ದೇಶದಲ್ಲಿ ಮೊದಲ ಬಾರಿಗೆ ,ಇಂಧನ ಇಲಾಖೆ ಹೊಸ ಯೋಜನೆಗೆ ಸಿಟಿಯಲ್ಲಿ ಮುನ್ನುಡಿ ಬರೆದಿದೆ…ನೂತನ ಆವಿಷ್ಕಾರ ,ತಂತ್ರಜ್ಞಾನಗಳ ಸಹಾಯದಿಂದ ಪಾಲಿಕೆ ಹಾಗೂ ಬೆಸ್ಕಾಂ ಭೂಗತ ವಿದ್ಯುತ್ ಪರಿವರ್ತಕ ಕೇಂದ್ರವನ್ನ ಸ್ಥಾಪಿಸಿದೆ..ಮಲೇಶ್ವರಂ ೧೫ ನೇ ಅಡ್ಡರಸ್ತೆಯಲ್ಲಿ ಭೂಗತ ಟ್ರಾನ್ಸ್ಫಾರ್ಮರ್ ಗಳನ್ನ ಸ್ಥಾಪಿಸಲಾಗಿದ್ದು ,ಇಂದು ಇಂಧನ ಸಚಿವ ಕೆಜೆ ಜಾರ್ಜ್, ಹಾಗೂ ಶಾಸಕ ಅಶ್ವಥ್ ನಾರಾಯಣ್ ಉದ್ಘಾಟಿಸಿ ಲೋಕಾರ್ಪಣೆ ಗೊಳಿಸಿದ್ರು….

ಹೌದು ,ಸುಮಾರು 2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರೋ ಅಂಡರ್ ಗ್ರೌಂಡ್ ಟ್ರಾನ್ಸ್ಫಾರ್ಮರ್ ಕೇಂದ್ರವನ್ನ ಬೆಸ್ಕಾಂ ಹಾಗೂ ಪಾಲಿಕೆ ಜಂಟಿ ಸಹಯೋಗ ಹಾಗೂ ಅನುದಾನದಲ್ಲಿ ನಿರ್ಮಿಸಲಾಗಿದೆ…ಇದು ಇಡೀ ಭಾರತದ ದೇಶದಲ್ಲಿ ನಿರ್ಮಾಣ ಮಾಡಿರೋ ಮೊದಲ ಯೋಜನೆ ಆಗಿದೆ...ಇನ್ನೂ ಭೂಗತ ಪರಿವರ್ತಕ ಕೇಂದ್ರಗಳಿಂದ ಇಂಧನ ಇಲಾಖೆಗೆ ಸಾಕಷ್ಟು ಪ್ರಯೋಜನವಾಗಲಿದೆ…ಪಾದಚಾರಿ ಮಾರ್ಗಗಳಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಗಳು ಹಾದು ಹೋಗೊ ಕಾರಣ ಅನೇಕ ಅವಘಡಗಳಿಗೆ ಕಾರಣವಾಗ್ತ ಇತ್ತು….ಇದಕ್ಕೆ ಇನ್ಮೇಲೆ ಫುಲ್ ಸ್ಟಾಪ್ ಬೀಳಲಿದೆ..ಇನ್ನೂ ನಗರದ ಹಲವೆಡೆ ಇದೇ ಮಾದರಿಯಲ್ಲಿ ಅಂಡರ್ ಗ್ರೌಂಡ್ ಟ್ರಾನ್ಸ್ಫಾರ್ಮರ್ ಕೇಂದ್ರಗಳನ್ನ ಸ್ಥಾಪಿಸಲಾಗುವುದು ಅಂತಾ ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.
ಅಂಡರ್ ಗ್ರೌಂಡ್ ಟ್ರಾನ್ಸ್ಫಾರ್ಮರ್ ನ ಒಳಗಡೆ ಏನೀದೆ ಹೇಗೆ ನಿರ್ಮಿಸಲಾಗಿದೆ ಅನ್ನೊದನ್ನ ನೋಡೊದಾದ್ರೆ ಭೂಗತ ಪರಿವರ್ತಕ ಕೇಂದ್ರ ರಸ್ತೆಯ ಮೇಲೈನಿಂದ 8 ಅಡಿ ಆಳದಲ್ಲಿ ನಿರ್ಮಿಸಲಾಗಿದೆ. ಈ ಕೇಂದ್ರವು 500 ಕೆವಿಎ ಸಾಮರ್ಥ್ಯದ ತೈಲರಹಿತ ಪರಿವರ್ತಕ, 8-ವೇ ಸಾಲಿಡ್ ಸ್ಟೇಟ್ ರಿಂಗ್ ಮೇನ್ ಯೂನಿಟ್, 5-ವೇ ಎಲ್.ಟಿ ವಿತರಣಾ ಪೆಟ್ಟಿಗೆ, ಯುಪಿಎಸ್, ಸ್ವಯಂಚಾಲಿತ ವಾಟರ್ ಪಂಪ್ ಮತ್ತು ಹವಾ ನಿಯಂತ್ರಣ ವ್ಯವಸ್ಥೆ ಹೊಂದಿದೆ.
ಚೇಂಬರ್ನಲ್ಲಿ ಟ್ರಾನ್ಸ್ಫಾರ್ಮ ಅಳವಡಿಸಲಾಗಿದೆ. ಚೇಂಬರ್ ನೀರಿನ ಸಂಪ್ ಮಾದರಿಯಲ್ಲಿದ್ದು, ನಾಲ್ಕೂ ಕಾಂಕ್ರೀಟ್ ಗೋಡೆಯಿಂದ ಮುಚ್ಚಲಾಗಿದೆ. ಪಾದಚಾರಿ ಗಳು ಯಾವುದೇ ಸಮಸ್ಯೆಯಿಲ್ಲದೆ ಕೇಂದ್ರದ ಮೇಲ್ಬಾಗದಲ್ಲಿ ನಡೆದಾಡಬಹುದು. ಟ್ರಾನ್ಸ್ ಫಾರ್ಮ್ರನ ದುರಸ್ತಿ ಸಂದರ್ಭದಲ್ಲಿ ಸಿಬ್ಬಂದಿಗೆ ಕೇಂದ್ರದ ಒಳ ಹೋಗಲು ಅವಕಾಶ ಕಲ್ಪಿಸಲಾಗಿದೆ . ನಿಗದಿತ ಮಿತಿಗಿಂತ ಹೆಚ್ಚಿನ ವಿದ್ಯುತ್ ಪ್ರವಹಿಸಿ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡರೂ ಕೇಂದ್ರದ ಮೇಲ್ಬಾಗದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ . ಹವಾ ನಿಯಂತ್ರಿತ ಚೇಂಬರ್ ಇದಾಗಿದ್ದು ಟ್ರಾನ್ಸ್ ಫಾರ್ಮ್ರನಿಂದ ಉತ್ಪತ್ತಿಯಾಗುವ ಶಾಖ ಕೂಡ ನಿಯಂತ್ರಣದಲ್ಲಿರುತ್ತೆ.
ಒಟ್ನಲ್ಲಿ ಏಷ್ಯಾದಲ್ಲಿ ಮೊದಲು ವಿದ್ಯುತ್ ಬೆಳಕು ಪಡೆದ ನಗರಿ ನಮ್ಮ ಬೆಂಗಳೂರು ಅನ್ನೋ ಖ್ಯಾತಿ ನಮ್ಮ ಸಿಟಿ ಪಡೆದಿದ್ರೆ ,ಇದೀಗ ಭಾರತದಲ್ಲಿ ಮೊದಲ ಭೂಗತ ಪರಿವರ್ತಕ ನಿರ್ಮಿಸಿದ ಮೊದಲ ಸಿಟಿ ಅನ್ನೋ ಹೆಗ್ಗಳಿಕೆ ಉದ್ಯಾನನಗರಿ ಪಾತ್ರವಾಗಿರೋದು ಹೆಮ್ಮೆ ಹಾಗೂ ಖುಷಿಯ ಸಂಗತಿ..