ಇಂದು ಗುರುವಾರ, 26 ಡಿಸೆಂಬರ್ 2024. ಈ ದಿನ 12 ರಾಶಿಗಳ ಭವಿಷ್ಯ ಹೇಗಿರಲಿದೆ? ಯಾರಿಗೆ ಶುಭ ಫಲ? ಯಾರಿಗೆ ಸಮಸ್ಯೆ? ಮೇಷ ರಾಶಿಯಿಂದ ಮೀನ ರಾಶಿಯವರೆಗೆ ದಿನ ಭವಿಷ್ಯ ನೋಡಿ.
ಮೇಷ ರಾಶಿ
ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗುತ್ತದೆ, ಇದರಿಂದ ನೀವು ಖುಷಿಯಾಗಿರುವಿರಿ. ಜೀವನ ಸಂಗಾತಿಯು ನಿಮ್ಮ ಕೆಲಸದಲ್ಲಿ ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ನೀವು ಸ್ನೇಹಿತರೊಂದಿಗೆ ಹೊರಗೆ ಸುತ್ತಾಡುವ ಪ್ಲ್ಯಾನ್ ಮಾಡಲಿದ್ದೀರಿ. ಮತ್ತೊಬ್ಬರು ಹೇಳುವ ಮಾತುಗಳನ್ನು ಕೇಳಿ ಮನಸ್ಸಿಗೆ ಘಾಸಿ ಮಾಡಿಕೊಳ್ಳಬೇಡಿ. ವ್ಯಾಪಾರದಲ್ಲಿ ಏರಿಳಿತದ ನಂತರವೂ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಕೆಲಸದ ಒತ್ತಡವಿರುತ್ತದೆ. ಕಚೇರಿ ರಾಜಕೀಯದಿಂದ ದೂರ ಇದ್ದಷ್ಟೂ ಒಳ್ಳೆಯದು. ಮತ್ತೊಬ್ಬರಿಂದ ನೀವು ಸಾಲ ಪಡೆದಿದ್ದರೆ ಅದನ್ನು ವಾಪಸ್ ಮಾಡಲಿದ್ದೀರಿ. ಆಸ್ತಿಗೆ ಸಂಬಂಧಿಸಿದಂತೆ ಲಾಭ ದೊರೆಯಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡುತ್ತಾರೆ. ಮತ್ತೊಬ್ಬರಿಗೆ ಭರವಸೆ ನೀಡುವಾಗ ಯೋಚನೆ ಮಾಡಿ ಮುಂದುವರೆಯಿರಿ.
ಮಿಥುನ ರಾಶಿ
ಹೆಚ್ಚುತ್ತಿರುವ ಖರ್ಚಿನಿಂದ ಮನಸ್ಸಿಗೆ ಬೇಸರ ಎನಿಸಬಹುದು. ಇನ್ನಷ್ಟು ಅನಾರೋಗ್ಯ ಕಾಡಬಹುದು. ಕೆಲಸದ ವಿಚಾರದಲ್ಲಿ ಸ್ವಲ್ಪ ತಾಳ್ಮೆಯಿಂದ ಇದ್ದರೆ ಒಳ್ಳೆಯದು. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುತ್ತೀರಿ, ಅದು ನಿಮಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ. ಯಾರೊಂದಿಗೂ ಅನಗತ್ಯವಾಗಿ ವಾದ ಮಾಡಬೇಡಿ. ನಿಮ್ಮ ಪೋಷಕರೊಂದಿಗೆ ಚರ್ಚಿಸುವ ಮೂಲಕ ನೀವು ಕೆಲವು ಹೊಸ ಕೆಲಸದ ಬಗ್ಗೆ ಯೋಚಿಸಬಹುದು.
ಕಟಕ ರಾಶಿ
ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಿದರೆ, ಅದರಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ನೀವು ಸಹಭಾಗಿತ್ವವನ್ನು ಹೊಂದಲು ಇದು ಒಳ್ಳೆಯ ಸಮಯ. ಪಾಲುದಾರರ ಮೇಲಿನ ನಿಮ್ಮ ನಂಬಿಕೆಯನ್ನು ಇನ್ನಷ್ಟು ಗಾಢಗೊಳಿಸುತ್ತದೆ. ನೀವು ಯಾರಿಗೂ ಸಾಲ ನೀಡದಿರಿ, ಏಕೆಂದರೆ ಅದನ್ನು ಮರಳಿ ಪಡೆಯುವ ಸಾಧ್ಯತೆಗಳು ತುಂಬಾ ಕಡಿಮೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಲಹೆಗಳನ್ನು ಸ್ವಾಗತಿಸಲಾಗುತ್ತದೆ, ಅದರಿಂದ ನೀವು ಖುಷಿಯಾಗುವಿರಿ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಸಿಂಹ ರಾಶಿ
ಮನೆಯ ಯಾವುದೇ ಸದಸ್ಯರೊಂದಿಗೆ ಯಾವುದೇ ಮನಸ್ತಾಪ ಇದ್ದಲ್ಲಿ ಅದು ಇಂದು ಪರಿಹಾರವಾಗುತ್ತದೆ. ನಿಮ್ಮ ತಂದೆಯ ಆರೋಗ್ಯದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕು. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯುವುದರಿಂದ ನೀವು ಖುಷಿಯಾಗಿರುತ್ತೀರಿ. ನಿಮ್ಮ ಸಂಗಾತಿಯು ನಿಮ್ಮಿಂದ ಏನನ್ನಾದರೂ ವಿನಂತಿಸಬಹುದು. ನೀವು ಸ್ನೇಹಿತರೊಂದಿಗೆ ಖುಷಿಯ ಕ್ಷಣಗಳನ್ನು ಅನುಭವಿಸಲಿದ್ದೀರಿ.
ಕನ್ಯಾ ರಾಶಿ
ಆತುರದಿಂದ ಮಾಡುವ ಯಾವುದೇ ಕೆಲಸವು ಪ್ರತಿಫಲ ನೀಡುವುದಿಲ್ಲ, ಅದ್ದರಿಂದ ತಾಳ್ಮೆ ಇರಲಿ. ಹಿರಿಯ ಸದಸ್ಯರ ಅಭಿಪ್ರಾಯಗಳಿಗೆ ಪ್ರಾಮುಖ್ಯತೆ ನೀಡಬೇಕು. ಷೇರು ಮಾರುಕಟ್ಟೆಗೆ ಸಂಬಂಧಿಸಿದಂತೆ ನೀವು ಯೋಚನೆ ಮಾಡಿ ಹೂಡಿಕೆ ಮಾಡಬೇಕಾಗುತ್ತದೆ. ನಿಮ್ಮ ಹಿಂದಿನ ಕೆಲವು ತಪ್ಪುಗಳಿಂದ ನೀವು ಪಾಠ ಕಲಿಯಬೇಕಾಗುತ್ತದೆ. ನಿಮ್ಮ ಸುತ್ತಲಿನ ಪರಿಸರವು ಆಹ್ಲಾದಕರವಾಗಿರುತ್ತದೆ. ವಿದ್ಯಾರ್ಥಿಗಳು ಬೌದ್ಧಿಕ ಮತ್ತು ಮಾನಸಿಕ ಹೊರೆಯಿಂದ ಮುಕ್ತರಾಗುತ್ತಾರೆ.
ತುಲಾ ರಾಶಿ
ಸಂಪತ್ತು ಹೆಚ್ಚಳವಾಗಲಿದೆ. ವ್ಯವಹಾರದಲ್ಲಿ ಹಠಾತ್ ಲಾಭ ಪಡೆಯಲಿದ್ದಾರೆ. ಆದರೆ ನೀವು ನಿಮ್ಮ ಉಳಿತಾಯದ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು. ಹಣದ ವಿಚಾರವಾಗಿ ಯಾರ ಮಾತಿಗೂ ಮರುಳಾಗದಿರಿ. ಆಸ್ತಿಯನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಯೋಜಿಸುತ್ತಿದ್ದರೆ, ಪ್ರಮುಖ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ. ಸಹೋದರ ಸಹೋದರಿಯರೊಂದಿಗೆ ಭಿನ್ನಾಭಿಪ್ರಾಯ ಇರುತ್ತದೆ.
ವೃಶ್ಚಿಕ ರಾಶಿ
ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಇಂದು ಪೂರ್ಣಗೊಳ್ಳುತ್ತದೆ. ನಿಮ್ಮ ಶತ್ರುಗಳನ್ನು ಸುಲಭವಾಗಿ ಸೋಲಿಸುವಿರಿ. ಅದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ನೀವು ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ತಂದೆಯೊಂದಿಗೆ ಮನಸ್ತಾಪವಿರಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಕೆಲಸದ ಬದಲಾವಣೆಯ ಬಗ್ಗೆ ನೀವು ಯೋಚಿಸಬಹುದು
ಧನು ರಾಶಿ
ಯಾವುದೇ ಆತುರದ ಮತ್ತು ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ. ಅಗತ್ಯವಿರುವ ವ್ಯಕ್ತಿಗೆ ಸಹಾಯ ಮಾಡಲಿದ್ದೀರಿ. ಹಣಕಾಸಿನ ವಿಷಯಗಳಲ್ಲಿ ನೀವು ಜಾಗರೂಕರಾಗಿರಬೇಕು. ಯಾರೊಂದಿಗೂ ಏನನ್ನೂ ಹೇಳುವ ಮೊದಲು ನೀವು ಜಾಗರೂಕರಾಗಿರಬೇಕು. ಯಾವುದೇ ಹೊಸ ಕೆಲಸವನ್ನು ಒಪ್ಪಿಕೊಳ್ಳುವ ಮೊದಲು ನೀವು ಎಚ್ಚರಿಕೆಯಿಂದ ಯೋಚಿಸಬೇಕು. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಬಹುದು.
ಮಕರ ರಾಶಿ
ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಹಿರಿಯರ ಆಶೀರ್ವಾದದೊಂದಿಗೆ, ನಿಮಗೆ ಇಷ್ಟವಾದ, ಅಮೂಲ್ಯವಾದ ಉಡುಗೊರೆಯಾಗಿ ಪಡೆಯಬಹುದು. ನಿಮ್ಮ ಕುಟುಂಬದ ಜವಾಬ್ದಾರಿಗಳನ್ನು ಸಹ ನೀವು ಉತ್ತಮವಾಗಿ ನಿರ್ವಹಿಸುವಿರಿ. ಹಳೆಯ ತಪ್ಪಿನಿಂದ ಪಾಠ ಕಲಿಯಬೇಕಾಗುತ್ತದೆ. ನಿಮ್ಮ ಕುಟುಂಬದ ಸದಸ್ಯರಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ, ಅದು ನಿಮ್ಮ ಉದ್ವೇಗವನ್ನು ಹೆಚ್ಚಿಸುತ್ತದೆ.
ಕುಂಭ ರಾಶಿ
ಕೆಲಸದ ಸ್ಥಳದಲ್ಲಿ ನಿಮ್ಮ ಅನುಭವವೇ ನಿಮಗೆ ಸಾಕಷ್ಟು ಲಾಭ ತಂದುಕೊಡಲಿದೆ. ಬುದ್ಧಿವಂತಿಕೆ ಮತ್ತು ವಿವೇಚನೆಯಿಂದ ಕೆಲಸ ಮಾಡುವ ಮೂಲಕ ನೀವು ಜನರನ್ನು ಆಶ್ಚರ್ಯಗೊಳಿಸುತ್ತೀರಿ. ನಿಮ್ಮ ಖ್ಯಾತಿ ಎಲ್ಲೆಡೆ ಹರಡುತ್ತದೆ. ಯಾರ ಜೊತೆ ಮಾತಾಡುವಾಗಲೂ ಯೋಚಿಸಿ ಮಾತನಾಡಿ. ನೀವು ಕುಟುಂಬದ ವಿಷಯಗಳ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು. ಹಳೆಯ ಕೆಲಸಗಳನ್ನು ಇಂದು ಪೂರ್ಣಗೊಳಿಸಲಿದ್ದೀರಿ.
ಮೀನ ರಾಶಿ
ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ದೊಡ್ಡ ಸ್ಥಾನವನ್ನು ಪಡೆಯಬಹುದು, ಇದರಿಂದಾಗಿ ಪ್ರಮುಖ ನಾಯಕರನ್ನು ಭೇಟಿಯಾಗಬಹುದು. ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ. ನಿಮ್ಮ ಮಗು ಹೊಸ ಕೋರ್ಸ್ಗೆ ಪ್ರವೇಶ ಪಡೆಯುವುದು ನಿಮಗೆ ಖುಷಿ ನೀಡುತ್ತದೆ. ನೀವು ಪ್ರವಾಸಕ್ಕೆ ಹೋಗಲು ಪ್ಲ್ಯಾನ್ ಮಾಡಬಹುದು, ಅಮೂಲ್ಯ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದ ಇರಿ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.