ಭಾರತೀಯ ವಾಹನ ಮಾರುಕಟ್ಟೆಗೆ ಇದೀಗ ಮತ್ತೊಂದು ದುಬಾರಿ ಬೈಕ್ ಪ್ರವೇಶಿಸಿದೆ. ‘ಬಿಎಂಡಬ್ಲ್ಯೂ ಎಂ 1000 ಆರ್’ ಬೈಕ್ ಬಿಡುಗಡೆಯಾಗಿದ್ದು,ಇದರ ಬೆಲೆ ಬರೋಬ್ಬರಿ 33 ಲಕ್ಷ ರೂಪಾಯಿ.ಈ ಸೂಪರ್ ಬೈಕ್ ಭಾರತದಲ್ಲಿ ಎಂ 1000 ಆರ್’ ಮತ್ತು ‘ ಎಂ 1000 ಆರ್ ಕಾಂಪಿಟೇಷನ್’ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಾಗಲಿದೆ.ಈ ಎರಡು ವೇರಿಯೆಂಟ್ಗಳ ಎಕ್ಸ್ಶೋ ರೂಮ್ ಬೆಲೆ ಕ್ರಮವಾಗಿ 33 ಲಕ್ಷ ರೂಪಾಯಿ ಮತ್ತು 38 ಲಕ್ಷ ರೂಪಾಯಿ ಆಗಿದೆ.

ಆಕರ್ಷಕವಾಗಿರುವ ಈ ಬೈಕ್ 2024ರ ಜನವರಿಯಿಂದ ವಿತರಣೆಯಾಗಲಿದೆ. ಎಂ 1000 ಆರ್ ನೇಕೆಡ್ ಬೈಕ್ 999 ಸಿಸಿ, ಇನ್-ಲೈನ್ 4-ಸಿಲಿಂಡರ್ ವಾಟರ್ಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು 212 ಎಚ್ ಪಿ ಶಕ್ತಿ ಮತ್ತು 113 ನ್ಯೂಟನ್ ಮೀಟರ್ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕು 3.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆಯುತ್ತದೆ ಮತ್ತು ಇದರ ಟಾಪ್ ಸ್ಪೀಡ್ 280 ಕಿ.ಮೀ ಎಂದು ಬಿಎಂಡಬ್ಲ್ಯೂ ತಿಳಿಸಿದೆ.
ಇದಿಷ್ಟೇ ಅಲ್ಲದೆ ಈ ದುಬಾರಿ ಬೈಲಿನಲ್ಲಿ ರೈನ್, ರೋಡ್, ಡೈನಾಮಿಕ್, ರೇಸ್ ಮತ್ತು ರೇಸ್ ಪ್ರೋ ರೈಡಿಂಗ್ ಮೋಡ್ಗಳು ಲಭ್ಯವಿದೆ. ಜೊತೆಗೆ ಇದು ಇತ್ತೀಚಿನ ಪೀಳಿಗೆಯ ಡೈನಾಮಿಕ್ಸ್ ಟ್ರಾಕ್ಷನ್ ಕಂಟ್ರೋಲ್, 6-ಆಕ್ಸಿಸ್ ಸೆನ್ಸಾರ್ ಬಾಕ್ ನೊಂದಿಗೆ ವೀಲಿ ಫಂಕ್ಷನ್, ಎಬಿಎಸ್, ಎಬಿಎಸ್ ಪ್ರೊ, ಲಾಂಚ್ ಕಂಟ್ರೋಲ್ ಮತ್ತು ಪಿಟ್ ಲೇನ್ ಲಿಮಿಟರ್ ಅನ್ನೂ ಒಳಗೊಂಡಿದ್ದು, ಗ್ರಾಹಕರಿಗೆ ಅತ್ಯಂತ ಅದ್ಭುತ ಅನುಭವ ನೀಡಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.