ಎಸ್.ಎಸ್. ರಾಜಮೌಳಿ ನಿರ್ದೇಶನದ ಬ್ಲಾಕ್ ಬಸ್ಟರ್ ಸಿನಿಮಾದ ನಾಟು ನಾಟು ಹಾಡು ದೇಶದಾದ್ಯಂತ ಮಾಡಿದ ಮೋಡಿ ಎಂತಹದ್ದು ಎಂದು ಗೊತ್ತೇ ಇದೆ. ಆಸ್ಕರ್ ಪ್ರಶಸ್ತಿ ಬಾಚಿಕೊಂಡ ಈ ಹಾಡಿನ ಕ್ರೇಜ್ ಇನ್ನೂ ಕೂಡ ಕಡಿಮೆಯಾಗಿಲ್ಲ. ಇದೀಗ ದೂರದ ಲಂಡನ್ ನಲ್ಲಿ ಬರೋಬ್ಬರಿ 700 ಮಹಿಳೆಯರು ಏಕಕಾಲಕ್ಕೆ ಸೀರೆ ಉಟ್ಟು ರಸ್ತೆಯಲ್ಲಿ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದು, ಈ ಡ್ಯಾನ್ಸ್ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ.
ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ನಡೆದ ಸಂಭ್ರಮಾಚರಣೆಯಲ್ಲಿ 700 ಭಾರತೀಯ ಮಹಿಳೆಯರು ಸೀರೆ ಉಟ್ಟು ಲಂಡನ್ನ ರಸ್ತೆಯಲ್ಲಿ ನಾಟು ನಾಟು ಅಂತ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಇಂಗ್ಲೆಂಡ್ ರಾಜಧಾನಿ ಲಂಡನ್ನಿನ ರಸ್ತೆಯಲ್ಲಿ ಈ ಡ್ಯಾನ್ಸ್ ಮಾಡಲಾಗಿದ್ದು, ನೋಡುಗರು ಫಿದಾ ಆಗಿದ್ದಾರೆ.
ಟೆನ್ ಡೌನಿಂಗ್ ಸ್ಟ್ರೀಟ್ನಲ್ಲಿ ಸೀರೆ ಉಟ್ಟು ಭಾರತೀಯ ಮಹಿಳೆಯರು ಕುಣಿದಿದ್ದು, ಈ ಪ್ರದರ್ಶನವನ್ನ ಸೀರೆ ವಾಕಥಾನ್ ಭಾಗವಾಗಿ ನೀಡಲಾಯ್ತು. ಬ್ರಿಟೀಷ್ ವುಮೆನ್ ಇನ್ ಸಾರೀಸ್ ಗ್ರೂಪ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟ್ರಾಫಲ್ಗರ್ ಸ್ಕ್ವೇರ್ ಮತ್ತು ಪಾರ್ಲಿಮೆಂಟ್ ಸ್ಕ್ವೇರ್ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ನಾಟು ನಾಟಿಗೆ ಹೆಜ್ಜೆ ಹಾಕಿದ್ದಾರೆ. ಸದ್ಯ, ಈ ಡ್ಯಾನ್ಸ್ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.