ಬಾಲಿವುಡ್ ಕಿಂಗ್ ಶಾರುಖ್ ಖಾನ್
‘ಪಠಾಣ್’ ಸಿನಿಮಾದ ಯಶಸ್ಸಿನ ಬಳಿಕ ದೇಶದಾದ್ಯಂತ ಅಭಿಮಾನಿಗಳು ಕಾಯುತ್ತಿರುವ ಚಿತ್ರ ‘ಜವಾನ್’. ಮೊನ್ನೆಯಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್ ದೂಳಿಪಟ ಮಾಡುವುದು ಪಕ್ಕ ಎಂದು ಈಗಾಗಕೇ ಸಿನಿ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಇದೀಗ ‘ಜವಾನ್’ ಚಿತ್ರದ ಒಂದು ಹಾಡು ಶೂಟ್ ಮಾಡಲು ಬರೋಬ್ಬರಿ 15 ಕೋಟಿ ಖರ್ಚು ಮಾಡಲಾಗಿದೆ ಎಂಬ ಸುದ್ದಿ ಚಿತ್ರತಂಡದಿಂದ ಹೊರಬಿದ್ದಿದೆ.

‘ಜವಾನ್’ ಸಿನಿಮಾದ ಪ್ರಮುಖ ಹಾಡು ಎನಿಸಿಕೊಂಡಿರುವ ‘ಜಿಂದಾ ಬಂದಾ’ ಹಾಡಿನ ಚಿತ್ರೀಕರಣಕ್ಕಾಗಿ ನಿರ್ದೇಶಕ ಅಟ್ಲಿ ಕುಮಾರ್ ಚೆನ್ನೈ, ಹೈದರಾಬಾದ್, ಮುಂಬೈ ಸೇರಿದಂತೆ ಹಲವು ರಾಜ್ಯಗಳ ಸಾವಿರಕ್ಕೂ ಹೆಚ್ಚು ಲೇಡಿ ಡ್ಯಾನ್ಸರ್ಸ್ ಗಳನ್ನು ಹುಡುಕಿ ಬಳಸಿಕೊಂಡಿದ್ದಾರೆ. ಶೋಬಿ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದು, ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಈ ಹಾಡು ಅದ್ದೂರಿಯಾಗಿ ಮೂಡಿ ಬಂದಿದ್ದು ಇದು ಶಾರುಖ್ ಖಾನ್ ಇಂಟ್ರಡಕ್ಷನ್ ಹಾಡು ಎನ್ನಲಾಗಿದೆ. ಈ ಹಾಡಿಗೆ 15 ಕೋಟಿ ಖರ್ಚು ಮಾಡಿದ್ದಾರಂತೆ.
ಇದರೊಂದಿಗೆ ಅಟ್ಲಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಜವಾನ್’ ಸಿನಿಮಾದಲ್ಲಿ ನಟ ದಳಪತಿ ವಿಜಯ್ ಅಥಿತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಸಿನಿಮಾದಲ್ಲಿ ವಿಜಯ್ ಯಾವ ಪಾತ್ರ ಮಾಡಲಿದ್ದಾರೆ ಎಂಬ ವಿಚಾರವನ್ನು ಚಿತ್ರತಂಡ ಬಹಿರಂಗ ಪಡಿಸಿಲ್ಲ ಜೊತೆಗೆ ಟ್ರೇಲರ್ ನಲ್ಲೂ ವಿಜಯ್ ಅವರನ್ನು ತೋರಿಸಿಲ್ಲ. ಹಾಗೆಯೇ ಈ ಸಿನಿಮಾದಲ್ಲಿ ಖಳನಟನಾಗಿ ವಿಜಯ್ ಸೇತುಪತಿ ನಟಿಸಿದ್ದು ಬರೋಬ್ಬರಿ 21 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಇದೇ ವರ್ಷಾಂತ್ಯದಲ್ಲಿ ‘ಜವಾನ್’ ತೆರೆಗಪ್ಪಳಿಸಲಿದೆ.