ನಟ ದರ್ಶನ್ ಅವರು ರೇಣುಕಾಸ್ವಾಮಿ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು. ಆರೇಳು ತಿಂಗಳು ಜೈ*ಲಿನಲ್ಲಿ ಸಮಯ ಕಳೆದ ನಂತರ, ಕೊನೆಗೂ ಕೋರ್ಟ್ ಇಂದ ಜಾಮೀನು ಸಿಕ್ಕಿ, ಹೊರಗಡೆ ಬಂದರು. ಹೊರಗಡೆ ಬಂದ ನಂತರ ದರ್ಶನ್ ಅವರು ಈಗಷ್ಟೇ ಹೊರಗಡೆ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ಕಾರ್ಯಕ್ರಮಗಳು, ಮದುವೆ ಹೀಗೆ ಸಣ್ಣ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ದರ್ಶನ್ ಅವರು ಹಲವು ದೇವಸ್ಥಾನಗಳಿಗೆ ಸಹ ಭೇಟಿ ನೀಡುತ್ತಿದ್ದಾರೆ. ಇದೀಗ ಇವರು ಕೇರಳದ ಪ್ರಸಿದ್ಧ ದೇವಸ್ಥಾನ ಒಂದಕ್ಕೆ ಭೇಟಿ ನೀಡಿ, ಶತ್ರು ಸಂಹಾರ ಪೂಜೆ ಮಾಡಿಸಿದ್ದಾರೆ. ಈ ಕಾರಣಕ್ಕೆ ಡಿಬಾಸ್ ಮತ್ತೆ ಸುದ್ದಿಯಾಗಿದ್ದು, ಭೇಟಿ ನೀಡಿರುವುದು ಯಾವ ದೇವಸ್ಥಾನಕ್ಕೆ? ಯಾರೆಲ್ಲಾ ಹೋಗಿದ್ದರು? ಪೂರ್ತಿ ಮಾಹಿತಿ ಇಲ್ಲಿದೆ ನೋಡಿ..

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೇಸ್ ಇಂದ ಕಳೆದ ವರ್ಷ ಪೂರ್ತಿ ಬಹಳ ಕಷ್ಟಪಟ್ಟರು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಒಂದಷ್ಟು ತಿಂಗಳು, ಬಳಿಕ ಬಳ್ಳಾರಿ ಜೈಲಿನಲ್ಲಿ ಒಂದಷ್ಟು ತಿಂಗಳು ದರ್ಶನ್ ಅವರು ಸಮಯ ಕಳೆಯಬೇಕಾಯಿತು. ಬಳಿಕ ಕೋರ್ಟ್ ಇಂದ ಆರೋಗ್ಯದ ವಿಚಾರವಾಗಿ ಜಾಮೀನು ಸಿಕ್ಕಿ ಹೊರಗಡೆ ಬಂದರು. ದರ್ಶನ್ ಅವರು ಹೊರಗಡೆ ಬಂದಿದ್ದು ಬೆನ್ನಿಗೆ ತೀವ್ರವಾದ ಸಮಸ್ಯೆ ಆಗಿದೆ ಎನ್ನುವ ಕಾರಣಕ್ಕೆ. ಆಪರೇಷನ್ ಆಗಲೇಬೇಕು, ಇಲ್ಲದೇ ಹೋದರೆ ಹೆಚ್ಚು ಸಮಸ್ಯೆ ಆಗುತ್ತದೆ ಎಂದು ಜಾ*ಮೀನು ನೀಡಲಾಯಿತು. ಆದರೆ ಹೊರಗಡೆ ಬಂದ ಮೇಲೆ ಸಹ ದರ್ಶನ್ ಅವರು ಆಪರೇಷನ್ ಮಾಡಿಸಿಕೊಂಡಿಲ್ಲ, ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಇನ್ನು ಕೂಡ ಸುಧಾರಿಸಿಲ್ಲ.

ತಮ್ಮ ಹುಟ್ಟುಹಬ್ಬವನ್ನ ಸಹ ಆರೋಗ್ಯದ ಸಮಸ್ಯೆ ಇರುವ ಕಾರಣಕ್ಕೆ, ಆಚರಿಸಿಕೊಳ್ಳಲಿಲ್ಲ ದರ್ಶನ್ ಅವರು. ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿ, ಕಷ್ಟದ ಸಮಯದಲ್ಲಿ ತಮ್ಮ ಜೊತೆಗಿದ್ದ ಎಲ್ಲಾ ಅಭಿಮಾನಿಗಳು ಮತ್ತು ಸ್ನೇಹಿತರಿಗೆ ದರ್ಶನ್ ಅವರು ಧನ್ಯವಾದ ತಿಳಿಸಿದರು. ಈ ವೇಳೆ ವಿಶೇಷವಾಗಿ ರಕ್ಷಿತಾ ಅವರು, ಧನವೀರ್ ಅವರು ಮತ್ತು ರಚಿತಾ ರಾಮ್ ಅವರಿಗೆ ಧನ್ಯವಾದ ತಿಳಿಸಿದರು. ಹಾಗೆಯೇ ದೇವಸ್ಥಾನಗಳಿಗೆ ಪತ್ನಿ ಹಾಗೂ ಮಗನ ಜೊತೆಗೆ ಭೇಟಿ ನೀಡುತ್ತಿದ್ದರು. ವಿಜಯಲಕ್ಷ್ಮಿ ಅವರು ಸಹ ಚಾಮುಂಡಿಬೆಟ್ಟ ಹಾಗೂ ಇನ್ನಿತರ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ಇನ್ನು ದರ್ಶನ್ ಅವರು ಆರತಿ ಉಕ್ಕಡ ದೇವಸ್ಥಾನಕ್ಕೆ ಸಹ ಭೇಟಿ ನೀಡಿದ್ದರು. ಆ ವೇಳೆ ಅವರ ಜೊತೆಗೆ ಧನವೀರ್ ಸಹ ಇದ್ದರು. ಹೀಗೆ ದರ್ಶನ್ ಅವರು ಟೆಂಪಲ್ ರನ್ ಮಾಡುತ್ತಿದ್ದಾರೆ..

ಅದೇ ರೀತಿ ಈಗ ಮತ್ತೊಮ್ಮೆ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಈ ಬಾರಿ ಕೇರಳ ರಾಜ್ಯದಲ್ಲಿರುವ ಮಡಾಯಿ ಶ್ರೀ ತಿರುವರ್ಕ್ಕಾಟ್ಟು ಕಾವು ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ, ಮಗ ವಿನಿಷ್ ಹಾಗೂ ಧನವೀರ್ ದರ್ಶನ್ ಅವರ ಜೊತೆಗಿದ್ದರು. ಈ ದೇವಸ್ಥಾನದಲ್ಲಿ ವಿಶೇಷವಾಗಿ ಶತ್ರು ಸಂಹಾರ ಪೂಜೆ ಮಾಡಿಸುತ್ತಾರೆ. ದೊಡ್ಡ ದೊಡ್ಡ ರಾಜಕಾರಣಿಗಳು ಸಹ ಇಲ್ಲಿಗೆ ಭೇಟಿ ನೀಡಿ, ಶತ್ರು ಸಂಹಾರ ಪೂಜೆ ಮಾಡಿಸುವುದುಂಟು. ಈ ಪೂಜೆ ಇಂದ ಶತ್ರುಗಳು ದೂರ ಆಗುತ್ತಾರೆ, ಹಾಗೆಯೇ ಏಳಿಗೆ ಕೂಡ ಇರುತ್ತದೆ ಎಂದು ಹೇಳುತ್ತಾರೆ. ಈ ದೇವಸ್ಥಾನಕ್ಕೆ ದರ್ಶನ್ ಅವರು ಭೇಟಿ ನೀಡಿರುವುದು ಅಭಿಮಾನಿಗಳಲ್ಲಿ ಹಾಗೂ ನೆಟ್ಟಿಗರಲ್ಲಿ ಹಲವು ಪ್ರಶ್ನೆಗಳು ಮೂಡುವ ಹಾಗೆ ಮಾಡಿದೆ. ದರ್ಶನ್ ಅವರು ಈಗ ಶತ್ರು ಸಂಹಾರ ಪೂಜೆ ಮಾಡಿಸುತ್ತಿದ್ದಾರೆ. ವಿಶೇಷ ಫಲ ಪಡೆಯುವ ಹಾದಿಯಲ್ಲಿದ್ದಾರೆ.

ನಟ ದರ್ಶನ್ ಅವರು ಆ ಎಲ್ಲಾ ಕಹಿ ಘಟನೆಗಳು ನಡೆದ ಬಳಿಕ ಈಗ ಮತ್ತೆ ಶೂಟಿಂಗ್ ನಲ್ಲಿ ತೊಡಗಿಸಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ದರ್ಶನ್ ಅವರು ನಾಯಕನಾಗಿ ನಟಿಸುತ್ತಿರುವ ಮುಂದಿನ ಸಿನಿಮಾ ಡೆವಿಲ್, ದರ್ಶನ್ ಅವರು ಇಲ್ಲದೆಯೇ ಅನೇಕ ದಿನಗಳ ಕಾಲ ಶೂಟಿಂಗ್ ಪೋಸ್ಟ್ ಪೋನ್ ಆಗಿತ್ತು. ಈಗ ಮತ್ತೆ ಶೂಟಿಂಗ್ ಶುರುವಾಗಿದೆ. ಮೈಸೂರಿನಲ್ಲಿ ನಡೆದ ಶೂಟಿಂಗ್ ನಲ್ಲಿ ದರ್ಶನ್ ಅವರು ಸಹ ಪಾಲ್ಗೊಂಡಿದ್ದರು. ಈ ಶೂಟಿಂಗ್ ನಡೆದ ಬಳಿಕ ಇದೀಗ ದರ್ಶನ್ ಅವರು ಫ್ಯಾಮಿಲಿ ಜೊತೆಗೆ ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ದೇವಸ್ಥಾನದಲ್ಲಿ ರಹಸ್ಯ ಪೂಜೆ ಮಾಡಲಾಗುತ್ತಿದೆಯಂತೆ. ಶತ್ರು ಸಂಹಾರ ಪೂಜೆ ಮಾಡಿಸಿದರೆ ಏಳಿಗೆ ಇರುತ್ತದೆ, ರಹಸ್ಯೆ ಪೂಜೆ ಇದೆಲ್ಲವು ನಡೆದರೆ, ಕೆಲವೇ ದಿನಗಳಲ್ಲಿ ಶತ್ರು ಸಂಹಾರ ಆಗುತ್ತದೆ ಎಂದು ಹೇಳುತ್ತಾರೆ..

ಇಲ್ಲಿ ವಿಶೇಷವಾಗಿ ಮದ್ಯವನ್ನು ಕೂಡ ಇಟ್ಟು ಪೂಜೆ ಮಾಡಲಾಗುತ್ತದೆಯಂತೆ. ಹಾಗೆಯೇ ವಾಮ ಮಾರ್ಗದಲ್ಲಿ ಪೂಜೆಗಳನ್ನು ನಡೆಸಲಾಗುತ್ತದೆ. ರಹಸ್ಯ ಮಾರ್ಗದಲ್ಲಿ ನಡೆಸುವ ಪೂಜೆಗೆ ಹೆಚ್ಚು ಫಲವಿದೆ ಎನ್ನುವ ನಂಬಿಕೆ ಕೂಡ ಇದೆ. ಈ ಭಗವತಿ ದೇವಿಯ ದೇವಸ್ಥಾನದಲ್ಲಿ ಕಾಳಿ ದೇವಿಯ ಪೂಜೆ ಮಾಡಲಾಗುತ್ತದೆ. ಹಿಂದಿನ ಕಾಲದಲ್ಲಿ ಹಲವು ರಾಜರು ಈ ದೇವಸ್ಥಾನಕ್ಕೆ ಬಂದು, ಶತ್ರು ಸಂಹಾರ ಪೂಜೆ ಮಾಡಿಸುತ್ತಿದ್ದರಂತೆ. ಈ ಪೂಜೆ ಮಾಡಿಸಿದರೆ, ಅವರಿಗೆ ರಕ್ಷಣೆ ಸಿಗುತ್ತದೆ ಎನ್ನುವ ನಂಬಿಕೆ ಕೂಡ ಇತ್ತಂತೆ. ಹಾಗಾಗಿ ತಾಂತ್ರಿಕ, ಹಾಗೂ ಮಾಂತ್ರಿಕ ಮಾರ್ಗದಲ್ಲಿ ಪೂಜೆಗಳನ್ನು ಮಾಡಿಸಲಾಗುತ್ತಿತ್ತು. ಮನೆಯವರ ಜೊತೆ ಕೂತು ಈ ಪೂಜೆಗಳನ್ನು ಮಾಡಿದರೆ, ಒಳ್ಳೆಯ ಫಲ ಸಿಗುತ್ತದೆ ಎಂದು ನಂಬಿಕೆ ಇದೆ, ಮುಂದೆ ಹೆಚ್ಚಿನ ಲಾಭ ಲಭಿಸುತ್ತದೆ ಎನ್ನಲಾಗಿದೆ.
ನಮ್ಮ ಹಿಂದೂ ಸಂಪ್ರದಾಯದ ಅನುಸಾರ, ಪಂಚಾಂಗದಲ್ಲಿ ಅಷ್ಟಮಿ ತಿಥಿ ಇರುವ ಶನಿವಾರದ ದಿವಸ ಈ ಪೂಜೆ ಮಾಡಿದರೆ ತುಂಬಾ ಒಳ್ಳೆಯದು ಎನ್ನುತ್ತಾರೆ. ಇಲ್ಲಿ ಪೂಜೆ ಮಾಡಿಸಬೇಕು ಎಂದರೆ ಮೊದಲಿಗೆ ಅರ್ಚಕರ ಬಳಿ ಮಾತನಾಡಿ, ದಿನಾಂಕ ಸಮಯ ಎಲ್ಲವನ್ನು ನಿಗದಿ ಪಡಿಸಿಕೊಂಡು ನಂತರ ಪೂಜೆ ಮಾಡಿಸಬೇಕು. ಇವತ್ತು ಶನಿವಾರ ಅಷ್ಟಮಿ ತಿಥಿ ಇರುವ ಕಾರಣ ನಟ ದರ್ಶನ್ ಅವರು ಕುಟುಂಬ ಸಮೇತ ಹೋಗಿ, ಪೂಜೆ ಮಾಡಿಸಿದ್ದಾರೆ. ದರ್ಶನ್ ಅವರನ್ನು ಈ ರೀತಿ ಫ್ಯಾಮಿಲಿ ಜೊತೆಗೆ ಹೋಗಿ ಪೂಜೆ ಮಾಡಿಸುತ್ತಿರುವುದನ್ನು ನೋಡೋಕೆ ಅವರ ಫ್ಯಾನ್ಸ್ ಕೂಡ ಬಹಳ ಸಂತೋಷಪಟ್ಟಿದ್ದಾರೆ. ದರ್ಶನ್ ಅವರು ಯಾವಾಗಲೂ ಹೀಗೆ ಫ್ಯಾಮಿಲಿ ಜೊತೆಗಿರಲಿ ಎನ್ನುವುದು ಅಭಿಮಾನಿಗಳ ಆಸೆ ಆಗಿದೆ.