ಅಂತರೀಕ್ಷೆಯಿಂದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಾಗೂ ಬ್ಯಾರೀ ಬುಚ್ ಭೂಮಿಗೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ.. ಹಲವು ತಿಂಗಳಿಂದ ಬಾಹ್ಯಾಕಾಶದಲ್ಲೇ ಇದ್ದ ಈ ಇಬ್ಬರನ್ನೂ ಸ್ಪೇಸ್ ಕ್ರಾಫ್ಟ್ ಭೂಮಿಗೆ ಕರೆದುಕೊಂಡು ಬಂದಿದೆ.. ಇಲ್ಲಿ ಸುನಿತಾ ವಿಲಿಯಮ್ಸ್ ಅಂದ ತಕ್ಷಣ ಭಾರತದ ನಂಟಿನ ಬಗ್ಗೆ ನಮಗೆ ಕುತೂಹಲ ಮೂಡುತ್ತದೆ.. ಹೀಗಾಗಿ ಈ ಸಂದರ್ಭದಲ್ಲಿ ಸುನಿತಾ ವಿಲಿಯಮ್ಸ್ ಅವರ ಜೀವನ ಹಾಗೂ ಭಾರತದೊಂದಿಗೆ ಸಂಬಂಧದ ಬಗ್ಗೆ ಕೆಲವೊಂದು ಕುತೂಹಲಕಾರಿ ವಿಷಯಗಳನ್ನು ನಾವಿಲ್ಲಿ ತಿಳಿದುಕೊಳ್ಳೋಣ..
ಅಂದಹಾಗೆ, ಸುನಿತಾ ವಿಲಿಯಮ್ಸ್ಗೆ ಭಾರತೀಯ ಹೆಸರಿದೆ ಅಷ್ಟೇ.. ಆದ್ರೆ ಅವರು ಹುಟ್ಟಿ ಬೆಳೆದಿದ್ದೆಲ್ಲಾ ಅಮೆರಿಕವೇ.. ಆದ್ರೆ ಸುನಿತಾ ವಿಲಿಯಮ್ಸ್ ಅವರ ತಂದೆ ಭಾರತೀಯರು.. ಅವರ ತಂದೆ ದೀಪಕ್ ಪಾಂಡ್ಯಾ ಗುಜರಾತ್ನ ಮೊಹಸಾನಾ ಜಿಲ್ಲೆಯ ಝಲಾಸನ್ ಎಂಬ ಗ್ರಾಮಕ್ಕೆ ಸೇರಿದವರು.. ಈ ಗ್ರಾಮ ಗುಜರಾತ್ ರಾಜಧಾನಿ ಗಾಂಧಿನಗರಕ್ಕೆ 40 ಕಿಲೋ ಮೀಟರ್ ದೂರದಲ್ಲಿದೆ..
ಸುನಿತಾ ವಿಲಿಯಮ್ಸ್ ಅವರು ಕೂಡಾ 2007 ಹಾಗೂ 2013ರಲ್ಲಿ ತಂದೆಯ ಹುಟ್ಟೂರಾದ ಝಲಾಸನ್ ಗ್ರಾಮಕ್ಕೆ ಬಂದು ಹೋಗಿದ್ದರು.. ತಂದೆ ದೀಪಕ್ ಪಾಂಡ್ಯ ವೃತ್ತಿಯಲ್ಲಿ ಡಾಕ್ಟರ್.. ಅಹ್ಮದಾಬಾದ್ ನಲ್ಲಿ ಎಂಬಿಬಿಎಸ್ ಓದಿದರು. ಅಷ್ಟೊತ್ತಿಗಾಗಲೇ ದೀಪಕ್ ಪಾಂಡ್ಯ ಸಹೋದರ ಅಮೆರಿಕದಲ್ಲಿ ನೆಲೆಸಿದ್ದರು.. ಹೀಗಾಗಿ ದೀಪಕ್ ಪಾಂಡ್ಯ ಕೂಡಾ ಅಮೆರಿಕಕ್ಕೆ ಹೋದರು. ಅಲ್ಲಿಯೇ ಅವರು ಸ್ಲೋವೇನಿಯಸ್ ಸಂತತಿಗೆ ಸೇರಿ ಉರ್ಸುಲಿನ್ ಬೋನಿ ಎಂಬುವವರು ಪ್ರೀತಿಸಿ ಮದುವೆಯಾಗುತ್ತಾರೆ.. ಇವರಿಗೆ 1965ರಲ್ಲಿ ಹೆಣ್ಣು ಮಗು ಹುಟ್ಟುತ್ತದೆ.. ಅವರೇ ಸುನಿತಾ ವಿಲಿಯಮ್ಸ್..

ಸುನಿತಾ ವಿಲಿಯಮ್ಸ್ ಹಿಂದೂ ಆದರೆ, ತಾಯಿ ಕ್ಯಾಥಲಿಕ್.. ಹೀಗಾಗಿ ಸನಿತಾ ವಿಲಿಯಮ್ಸ್ ಎಲ್ಲಾ ಮತಗಳನ್ನು ಗೌರವಿಸುವುದನ್ನು ಕಲಿತುಕೊಂಡರು.. ಹೀಗಾಗಿ ಅವರು ಹಿಂದೂ ಮತದ ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು ಕೂಡಾ ಓದುತ್ತಾರೆ.. ಸುನಿತಾ ಅವರ ತಂದೆ ದೀಪಕ್ ಅವರು ಚರ್ಚ್ಗೆ ಹೋಗುತ್ತಿದ್ದರು.. ಇದರ ಜೊತೆಗೆ ಭಗವದ್ಗೀತೆಯನ್ನು ಓದುತ್ತಿದ್ದರು.. ಜೊತೆಗೆ ಮಕ್ಕಳಿಗೆ ರಾಮಾಯಣ, ಮಹಾಭಾರತದ ಕಥೆಗಳನ್ನು ಓದಿ ಹೇಳುತ್ತಿದ್ದರು.. ಹೀಗಾಗಿ ಸುನಿತಾ ವಿಲಿಯಮ್ಸ್ ಅಮೆರಿಕದಲ್ಲಿ ಹುಟ್ಟಿದರೂ ಭಾರತೀಯ ಸಂಪ್ರದಾಯಗಳು, ಪದ್ದತಿಗಳ ಬಗ್ಗೆ ಆಕೆಗೆ ಚಿಕ್ಕ ವಯಸ್ಸಿನಿಂದಲೇ ಪರಿಚಯ ಆಗಿತ್ತು.. ಹೀಗಾಗಿ ಸುನಿತಾ ವಿಲಿಯಮ್ಸ್ ಕೂಡಾ ಭಾರತೀಯ ಸಂಸ್ಕೃತಿಯನ್ನು ಕೂಡಾ ಇಷ್ಟಪಡುತ್ತಾರೆ..
ಯೋಗಾ, ವ್ಯಾಯಾಮದ ಬಗ್ಗೆ ಸುನಿತಾ ವಿಲಿಯಮ್ಸ್ಗೆ ಹೆಚ್ಚು ಆಸಕ್ತಿ.. ಸುನೀತಾ ಹಾಗೂ ಆಕೆಯ ಸಹೋದರಿಯರು ಈಜು ಕೂಡಾ ಕಲಿತಿದ್ದಾರೆ.. ಶಾಲೆಯ ಮುಗಿದ ಸಂಜೆ ವೇಳೆ ದಿನವೂ ಎರಡು ಗಂಟೆ ಕಾಲ ಅವರು ಸ್ವಿಮ್ಮಿಂಗ್ ಮಾಡುತ್ತಿದ್ದರಂತೆ.. ಆರು ವರ್ಷದವರಿದ್ದಾಗಲೇ ಸುನಿತಾ ಅವರು ಸ್ವಿಮ್ಮಿಂಗ್ ಕಾಂಪಿಟೇಷನ್ಗಳಲ್ಲಿ ಭಾಗವಹಿಸುತ್ತಿದ್ದರು.. ಇದರಲ್ಲಿ ಹಲವು ಪ್ರಶಸ್ತಿಗಳನ್ನೂ ಅವರು ತನ್ನದಾಗಿಸಿಕೊಂಡಿದ್ದಾರೆ.. ಸುನಿತಾ ವಿಲಿಯಮ್ಸ್ಗೆ ಪ್ರಾಣಿಗಳೆಂದರೆ ವಿಶೇಷ ಪ್ರೀತಿ.. ಹೀಗಾಗಿ ಆಕೆ ಪಶು ವೈದ್ಯೆಯಾಗಬೇಕೆಂದು ಕನಸು ಕಂಡಿದ್ದರು.. ಆದ್ರೆ ಸಮಯ ಸಂದರ್ಭ ಅವರನ್ನು ಬೇರೆ ದಾರಿಯಲ್ಲಿ ಕರೆದುಕೊಂಡು ಹೋಯಿತು.. ಪಶು ವೈದ್ಯ ಕೋರ್ಸ್ ಸೇರೋದಕ್ಕೆ ಸುನಿತಾ ವಿಲಿಯಮ್ಸ್ ಅರ್ಜಿ ಹಾಕಿಕೊಂಡಿದ್ದರು.. ಆದ್ರೆ ಆಕೆ ಬಯಸಿದ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ.. ಹೀಗಾಗಿ ಆಕೆಯ ಸಹೋದರನ ಸೂಚನೆಯಂತೆ ಯುಎಸ್ ನೇವಲ್ ಅಕಾಡೆಮಿಯಲ್ಲಿ ಸೇರುತ್ತಾರೆ.. ಅಲ್ಲಿಂದ ಅವರ ಸಾಹಸದ ಜೀವನ ಶುರುವಾಗುತ್ತದೆ..
ಗಗನಯಾತ್ರಿಯಾಗಿ ಸುನಿತಾ ವಿಲಿಯಮ್ಸ್ ಹಲವು ಸಾಧನೆಗಳನ್ನು ಮಾಡಿದ್ದರೂ ಆಕೆಯ ವೃತ್ತಿ ಜೀವನ ಪ್ರಾರಂಭವಾಗಿದ್ದು ಮಾತ್ರ ನೇವಿಯಲ್ಲೇ. 1983ರಲ್ಲಿ ಯುನೈಟೆಡ್ ಸ್ಟೇಟ್ಸ್ ನೇವಲ್ ಅಕಾಡೆಮಿಗೆ ಸೇರಿದ ಸುನಿತಾ ವಿಲಿಯಮ್ಸ್, 1987ರಲ್ಲಿ ಫಿಜಿಕಲ್ ಸೈನ್ಸ್ ಡಿಗ್ರಿ ಪಾಸಾಗುತ್ತಾರೆ.. ಅಲ್ಲಿ ಟ್ರೈನಿಂಗ್ ಪೂರ್ತಿ ಮಾಡಿದ ನಂತರ 1989ರಲ್ಲಿ ಟ್ರೈನಿ ಪೈಲಟ್ ಆಗಿ ನೇವಿಯಲ್ಲಿ ಸೇರ್ಪಡೆಯಾಗುತ್ತಾರೆ.. ಅವರು 30 ವಿವಿಧ ರೀತಿಯ ವಿಮಾನಗಳನ್ನು 2700 ಗಂಟೆಗಳ ಕಾಲ ಹಾರಾಟ ನಡೆಸುತ್ತಾರೆ.. ಅನಂತರ ಅವರು ನೇವಲ್ ಏವಿಯೇಟರ್ ಆಗಿ ಕೆಲಸ ಮಾಡಿದ್ದರು.

1993ರಲ್ಲಿ ಮೇರಿಲ್ಯಾಂಡ್ನಲ್ಲಿರುವ ನೇವಲ್ ಟೆಸ್ಟ್ ಪೈಲಟ್ ಸ್ಕೂಲ್ಗೆ ಅವರು ಸೇರಿದ್ದರು.. ಇದೇ ಸಮಯದಲ್ಲಿ ಹ್ಯೂಸ್ಟನ್ನಲ್ಲಿರುವ ಜಾನ್ಸನ್ ಸ್ಪೇಸ್ ಸೆಂಟರ್ಗೆ ಭೇಟಿ ನೀಡಿದ್ದರು.. ಚಂದ್ರನ ಮೇಲೆ ಹೋಗಿ ಬಂದ ಆಸ್ಟ್ರೋನಾಟ್ ಜಾನ್ ಯಂಗ್ ಅವರೊಂದಿಗೆ ಸುನಿತಾ ವಿಲಿಯಮ್ಸ್ ಕೆಲಸ ಮಾಡಿದರು.. ಅವರಿಂದ ಸಾಕಷ್ಟು ಸ್ಪೂರ್ತಿ ಪಡೆದ ಸುನಿತಾ ವಿಲಿಯಮ್ಸ್ ನಾಸಾಗೆ ಅರ್ಜಿ ಹಾಕಿಕೊಳ್ಳುತ್ತಾರೆ.. ಆದ್ರೆ ಅದು ರಿಜೆಕ್ಟ್ ಆಗುತ್ತದೆ.. ಆದರೂ ಸುನಿತಾ ಹಿಂದೆ ಸರಿಯೋದಿಲ್ಲ. 1995ರಲ್ಲಿ ಫ್ಲೋರಿಡಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಮ್ಯಾನೇಜ್ಮೆಂಟ್ನಲ್ಲಿ ಮಾಸ್ಟರ್ ಡಿಗ್ರಿ ಪಡೆಯುತ್ತಾರೆ.. 1997ರಲ್ಲಿ ಮತ್ತೆ ನಾಸಾಗೆ ಅರ್ಜಿ ಸಲ್ಲಿಸುತ್ತಾರೆ.. ಕೊನೆಗೂ 1998ರಲ್ಲಿ ನಾಸಾ ಸುನಿತಾ ಅವರನ್ನು ಟ್ರೈನಿ ವ್ಯೋಮಗಾಮಿಯಾಗಿ ಆಯ್ಕೆ ಮಾಡುತ್ತದೆ.. ಸುನಿತಾ ವಿಲಿಯಮ್ಸ್ ಮೊದಲ ಬಾರಿಗೆ 2006ರ ಡಿಸೆಂಬರ್ 9ರಂದು ಅಂತರೀಕ್ಷೆಗೆ ಹೋದರು. ಎಕ್ಸ್ಪೆಡಿಷನ್ 14 ತಂಡದೊಂದಿಗೆ ಅವರು ಕೆಲಸ ಮಾಡಿದರು. ಎಕ್ಸ್ಪೆಡಿಷನ್ 15 ಸ್ಪೇಸ್ಪ್ರಾಫ್ಟ್ ಮೇಲೂ ಅವರು ಕೆಲಸ ಮಾಡಿದರು. 2007ರ ಜೂನ್ 22 ಭೂಮಿಗೆ ವಾಪಸ್ ಬಂದಿದ್ದರು. ಎರಡನೇ ಬಾರಿ 2012ರ ಜುಲೈ 15ರಂದು ಬಾಹ್ಯಾಕಾಶಕ್ಕೆ ಹೋದರು. ಅದೇ ವರ್ಷದ ನವೆಂಬರ್ 19ರಂದು ಭೂಮಿಗೆ ವಾಪಸ್ಸಾದರು.
ಇನ್ನು ಇತ್ತೀಚೆಗೆ ಅಂದರೆ 2024ರ ಜೂನ್ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಸುನಿತಾ ವಿಲಿಯಮ್ಸ್ ಪ್ರಯಾಣ ಬೆಳೆಸಿದರು.. ಆದ್ರೆ ಅವರನ್ನು ಕರೆದುಕೊಂಡು ಹೋದ ಬೋಯಿಂಗ್ ಸ್ಟಾರ್ ಲೈನರ್ ಸ್ಪೇಸ್ ಕ್ರಾಫ್ಟ್ನಲ್ಲಿ ಕೆಲ ಸಾಂಕೇತಿಕ ಸಮಸ್ಯೆಗಳು ಶರುವಾದವು. ಈ ಕಾರಣದಿಂದಾಗಿ ಸುನಿತಾ ವಿಲಿಯಮ್ಸ್ ಅವರನ್ನು ಅಲ್ಲಿಯೇ ಬಿಟ್ಟು ಸ್ಟಾರ್ ಲೈನರ್ ಭೂಮಿಗೆ ವಾಪಸ್ಸಾಗಿತ್ತು.. ಹೀಗಾಗಿ 8 ದಿನಗಳಲ್ಲಿ ಮುಗಿಯಬೇಕಾಗಿದ್ದ ಅಂತರೀಕ್ಷ ಯಾತ್ರೆ 9 ತಿಂಗಳವರೆಗೆ ಹಿಡಿಯುವಂತಾಯ್ತು.. ಸುನಿತಾ ವಿಮಿಯಮ್ಸ್ ಅವರನ್ನು ಕರೆತರಲು ನಾಸಾ ಹರಸಾಹಸಪಡಬೇಕಾಯಿತು..
ಸುನಿತಾ ವಿಲಿಯಮ್ಸ್ ನೇಲವ್ ಅಕಾಡೆಮಿಯಲ್ಲಿದ್ದಾಗಲೇ ಮೈಕೆಲ್ ವಿಲಿಯಮ್ಸ್ ಪರಿಚಯವಾಗುತ್ತಾರೆ.. ಆದ್ರೆ ಅಕಾಡೆಮಿ ಡಿಗ್ರಿ ಪೂರ್ತಿಯಾದ ಮೇಲೆ ಇಬ್ಬರೂ ಭೇಟಿಯೇ ಆಗಿರಲಿಲ್ಲ.. ಆದ್ರೆ ಫ್ರೆಂಡ್ ಮದುವೆಯೊಂದರಲ್ಲಿ ಮತ್ತೊಮ್ಮೆ ಇಬ್ಬರ ಭೇಟಿಯಾಗುತ್ತದೆ.. ಆಗ ಇಬ್ಬರು ನಡುವೆ ಸ್ನೇಹ ಮತ್ತಷ್ಟು ಗಾಢವಾಗುತ್ತದೆ.. ಅದು ಪ್ರೀತಿಯಾಗಿ ಬದಲಾಗುತ್ತದೆ.. ಇಬ್ಬರು ಎರಡು ವರ್ಷ ಡೇಟಿಂಗ್ ಮಾಡಿದ ನಂತರ 1987ರಲ್ಲಿ ಮದುವೆಯಾಗುತ್ತಾರೆ..
ಸುನಿತಾ ವಿಲಿಯಮ್ಸ್ ಗಗನಯಾತ್ರಿ ಅನ್ನೋದು ಎಲ್ಲರಿಗೂ ಗೊತ್ತು.. ಆದ್ರೆ ಅಷ್ಟು ಬಿಟ್ಟರೆ ಅವರ ವೈಯಕ್ತಿಯ ಜೀವನದ ಬಗ್ಗೆ ಯಾರಿಗೂ ಪೂರ್ತಿಯಾಗಿ ಗೊತ್ತಿಲ್ಲ.. ಯಾಕಂದ್ರೆ ಸುನಿತಾ ವಿಲಿಯಮ್ಸ್ ತನ್ನ ವೈಯಕ್ತಿಕ ವಿಚಾರಗಳನ್ನು ಹೆಚ್ಚಾಗಿ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದ್ರೆ 2013ರಲ್ಲಿ ಸುನಿತಾ ವಿಲಿಯಮ್ಸ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದವೊಂದನ್ನು ನಡೆಸಿದ್ದರು.. ಈ ವೇಳೆ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ತಾನು ಗಗನ ಯಾತ್ರೆ ಮಾಡುವಾಗ ಜೊತೆಯಲ್ಲಿ ಸಮೋಸಾ ತೆಗೆದುಕೊಂಡು ಹೋಗುತ್ತಿದ್ದುದಾಗಿ ಹೇಳಿದ್ದರು. ಇನ್ನು ಅಂತರೀಕ್ಷಯಾನದ ವೇಳೆ ಓದುತ್ತಾ ಕಾಲ ಕಳೆಯುವುದಕ್ಕೆ ಉಪನಿಷತ್ತುಗಳು, ಭಗವದ್ಗೀತೆಯನ್ನು ಕೂಡಾ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರು. ಸುನಿತಾ ವಿಲಿಯಮ್ಸ್ ಅವರಿಗೆ ಭಾರತೀಯ ಆಹಾರಗಳೆಂದರೆ ಬಲು ಇಷ್ಟವಂತೆ.. ಈ ಬಗ್ಗೆ ಹಲವು ಭಾರಿ ಅವರು ಹೆಮ್ಮೆಯಿಂದ ಹೇಳಿದ್ದಿದೆ. ಭಾರತೀಯ ಆಹಾರ ಪ್ರಪಂಚದಲ್ಲಿ ಎಲ್ಲರಿಗೂ ಇಷ್ಟವಾಗುತ್ತದೆ.. ಅದನ್ನು ಇಷ್ಟಪಡದವರು ಯಾರೂ ಇಲ್ಲ ಎಂದು ಸುನಿತಾ ವಿಲಿಯಮ್ಸ್ ವಿದ್ಯಾರ್ಥಿಗಳ ಮುಂದೆ ಹೆಮ್ಮೆಯಿಂದ ಹೇಳಿದ್ದರು. ಭಗವದ್ಗೀತೆ ಹಾಗೂ ಉಪನಿಷತ್ತು ನನ್ನ ಹೃದಯಕ್ಕೆ ತೀರಾ ಹತ್ತಿರ ಎಂದೂ ಆ ದಿನ ಸುನಿತಾ ವಿಲಿಯಮ್ಸ್ ಹೇಳಿಕೊಂಡಿದ್ದರು..