ನಟಿ ನೇಹಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ. ಇವರು ಕಲರ್ಸ್ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಚಿರಪರಿಚಿತರಾದವರು. ಧಾರಾವಾಹಿಯಲ್ಲಿ ಶ್ರುತಿ ಪಾತ್ರದ ಮೂಲಕ ಮನೆಮಾತಾಗಿದ್ದರು ನೇಹಾ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಇವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ಮತ್ತು ಜನಪ್ರಿಯತೆ ಎರಡನ್ನು ತಂದುಕೊಟ್ಟಿತು. ಬಳಿಕ ನೇಹಾ ಅವರು ಇತ್ತೀಚೆಗೆ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಗಿರಿಜಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನೇಹಾ ಅವರ ಫ್ಯಾಮಿಲಿ ಚಿತ್ರರಂಗದಲ್ಲೇ ಇದೆ. ಇವರ ತಂದೆ ಕನ್ನಡ ಚಿತ್ರರಂಗದಲ್ಲಿ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿ, ಒಳ್ಳೆಯ ಹೆಸರು ಮಾಡಿರುವವರು. ಇವರ ಅಕ್ಕ ಸೋನು ಗೌಡ ಸ್ಯಾಂಡಲ್ ವುಡ್ ನಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವವರು.
ಇನ್ನು ನೇಹಾ ಗೌಡ ಕಿರುತೆರೆಯಲ್ಲಿ ಬಹಳ ಫೇಮಸ್. ಹಾಗೆಯೇ ಇವರ ಪತಿ ಚಂದನ್ ಸಹ ಈಗ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹೀಗೆ ನೇಹಾ ಅವರ ಫ್ಯಾಮಿಲಿ ಪೂರ್ತಿ ಬಣ್ಣದ ಲೋಕದ ಜೊತೆಗೆ ನಂಟನ್ನು ಹೊಂದಿದೆ. ನೇಹಾ ಗೌಡ ಅವರು ಚಂದನ್ ಅವರೊಂದಿಗೆ ಮದುವೆಯಾಗಿ, ರಾಜ ರಾಣಿ ಶೋ ನಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಮೇ ತಿಂಗಳಿನಲ್ಲಿ ತಾವು ಗರ್ಭಿಣಿ ಆಗಿರುವ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದರು. ಇವರಿಗೆ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಸೀಮಂತ ಶಾಸ್ತ್ರವನ್ನು ಕೂಡ ಮಾಡಲಾಯಿತು. ಅಭಿಮಾನಿಗಳು ಸಹ ನೇಹಾ ಅವರಿಗೆ ಯಾವಾಗ ಮಗು ಜನಿಸುತ್ತದೆ ಎಂದು ಕಾಯುತ್ತಿದ್ದರು. ಕಳೆದ ವರ್ಷ ಆಕ್ಟೊಬರ್ 29ರಂದು ನೇಹಾ ಮತ್ತು ಚಂದನ್ ಗೌಡ ದಂಪತಿಗೆ ಹೆಣ್ಣುಮಗು ಜನಿಸಿತು. ದೀಪಾವಳಿ ಹಬ್ಬದ ವೇಳೆ ಈ ಜೋಡಿ ಮುದ್ದಾದ ಮಗಳನ್ನು ಬರಮಾಡಿಕೊಂಡರು.
ಚಂದನ್ ಅವರಿಗೆ ಹೆಣ್ಣುಮಗು ಆಗಲಿ ಎಂದು ಆಸೆ ಇತ್ತು. ಅದೇ ರೀತಿ ಈಗ ಈ ಮುದ್ದಾದ ಜೋಡಿಗೆ ಹೆಣ್ಣುಮಗು ಜನಿಸಿತು. ಈ ಸಂತೋಷದ ವಿಚಾರವನ್ನು ಇಬ್ಬರೂ ಸಹ ಸೋಶಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಾಗ, ಅಭಿಮಾನಿಗಳಲ್ಲಿ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ. ಎಲ್ಲರೂ ಕೂಡ ನೇಹಾ ಹಾಗೂ ಚಂದನ್ ಜೋಡಿಗೆ ವಿಶೇಷವಾಗಿ ವಿಶ್ ಮಾಡಿದ್ದರು. ಮುದ್ದಿನ ಮಗಳ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದರು ನೇಹಾ. ನಿನ್ನೆಯಷ್ಟೇ ಇವರು, ತಮ್ಮ ಮಗಳಿಗೆ ನಾಮಕರಣ ಶಾಸ್ತ್ರ ಮಾಡಿದ್ದಾರೆ. ನೇಹಾ ಹಾಗೂ ಚಂದನ್ ಜೋಡಿ ತಮ್ಮ ಮಗಳಿಗೆ ಸುಂದರವಾದ, ಅಪ್ಪಟ ಕನ್ನಡದ ಹೆಸರನ್ನು ಇಟ್ಟಿರುವುದು ಹೆಚ್ಚಿನ ವಿಶೇಷತೆ ಆಗಿದೆ. ಆಡಂಬರವಾಗಿ ಅಲ್ಲದೇ, ಸಾಂಪ್ರದಾಯಿಕವಾಗಿ ಮಗಳ ನಾಮಕರಣ ಮಾಡಿದ್ದಾರೆ ಚಂದನ್ ಹಾಗೂ ನೇಹಾ..
ಇವರ ಮಗಳಿಗೆ “ಶಾರದಾ”ಎಂದು ಹೆಸರನ್ನು ಇಟ್ಟಿದ್ದಾರೆ. ಕೇಳೋಕೆ ಎಷ್ಟು ಚೆನ್ನಾಗಿ ಅನ್ನಿಸುತ್ತದೆ ಅಲ್ವಾ? ಈಗಿನ ಕಾಲದ ಜೋಡಿಗಳು ಏನೇನೋ ಫ್ಯಾನ್ಸಿ ಹೆಸರುಗಳನ್ನ ತಮ್ಮ ಮಗಳಿಗೆ ಇಡುತ್ತಾರೆ, ಅದರಲ್ಲು ಹೆಚ್ಚಾಗಿ ಉತ್ತರ ಭಾರತದ ಕಡೆ ಇಡುವಂಥ ಹೆಸರುಗಳನ್ನೇ ನಮ್ಮವರು ಇಡುವುದು, ಟ್ರೆಂಡಿ ಆಗಿರಬೇಕೆಂದು ಹೊಸ ಬಗೆಯ ಹೆಸರನ್ನು ಹುಡುಕುವುದು ಇದೆಲ್ಲವನ್ನು ಸಹ ಈಗಿನ ಜನರು ಮಾಡುತ್ತಾರೆ. ಆದರೆ ನೇಹಾ ಹಾಗೂ ಚಂದನ್ ಜೋಡಿ ಇದಕ್ಕೆ ಭಿನ್ನವಾಗಿದ್ದು, ತಮ್ಮ ಮಗಳಿಗೆ ಸುಂದರವಾದ, ನಮ್ಮ ಸಂಸ್ಕೃತಿಗೆ ಹತ್ತಿರ ಎನ್ನಿಸುವ, ಶೃಂಗೇರಿ ಶಾರದೆಯ ಹೆಸರನ್ನು ಇಟ್ಟಿದ್ದಾರೆ. ಇದೆಲ್ಲವನ್ನು ನೋಡಿದರೆ ಬಹಳ ಸಂತೋಷ ಆಗುತ್ತದೆ. ನೇಹಾ ಅವರು ನಮ್ಮತನವನ್ನು ಬಿಟ್ಟುಕೊಡಲಿಲ್ಲ ಎನ್ನುವುದು ಹೆಮ್ಮೆಯ ವಿಷಯ ಆಗಿದೆ.
ಇವರ ಮಗಳ ನಾಮಕರಣಕ್ಕೆ ನೇಹಾ ಅವರ ಕುಟುಂಬ, ಚಂದನ್ ಅವರ ಕುಟುಂಬ ಮತ್ತು ಇಬ್ಬರ ಸ್ನೇಹಿತರು ಪಾಲ್ಗೊಂಡಿದ್ದರು. ಮತ್ತೊಂದು ವಿಶೇಷತೆ ಏನು ಎಂದರೆ, ನೇಹಾ ಅವರ ಅಕ್ಕ ಸೋನು ಗೌಡ ಅವರ ಹುಟ್ಟುಹಬ್ಬದ ದಿವಸ ನೇಹಾ ಅವರ ಮಗುವಿನ ನಾಮಕರಣ ಮಾಡಲಾಗಿದ್ದ. ಇದು ನಿಜಕ್ಕೂ ಬಹಳ ಸಂತೋಷವಾದ ವಿಚಾರ. ನೇಹಾ ಅವರಿಗೆ ಅಕ್ಕನನ್ನು ಕಂಡರೆ ತುಂಬಾ ಜಗಳ ಆಡುತ್ತಾರೆ, ಅಷ್ಟೇ ಅನ್ಯೋನ್ಯತೆ ಇವರಿಬ್ಬರಲ್ಲಿ ಇದೆ. ಅಕ್ಕ ತಂಗಿ ಒಬ್ಬರನ್ನೊಬ್ಬರು ಯಾವತ್ತಿಗೂ ಬಿಟ್ಟು ಕೊಡೋದಿಲ್ಲ. ಒಬ್ಬರು ನೋವಲ್ಲಿದ್ದರೆ, ಮತ್ತೊಬ್ಬರು ಸಮಾಧಾನ ಮಾಡುತ್ತಾರೆ. ತಂದೆ ತಾಯಿಯನ್ನು ಕುಟುಂಬವನ್ನು ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇಂಥ ಅಕ್ಕ ತಂಗಿಯರನ್ನು ನೋಡೋದಕ್ಕೆ ಖುಷಿಯಾಗುತ್ತದೆ.
ಇನ್ನು ನೇಹಾ ಹಾಗೂ ಚಂದನ್ ಜೋಡಿ ಬಗ್ಗೆ ಎಷ್ಟು ಹೇಳಿದರೂ ಕೂಡ ಕಡಿಮೆಯೇ. ಇವರಿಬ್ಬರದ್ದು ಸ್ಕೂಲ್ ಟೈಮ್ ಇಂದಲೇ ಶುರುವಾದ ಲವ್ ಸ್ಟೋರಿ. ಇಬ್ಬರು ಬೇರೆ ಬೇರೆ ಸ್ಕೂಲ್ ಗಳಲ್ಲಿ ಇದ್ದಾಗಲು ಪ್ರೀತಿಯನ್ನು ಬಿಟ್ಟಿಕೊಟ್ಟಿಲ್ಲ. ವಾರಕ್ಕೆ ಒಂದು ಸಾರಿ ಫೋನ್ ಮಾಡುತ್ತಿದ್ದರಂತೆ. ಹೀಗೆ ವರ್ಷಗಳು ಉರುಳಿದರು, ಮಾಸದ ಪ್ರೀತಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಾಗಿ ಬೆಳೆಯಿತು. ಇವರಿಬ್ಬರನ್ನು ಎಲ್ಲರು ಮೆಚ್ಚಿಕೊಂಡಿದ್ದರು. ನೇಹಾ ಅವರು ಕಿರುತೆರೆಗೆ ಎಂಟ್ರಿ ಕೊಟ್ಟು, ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಗೊಂಬೆ ಪಾತ್ರದಲ್ಲಿ ಮಿಂಚಿದರು. ಈ ಧಾರವಾಹಿ ನಡೆಯುವ ವೇಳೆಯಲ್ಲೇ ನೇಹಾ ಅವರಿಗೆ ಚಂದನ್ ಅವರೊಡನೆ ಮದುವೆಯಾಯಿತು. ಆ ವೇಳೆ ಚಂದನ್ ಅವರು ಕೆಲಸ ಮಾಡುತ್ತಿದ್ದಿದ್ದು ಹೊರದೇಶದಲ್ಲಿ. ಸ್ವಲ್ಪ ದಿವಸ ನೇಹಾ ಅಲ್ಲಿಯೇ ಹೋಗಿ ಚಂದನ್ ಅವರ ಜೊತೆಗಿದ್ದರು. ಬಳಿಕ ಇಬ್ಬರು ಬೆಂಗಳೂರಿಗೆ ಬಂದರು.
ಇಲ್ಲಿಗೆ ಬಂದ ಬಳಿಕ ಚಂದನ್ ಹಾಗೂ ನೇಹಾ ರಾಜ ರಾಣಿ ಶೋ ಅಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದರು. ಈ ಜೋಡಿಗೆ ರಾಜ ರಾಣಿ ಶೋ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು. ಇವರಲ್ಲಿದ್ದ ಪ್ರೀತಿ, ಅನ್ಯೋನ್ಯತೆ ಎಲ್ಲವೂ ನೋಡುಗರಿಗೆ ಮತ್ತು ಜಡ್ಜ್ ಗಳಿಗೆ ಬಹಳ ಇಷ್ಟವಾಗಿತ್ತು. ಇವರಿಬ್ಬರು ಶೋ ವಿನ್ನರ್ ಕೂಡ ಆದರು. ಚಂದನ್ ಹಾಗೂ ನೇಹಾ ಈ ಶೋ ನಂತರ ಒಂದೆರಡು ಬೇರೆ ಶೋಗಳಲ್ಲಿ ಕಾಣಿಸಿಕೊಂಡರು, ಚಂದನ್ ಅವರು ಅಂತರಪಟ ಧಾರಾವಾಹಿಯಲ್ಲಿ ಕೂಡ ನಟಿಸಿ, ನಟನೆಯಲ್ಲಿ ಕೂಡ ಸೈ ಎನ್ನಿಸಿಕೊಂಡರು. ಇನ್ನು ನೆಹ ಒಂದೆರಡು ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ಅವು ಫುಲ್ ಫ್ಲೆಡ್ಜ್ ಆಗಿರುವ ಪಾತ್ರ ಆಗಿರಲಿಲ್ಲ, ಕೆಲವು ದಿನಗಳ ಕಾಲ ಬಂದು ಹೋಗುವ ಪಾತ್ರ ಆಗಿತ್ತು. ಹಾಗಾಗಿ ಜನರು ಇವರ ಕಂಬ್ಯಾಕ್ ಗಾಗಿ ಕಾಯುತ್ತಿದ್ದಾರೆ.