ಇಂದು 19 ಮಾರ್ಚ್ 2025 ಬುಧವಾರ, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ. ಮಧ್ಯಾಹ್ನ 12:29 ರಿಂದ 02:00 ಗಂಟೆ ವರೆಗೆ ರಾಹುಕಾಲವಿರುತ್ತದೆ. ಇಂದು ಮೇಷ ರಾಶಿಯವರಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಲಿವೆ, ಮೀನ ರಾಶಿಯವರಿಗೆ ಒತ್ತಡ ತುಂಬಿದ ದಿನವಿದು. ದ್ವಾದಶ ರಾಶಿಗಳ ದಿನಭವಿಷ್ಯ ಹೀಗಿದೆ.
ಮೇಷ ರಾಶಿ
ಇಂದು ಮೇಷ ರಾಶಿಯವರ ಆದಾಯದ ಮೂಲ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯುವುದರಿಂದ ನೀವು ಸಂತೋಷವಾಗಿರುತ್ತೀರಿ. ನಿಮಗೆ ಗಂಟಲಿಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು. ನಿಮ್ಮ ಕುಟುಂಬದ ಯಾವುದೇ ಸದಸ್ಯರ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಅಸೂಯೆ ಮತ್ತು ದ್ವೇಷದ ಭಾವನೆಯನ್ನು ಇಟ್ಟುಕೊಳ್ಳಬಾರದು. ನಿಮ್ಮ ಗೌರವ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಗಮನ ಹರಿಸಬೇಕು. ನಿಮ್ಮ ವೈಯಕ್ತಿಕ ವಿಷಯಗಳು ಹೊರಗಿನ ಜನರಿಗೆ ತಿಳಿಯದಂತೆ ಎಚ್ಚರಿಕೆ ವಹಿಸಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ. ಕುಟುಂಬದ ಸದಸ್ಯರ ಮದುವೆಯಲ್ಲಿ ಏನಾದರೂ ವಿಘ್ನಗಳಿದ್ದರೆ ಅದು ಪರಿಹಾರವಾಗುತ್ತದೆ. ನೀವು ಬಯಸಿದ ಕೆಲಸ ಸಿಗುವುದರಿಂದ ಸಂತೋಷವಾಗಿರುತ್ತೀರಿ, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೊಟ್ಟೆ ನೋವು, ಗ್ಯಾಸ್, ವಾಕರಿಕೆ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ಹೊಸ ಕೆಲಸವನ್ನು ಆರಂಭಿಸಲಿದ್ದೀರಿ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಜವಾಬ್ದಾರಿ ಹೆಚ್ಚಾಗುತ್ತದೆ. ನಿಮ್ಮ ಮಾತು ಮತ್ತು ನಡವಳಿಕೆಯನ್ನು ನೀವು ನಿಯಂತ್ರಿಸಬೇಕು. ನೀವು ಕೆಲವು ಹೊಸ ಜನರನ್ನು ಭೇಟಿಯಾಗುತ್ತೀರಿ. ನೀವು ಯಾವುದೇ ನಿರ್ಧಾರವನ್ನು ಆತುರದಿಂದ ಅಥವಾ ಭಾವನಾತ್ಮಕವಾಗಿ ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ. ನಿಮ್ಮ ಆಸಕ್ತಿ ಹೊಸ ಕೆಲಸದ ಕಡೆಗೆ ಬೆಳೆಯಬಹುದು. ನಿಮ್ಮ ಹವ್ಯಾಸಗಳಿಗೆ ನೀವು ಬಹಳಷ್ಟು ಹಣವನ್ನು ಖರ್ಚು ಮಾಡುತ್ತೀರಿ, ಇದು ನಂತರ ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ದೂರದಲ್ಲಿರುವ ಸಂಬಂಧಿಕರಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ.
ಕಟಕ ರಾಶಿ
ಇಂದು ಕೆಲವೊಂದು ಸವಾಲುಗಳು ನಿಮಗೆ ಎದುರಾಗಬಹುದು. ನೀವು ಪಾಲುದಾರಿಕೆಯಲ್ಲಿ ಏನಾದರೂ ಕೆಲಸ ಮಾಡುವ ಬಗ್ಗೆ ಯೋಚಿಸಿದ್ದರೆ, ಅದಕ್ಕೂ ಮುನ್ನ ಸಂಶೋಧನೆ ಮಾಡಿ. ತಾಯಿ ನಿಮಗೆ ಕೆಲವು ದೊಡ್ಡ ಜವಾಬ್ದಾರಿಗಳನ್ನು ನೀಡಬಹುದು. ಮನೆ, ಕಟ್ಟಡ ಇತ್ಯಾದಿ ಖರೀದಿಸುವ ನಿಮ್ಮ ಕನಸು ನನಸಾಗುತ್ತದೆ. ವಾಹನದ ಹಠಾತ್ ಸ್ಥಗಿತದಿಂದಾಗಿ ನಿಮ್ಮ ಹಣಕಾಸಿನ ವೆಚ್ಚಗಳು ಹೆಚ್ಚಾಗಬಹುದು. ನಿಮ್ಮ ತಾಯಿಯ ಕಡೆಯಿಂದ ನೀವು ಆರ್ಥಿಕ ಲಾಭಗಳನ್ನು ಪಡೆಯುವ ಸಾಧ್ಯತೆಯಿದೆ.
ಸಿಂಹ ರಾಶಿ
ನೀವು ಅನಗತ್ಯ ವದಂತಿಗಳಿಂದ ದೂರವಿರಬೇಕು ಮತ್ತು ಯಾರೊಂದಿಗಾದರೂ ಮಾತನಾಡುವಾಗ ಬಹಳ ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿ ನಿಮಗೆ ಗೌರವಾದರ ದೊರೆಯಲಿದೆ. ವಿದ್ಯಾರ್ಥಿಗಳು ಆರೋಗ್ಯದ ಕಡೆ ಗಮನ ಹರಿಸಬೇಕು ಇಲ್ಲದಿದ್ದಲ್ಲಿ, ಪರೀಕ್ಷೆ ಸಮಯಕ್ಕೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಮನೆಗೆ ಕೆಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ತರಬಹುದು. ಅನಗತ್ಯ ಕೆಲಸಗಳಿಂದಾಗಿ ಮಾನಸಿಕ ಒತ್ತಡ ಹೆಚಾಗುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಿರಲಿದೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ನಾಳೆ, ನಿಮ್ಮ ಕುಟುಂಬದ ವಿಷಯಗಳನ್ನು ಮನೆಯಿಂದ ಹೊರಗೆ ಹೋಗಲು ಬಿಡಬೇಡಿ. ನೀವು ಕೆಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಹಣಕಾಸಿನ ಸಮಸ್ಯೆಗಳಿಂದ ಅರ್ಧಕ್ಕೆ ನಿಂತಿದ್ದ ಕೆಲಸ ಇಂದು ಪೂರ್ಣಗೊಳ್ಳಬಹುದು. ನಿಮ್ಮ ಹೆತ್ತವರ ಸೇವೆ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೀರಿ.
ತುಲಾ ರಾಶಿ
ಅನಗತ್ಯವಾಗಿ ನೀವು ಕೋಪಗೊಳ್ಳುವುದನ್ನು ತಪ್ಪಿಸಬೇಕು. ನಿಮ್ಮ ಕೆಲಸದ ಸ್ಥಳದಲ್ಲಿ ಪ್ರಶಂಸೆ ದೊರೆಯುತ್ತದೆ. ಪ್ರೀತಿಯಲ್ಲಿರುವವರಿಗೆ ಸಂಗಾತಿಯೊಂದಿಗೆ ಬಾಂಧವ್ಯ ಹೆಚ್ಚಾಗಲಿದೆ, ಇದರಿಂದಾಗಿ ನಿಮ್ಮ ಭವಿಷ್ಯ ಚೆನ್ನಾಗಿರುತ್ತದೆ. ನಿಮ್ಮ ಪ್ರಮುಖ ವಿಷಯಗಳ ಬಗ್ಗೆ ನಿಮ್ಮ ಸಹೋದರ ಸಹೋದರಿಯರೊಂದಿಗೆ ಮಾತನಾಡಬಹುದು. ಯಾವುದೇ ಕಾನೂನು ವಿಷಯದಲ್ಲಿ ನೀವು ಜಾಗರೂಕರಾಗಿರಬೇಕು.
ವೃಶ್ಚಿಕ ರಾಶಿ
ಅದೃಷ್ಟದ ಬೆಂಬಲದಿಂದ ನಿಮಗೆ ಶುಭವಾಗಲಿದೆ. ಯಾವುದೇ ಕೆಲಸವನ್ನು ಪೂರ್ಣಗೊಳಿಸುವಲ್ಲಿ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ ಶೀಘ್ರದಲ್ಲೇ ನಿವಾರಣೆ ಆಗುತ್ತದೆ. ಆತ್ಮೀಯರೊಂದಿಗೆ ಉಂಟಾಗಿದ್ದ ಮನಸ್ತಾಪ ಕೊನೆಗೊಳ್ಳುತ್ತದೆ. ಸರ್ಕಾರಿ ಯೋಜನೆಗಳ ಸಂಪೂರ್ಣ ಲಾಭವನ್ನು ನೀವು ಪಡೆಯುತ್ತೀರಿ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಕಂಡುಬಂದರೆ, ಅದರ ಬಗ್ಗೆ ಅಸಡ್ಡೆ ತೋರಬೇಡಿ.
ಧನು ರಾಶಿ
ಆಸ್ತಿಗೆ ಸಂಬಂಧಿಸಿದ ಯಾವುದೇ ವಿವಾದದಲ್ಲಿ ನೀವು ಗೆಲ್ಲುತ್ತೀರಿ. ನಿಮ್ಮ ಖರ್ಚು ವೆಚ್ಚಗಳ ಬಗ್ಗೆ ಗಮನ ಹರಿಸಿ. ಸಂಬಂಧಿಕರೊಂದಿಗೆ ಸಣ್ಣ ಪುಟ್ಟ ಮನಸ್ತಾಪ ಇರುತ್ತದೆ. ನಿಮ್ಮ ಯಾವುದೇ ಕೆಲಸ ಹಣಕಾಸಿನ ಕಾರಣದಿಂದಾಗಿ ಅರ್ಧಕ್ಕೆ ನಿಂತಿದ್ದರೆ ಅದು ಪೂರ್ಣಗೊಳ್ಳುತ್ತದೆ. ನಿಮ್ಮ ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ಸ್ವಲ್ಪ ಸಮಯ ಕಳೆಯುತ್ತೀರಿ.
ಮಕರ ರಾಶಿ
ಯಾರೊಂದಿಗೂ ಅನಗತ್ಯ ವಾದಗಳಲ್ಲಿ ತೊಡಗಬೇಡಿ, ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಕೆಲಸದಲ್ಲಿ ಆತುರಪಡಬೇಡಿ ಆದರೆ ಜಾಗರೂಕರಾಗಿರಿ. ನಿಮ್ಮ ನೆಚ್ಚಿನ ಯಾವುದೇ ವಸ್ತು ಕಳೆದುಹೋಗಿದ್ದರೆ, ಅದು ವಾಪಸ್ ದೊರೆಯುವ ಎಲ್ಲಾ ಸಾಧ್ಯತೆಗಳಿವೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮನೆ ಮಾಡಿರುತ್ತದೆ.
ಕುಂಭ ರಾಶಿ
ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದಿರಿ, ಪಾಲುದಾರಿಕೆಯಲ್ಲಿ ಕೆಲಸ ಮಾಡುವುದು ನಿಮಗೆ ಉತ್ತಮವಾಗಿರುತ್ತದೆ. ನಿಮಗೆ ಕೆಲವು ಶುಭ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ನಿಮ್ಮ ಕುಟುಂಬದ ಸದಸ್ಯರಿಂದ ಕಠಿಣ ಮಾತುಗಳು ಬರಬಹುದು, ಅದು ನಿಮ್ಮನ್ನು ಅಸಮಾಧಾನಗೊಳಿಸುತ್ತದೆ. ನಿಮ್ಮ ಸಂಗಾತಿಯಿಂದ ಅಚ್ಚರಿಯ ಉಡುಗೊರೆ ಸಿಗಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಇಂದು ಒತ್ತಡದ ದಿನವಾಗಿರುತ್ತದೆ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ನೀವು ಕೆಲವು ದೊಡ್ಡ ಸಾಧನೆಗಳನ್ನು ಮಾಡುವ ಸಾಧ್ಯತೆ ಇದೆ. ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಸಾಮರಸ್ಯದಿಂದ ಮುಂದುವರಿಯುತ್ತೀರಿ. ನಿಮ್ಮ ತಾಯಿಗೆ ನೀಡಿದ ಭರವಸೆಯನ್ನು ಪೂರೈಸಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸುತ್ತೀರಿ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಸಾಲವನ್ನೂ ತೀರಿಸಲಿದ್ದೀರಿ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.