ಇಂದು ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 50ನೇ ಹುಟ್ಟುಹಬ್ಬ. ಈ ವಿಶೇಷ ಹುಟ್ಟುಹಬ್ಬದ ದಿವಸ ಅಪ್ಪು ಅವರು ನಮ್ಮ ಜೊತೆಗೆ ಇಲ್ಲ ಎನ್ನುವ ನೋವು ನಮ್ಮೆಲ್ಲರಲ್ಲೂ ಇದೆ. ಆದರೆ ಅಪ್ಪು ಅವರು ಇಲ್ಲ ಎನ್ನುವ ಭಾವನೆ ಬರುವುದಕ್ಕೆ ಯಾರು ಬಿಟ್ಟಿಲ್ಲ. ಅಪ್ಪು ನಮ್ಮ ಜೊತೆಯಲ್ಲೇ ಇದ್ದಾರೆ ಎನ್ನುವ ಹಾಗೆ ಎಲ್ಲರೂ ಇದ್ದಾರೆ. ಅವರ ಅಭಿಮಾನಿಗಳು ಸದಾ ಅಪ್ಪು ಅವರ ಬಗ್ಗೆ ಹಾಕುವ ಪೋಸ್ಟ್ ಗಳು, ಮಾಡುವ ಎಡಿಟ್ ಗಳು, ಇದೆಲ್ಲವೂ ಸಹ ಅಪ್ಪು ನಮ್ಮ ಜೊತೆಯಲ್ಲೇ ಇದ್ದಾರೆ ಎಂದು ಅನ್ನಿಸುವ ಹಾಗೆ ಮಾಡುತ್ತದೆ. ಇಂದು ಅವರ ಹುಟ್ಟುಹಬ್ಬದ ದಿವಸ ಸಾಕಷ್ಟು ವಿಶೇಷ ಕಾರ್ಯಗಳು ನಡೆಯುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿ ಎಲ್ಲಾ ಅಭಿಮಾನಿಗಳು ಅಪ್ಪು ಅವರ ದರ್ಶನ ಪಡೆಯುತ್ತಿದ್ದಾರೆ..

ಕುಟುಂಬದವರು, ಅಪ್ಪು ಅವರ ಮಕ್ಕಳು ಎಲ್ಲರೂ ಬಂದು, ಪೂಜೆ ಮಾಡಿ, ಅಭಿಮಾನಿಗಳಿಗೆ ಆಹಾರ ವಿತರಣೆ ಮಾಡಿದ್ದಾರೆ.. ಅಪ್ಪು ಅವರ ಹುಟ್ಟುಹಬ್ಬಕ್ಕೆ ವಿಶೇಷವಾಗಿ, ಅವರ ಮೊದಲ ಸಿನಿಮಾ ಅಪ್ಪು ತೆರೆಕಂಡಿದೆ. ಇದು ಅಭಿಮಾನಿಗಳಿಗೆ ಅತ್ಯಂತ ಖುಷಿ ಕೊಟ್ಟ ವಿಷಯ. ಅಪ್ಪು ಅವರನ್ನ ತೆರೆ ಮೇಲೆ ನೋಡುವುದಕ್ಕಿಂತ ಸಂತೋಷ ಇನ್ನೇನಿದೆ ಹೇಳಿ. ಕಳೆದ ಶುಕ್ರವಾರ ಮಾರ್ಚ್ 14ರಂದು ಅಪ್ಪು ಸಿನಿಮಾ ಬಿಡುಗಡೆ ಆಗಿದೆ. ಅಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ ಕೂಡ ಹೌದು. ಆ ವಿಶೇಷ ದಿವಸ ಅಪ್ಪು ಸಿನಿಮಾ ರೀರಿಲೀಸ್ ಆಗಿ, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಪ್ಪು ಅವರನ್ನು ನೋಡೋದಕ್ಕೆ ಅಭಿಮಾನಿಗಳು ಥಿಯೇಟರ್ ಗೆ ಬಂದು ಎಂಜಾಯ್ ಮಾಡುತ್ತಿದ್ದಾರೆ, ಜೋರಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ.

ಅಪ್ಪು ಅವರ ಈ ರೀರಿಲೀಸ್ ಅಭಿಮಾನಿಗಳಲ್ಲಿ ಇರುವ, ಈ ಪ್ರೀತಿ ಕ್ರೇಜ್ ಇದನ್ನೆಲ್ಲಾ ನೋಡಿದರೆ ಅವರು ನಮ್ಮೊಡನೆ ಇಲ್ಲ ಎಂದು ಅನ್ನಿಸುವುದೇ ಇಲ್ಲ. ಇಲ್ಲೇ ಎಲ್ಲೋ ಇದ್ದಾರೆ, ಶೂಟಿಂಗ್ ಗೆ ಹೋಗಿರಬಹುದು ಎಂದೇ ಅನ್ನಿಸುತ್ತದೆ. ಅಪ್ಪು ಅವರ ಮಾತುಗಳು, ಅವರ ನಗು, ಅವರ ಅಪ್ಪುಗೆ ಎಲ್ಲವೂ ಸಹ ಎಂದೆಂದಿಗೂ ನೆನಪಿನಲ್ಲಿ ಇಡುವಂಥದ್ದು. ಅಪ್ಪು ಅಜರಾಮರ, ಅಪ್ಪು ಅವರ ಹುಟ್ಟುಹಬ್ಬವಾದ ಈ ವಿಶೇಷ ದಿವಸ, ಅವರ ಎಲ್ಲಾ ಫ್ಯಾನ್ಸ್ ಗೆ ಮತ್ತು ಕರ್ನಾಟಕದ ಜನತೆಗೆ ಸ್ಪೂರ್ತಿ ತುಂಬುವ ದಿವಸ ಆಗಿರಲಿ ಎನ್ನುವುದೇ ಎಲ್ಲರ ಆಸೆ ಆಗಿದೆ. ಈ ದಿವಸ ಶ್ರೀದೇವಿ ಭೈರಪ್ಪ ಅವರು ಒಂದು ಆಸಕ್ತಿದಾಯಕ ವಿಚಾರವನ್ನು ಹಂಚಿಕೊಂಡಿದ್ದಾರೆ. ಇವರು ರಾಘಣ್ಣ ಅವರ ಸೊಸೆ.

ಯುವ ರಾಜ್ ಕುಮಾರ್ ಅವರೊಡನೆ ಮದುವೆಯಾಗಿ, ಇತ್ತೀಚೆಗೆ ವಿವಾದಕ್ಕೆ ಕಾರಣ ಆಗಿದ್ದ ಶ್ರೀದೇವಿ ಭೈರಪ್ಪ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಇವರು ಅಪ್ಪು ಅವರನ್ನು ಹಲವು ವರ್ಷಗಳ ಕಾಲ ಬಹಳ ಹತ್ತಿರದಿಂದ ನೋಡಿದ್ದಾರೆ. ಅಪ್ಪು ಅವರೊಡನೆ ಸಮಯ ಕಳೆದಿದ್ದಾರೆ, ಇಂದು ಅಪ್ಪು ಅವರ ಹುಟ್ಟುಹಬ್ಬದ ದಿವಸ ಒಂದು ಮುಖ್ಯವಾದ ವಿಚಾರ ಹಂಚಿಕೊಂಡಿದ್ದಾರೆ. ಅಪ್ಪು ಅವರು ಹೋಗುವ ಹಿಂದಿನ ದಿವಸ, ಅವರು ಯಾವ ವಿಚಾರದ ಬಗ್ಗೆ ಮಾತನಾಡಿದ್ದರು, ಯಾವ ವಿಷಯದಲ್ಲಿ ಅವರಿಗೆ ಅಸಮಾಧಾನ ಇತ್ತು ಎನ್ನುವುದನ್ನು ಶ್ರೀದೇವಿ ಭೈರಪ್ಪ ಅವರು ತಿಳಿಸಿದ್ದು, ಅಪ್ಪು ಅವರ ಕನಸುಗಳು ಬೇರೆಯೇ ಆಗಿತ್ತು ಎಂದು ಇದರಿಂದ ಗೊತ್ತಾಗುತ್ತದೆ. ಶ್ರೀದೇವಿ ಅವರು ತಿಳಿಸಿರುವ ವಿಚಾರ ಇದು..

“ಅಪ್ಪು ಎನ್ನುವುದು ಕೇವಲ ಹೆಸರಲ್ಲ; ಅದು ನಮ್ಮಂತಹ ಪ್ರತಿಯೊಬ್ಬ ಕನ್ನಡಿಗರ ಭಾವನೆ. ನಾನು ಅವರೊಂದಿಗೆ ಕಳೆದ ಸಮಯ, ಅವರ ಶಕ್ತಿಯನ್ನು ಅವರ ಹುಮ್ಮಸ್ಸನ್ನು ಎರಕ ಹುಯ್ದುಕೊಳ್ಳುವ ಅವಕಾಶ ನೀಡಿತ್ತು, ಹಲವು ವರ್ಷಗಳ ಕಾಲ ಅವರೊಂದಿಗೆ ಇದ್ದೆ. ಅವರು ಅಗಲಿದ ಹಿಂದಿನ ದಿವಸ, ಸಿನಿಮಾ ರಂಗದ ಬಗ್ಗೆ ಬಹಳ ಬೇಸರದಿಂದ ಮಾತನಾಡಿದ್ದರು. ಬೋರ್ ಎನ್ನಿಸುವ ಹಾಗೂ ಅರ್ಥವೇ ಇಲ್ಲದ ಕಥೆಗಳ ಬಗ್ಗೆ ಅವರಿಗೆ ಹತಾಶೆ ಆಗಿತ್ತು. ಒಂದೇ ಥರದ ಡೈಲಾಗ್, ಅರ್ಥವಿಲ್ಲದ ಕಥೆಗಳು ಇದರಿಂದ ಸಮಾಜದ ಮೇಲೆ ಎಷ್ಟು ನೆಗಟಿವ್ ಆದ ಪರಿಣಾಮ ಬೀರುತ್ತಿದೆ ಎಂದು ಪ್ರಶ್ನೆ ಮಾಡಿದ್ದರು. ಹಣ ಮಾಡೋದಕ್ಕೆ ಹಾಗೂ ಈಗೋಗೋಸ್ಕರ ನಿರ್ಮಾಪಕರು ಸಿನಿಮಾ ಮಾಡುತ್ತಿರುವುದು ಎನ್ನುವ ಬಗ್ಗೆ ಧ್ವನಿ ಎತ್ತಿದ್ದರು. ಅವರ ನಾಯಕತ್ವವನ್ನು, ಅವರ ಈ ರೀತಿಯ ಚಿಂತೆನೆಯನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ.

ಅವರ ನಾಯಕತ್ವವನ್ನು ಹತ್ತಿರದಿಂದ ನೋಡಿ ನಾನು ಬದುಕಿನಲ್ಲಿ ಆದರ್ಶ ಪಡೆದಿದ್ದೇನೆ. ಅದನ್ನು ನಾನು ಎಂದಿಗೂ ಮರೆಯುವ ಹಾಗಿಲ್ಲ. ಅವರು ತಮ್ಮದೇ ಆದ ಪ್ರೊಡಕ್ಷನ್ ಸಂಸ್ಥೆಯನ್ನು ಸ್ಥಾಪಿಸಿ ಹೊಸವರಿಗೆ ಅವಕಾಶಗಳನ್ನು ನೀಡಿ, ಪ್ರೋತ್ಸಾಹಿಸಿ, ಸಂಸ್ಕೃತಿಯನ್ನು ಹಾಗೂ ಹೊಸ ಕಥೆಗಳು ಹೇಳಲು ಆದ್ಯತೆ ಕೊಟ್ಟಿದ್ದರು. ಅಪ್ಪು ಅವರು SUPERSTAR ಆಗಿ ಭಾರತೀಯ ಚಿತ್ರರಂಗದಲ್ಲಿ ಸಾಧನೆಗಳನ್ನು ಮಾಡಿದ್ದರು, ಅಂದು ಅವರು ಮಾಡಿದ ದಾಖಲೆಗಳು ಆಲ್ ಟೈಮ್ ರೆಕಾರ್ಡ್ ಗಳಾಗಿದೆ. ಆದರೆ ಅವರು ತನ್ನ ಸ್ವಂತ ಬೆಳವಣಿಗೆಯ ಹುಡುಕಾಟದಲ್ಲಿದ್ದಾಗ, ಗಂಧದ ಗುಡಿ ಎಂಬ ಡಾಕ್ಯುಮೆಂಟರಿ ಚಿತ್ರವನ್ನು ತಯಾರಿಸಿದರು, ಅದು ಅವರ ನಾಡಿನ ಮತ್ತು ಅವನ ಜನರ ಕಥೆಯನ್ನು ಹೇಳುತ್ತಿತ್ತು. EdTech ಸಂಸ್ಥೆಯಿಂದ ಒಂದು ಮಿಲಿಯನ್ ಡಾಲರ್ ಆಫರ್ ಅನ್ನು ತಿರಸ್ಕರಿಸಿ, ಅದರ ಬದಲಿಗೆ ಅವರು ನಮ್ಮ ಶಿಕ್ಷಣ ಕಾರ್ಯಕ್ಕೆ ಬೆಂಬಲವಾಗಿ ನಿಂತು ಉಚಿತವಾಗಿ ಜಾಹೀರಾತಿನಲ್ಲಿ ನಟಿಸಿದರು.

ಅವರಿಗೆ ತಾವು ಮಾಡುತ್ತಿದ್ದ ಕೆಲಸದಲ್ಲಿ ನಂಬಿಕೆ ಇತ್ತು, ತಮ್ಮ ನಿರ್ಧಾರ ಸರಿಯಾಗಿದೆ ಎನ್ನುವ ಭರವಸೆ ಇತ್ತು! ಸದಾ ಸರಿಯಾದ ಕೆಲಸಕ್ಕೆ ಬೆಂಬಲ ನೀಡುತ್ತಿದ್ದರು. ಮಹಿಳೆಯರು ಅವರೊಂದಿಗೆ ಇದ್ದರೆ ಸೇಫ್ ಆಗಿರುತ್ತಿದ್ದರು, ಅವರು ನನಗೂ ಹಾಗೂ ಅನೇಕರಿಗೆ ಬದುಕನ್ನು ಸಂಪೂರ್ಣವಾಗಿ ಬದುಕುವ ಮೂಲಕ ಬದುಕಿನ ಪಾಠ ಕಲಿಸಿದರು. ಇಂಫಿನಿಟಿ ವರ್ಲ್ಡ್ ಸ್ಟುಡಿಯೋಸ್ ಅನ್ನು ಪರಿಚಯಿಸುತ್ತಿದ್ದೇನೆ—ಈ ಲೋಕವು ಇನ್ನೂ ನೋಡಲು ಉಳಿದಿರುವ ಕಥೆಗಳನ್ನು ಹೇಳಲು ನಮ್ಮ ದೃಷ್ಟಿ! ನಿನ್ನ 50ನೇ ಹಬ್ಬ ಮತ್ತು ಹವ್ಯ, ನಿನ್ನಿಗೆ ಮತ್ತು ನನಗೆ ನಂಬಿಕೆ ಇರಿಸಿಕೊಂಡ ಎಲ್ಲರಿಗೂ ಅರ್ಪಿಸಲಾಗಿದೆ! 🚀 ನಮ್ಮ ಮೊದಲ ಯೋಜನೆ ಶೀಘ್ರದಲ್ಲೇ ಪ್ರಕಟಿಸುತ್ತೇವೆ! ♾🌟🌃..” ಎಂದು ರಾಘವೇಂದ್ರ ರಾಜ್ ಕುಮಾರ್ ಅವರ ಸೊಸೆ ಶ್ರೀದೇವಿ ಭೈರಪ್ಪ ಅವರು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಕೂಡ ಸೂಚನೆ ನೀಡಿದ್ದಾರೆ.