರಿಗೆ ಇಷ್ಟ ಆಗುವಂಥ ಕಲಾವಿದರನ್ನು ಕರೆತರುತ್ತಿದ್ದಾರೆ.