ನಟಿ ರಶ್ಮಿಕಾ ಈಗ ನ್ಯಾಷನಲ್ ಕ್ರಶ್, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟಿ. ರಶ್ಮಿಕಾ ಮಂದಣ್ಣ ಅವರು ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ನಾಯಕಿಯಾಗಿ ನಟಿಸಿದ್ದು, ಈ ಸಿನಿಮಾದ ಟ್ರೇಲರ್ ನಿನ್ನೆಯಷ್ಟೇ ಬಿಡುಗಡೆಯಾಗಿ ಜನರಿಂದ ಮೆಚ್ಚುಗೆ ಪಡೆದುಕೊಂಡಿದೆ. ಮಾರ್ಚ್ 28ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಈಗಾಗಲೇ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ಜೊತೆಗೆ ಸಲ್ಮಾನ್ ಖಾನ್ ಅವರು, ರಶ್ಮಿಕಾ ಅವರು ಸಿನಿಮಾ ಪ್ರೊಮೋಷನ್ ಈವೆಂಟ್ ಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸಿಕಂದರ್ ಸಿನಿಮಾ ಈವೆಂಟ್ ನಲ್ಲಿ ಸಲ್ಮಾನ್ ಖಾನ್ ಅವರು ತಮ್ಮ ಹಾಗೂ ರಶ್ಮಿಕಾ ಅವರ ನಡುವಿನ ವಯಸ್ಸಿನ ವ್ಯತ್ಯಾಸದ ಬಗ್ಗೆ ಬಂದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಇವರು ನೀಡಿರುವ ಉತ್ತರ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಲ್ಮಾನ್ ಖಾನ್ ಅವರು ಬಾಲಿವುಡ್ ನ ಖ್ಯಾತ ನಟ, ಇವರಿಗೆ ಹಾಗೂ ಇವರ ಸಿನಿಮಾಗಳಿಗೆ ಎಷ್ಟು ದೊಡ್ಡ ಮಟ್ಟದಲ್ಲಿ ಕ್ರೇಜ್ ಇದೆ ಎಂದು ನಮಗೆಲ್ಲಾ ಗೊತ್ತೇ ಇದೆ. ಸಲ್ಮಾನ್ ಖಾನ್ ಅವರ ಸಿನಿಮಾ ಎಂದರೆ ಎಲ್ಲಾ ರಾಜ್ಯಗಳಲ್ಲಿ ಫ್ಯಾನ್ಸ್ ಗಳು ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡೋಕೆ ಕಾಯುತ್ತಾರೆ. ಇನ್ನೇನು ಈ ಶುಕ್ರವಾರವೇ ಸಿನಿಮಾ ಬಿಡುಗಡೆ ಆಗಲಿದೆ. ಮುಂಬೈ ನಲ್ಲಿ ಹಾಗೂ ಎಲ್ಲಾ ಕಡೆ ಸಿನಿಮಾ ಪ್ರಮೋಷನ್ ಗಳಲ್ಲಿ ಸಲ್ಮಾನ್ ಖಾನ್ ಅವರು ಮತ್ತು ರಶ್ಮಿಕಾ ಅವರು ಇಬ್ಬರು ಕೂಡ ಭಾಗಿಯಾಗುತ್ತಿದ್ದಾರೆ. ಈ ಸಿನಿಮಾ ಶುರು ಆಗಿ, ಹಾಡುಗಳು ಬಿಡುಗಡೆ ಆದಾಗಿನಿಂದ ಒಂದು ವಿಚಾರ ಭಾರಿ ಹೈಲೈಟ್ ಆಗುತ್ತಿದೆ. ಅದು ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ನಡುವಿನ ವಯಸ್ಸಿನ ಅಂತರದ ವಿಷಯ. ರಶ್ಮಿಕಾ ಅವರಿಗಿಂತ ಸಲ್ಮಾನ್ ಖಾನ್ ತುಂಬಾ ದೊಡ್ಡವರು..

ಅಸಲಿ ವಿಷಯ ಏನು ಎಂದರೆ, ರಶ್ಮಿಕಾ ಅವರ ತಂದೆಗಿಂತ ಕೂಡ ಸಲ್ಮಾನ್ ಖಾನ್ ಅವರು 3 ವರ್ಷಕ್ಕೆ ದೊಡ್ಡವರಂತೆ. ಈ ವಿಚಾರ ಕಂಡು ಹಿಡಿದಿದ್ದು ಯಾರು ಎಂದು ಗೊತ್ತಿಲ್ಲ. ಆದರೆ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಅವರ ವಯಸ್ಸಿನ ವಿಷಯ ಮಾತ್ರ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಅಷ್ಟು ವಯಸ್ಸಾದ ನಟನಿಗೆ ಇಷ್ಟು ಚಿಕ್ಕ ಹುಡುಗಿ ನಾಯಕಿಯಾಗಿ ನಟಿಸಬೇಕಾ ಎನ್ನುವ ಅಭಿಪ್ರಾಯ ಕೂಡ ಕೇಳಿಬಂದಿತ್ತು. ಇನ್ನು ಪ್ರೊಮೋಷನ್ ಈವೆಂಟ್ ಒಂದರಲ್ಲಿ ಖುದ್ದು ಸಲ್ಮಾನ್ ಅವರ ಎದುರು ಕೂಡ ಈ ವಿಚಾರ ಚರ್ಚೆಗೆ ಬಂದಾಗ, ಅವರು ಮಾಧ್ಯಮದವರನ್ನೇ ಮರು ಪ್ರಶ್ನೆ ಮಾಡಿದ್ದಾರೆ. ಇದರಿಂದ ನಿಮಗೆಲ್ಲಾ ಏನು ಸಮಸ್ಯೆ ಎಂದು ಕೇಳಿದ್ದಾರೆ, ಈ ಪ್ರಶ್ನೆಗೆ ಮಾಧ್ಯಮದವರೆ ಸೈಲೆಂಟ್ ಆಗಿದ್ದು, ಮತ್ತೆ ಈ ಪ್ರಶ್ನೆ ಬರೋದಿಲ್ಲ ಎನ್ನುವ ಹಾಗೆ ಆಗಿದೆ. ಸಲ್ಮಾನ್ ಖಾನ್ ಅವರು ಹೇಳಿದ್ದೇನು ಎಂದು ನೋಡುವುದಾದರೆ..

ವಯಸ್ಸಿನ ಅಂತರದ ವಿಚಾರ ಬಂದಾಗ ಮಾತನಾಡಿರುವ ಸಲ್ಮಾನ್ ಖಾನ್ ಅವರು, “ರಶ್ಮಿಕಾ ಅವರ ತಂದೆಗೆ ಸಮಸ್ಯೆ ಇಲ್ಲ, ರಶ್ಮಿಕಾಗೆ ಸಮಸ್ಯೆ ಇಲ್ಲ. ನನಗೂ ಸಮಸ್ಯೆ ಇಲ್ಲ. ನಿಮ್ಮದೇನು ಸಮಸ್ಯೆ?..” ಎಂದು ಪ್ರಶ್ನೆ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರು ಈ ರೀತಿ ಪ್ರಶ್ನೆ ಕೇಳುತ್ತಿದ್ದ ಹಾಗೆಯೇ ಮಾಧ್ಯಮದವರು ಗಪ್ ಚುಪ್ ಆಗಿದ್ದಾರೆ. ಸಲ್ಮಾನ್ ಖಾನ್ ಅವರ ಉತ್ತರ ಕೊಟ್ಟ ರೀತಿ ನೋಡಿದರೆ, ಮತ್ತೆ ಯಾರು ಇಂಥ ಪ್ರಶ್ನೆ ಕೇಳುವ ಸಾಹಸಕ್ಕೆ ಹೋಗೋದಿಲ್ಲ ಅನ್ನಿಸಿದೆ. ಮುಂದುವರೆದು ರಶ್ಮಿಕಾ ಅವರ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್ ಅವರು, “ಈಗ ರಶ್ಮಿಕಾ ಅವರಿಗೆ ಅವರ ತಂದೆ ಪರ್ಮಿಶನ್ ಕೊಡುತ್ತಿದ್ದಾರೆ. ಮುಂದೆ ಅವರಿಗೆ ಮದುವೆ ಆಗುತ್ತದೆ, ಮಕ್ಕಳಾಗುತ್ತದೆ. ಆಗ ಅವರ ಪತಿ ಕೂಡ ಸಿನಿಮಾದಲ್ಲಿ ನಟಿಸೋಕೆ ಪರ್ಮಿಶನ್ ಕೊಡುತ್ತಾರೆ..” ಎಂದು ಹೇಳಿದ್ದಾರೆ.

ಈ ಮಾತಿಗೆ ರಶ್ಮಿಕಾ ಸಹ ಹೌದು ಎನ್ನುವಂತೆ ತಲೆಯಾಡಿಸಿದ್ದಾರೆ. ಇನ್ನು ಸಲ್ಮಾನ್ ಖಾನ್ ಅವರು ಹೇಳುವ ಮಾತು ಒಂದು ಅರ್ಥದಲ್ಲಿ ನಿಜ. ನಟಿಯರ ಅಥವಾ ಹೆಣ್ಣುಮಕ್ಕಳ ಜೀವನ ಇದೇ ರೀತಿ ಇದೆ. ಹುಟ್ಟಿದಾಗಿನಿಂದ ತಂದೆ ತಾಯಿಯ ಪರ್ಮಿಶನ್, ಮದುವೆ ನಂತರ ಗಂಡನ ಪರ್ಮಿಶನ್ ಬೇಕೇ ಬೇಕು. ಇದೆಲ್ಲವೂ ಒಂದು ಕಡೆಯಾದರೆ, ಮತ್ತೊಂದು ಕಡೆ ಸಿನಿಮಾರಂಗದಲ್ಲಿ ಮೊದಲೆಲ್ಲಾ ಮದುವೆಯಾದ ನಟಿಯರನ್ನು ಟ್ರೀಟ್ ಮಾಡುತ್ತಾ ಇದ್ದದ್ದೇ ಬೇರೆ ರೀತಿ. ಹೀರೋಯಿನ್ ಆಗಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಸ್ಟಾರ್ ಹೀರೋಯಿನ್ ಆದರೂ ಕೂಡ ಅವರು ಮದುವೆ ಆಗುತ್ತಿದ್ದ ಹಾಗೆ ಅವರಿಗೆ ಸಣ್ಣಪುಟ್ಟ ಪಾತ್ರಗಳನ್ನು ಕೊಡುವುದಕ್ಕೆ ಶುರು ಮಾಡುತ್ತಾರೆ. ಪೋಷಕ ಪಾತ್ರಗಳಿಗೆ ಸೀಮಿತವಾಗಿ ಮಾಡಿಬಿಡುತ್ತಾರೆ.

ನಮ್ಮಲ್ಲಿ ಹೀರೋಯಿನ್ ಅಂದ್ರೆ ಹದಿಹರೆದ ಹುಡುಗಿ ಎನ್ನುವ ಕಾನ್ಸೆಪ್ಟ್ ಇದೆ. ಮಧ್ಯ ವಯಸ್ಸಿನ ಮಹಿಳೆ ಅಥವಾ ಮದುವೆಯಾದ ಮಹಿಳೆಯ ಬಗ್ಗೆ ಕೇಂದ್ರೀಕರಿಸಿ ರಚಿಸುವ ಕಥೆಗಳು ಕೂಡ ತುಂಬಾ ಕಡಿಮೆ. ಈಗ ಒಂದು ರೀತಿಯಲ್ಲಿ ಟ್ರೆಂಡ್ ಬದಲಾಗುತ್ತಿದೆ, ಮದುವೆಯಾದ ನಂತರ ಕೂಡ ನಟಿಯರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಇದು ಬಹಳ ಸಂತೋಷ ತರುವಂಥ ವಿಷಯ ಆಗಿದೆ. ಬೇರೆ ಭಾಷೆಗಳಲ್ಲಿ ಈ ಟ್ರೆಂಡ್ ಶುರುವಾಗಿದೆ, ಹಾಗೆಯೇ ಮತ್ತೆ ಮಹಿಳಾ ಪ್ರಧಾನ ಸಿನಿಮಾಗಳು ಬರುವುದಕ್ಕೆ ಶುರುವಾಗಿದೆ. ನಮ್ಮ ಕನ್ನಡದಲ್ಲಿ ಸಹ ಇದೇ ರೀತಿ ಸಿನಿಮಾಗಳು ಬರುವುದಕ್ಕೆ ಶುರುವಾದರೆ ತುಂಬಾ ಒಳ್ಳೆಯದು. ನಟಿಯರಿಗೆ ಪ್ರಾಮುಖ್ಯತೆ ಸಿಕ್ಕ ಹಾಗೆ ಆಗುತ್ತದೆ. ಹಾಗೆಯೇ ನಮ್ಮಲ್ಲಿರುವ ಹಲವಾರು ಪ್ರಬುದ್ಧ ನಟಿಯರಿಗೆ ಅವಕಾಶ ಸಿಗುತ್ತದೆ.
ಇನ್ನು ರಶ್ಮಿಕಾ ಅವರ ಬಗ್ಗೆ ಹೇಳುವುದಾದರೆ, ರಶ್ಮಿಕಾ ಅವರು ಬೇರೆ ಭಾಷೆಯ ಸಿನಿಮಾಗಳಲ್ಲಿ ತುಂಬಾ ಆಕ್ಟಿವ್. ಆದರೆ ಕನ್ನಡದಲ್ಲಿ ಇವರು ನಟಿಸಿ ಬಹಳ ವರ್ಷಗಳೇ ಕಳೆದು ಹೋಗಿದೆ. ಕನ್ನಡದ ಬಗ್ಗೆ ಇವರು ತಾತ್ಸಾರ ಮಾಡುವುದನ್ನು ನೋಡಿ, ಇಂಥದ್ದೇ ಕೆಲವು ವಿಚಾರಗಳು ಹೊರಗಡೆ ಬಂದ ಬಳಿಕ ಕನ್ನಡ ಜನತೆಗೆ ಕೂಡ ಇವರನ್ನು ಕಂಡರೆ ಅಷ್ಟಕ್ಕಷ್ಟೇ ಎನ್ನುವ ಹಾಗಿದೆ. ಹಾಗಾಗಿ ಕನ್ನಡದವರಿಗೆ ರಶ್ಮಿಕಾ ಅವರನ್ನು ಕಂಡರೆ ಅಷ್ಟಕ್ಕಷ್ಟೇ, ಒಂದೊಳ್ಳೆ ಕನ್ನಡ ಸಿನಿಮಾ ಮಾಡಿ, ಕನ್ನಡದಲ್ಲಿ ಚೆನ್ನಾಗಿ ಮಾತನಾಡಿ, ಕನ್ನಡಕ್ಕೆ ಗೌರವ ಕೊಟ್ಟರೆ, ಈಗಿರುವ ಈ ಅಭಿಪ್ರಾಯಗಳು ಬದಲಾಗಬಹುದೇನೋ.. ರಶ್ಮಿಕಾ ಅವರು ಈ ಪ್ರಯತ್ನ ಮಾಡಿದರೆ, ಸಾಕಷ್ಟು ವಿಚಾರಗಳು ಚೇಂಜ್ ಆಗಬಹುದು..ಇವರಿಗೆ ಒಳ್ಳೆಯದಾಗಲಿ.