ಕಿರುತೆರೆ ಕ್ರೇಜ್ ಈಗ ಸಿನಿಮಾ ಕ್ರೇಜ್ ಗಿಂತ ಹೆಚ್ಚಿದೆ ಎಂದು ಹೇಳಿದರು ತಪ್ಪಲ್ಲ. ಎಲ್ಲಾ ವಾಹಿನಿಗಳಲ್ಲಿ ಹಲವು ಧಾರಾವಾಹಿಗಳು ಮೂಡಿ ಬರುತ್ತಲಿದೆ. ಸಾಕಷ್ಟು ಹೊಸ ಧಾರಾವಾಹಿಗಳು ಕೂಡ ಶುರುವಾಗುತ್ತಲಿದೆ. ಇದರಿಂದ ನಟನೆಯಲ್ಲಿ ಆಸಕ್ತಿ ಇರುವ ಸಾಕಷ್ಟು ಜನರಿಗೆ ಒಂದು ಒಳ್ಳೆಯ ಅವಕಾಶ ಸಿಕ್ಕ ಹಾಗೆ ಎಂದು ಹೇಳಿದರು ತಪ್ಪಲ್ಲ. ಸಾಕಷ್ಟು ಕಲಾವಿದರ ಪ್ರತಿಭೆ ಧಾರಾವಾಹಿಗಳಿಂದ ಬೆಳಕಿಗೆ ಬೆಳ್ಳಿತೆರೆಯಲ್ಲಿ ಅವರಿಗೆ ಒಂದಷ್ಟು ಒಳ್ಳೆಯ ಅವಕಾಶಗಳನ್ನು ಸಹ ತಂದುಕೊಟ್ಟಿದೆ. ತಮಗೆ ಸಿಗುತ್ತಿರುವ ಅವಕಾಶವನ್ನು ಕಲಾವಿದರು ಕಲಾವಿದರು ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಇದು ಡಿಪೆಂಡ್ ಆಗಿದೆ ಎಂದು ಹೇಳಬಹುದು. ಯಶ್ ಅವರು, ರಾಧಿಕಾ ಪಂಡಿತ್ ಅವರು ಸೀರಿಯಲ್ ಇಂದಲೇ ಕೆರಿಯರ್ ಶುರು ಮಾಡಿ, ಚಿತ್ರರಂಗದಲ್ಲಿ ಅಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಹಾಗಾಗಿ ಕಿರುತೆರೆ ಅನ್ನೋದು ಈಗ ದೊಡ್ಡ ಇಂಡಸ್ಟ್ರಿ.

ಕನ್ನಡ ಮಾತ್ರವಲ್ಲ ಈಗ ಎಲ್ಲಾ ಭಾಷೆಗಳಲ್ಲಿ ಕಿರುತೆರೆಯ ಪ್ರಾಧಾನ್ಯತೆ ಹೆಚ್ಚು. ಸಾಮಾನ್ಯವಾಗಿ ಸಿನಿಮಾಗಳು ಅಂದ್ರೆ ಥಿಯೇಟರ್ ನಲ್ಲಿ ನೋಡಿ ಖುಷಿ ಪಡ್ತೀವಿ. ಸಿನಿಮಾಗಳಿಗೆ ಇರುವ ಕ್ರೇಜ್ ಬೇರೆ. ಆದರೆ ಧಾರಾವಾಹಿಗಳು ಅಂದ್ರೆ ಅದಕ್ಕಿರುವ ಕ್ರೇಜ್ ಬೇರೆ ರೀತಿ. ಜನರು ಪ್ರತಿದಿನ ಮನೆಯಲ್ಲಿ ನೋಡೋ ಕಾರ್ಯಕ್ರಮ ಇದು. ಪ್ರತಿದಿನ ಧಾರಾವಾಹಿಯನ್ನ ಕಲಾವಿದರನ್ನ ನೋಡಿ, ಅವರ ಪಾತ್ರವನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳುವ ವೀಕ್ಷಕರು, ಧಾರಾವಾಹಿ ಕಥೆಗಳನ್ನ ತಮ್ಮ ಕಥೆ ಎಂದು ರಿಲೇಟ್ ಮಾಡಿಕೊಳ್ಳುತ್ತಾರೆ. ಪಾತ್ರಗಳನ್ನು ತಮ್ಮ ಫ್ಯಾಮಿಲಿ ಎನ್ನುವಂತೆ ಟ್ರೀಟ್ ಮಾಡುತ್ತಾರೆ. ಹಾಗಾಗಿ ಕಿರುತೆರೆಯ ಪಾತ್ರಗಳು ಜನರ ಜೊತೆಗೆ ಹೆಚ್ಚಾಗಿ ಕನೆಕ್ಟ್ ಆಗುತ್ತದೆ. ಈ ಕಾರಣಕ್ಕೆ ಕಿರುತೆರೆ ಕಲಾವಿದರಿಗೆ ಹೆಚ್ಚು ಬೇಡಿಕೆ ಕೂಡ ಇರುತ್ತದೆ..
ಹಾಗಾಗಿ ಹೆಚ್ಚು ಧಾರಾವಾಹಿಗಳು ಕೂಡ ಶುರುವಾಗುತ್ತದೆ. ಇದೇ ನಿಟ್ಟಿನಲ್ಲಿ ಇತ್ತೀಚೆಗೆ ಶುರುವಾಗಿ, ದೊಡ್ಡ ಮಟ್ಟದಲ್ಲಿ ಫೇಮಸ್ ಆಗಿರುವ ಧಾರಾವಾಹಿ ಅಣ್ಣಯ್ಯ. ಈ ಧಾರಾವಾಹಿ ಅಪ್ಪಟ ಹಳ್ಳಿ ಸೊಗಡಿನ ಧಾರಾವಾಹಿ ಆಗಿದೆ. ವಿಕಾಸ್ ಉತ್ತಯ್ಯ ಅವರು ನಾಯಕನಾಗಿ ನಟಿಸಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಿಶಾ ಮಿಲನಾ ಅವರು ನಾಯಕಿ. ವಿಕಾಸ್ ಅವರು ಶಿವಣ್ಣನ ಪಾತ್ರದಲ್ಲಿ, ನಿಶಾ ಅವರು ಪಾರ್ವತಿ ಅಲಿಯಾಸ್ ಪಾರು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಶಿವಣ್ಣನಿಗೆ ಮೂವರು ತಂಗಿಯರು. ತಂಗಿಯರ ಮದುವೆ ಮಾಡಬೇಕು ಎನ್ನುವುದೇ ಶಿವಣ್ಣನ ಗುರಿ ಆಗಿತ್ತು, ಆದರೆ ವಿಧಿಯ ಆಟವೇ ಬೇರೆ ಇತ್ತು. ತಂಗಿಯರ ಮದುವೆ ಮಾಡೋದಕ್ಕಿಂತ ಮೊದಲು ಶಿವಣ್ಣನ ಮದುವೆಯೇ ಆಗಿ ಹೋಯಿತು.

ಸೋದರಮಾವನ ಮಗಳು ಪಾರು ಜೊತೆಗೆ ಶಿವಣ್ಣನ ಮದುವೆ ಆಗಿದೆ., ಶುರುವಿನಲ್ಲಿ ಪಾರು ಮತ್ತೊಬ್ಬ ಹುಡುಗನನ್ನು ಪ್ರೀತಿ ಮಾಡುತ್ತಿರುತ್ತಾಳೆ, ಆದರೆ ಶಿವನಿಗೆ ಚಿಕ್ಕ ವಯಸ್ಸಿನಿಂದ ಕೂಡ ಪಾರು ಅಂದ್ರೆ ಪ್ರೀತಿ, ಆದರೆ ಹೇಳಿಕೊಂಡಿರುವುದಿಲ್ಲ. ಆ ಹುಡುಗನ ಜೊತೆಗೆ ಮದುವೆ ಆಗಬೇಕು ಅಂದುಕೊಂಡಿರೋ ಪಾರುಗೆ, ಏನೇನೋ ಸಮಸ್ಯೆಯಾಗಿ ಶಿವನ ಜೊತೆಗೆ ಮದುವೆ ಆಗುತ್ತದೆ. ಸ್ವಲ್ಪ ದಿನ ಕಳೆದ ನಂತರ ಆ ಹುಡುಗ ಒಳ್ಳೆಯವನಲ್ಲ ಎಂದು ಗೊತ್ತಾಗಿ, ನಂತರ ಶಿವು ಮಾವನಿಗೆ ಚಿಕ್ಕಂದಿನಿಂದಲೂ ತನ್ನ ಮೇಲೆ ಪ್ರೀತಿ ಇತ್ತು ಎಂದು ಕೂಡ ಗೊತ್ತಾಗಿ, ಪಾರುಗು ಶಿವನ ಮೇಲೆ ಪ್ರೀತಿ ಶುರುವಾಗಿದೆ. ಇದರ ಜೊತೆಗೆ ಶಿವನ ತಂಗಿ ಗುಂಡಮ್ಮ ಅಲಿಯಾಸ್ ರಶ್ಮಿಯ ಮದುವೆ ಕೂಡ ನಡೆದಿದೆ. ಈ ಧಾರಾವಾಹಿಯಲ್ಲಿ ಶಿವು ಪಾರು ಜೊತೆಗೆ ಗುಂಡಮ್ಮ ರಶ್ಮಿ ಪಾತ್ರ ಸಹ ಎಲ್ಲರಿಗೂ ತುಂಬಾ ಇಷ್ಟವಾದ ಪಾತ್ರ ಆಗಿದೆ.
ಗುಂಡಮ್ಮ ಸದಾ ಲವಲವಿಕೆ ಇಂದ ಇರುವ ಪಾತ್ರ, ಹಾಗಾಗಿ ಜನರಿಗೆ ತುಂಬಾ ಇಷ್ಟವಾಗಿದ್ದು, ಈ ಪಾತ್ರದಲ್ಲಿ ನಟಿಸುತ್ತಿರುವ ಪ್ರತೀಕ್ಷ ಶ್ರೀನಾಥ್ ಅವರ ಅಭಿನಯ ಕೂಡ ಅಷ್ಟೇ ಚೆನ್ನಾಗಿದೆ. ಗುಂಡಮ್ಮ ಆಗಿ ಕಿರುತೆರೆ ವೀಕ್ಷಕರಿಗೆ ಸೂಪರ್ ಮನರಂಜನೆ ಕೊಡುತ್ತಿರುವ ಪ್ರತೀಕ್ಷಾ ಅವರು ರಿಯಲ್ ಲೈಫ್ ನಲ್ಲಿ ಹೇಗಿದ್ದಾರೆ? ಏನೆಲ್ಲಾ ಓದಿದ್ದಾರೆ ಎಂದು ಫುಲ್ ಡೀಟೇಲ್ಸ್ ಇಂದು ತಿಳಿಯೋಣ. ಪ್ರತೀಕ್ಷ ಶ್ರೀನಾಥ್ ಮೂಲತಃ ಮಲೆನಾಡಿನವರು, ಇವರ ಕುಟುಂಬದ ಮೂಲ ಅದು. ಆದರೆ ಇವರು ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಕೂಡ ಬೆಂಗಳೂರಿನಲ್ಲೇ. ಬೆಂಗಳೂರಿನ ಲಿಟ್ಲ್ ಫ್ಲವರ್ ಪಬ್ಲಿಕ್ ಸ್ಕೂಲ್ ನಲ್ಲಿ ಇವರು ಸ್ಕೂಲಿಂಗ್ ಮಾಡಿದ್ದು, ಶಾಲಾ ಸಮಯದಲ್ಲಿ ಒಳ್ಳೆಯ ಸ್ಟೂಡೆಂಟ್ ಆಗಿದ್ದರು. ಇನ್ನು ಶ್ರೀ ಕುಮರನ್ ಕಾಂಪೋಸಿಟ್ ಪಿಯು ಕಾಲೇಜಿನಲ್ಲಿ ಪಿಯುಸಿ ಓದಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಹೆಚ್ಚು ಹೆಸರುವಾಸಿ ಆಗಿರುವ ಕ್ರೈಸ್ಟ್ ಕಾಲೇಜಿನಲ್ಲಿ ಮಾಸ್ಟರ್ಸ್ ಮಾಡಿದ್ದಾರೆ, ಮೀಡಿಯಾ ಅಂಡ್ ಕಮ್ಯುನಿಕೇಶನ್ ವಿಷಯದಲ್ಲಿ ಪ್ರತೀಕ್ಷಾ ಅವರು ಮಾಸ್ಟರ್ಸ್ ಮಾಡಿದ್ದಾರೆ. ಚೆನ್ನಾಗಿ ಓದಿಕೊಂಡಿರುವ ಪ್ರತೀಕ್ಷಾ ಅವರು ಅದ್ಭುತವಾದ ಕಲಾವಿದೆ ಕೂಡ ಹೌದು. ಇವರು ಧಾರಾವಾಹಿ ನಟನೆಯಲ್ಲಿ ಮಾತ್ರ ತೊಡಗಿಕೊಂಡಿಲ್ಲ. ಇವರು ರಂಗಭೂಮಿಯಲ್ಲಿ ಸಹ ತೊಡಗಿಸಿಕೊಂಡಿದ್ದಾರೆ. ಈವರೆಗೂ ಹಲವು ನಾಟಕಗಳಲ್ಲಿ ಸಹ ಪ್ರತೀಕ್ಷಾ ಅವರು ನಟಿಸಿದ್ದಾರೆ. ರಂಗಭೂಮಿಯಲ್ಲಿ ತೊಡಗಿಕೊಂಡಿರುವವರು ಅಭಿನಯದಲ್ಲಿ ತುಂಬಾ ಚೆನ್ನಾಗಿಯೇ ಇರುತ್ತಾರೆ. ಇನ್ನು ಇವರು ವಿಶೇಷವಾಗಿ ಯಕ್ಷಗಾನ ಕೂಡ ಕಲಿತಿದ್ದಾರೆ. ಬಹಳ ಚೆನ್ನಾಗಿ ಯಕ್ಷಗಾನ ಮಾಡುತ್ತಾರೆ. ಈ ಎಲ್ಲಾ ವಿಚಾರದಿಂದ ಜನರಿಗೆ ಬಹಳ ಇಷ್ಟವಾಗಿದ್ದಾರೆ ಪ್ರತೀಕ್ಷ.
ಅಣ್ಣಯ್ಯ ಧಾರಾವಾಹಿಯಲ್ಲಿ ಇವರ ಪಾತ್ರವೇ ಹೈಲೈಟ್ ಎಂದು ಹೇಳಿದರು ತಪ್ಪಲ್ಲ. ಅಣ್ಣನಿಗೆ ಸದಾ ಸಪೋರ್ಟ್ ಮಾಡುವ ತಂಗಿ, ಇತ್ತೀಚೆಗೆ ಜಿಮ್ ಸೀನನ ಜೊತೆಗೆ ಮದುವೆ ಕೂಡ ಆಗಿದೆ. ಇನ್ನು ಅಣ್ಣಯ್ಯ ಧಾರಾವಾಹಿಯ ಬಗ್ಗೆ ಹೇಳುವುದಾದರೆ, ಇದು ಶುರುವಾಗಿ ಬಹಳ ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದೆ. ಹಾಗೆಯೇ ಟಿಆರ್ಪಿ ರೇಟಿಂಗ್ ನಲ್ಲಿ ಸಹ ಬೇರೆ ಎಲ್ಲಾ ಧಾರವಾಹಿ ಗಿಂತ ಹೆಚ್ಚು ರೇಟಿಂಗ್ಸ್ ಪಡೆದು, ಕರ್ನಾಟಕದ ನಂಬರ್ 1 ಧಾರಾವಾಹಿ ಆಗಿದೆ. ನಿಶಾ ಮಿಲನಾ ಅವರಿಗೆ ಇರುವ ಜನಪ್ರಿಯತೆ ಸಹ ಈ ಯಶಸ್ಸಿಗೆ ಮುಖ್ಯ ಕಾರಣ ಎಂದು ಹೇಳಿದರೆ ಕೂಡ ತಪ್ಪಲ್ಲ. ಒಟ್ಟಿನಲ್ಲಿ ಅಣ್ಣಯ್ಯ ಧಾರವಾಹಿ ಒಂದು ರೀತಿಯ ಕಂಪ್ಲೀಟ್ ಪ್ಯಾಕೇಜ್ ಆಗಿದೆ.