ಪ್ರತಿದಿನ ಬೆಳಗ್ಗೆ ಏಳುತ್ತಿದ್ದಂತೆ ದೇವರ ಮಂತ್ರ ಜಪಿಸಿ, ದೇವರ ಫೋಟೋ ನೋಡಿ ಈ ದಿನ ಚೆನ್ನಾಗಿರಲಿ ಎಂದು ಪ್ರಾರ್ಥಿಸುತ್ತೇವೆ. ಗ್ರಹಗತಿಗಳು ನಿಮ್ಮ ಪರವಾಗಿದ್ದರೆ ಖಂಡಿತ ದಿನ ಚೆನ್ನಾಗಿರುತ್ತದೆ. ಇಲ್ಲವಾದರೆ ಇಡೀ ದಿನ ಸಮಸ್ಯೆ ಬೆನ್ನೇರುತ್ತದೆ. ಇಂದು 6 ಡಿಸೆಂಬರ್ 2024, ಶುಕ್ರವಾರ. ಈ ದಿನ 12 ರಾಶಿಗಳಿಗೆ ದಿನ ಹೇಗಿರಲಿದೆ? ಮೇಷ ರಾಶಿಯಿಂದ ಮೀನ ರಾಶಿಯವರೆಗೆ ದಿನ ಭವಿಷ್ಯ ನೋಡಿ.
ಮೇಷ ರಾಶಿ
ಇಂದು ಮೇಷ ರಾಶಿಯ ಜನರಿಗೆ ಬಹಳ ಖುಷಿಯ ದಿನವಾಗಿದೆ. ನಿಮ್ಮ ಸಂಗಾತಿಯನ್ನು ಶಾಪಿಂಗ್ಗೆ ಕರೆದೊಯ್ಯುತ್ತೀರಿ, ಆದರೆ ಖರ್ಚು ವೆಚ್ಚದ ಬಗ್ಗೆ ಎಚ್ಚರ ಇರಲಿ. ವಾಹನ ಚಲಾಯಿಸುವಾಗ ಬಹಳ ಜಾಗ್ರತೆಯಿಂದ ಇರಬೇಕು. ನೀವು ಬಹಳ ಇಷ್ಟಪಡುವ ವಸ್ತುವೊಂದು ಕಳೆದುಹೋಗಬಹುದು, ಜಾಗ್ರತೆಯಿಂದ ಇರಿ. ಕಚೇರಿ ಕೆಲಸದಲ್ಲಿ ಹೆಚ್ಚು ಒತ್ತಡ ಇರಬಹುದು, ತಾಳ್ಮೆ ಇರಲಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಬಹು ದಿನಗಳ ಸಮಸ್ಯೆಗಳಿಂದ ಪರಿಹಾರದ ದಿನವಾಗಿರುತ್ತದೆ. ಯಾವುದೇ ಕೆಲಸದ ವಿಚಾರದಲ್ಲಿ ನಿಮಗೆ ಟೆನ್ಷನ್ ಇದ್ದಲ್ಲಿ ಅದು ಕೂಡಾ ದೂರವಾಗುತ್ತದೆ. ವ್ಯವಹಾರದಲ್ಲಿ ದೊಡ್ಡ ಯೋಜನೆಯ ಕಾಂಟ್ರಾಕ್ಟ್ ಪಡೆಯಬಹುದು. ಕೆಲಸಗಳಿಗಾಗಿ ದೂರದ ಊರಿಗೆ ಪ್ರವಾಸಕ್ಕೆ ಹೋಗಬಹುದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಸಿಗಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ದಿನ ಚೆನ್ನಾಗಿದೆ. ನಿಮ್ಮ ಶಕ್ತಿಯನ್ನು ವಿವಿಧ ಕಾರ್ಯಗಳಲ್ಲಿ ಬಳಸಲಾಗುತ್ತದೆ, ಇದು ನಿಮ್ಮ ಕೆಲಸವನ್ನು ಕಡಿಮೆ ಮಾಡುವುದಲ್ಲದೆ, ಇದರಿಂದ ನೀವು ಖುಷಿಯಾಗಿರುವಿರಿ. ತಂದೆಯ ವಿಚಾರದಲ್ಲಿ ಬೇಸರ ಉಂಟಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬಹುದು. ಆನ್ಲೈನ್ನಲ್ಲಿ ಕೆಲಸ ಮಾಡುವ ಜನರು ದೊಡ್ಡ ಆರ್ಡರ್ ಪಡೆಯುವ ಸಾಧ್ಯತೆಯಿದೆ. ನಿಮ್ಮ ಹಿಂದಿನ ಕೆಲವು ತಪ್ಪುಗಳು ಬಹಿರಂಗವಾಗಬಹುದು, ಇದರಿಂದಾಗಿ ನಿಮ್ಮ ಜೀವನ ಸಂಗಾತಿ ನಿಮ್ಮ ಮೇಲೆ ಕೋಪಗೊಳ್ಳಬಹುದು.
ಕಟಕ ರಾಶಿ
ವಿವಿಧ ಮೂಲಗಳಿಂದ ಲಾಭ ದೊರೆಯಲಿದೆ. ಸಂಗಾತಿಯೊಂದಿಗೆ ನಿಮ್ಮ ಬಾಂಧವ್ಯ ಚೆನ್ನಾಗಿರುತ್ತದೆ. ಇದರಿಂದ ನೀವಿಬ್ಬರೂ ಖುಷಿಯಿಂದ ಇರುವಿರಿ. ಇತರರೊಂದಿಗೆ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಪೋಷಕರ ಸಲಹೆ ಪಡೆಯಿರಿ. ನಿಮ್ಮ ಸಹೋದ್ಯೋಗಿಗಳಿಂದ ಕೆಲಸದ ವಿಚಾರದಲ್ಲಿ ಸಲಹೆ ಪಡೆಯಲಿದ್ದೀರಿ
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
.ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಲಿದೆ. ನಿಮ್ಮ ಕೌಟುಂಬಿಕ ವಿಷಯಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತೀರಿ. ಯಾವುದೇ ಕೆಲಸಕ್ಕೂ ಇತರರನ್ನು ಅವಲಂಬಿಸಬಾರದು. ನಿಮ್ಮ ವ್ಯವಹಾರದಲ್ಲಿ ನೀವು ಲಾಭವನ್ನು ಪಡೆದರೆ ನೀವು ತುಂಬಾ ಸಂತೋಷವಾಗಿರುತ್ತೀರಿ. ವಿದ್ಯಾರ್ಥಿಗಳು ಯಾವುದೇ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೆ, ಅವರು ಖಂಡಿತವಾಗಿಯೂ ಅದರಲ್ಲಿ ಗೆಲ್ಲುತ್ತಾರೆ. ಕುಟುಂಬ ಸದಸ್ಯರ ವಿವಾಹದಲ್ಲಿಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಬಡ್ತಿ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಕನ್ಯಾ ರಾಶಿ
ಇಂದು ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ. ನೀವು ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತೀರಿ. ಆಪ್ತರು ನಿಮಗೆ ಸಹಾಯ ಮಾಡುತ್ತಾರೆ. ಆಸ್ತಿ ಸಂಬಂಧಿತ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು, ಅದನ್ನು ಪಡೆಯಲು ಕೆಲವೊಂದು ಸಮಸ್ಯೆಗಳನ್ನು ಕೂಡಾ ಎದುರಿಸಬೇಕಾಗಬಹುದು. ಯಾವುದೇ ಪ್ರಮುಖ ಹೂಡಿಕೆ ಮಾಡುವ ಮುನ್ನ ಎಚ್ಚರಿಕೆಯಿಂದ ಇರಿ.
ತುಲಾ ರಾಶಿ
ಇಂದು ನೀವು ಧಾರ್ಮಿಕ ಕಾರ್ಯಗಳಲ್ಲಿ ತೊಡಗಲಿದ್ದೀರಿ. ಮನೆಯಲ್ಲಿ ಕೆಲವು ಶುಭ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಸಾಲ ತೆಗೆದುಕೊಂಡಿರುವವರಿಗೆ ಮತ್ತೆ ವಾಪಸ್ ನೀಡಲಿದ್ದೀರಿ. ನಿಮ್ಮ ಮನಸ್ಸು ಚಂಚಲವಾಗಿರುವುದರಿಂದ ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ಆರ್ಥಿಕ ಸಮಸ್ಯೆ ಕಾಡಬಹುದು, ಖರ್ಚಿನ ಬಗ್ಗೆ ನಿಗಾ ವಹಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಇಂದು ದುರ್ಬಲ ದಿನ ಎಂದೇ ಹೇಳಬಹುದು. ಯಾವುದೇ ಕೆಲಸಕ್ಕಾದರೂ ನೀವು ಬೇರೆಯವರನ್ನು ನಂಬಬಾರದು. ಕೆಲವು ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮಗೆ ತೊಂದರೆ ಕೊಡುವ ಕೆಲವು ಹೊಸ ವಿರೋಧಿಗಳು ಹುಟ್ಟಿಕೊಳ್ಳಬಹುದು. ನೀವು ಬೇರೆಯವರಿಗೆ ಕೆಲಸದ ಬಗ್ಗೆ ಭರವಸೆ ನೀಡಿದ್ದರೆ, ಅದನ್ನು ಪೂರೈಸುವಲ್ಲಿ ನೀವು ಖಂಡಿತವಾಗಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅನಾರೋಗ್ಯ ಕಾಡಬಹುದು.
ಧನು ರಾಶಿ
ಧನು ರಾಶಿಯವರಿಗೆ ಈ ದಿನದ ಆರಂಭ ಚೆನ್ನಾಗಿರುವುದಿಲ್ಲ. ನೀವು ಕೆಲವು ಕಾನೂನು ವಿಷಯಗಳ ಬಗ್ಗೆ ಸ್ವಲ್ಪ ಚಿಂತಿಸುತ್ತೀರಿ, ಅದಕ್ಕಾಗಿ ಕುಟುಂಬದ ಹಿರಿಯರೊಂದಿಗೆ ಮಾತನಾಡಿ ಸಲಹೆ ತೆಗೆದುಕೊಳ್ಳಿ. ದಿನದ ಉತ್ತರಾರ್ಧ ಚೆನ್ನಾಗಿರುತ್ತದೆ. ಪೂರ್ವಜರ ಆಸ್ತಿಯಿಂದ ಲಾಭ ಪಡೆಯಲಿದ್ದೀರಿ. ನಿಮ್ಮ ಗೌರವ ಹಾಗೂ ಖ್ಯಾತಿ ಹೆಚ್ಚಾಗಲಿದೆ.
ಮಕರ ರಾಶಿ
ಇಂದು ನೀವು ಬಹಳ ತಾಳ್ಮೆಯಿಂದ ಇರಬೇಕು. ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ನೀವು ಯಾವುದೇ ಕೆಲಸದಲ್ಲಿ ಆತುರ ತೋರಿಸಿದರೆ, ಅದರಲ್ಲಿ ತಪ್ಪಾಗಬಹುದು. ಆದ್ದರಿಂದ ತಾಳ್ಮೆ ಇದ್ದಷ್ಟೂ ಒಳ್ಳೆಯದು. ಕೆಲಸಕ್ಕೆ ಸಂಬಂಧಿಸಿದ ಯಾವುದೇ ವಿಚಾರವಾಗಿ ಬಹಳ ತಾಳ್ಮೆ ವಹಿಸಬೇಕು, ಇಲ್ಲದಿದ್ದರೆ ಅದರಲ್ಲಿ ಏನಾದರೂ ತಪ್ಪಾಗಬಹುದು. ಕಷ್ಟಗಳಿದ್ದಾಗ ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿದರೆ ಜಯ ನಿಮ್ಮದಾಗುತ್ತದೆ. ನಿಮ್ಮ ಸಂಬಂಧಿಕರೊಬ್ಬರು ನಿಮ್ಮೊಂದಿಗೆ ರಾಜಿ ಮಾಡಿಕೊಳ್ಳಲು ಬರಬಹುದು.
ಕುಂಭ ರಾಶಿ
ಇಂದು ಕುಂಭ ರಾಶಿಯವರಿಗೆ ಆದಾಯ ಹೆಚ್ಚಳವಾಗುವ ದಿನ. ಬಹಳ ದಿನಗಳಿಂದ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸುವಿರಿ. ಆಸ್ತಿಯಲ್ಲಿ ಹೂಡಿಕೆ ಮಾಡಲು ಯೋಜಿಸಬಹುದು, ಅದು ನಿಮಗೆ ಒಳ್ಳೆಯದು. ಬಹಳ ದಿನಗಳ ನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಕೆಲವೊಂದು ವಿಚಾರಗಳಲ್ಲಿ ಮಕ್ಕಳೊಂದಿಗೆ ನಿಮಗೆ ಮನಸ್ತಾಪ ಉಂಟಾಗಬಹುದು, ಆದರೆ ಅವರ ಕೆಲಸಗಳಿಗೆ ನೀವು ಸಹಕಾರ ನೀಡಿದರೆ ಸಕ್ಸಸ್ ಆಗುತ್ತಾರೆ.
ಮೀನ ರಾಶಿ
ದೂರದಲ್ಲಿ ವಾಸಿಸುವ ನಿಮ್ಮ ಕುಟುಂಬದ ಸದಸ್ಯರ ನೆನಪುಗಳು ನಿಮ್ಮನ್ನು ಕಾಡಬಹುದು. ವಿದ್ಯಾರ್ಥಿಗಳು ಏಕಾಗ್ರತೆಯ ಕೊರತೆಯಿಂದ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಬಹುದು. ನಿಮ್ಮ ತಪ್ಪುಗಳಿಗಾಗಿ ನಂತರ ಪಶ್ಚಾತಾಪ ಪಡುವಿರಿ. ಕುಟುಂಬದ ಸದಸ್ಯರ ವೃತ್ತಿಗೆ ಸಂಬಂಧಿಸಿದಂತೆ ನೀವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಬಹುದು
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.