ಇಂದು ಸೋಮವಾರ, 30 ಡಿಸೆಂಬರ್ 2024. ಈ ದಿನ 12 ರಾಶಿಗಳ ಭವಿಷ್ಯ ಹೇಗಿರಲಿದೆ? ಯಾರಿಗೆ ಶುಭ ಫಲ? ಯಾರಿಗೆ ಸಮಸ್ಯೆ? ಶಿವನನ್ನು ಆರಾಧಿಸುವ ಈ ಶುಭ ದಿನ ಮೇಷ ರಾಶಿಯಿಂದ ಮೀನ ರಾಶಿಯವರ ಭವಿಷ್ಯ ಹೇಗಿದೆ ನೋಡಿ.
ಮೇಷ ರಾಶಿ
ಆರ್ಥಿಕ ದೃಷ್ಟಿಯಿಂದ ಮೇಷ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ನೀವು ಯಾವುದೇ ನಿರ್ಧಾರವನ್ನು ಆತುರದಿಂದ ಅಥವಾ ಭಾವನಾತ್ಮಕವಾಗಿ ತೆಗೆದುಕೊಳ್ಳಬಾರದು. ನಿಮ್ಮ ಕೆಲಸವನ್ನು ಬದಲಾಯಿಸುವ ಪ್ರಯತ್ನಗಳು ಉತ್ತಮವಾಗಿರುತ್ತವೆ. ನಿಮ್ಮ ಆಯ್ಕೆಯ ಯಾವುದೇ ಕೋರ್ಸ್ಗೆ ನಿಮ್ಮ ಮಗುವನ್ನು ನೀವು ದಾಖಲಿಸಬಹುದು. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಯಾವುದೇ ವಿಷಯದ ಬಗ್ಗೆ ನೀವು ಅನಗತ್ಯವಾಗಿ ಕೋಪಗೊಳ್ಳುವುದನ್ನು ತಪ್ಪಿಸಬೇಕು. ನಿಮ್ಮ ಕೆಲಸದಲ್ಲಿ ನೀವು ಚಿಂತನಶೀಲರಾಗಿ ಮುಂದುವರಿಯುತ್ತೀರಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಮಧ್ಯಮ ಫಲ ನೀಡಲಿದೆ. ಬಹಳ ದಿನಗಳ ನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ಸಿಗಲಿದೆ. ಹಿರಿಯ ಸದಸ್ಯರೊಂದಿಗೆ, ನೀವು ಕೌಟುಂಬಿಕ ಹಾಗೂ ಇನ್ನಿತರ ವಿಷಯಗಳನ್ನು ಚರ್ಚಿಸುತ್ತೀರಿ. ಕುಟುಂಬ ಸದಸ್ಯರಲ್ಲಿ ಒಗ್ಗಟ್ಟು ಇರುತ್ತದೆ. ಒಂಟಿಯಾಗಿರುವವರಿಗೆ ಉತ್ತಮ ಸಂಬಂಧ ಬರಬಹುದು. ಪರೀಕ್ಷೆಗೆ ತಯಾರಾಗಲು ವಿದ್ಯಾರ್ಥಿಗಳು ತುಂಬಾ ಕಷ್ಟಪಡಬೇಕಾಗುತ್ತದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಪ್ರೀತಿ ಮತ್ತು ಸಹಕಾರದ ಭಾವನೆಗಳು ನಿಮ್ಮ ಮನಸ್ಸಿನಲ್ಲಿ ಉಳಿಯುತ್ತವೆ. ನಿಮ್ಮ ಪ್ರಭಾವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ನೀವು ಯಾವುದರ ಬಗ್ಗೆಯೂ ಅನಗತ್ಯ ಅಭಿಪ್ರಾಯ ಭೇದಗಳಿಗೆ ಒಳಗಾಗಬಾರದು. ನಿಮ್ಮ ಹೆತ್ತವರ ಆಶೀರ್ವಾದದಿಂದ, ನಿಮ್ಮ ಬಾಕಿ ಇರುವ ಕೆಲಸ ಪೂರ್ಣಗೊಳ್ಳುತ್ತದೆ. ಉದ್ಯೋಗದಲ್ಲಿ ಕೆಲಸ ಮಾಡುವ ಜನರು ತಮ್ಮ ಕೆಲಸದಿಂದ ಪರಿಹಾರ ಪಡೆಯುತ್ತಾರೆ. ಯಾವುದೇ ಹೊಸ ಕೆಲಸವನ್ನು ಮುಂದುವರೆಸುವ ಮುನ್ನ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.
ಕಟಕ ರಾಶಿ
ಕಟಕ ರಾಶಿಯವರಿಗೆ, ಇಂದು ದಾನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಹೆಸರು ಗಳಿಸುವ ದಿನವಾಗಿರುತ್ತದೆ. ನೀವು ಕೌಟುಂಬಿಕ ವಿಷಯಗಳ ಬಗ್ಗೆ ಸ್ವಲ್ಪ ಗಮನ ಹರಿಸಬೇಕು. ಹೊರಗಿನವರನ್ನು ಅತಿಯಾಗಿ ನಂಬಬೇಡಿ, ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಮನಸ್ಸಿನಲ್ಲಿ ಪ್ರೀತಿ ಮತ್ತು ಸಹಕಾರದ ಭಾವನೆ ಇರುತ್ತದೆ. ನಿಮ್ಮ ವರ್ತನೆಯಿಂದಾಗಿ ಕುಟುಂಬದ ಸದಸ್ಯರು ತೊಂದರೆಗೊಳಗಾಗುತ್ತಾರೆ. ವಿದೇಶದಲ್ಲಿ ಅಧ್ಯಯನ ಮಾಡಲು ಯೋಜಿಸುತ್ತಿರುವ ವಿದ್ಯಾರ್ಥಿಗಳ ಬಗ್ಗೆ ನೀವು ಕೆಲವು ಮಾಹಿತಿಯನ್ನು ಪಡೆಯಬಹುದು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಸಿಂಹ ರಾಶಿ
ವಿರೋಧಿಗಳು ಹೆಚ್ಚಾಗುವುದಿರಂದ ಸಿಂಹ ರಾಶಿಯ ಜನರು ಇಂದು ಸ್ವಲ್ಪ ಜಾಗರೂಕರಾಗಿರಬೇಕು. ವ್ಯವಹಾರದಲ್ಲಿ ಸಾಮಾನ್ಯ ಲಾಭದ ಕಾರಣದಿಂದಾಗಿ ನೀವು ಸ್ವಲ್ಪ ನಿರಾಶೆಗೊಳ್ಳುವಿರಿ. ನಿಮ್ಮ ಕೆಲಸದ ಬಗ್ಗೆ ನೀವು ಚಿಂತಿತರಾಗುತ್ತೀರಿ, ಇದಕ್ಕಾಗಿ ನೀವು ನಿಮ್ಮ ಆದಾಯದ ಮೂಲಗಳನ್ನು ಯೋಜಿಸಬೇಕು ಮತ್ತು ಹೆಚ್ಚಿಸಬೇಕು. ರಾಜಕೀಯಕ್ಕೆ ಕಾಲಿಡುವವರ ಪ್ರಯತ್ನ ಉತ್ತಮವಾಗಿರುತ್ತದೆ. ದೂರದಲ್ಲಿರುವ ನಿಮ್ಮ ಸಂಬಂಧಿಕರಿಂದ ಫೋನ್ ಕರೆ ಮೂಲಕ ನೀವು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಇಂದು ಖರ್ಚು ಹೆಚ್ಚಾಗುವ ದಿನವಾಗಲಿದೆ. ಪರಿಚಯಸ್ಥರಿಂದಲೇ ಕೆಲವೊಂದು ಸಮಸ್ಯೆಗೆ ಒಳಗಾಗಬಹುದು. ಕೆಲಸದ ಒತ್ತಡ ಹೆಚ್ಚಾಗಲಿದೆ. ಕೆಲವೊಂದು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಮಕ್ಕಳ ಮದುವೆಗೆ ಎದುರಾಗುವ ಸಮಸ್ಯೆಗಳ ಬಗ್ಗೆ ನಿಮ್ಮ ತಂದೆಯೊಂದಿಗೆ ಮಾತನಾಡುತ್ತೀರಿ. ನಿಮ್ಮ ಸಂಬಂಧಿಕರಿಂದ ನೀವು ಆರ್ಥಿಕ ಲಾಭ ಪಡೆಯಲಿದ್ದೀರಿ.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಧನಾತ್ಮಕ ಫಲಿತಾಂಶಗಳನ್ನು ತರಲಿದೆ. ಮತ್ತೊಬ್ಬರ ಬಳಿ ಸಿಲುಕಿರುವ ನಿಮ್ಮ ಹಣ ಮರಳಿ ಪಡೆಯಲಿದ್ದೀರಿ. ವ್ಯವಹಾರದಲ್ಲಿ ಕೆಲವು ಯೋಜನೆಗಳಿಗೆ ಸಂಬಂಧಿಸಿದಂತೆ ನೀವು ಉದ್ವಿಗ್ನತೆಯನ್ನು ಹೊಂದಿರಬಹುದು. ಹಣದ ಬಗ್ಗೆ ನೀವು ಯಾರಿಗಾದರೂ ಭರವಸೆ ನೀಡಬಹುದು. ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಸಹೋದರ ಮತ್ತು ಸಹೋದರಿ ನಿಮ್ಮೊಂದಿಗೆ ಕೆಲವು ಕೌಟುಂಬಿಕ ವಿಷಯಗಳ ಬಗ್ಗೆ ಮಾತನಾಡಬಹುದು. ನಿಮ್ಮ ಮಗುವಿನ ಶಿಕ್ಷಣದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಅನುಭವಿಸುವಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಇಂದು ಅನುಕೂಲಕರ ದಿನವಾಗಲಿದೆ. ಮಾತಿನಲ್ಲಿ ಮೃದುತ್ವ ಕಾಪಾಡಿಕೊಳ್ಳಬೇಕು. ಪೂರ್ವಿಕರ ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಜಯ ಪಡೆಯುತ್ತೀರಿ. ನೀವು ಚಿಕ್ಕ ಮಕ್ಕಳು ನಿಮ್ಮ ಬಳಿ ಏನಾದರೂ ವಿನಂತಿಸಬಹುದು. ನಿಮ್ಮ ಸ್ನೇಹಿತರೊಬ್ಬರಿಂದ ನೀವು ಆಶ್ಚರ್ಯಕರ ಉಡುಗೊರೆಯನ್ನು ಪಡೆಯಬಹುದು. ಅವಿವಾಹಿತರ ಜೀವನದಲ್ಲಿ ಹೊಸ ಅತಿಥಿ ಬರಲಿದ್ದಾರೆ. ಹಳೆಯ ತಪ್ಪಿನಿಂದ ಪಾಠ ಕಲಿಯಬೇಕು. ನಿಮ್ಮ ಮಗು ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಜೀವಿಸುತ್ತದೆ.
ಧನು ರಾಶಿ
ಧನು ರಾಶಿಯವರಿಗೆ ಇಂದು ಬಿಡುವಿಲ್ಲದ ದಿನವಾಗಿರುತ್ತದೆ. ಅತಿಯಾದ ಕೆಲಸದ ಕಾರಣ ನೀವು ಆಯಾಸ ಅನುಭವಿಸುವಿರಿ. ನೀವು ಮತ್ತೊಬ್ಬರಿಂದ ಹಣವನ್ನು ಸಾಲ ಪಡೆಯುವುದನ್ನು ತಪ್ಪಿಸಬೇಕು. ನೀವು ಬುದ್ಧಿವಂತಿಕೆಯಿಂದ ವರ್ತಿಸಬೇಕು. ಕುಟುಂಬದ ಸದಸ್ಯರೊಂದಿಗೆ ಶುಭ ಸಮಾರಂಭಗಳಲ್ಲಿ ಭಾಗವಹಿಸಬಹುದು. ಪ್ರವಾಸಕ್ಕೆ ಹೋಗುವ ಅವಕಾಶ ಸಿಗಲಿದೆ.
ಮಕರ ರಾಶಿ
ಆಸ್ತಿ ಸಂಬಂಧಿತ ವಿವಾದದಿಂದ ನಿಮಗೆ ಪರಿಹಾರ ದೊರೆಯಲಿದೆ. ಉನ್ನತ ಅಧಿಕಾರಿಗಳಿಂದ ಮಾರ್ಗದರ್ಶನ ದೊರೆಯಲಿದೆ. ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ನೀವು ಪ್ರಯತ್ನಿಸಬೇಕು. ಯಾರಿಗಾದರೂ ಏನನ್ನಾದರೂ ಹೇಳುವ ಮೊದಲು ನೀವು ಯೋಚಿಸಬೇಕು.
ಕುಂಭ ರಾಶಿ
ದೊಡ್ಡ ಲಾಭದ ಅನ್ವೇಷಣೆಯಲ್ಲಿ, ನೀವು ಸಣ್ಣ ಲಾಭದ ಯೋಜನೆಗಳಿಗೆ ಕಡಿಮೆ ಗಮನವನ್ನು ನೀಡುತ್ತೀರಿ, ಇದರಿಂದಾಗಿ ನೀವು ಬಯಸಿದ ಲಾಭವನ್ನು ಪಡೆಯುವುದಿಲ್ಲ. ಒಡಹುಟ್ಟಿದವರೊಂದಿಗಿನ ಮನಸ್ತಾಪ ಕೊನೆಯಾಗುತ್ತದೆ. ನೀವು ಕುಟುಂಬದ ವಿಷಯಗಳ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು. ಪ್ರೀತಿಯಲ್ಲಿರುವವರು ಸಂಗಾತಿಯೊಂದಿಗೆ ಸಂತೋಷದ ಸಮಯ ಕಳೆಯುತ್ತಾರೆ.
ಮೀನ ರಾಶಿ
ಆದಾಯದ ದೃಷ್ಟಿಯಿಂದ ಮೀನ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನೀವು ಜೀವನದ ವಿವಿಧ ಕ್ಷೇತ್ರಗಳಲ್ಲಿ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಯಾವುದೇ ಆಸ್ತಿ ಸಂಬಂಧಿತ ವಿಷಯಗಳು ಸಹ ಪರಿಹರಿಸಲ್ಪಡುತ್ತವೆ, ಇದರಿಂದಾಗಿ ನೀವು ಹೊಸ ಮನೆ, ವಾಹನ ಇತ್ಯಾದಿಗಳನ್ನು ಪಡೆಯಬಹುದು. ಉದ್ಯೋಗ ಬದಲಿಸಿದರೆ ಒಳ್ಳೆಯದು.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.