ಡಾ. ರಾಜ್ ಕುಮಾರ್ ಅಂದ್ರೆ ನಮ್ಮ ರಾಜ್ಯಕ್ಕೆ ಹೆಮ್ಮೆ, ಕನ್ನಡ ಅಂದರೆ ಡಾ. ರಾಜ್ ಕುಮಾರ್ ಡಾ. ರಾಜ್ ಕುಮಾರ್ ಅಂದ್ರೆ ಕರ್ನಾಟಕ ಎನ್ನುವಷ್ಟು ಎತ್ತರಕ್ಕೆ ಬೆಳೆದು, ಕನ್ನಡ ಕಲಾದೇವಿಯ ಸೇವೆ ಮಾಡಿರುವವರು ಡಾ. ರಾಜ್ ಕುಮಾರ್. ಇಡೀ ಭಾರತ ಚಿತ್ರರಂಗವೇ ತಮ್ಮತ್ತ ತಿರುಗಿ ನೋಡುವ ಹಾಗೆ ಮಾಡಿ, ತಮ್ಮ ಅಭಿನಯದ ಮೂಲಕ ವಿಶ್ವಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ ಮೇರು ಕಲಾವಿದ ಡಾ. ರಾಜ್ ಕುಮಾರ್ ಅವರು. ಇವರ ಬಗ್ಗೆ ಎಷ್ಟು ಬರೆಯುತ್ತಾ ಹೋದರು, ಎಷ್ಟೇ ಹೇಳುತ್ತಾ ಹೋದರೂ ಅದು ಕಡಿಮೆಯೇ.. ಇಂಥ ವ್ಯಕ್ತಿತ್ವ ಡಾ. ರಾಜ್ ಕುಮಾರ್ ಅವರ ಬಗ್ಗೆ ಸಂಜಯ್ ನಾಗ್ ಎನ್ನುವ ಗಾಯಕನೊಬ್ಬ ಟೀಕಿಸಿ ಟ್ವೀಟ್ ಮಾಡಿದ್ದ. ಈಗ ಈತ ನಾಪತ್ತೆ ಆಗಿದ್ದು, ಅಭಿಮಾನಿಗಳು ಇವನನ್ನು ಹುಡುಕುತ್ತಿದ್ದಾರೆ.
ಡಾ. ರಾಜ್ ಕುಮಾರ್ ಅವರು ಎಂಥಾ ಮಹಾನ್ ಕಲಾವಿದ ಎಂದರೆ, ಇಡೀ ವಿಶ್ವದಲ್ಲಿ ಅತಿದೊಡ್ಡ ಅಭಿಮಾನಿ ಬಳಗ ಹೊಂದಿರುವವರು ಇವರು ಎನ್ನುವ ವಿಚಾರ ನಮಗೆಲ್ಲಾ ಹೆಮ್ಮೆ ತರುವಂಥದ್ದು. ಡಾ ರಾಜ್ ಕುಮಾರ್ ಅವರಿಂದ ಬೇರೆ ಭಾಷೆಯ ಕಲಾವಿದರು ಅಭಿನಯ ಕಲಿಯುತ್ತಿದ್ದರು ಎನ್ನುವ ಮಾತಿದೆ. ಇವರ ಸಿನಿಮಾಗಳನ್ನು ಬೇರೆ ಭಾಷೆಯ ಸ್ಟಾರ್ ಹೀರೋಗಳು ರಿಮೇಕ್ ಮಾಡಿ ಗೆದ್ದಿದ್ದಾರೆ. ರಾಜ್ ಅವರ ಅಭಿನಯ ಚಾತುರ್ಯತೆಗೆ ಎಷ್ಟೆಷ್ಟೋ ಅವಾರ್ಡ್ ಗಳು ಸಿಕ್ಕಿವೆ. ಕನ್ನಡ ಮಾತ್ರವಲ್ಲ ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಎಲ್ಲಾ ಭಾಷೆಯ ನಟಿಯರು ಡಾ. ರಾಜ್ ಕುಮಾರ್ ಅವರ ಜೊತೆಗೆ ನಟಿಸಬೇಕು ಎಂದು ಬಯಸುತ್ತಿದ್ದರಿ. ಅವರೊಡನೆ ನಟಿಸುವುದು ಪುಣ್ಯ ಎಂದುಕೊಂಡ ಹಲವರಿದ್ದಾರೆ..
@sanjaynagbr ಎಲ್ಲೋ ನೀನು?
X ಖಾತೆನೆ ಅಳಿಸಿ ಓಡಿಹೋಗವ್ನೆ.
ಇವ್ನೆ ಆ ಪ್ರಜೆ pic.twitter.com/bSX28v1gHf
— ಕನ್ನಡಿಗ ಪ್ರದೀಪ್ ಸಾಗರ್ ಮೈಸೂರು 💛❤️ (@IamDeepuMysuru) February 27, 2025
ಕನ್ನಡಕ್ಕೆ, ಕರ್ನಾಟಕಕ್ಕೇ, ಕನ್ನಡ ಚಿತ್ರರಂಗಕ್ಕೆ ಯಾವುದೇ ಸಂಕಷ್ಟ ಎದುರಾದಾಗ ಡಾ. ರಾಜ್ ಕುಮಾರ್ ಅವರು ಅಲ್ಲಿ ಹಾಜರಿರುತ್ತಿದ್ದರು. ಹೋರಾಟಗಳ ಮೂಲಕ ಸಮಸ್ಯೆಗಳನ್ನು ಸರಿಪಡಿಸುತ್ತಿದ್ದರು. ರಾಜ್ ಅವರ ಒಂದು ಕರೆಗೆ ಇಡೀ ಕರ್ನಾಟಕ ಓಗೊಟ್ಟು ಬರುತ್ತಿತ್ತು. ಅಭಿಮಾನಿಗಳಲ್ಲಿ ರಾಜ್ ಕುಮಾರ್ ಅವರನ್ನು ಕಂಡರೆ ಅಷ್ಟರ ಮಟ್ಟಕ್ಕೆ ಪ್ರೀತಿ ಮತ್ತು ಗೌರವ ಇರುತ್ತಿತ್ತು, ಇನ್ನು ಡಾ. ರಾಜ್ ಕುಮಾರ್ ಅವರ ಸಿನಿಮಾಗಳ ಬಗ್ಗೆ ವಿಶೇಷವಾಗಿ ಏನನ್ನು ಹೇಳುವ ಹಾಗಿಲ್ಲ, ಅವರ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದರೆ ಅಭಿಮಾನಿಗಳು ಥಿಯೇಟರ್ ಎದುರು ಟಿಕೆಟ್ ಗಾಗಿ ಕಾದು ಕುಳಿತಿರುತ್ತಿದ್ದರು. ಎರಡು ಮೂರು ದಿವಸ ಮೊದಲೇ ಅವರ ಸಿನಿಮಾ ಮೊದಲ ದಿನದ ಶೋ ಟಿಕೆಟ್ ಗಳು ಸೋಲ್ಡ್ ಔಟ್ ಆಗಿರುತ್ತಿದ್ದವು, ಯಾವುದೇ ಸೋಷಿಯಲ್ ಮೀಡಿಯಾ ಇಲ್ಲದ ಕಾಲದಲ್ಲೇ ಅವರ ಕ್ರೇಜ್ ಆ ರೀತಿ ಇತ್ತು.
ಡಾ. ರಾಜ್ ಕುಮಾರ್ ಅವರು ನಮ್ಮನ್ನು ಆಗಲಿ ಇನ್ನೇನು 2 ದಶಕಕ್ಕೆ ಸಮೀಪ ವಾಗುತ್ತಿದೆ. ಆದರೆ ಇವತ್ತಿಗೂ ಅಭಿಮಾನಿಗಳಲ್ಲಿ ಅವರ ಬಗ್ಗೆ ಇರುವ ಪ್ರೀತಿ ಸ್ವಲ್ಪವೂ ಕಡಿಮೆ ಆಗಿಲ್ಲ. ರಾಜಣ್ಣ ಅವರು ಅಭಿಮಾನಿಗಳ ಪಾಲಿನ ಆರಾಧ್ಯ ದೈವವೇ ಆಗಿದ್ದಾರೆ. ಇಂಥ ಡಾ. ರಾಜ್ ಕುಮಾರ್ ಅವರನ್ನು ಇಡೀ ಕರ್ನಾಟಕವೇ ದೇವರಂತೆ ಪೂಜಿಸುತ್ತದೆ, ಅವರ ಸಿನಿಮಾಗಳನ್ನು ಇವತ್ತಿಗೂ ಎಲ್ಲರೂ ನೋಡುತ್ತಾರೆ, ಎಲ್ಲಾ ಕಲಾವಿದರ ಪಾಲಿನ ಆರಧ್ಯ ದೈವವೇ ಆಗಿರುವ ಅವರ ಬಗ್ಗೆ ಯಾರಾದರು ಕೆಟ್ಟದಾಗಿ ಮಾತನಾಡಿದರೆ ಅಭಿಮಾನಿಗಳು ಸುಮ್ಮನೆ ಬಿಡುತ್ತಾರಾ? ಆ ವ್ಯಕ್ತಿಯ ಜನ್ಮ ಜಾಲಾಡದೇ ಬಿಡುವುದಿಲ್ಲ. ಇದೀಗ ಅಂಥದ್ದೇ ಒಂದು ಘಟನೆ ನಡೆದಿದೆ. ಸಂಜಯ್ ನಾಗ್ ಎನ್ನುವ ಗಾಯಕ ಡಾ. ರಾಜ್ ಕುಮಾರ್ ಅವರ ಹಾಡುಗಾರಿಕೆಯ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡಿದ್ದು, ಈತನನ್ನು ಅಭಿಮಾನಿಗಳು ಹುಡುಕುತ್ತಿದ್ದಾರೆ.
SPB narrates in one of his interviews, how he had to plead wid Raj to sing a song for him. Raj in his trademark humility, couldn't accept to give voice to an accomplished singer. After a lot of persuasion,he agreed.
Music teaches humility.
Y Raj receive such hatred? Is it caste? pic.twitter.com/vaLBSNb6GD
— Prashanth (@BarkurCanarese) February 25, 2025
ಅಷ್ಟಕ್ಕೂ ಆಗಿದ್ದೇನು ಎಂದರೆ, ಕೆಲವು ದಿನಗಳ ಹಿಂದೆ ಸಂಜಯ್ ನಾಗ್ ಎನ್ನುವ ಈ ವ್ಯಕ್ತಿ, ಡಾ. ಆರ್ ಅವರು ಅದ್ಭುತವಾದ ನಟರೇ ಇರಬಹುದು ಆದರೆ ಅವರ ಧ್ವನಿ ಹಾರಿಬಲ್ ಆಗಿದೆ ಎಂದು ಟ್ವೀಟ್ ಮಾಡಿದ್ದ. ಈ ಟ್ವೀಟ್ ಹೊರಬರುತ್ತಿದ್ದ ಹಾಗೆಯೇ ಸಂಜಯ್ ನಾಗ್ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದರು. ಇಡೀ ಭಾರತೀಯ ಚಿತ್ರರಂಗ್ದಲ್ಲಿ ಗಾಯನಕ್ಕೆ ನ್ಯಾಷನಲ್ ಅವಾರ್ಡ್ ಪಡೆದ ಏಕೈಕ ಕಲಾವಿದರು ಡಾ. ರಾಜ್ ಕುಮಾರ್ . ಇಂಥವರ ಕಂಠ ಚೆನ್ನಾಗಿಲ್ಲ, ಅವರೊಬ್ಬ ಹಾರಿಬಲ್ ಸಿಂಗರ್ ಎಂದು ಈತ ಯಾರೋ ಟ್ವೀಟ್ ಮಾಡಿದ್ದು ಅಭಿಮಾನಿಗಳು ಆತನನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕೆ ಶುರು ಮಾಡಿದರು, ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ವೈರಲ್ ಕೂಡ ಆಯಿತು. ಅಣ್ಣಾವ್ರ ಅಭಿಮಾನಿಗಳ ಕೂಗು ಹೇಗಿತ್ತು ಅಂದ್ರೆ ಆತ ಕ್ಷಮೆ ಕೂಡ ಕೇಳಿದ, ಟ್ವೀಟ್ ಮೂಲಕವೇ ಕ್ಷಮೆ ಕೇಳುವ ಹಾಗಾಯಿತು.
ಡಾ. ರಾಜ್ ಕುಮಾರ್ ಅವರ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಬಳಿಕ ಕೂಡ ಆತ ಮಾಡಿದ ತಪ್ಪಿಗೆ ಆ ಶಿಕ್ಷೆ ಸರಿ ಹೋಗಲಿಲ್ಲ. ಕೊನೆಗೆ ಆತ ತನ್ನ ಎಕ್ಸ್ ಖಾತೆಯನ್ನೇ ಡೀ ಆಕ್ಟಿವೇಟ್ ಮಾಡಿದ್ದಾನೆ. ಹೌದು, ಅಣ್ಣಾವ್ರ ಅಭಿಮಾನಿಗಳ ಪವರ್, ದೊಡ್ಮನೆ ಫ್ಯಾನ್ಸ್ ನ ಪವರ್ ಏನು ಎನ್ನುವುದು ಈ ಒಂದು ಘಟನೆ ಮೂಲಕ ಗೊತ್ತಾಗುತ್ತಿದೆ. ಆ ವ್ಯಕ್ತಿಯನ್ನ ಚೆನ್ನಾಗಿ ರುಬ್ಬಬೇಕು ಎಂದು ಎಲ್ಲಾ ಫ್ಯಾನ್ಸ್ ಅಂದುಕೊಂಡಿದ್ದರು, ಆದರೆ ಆತ ಟ್ವಿಟರ್ (ಎಕ್ಸ್) ಇಂದಲೇ ನಾಪತ್ತೆ ಆಗಿದ್ದಾನೆ. ಆತನನ್ನು ಹುಡುಕಿಕೊಂಡು ಬನ್ನಿ, ಇಷ್ಟು ಬೇಗ ಹೊರಟು ಹೋಗಿದ್ದಾನೆ ಎಂದು ಹೇಳುತ್ತಿದ್ದಾರೆ ಫ್ಯಾನ್ಸ್. ಒಟ್ಟಿನಲ್ಲಿ ಅಣ್ಣಾವ್ರ ವಿಷಯಕ್ಕೆ ಬಂದರೆ ಕರ್ನಾಟಕದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎನ್ನುವುದು ಆ ವ್ಯಕ್ತಿಗೆ ಮಾತ್ರವಲ್ಲ, ಎಲ್ಲರಿಗೂ ಅರ್ಥ ಆಗಿರುವುದಾಗಿ ಗೊತ್ತಾಗುತ್ತಿದೆ..
ನಮ್ಮ ರಾಜ್ಯದ ಜನರು ಪ್ರೀತಿ ಕೊಟ್ಟರೆ, ದುಪ್ಪಟ್ಟು ಪ್ರೀತಿಯನ್ನು ಹಿಂದಿರುಗಿಸಿ ನೀಡುತ್ತಾರೆ, ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದರೆ ನಮ್ಮ ಮೆಚ್ಚಿನ ನಟರು, ನಮ್ಮ ನಾಡು ನುಡಿ ಜಲ ನೆಲ ಎಂದು ಬಂದರೆ ಆ ವ್ಯಕ್ತಿ ಯಾರೇ ಆಗಿದ್ದರೂ ಅವರನ್ನು ಬಿಡುವುದಿಲ್ಲ. ಅವರಿಗೆ ಪಾಠ ಕಲಿಸಿ ಅವರು ಮಾಡಿದ ತಪ್ಪು ಅವರಿಗೆ ಅರ್ಥ ಆಗುವವರೆಗೂ ಕೂಡ ಈ ಕೆಲಸವನ್ನ ಬಿಡುವುದಿಲ್ಲ. ಹಾಗಾಗಿ ನಮ್ಮ ಅಭಿಮಾನಿಗಳು ಸ್ಪೆಶಲ್. ಅದರಲ್ಲೂ ಅಣ್ಣಾವ್ರ ವಿಷಯಕ್ಕೆ ಬಂದರೆ ಅಂಥವರನ್ನ ಸುಮ್ಮನೆ ಬಿಡುತ್ತಾರಾ? ಇಂದು ಈ ವ್ಯಕ್ತಿಗೆ ಕಲಿಸಿರುವ ಪಾಠದಿಂದ ಬೇರೆ ಎಲ್ಲರಿಗೂ ಅರ್ಥ ಆಗಿರುತ್ತದೆ. ಕರ್ನಾಟಕದ, ಕನ್ನಡದ ಹಾಗೂ ಕನ್ನಡ ಕಲಾವಿದರ ವಿಷಯಕ್ಕೆ ಎಂದು ಬಂದರೆ, ಅಂಥವರಿಗೆ ಆಗೋದು ಇದೇ ಗತಿ… ಹಾಗಾಗಿ ಎಲ್ಲರೂ ಹುಷಾರಾಗಿ ಇರುವುದೇ ಉತ್ತಮ ಆಗಿದೆ.