ಇಂದು ಗುರುವಾರ, ಈ ದಿನ ಜನರು ರಾಘವೇಂದ್ರ ಸ್ವಾಮಿ ಹಾಗೂ ಸಾಯಿ ಬಾಬಾರನ್ನು ಆರಾಧಿಸುತ್ತಾರೆ. ಈ ವಿಶೇಷ ದಿನದಂದು 12 ರಾಶಿಗಳ ಭವಿಷ್ಯ ಹೇಗಿರಲಿದೆ? ಯಾರಿಗೆ ಶುಭ ಫಲ? ಯಾರಿಗೆ ಸಮಸ್ಯೆ? ಮೇಷ ರಾಶಿಯಿಂದ ಮೀನ ರಾಶಿಯವರೆಗೆ 12 ಡಿಸೆಂಬರ್ 2024ರ ದಿನ ಭವಿಷ್ಯ ನೋಡಿ.
ಮೇಷ ರಾಶಿ
ಇಂದು ಮೇಷ ರಾಶಿಯವರಿಗೆ ಮಿಶ್ರಫಲ ದೊರೆಯಲಿದೆ. ಬಹಳ ದಿನಗಳ ನಂತರ ಹಳೆಯ ಸ್ನೇಹಿತರನ್ನು ನೀವು ಭೇಟಿಯಾಗಲಿದ್ದೀರಿ. ಕುಟುಂಬದ ಸದಸ್ಯರಿಗೆ ಅನಾರೋಗ್ಯ ಕಾಡಬಹುದು. ಇದರಿಂದ ನಿಮಗೆ ಆತಂಕ ಉಂಟಾಗಬಹುದು, ಈ ಕಾರಣಕ್ಕಾಗಿ ನೀವು ಆಸ್ಪತ್ರೆಗೆ ಹೋಗುವ ಸಾಧ್ಯತೆ ಇದೆ. ಆತ್ಮೀಯರೊಬ್ಬರಿಂದ ಹಣಕಾಸಿನ ಸಹಾಯ ಪಡೆಯುವ ಸಾಧ್ಯತೆ ಇದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಮಿಶ್ರ ದಿನವಾಗಲಿದೆ. ನೀವು ಕೆಲಸದ ಸ್ಥಳದಲ್ಲಿ ಸಾಧನೆ ಮಾಡಲಿದ್ದೀರಿ. ಆತ್ಮೀಯರಿಗಾಗಿ ಪಾರ್ಟಿ ಆಯೋಜಿಸುವಿರಿ. ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ಜಗಳವಿದ್ದರೂ ದಿನಾಂತ್ಯದಲ್ಲಿ ಎಲ್ಲವೂ ಸರಿ ಆಗಲಿದೆ. ಯಾವುದೇ ವಿಚಾರವಾಗಲಿ ಮತ್ತೊಬ್ಬರನ್ನು ಸುಲಭವಾಗಿ ನಂಬದಿರಿ, ಅವರು ನಿಮ್ಮ ನಂಬಿಕೆಯನ್ನು ಹಾಳು ಮಾಡಬಹುದು.
ಮಿಥುನ ರಾಶಿ
ಇಂದು ಮಿಥುನ ರಾಶಿಯವರಿಗೆ ಮಧ್ಯಮ ಫಲ ದೊರೆಯಲಿದೆ. ಹೊಸ ಕೆಲವನ್ನು ಆರಂಭಿಸಬಹುದು. ನಿಮ್ಮ ತಂದೆ ನಿಮಗೆ ಕೆಲಸದ ಬಗ್ಗೆ ನೀಡುವ ಸಲಹೆ ಖಂಡಿತ ನಿಮಗೆ ಉಪಯೋಗಕ್ಕೆ ಬರುತ್ತದೆ. ನಿಮ್ಮ ಮಕ್ಕಳು ನಿಮ್ಮ ಬಳಿ ಇಡುವ ಬೇಡಿಕೆಯನ್ನು ಮರೆಯದೆ ಈಡೇರಿಸಿ. ಬಹಳ ದಿನಗಳಿಂದ ಸ್ಥಗಿತಗೊಂಡಿರುವ ವ್ಯಾಪಾರ ಮತ್ತೆ ಅರಂಭವಾಗುವ ಸಾಧ್ಯತೆ ಇದೆ.
ಕಟಕ ರಾಶಿ
ಕಟಕ ರಾಶಿಯವರಿಗೆ ಇಂದು ದುರ್ಬಲ ದಿನವಾಗಲಿದೆ. ಕುಟುಂಬದ ವಿಷಯಗಳ ಬಗ್ಗೆ ನೀವು ಗಮನ ಹರಿಸಬೇಕು. ಚಾಡಿ ಮಾತನ್ನು ನಂಬದಿರಿ, ಮತ್ತೊಬ್ಬರ ಮಾತುಗಳ ಕಡೆ ಗಮನ ಹರಿಸದಿರಿ. ಕುಟುಂಬದಲ್ಲಿ ಶುಭ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಕುಟುಂಬ ಸದಸ್ಯರು ಕಾರ್ಯನಿರತರಾಗಿರುತ್ತಾರೆ. ನೀವು ಯಾವುದೇ ಕೆಲಸವನ್ನು ಯೋಜಿಸಿ ಪೂರ್ಣಗೊಳಿಸಬೇಕು, ಆಗ ಮಾತ್ರ ಅದು ಪೂರ್ಣಗೊಳ್ಳುತ್ತದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
.ಸಿಂಹ ರಾಶಿ
ನಾಳೆ ಸಿಂಹ ರಾಶಿಯವರಿಗೆ ಇಂದು ಸಣ್ಣ ಪುಟ್ಟ ಸಮಸ್ಯೆ ಕಾಡಲಿದೆ. ನಿಮ್ಮ ಕೆಲಸವನ್ನು ಪೂರ್ಣಗೊಳಿಸುವಲ್ಲಿ ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷವಾಗಿರುವುದಿಲ್ಲ. ನೀವು ಕೆಲಸ ಮಾಡಿ ಸಾಧಿಸುವ ಮೂಲಕ ಅವರಿಗೆ ನಿಮ್ಮ ಮೇಲಿನ ತಪ್ಪು ಅಭಿಪ್ರಾಯ ಹೋಗುವಂತೆ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಉದ್ಯೋಗದಲ್ಲಿ ಸಮಸ್ಯೆ ಉಂಟಾಗಬಹುದು. ನಿಮ್ಮ ಯಾವುದೇ ಕೆಲಸದಲ್ಲಿ ನೀವು ಆಲಸ್ಯ ಮಾಡಬಾರದು.
ಕನ್ಯಾ ರಾಶಿ
ಇಂದು ಕನ್ಯಾ ರಾಶಿಯವರಿಗೆ ಮಿಶ್ರ ಫಲದಾಯಕ ದಿನವಾಗಲಿದೆ. ನಿಮ್ಮ ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳಲ್ಲಿ ಒಬ್ಬರು ಸಹಾಯ ತೆಗೆದುಕೊಳ್ಳಬಹುದು. ಮಕ್ಕಳು ಒಳ್ಳೆ ಕಂಪನಿಯಲ್ಲಿ ಕೆಲಸ ಪಡೆಯುತ್ತಾರೆ, ಇದು ನಿಮಗೆ ಖುಷಿ ನೀಡಲಿದೆ. ನಿಮ್ಮ ಗೆಳೆಯನ ನೆನಪುಗಳು ನಿಮ್ಮನ್ನು ಕಾಡುತ್ತಿರಬಹುದು. ಕೆಲಸಕ್ಕೆ ಸಂಬಂಧಿಸಿದಂತೆ ದೂರ ಪ್ರಯಾಣ ಸಾಧ್ಯತೆ ಇದೆ.
ತುಲಾ ರಾಶಿ
ನಿಮ್ಮ ಆರೋಗ್ಯ ಸುಧಾರಿಸಲಿದೆ. ನೀವು ಯಾವುದೇ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅದು ಉಲ್ಬಣಗೊಳ್ಳುವ ಮೊದಲು ನೀವು ವೈದ್ಯರನ್ನು ಸಂಪರ್ಕಿಸಬೇಕು. ಆತ್ಮೀಯರಿಂದ ಪಡೆದ ಸಾಲವನ್ನು ತೆಗೆದುಕೊಂಡಿದ್ದರೆ ಅದನ್ನು ವಾಪಸ್ ಮಾಡಲಿದ್ದೀರಿ. ತಂದೆಯೊಂದಿಗೆ ಸಣ್ಣ ಪುಟ್ಟ ಮನಸ್ತಾಪ ಉಂಟಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಇಂದು ಖುಷಿಯ ದಿನವಾಗಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ನೀವು ದೂರದ ಊರಿಗೆ ಪ್ರವಾಸ ಕೈಗೊಳ್ಳಲಿದ್ದೀರಿ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತವೆ, ಅದು ನಿಮಗೆ ಸಂತೋಷ ನೀಡುತ್ತದೆ. ನಿಮ್ಮ ಕೆಲವು ಕಾನೂನು ವಿಷಯಗಳು ಬಗೆ ಹರಿಯುವ ಸಾಧ್ಯತೆಯಿದೆ, ಇದು ನಿಮ್ಮ ಆಸ್ತಿಯನ್ನು ಹೆಚ್ಚಿಸುತ್ತದೆ. ಯಾವುದೇ ಕೆಲಸಕ್ಕೆ ಸಂಬಂಧಿಸಿದಂತೆ ಆತುರದ ನಿರ್ಧಾರ ತೆಗೆದುಕೊಳ್ಳುವುದನ್ನು ನಿಲ್ಲಿಸಿ.
ಧನು ರಾಶಿ
ದಾನ, ಧಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಿಮಗೆ ಒಳ್ಳೆ ಹೆಸರು ಸಿಗಲಿದೆ. ನೀವು ಕೆಲವು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯುತ್ತೀರಿ. ಮನೆಯಲ್ಲಿ ಪೂಜೆಯನ್ನು ಆಯೋಜಿಸುವ ಸಾಧ್ಯತೆ ಇದೆ. ಒಡಹುಟ್ಟಿದವರು ನಿಮ್ಮ ಕೆಲಸವನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಈ ದಿನ ವಾಹನ ಚಲಾಯಿಸುವುದನ್ನು ತಪ್ಪಿಸಿ, ಇಲ್ಲವಾದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಮಕರ ರಾಶಿ
ಮಕರ ರಾಶಿಯ ಜನರು ವಾಹನಗಳನ್ನು ಬಳಸುವಾಗ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಸಮಸ್ಯೆ ಉಂಟಾಗಬಹುದು. ಒಂಟಿಯಾಗಿರುವವರು ಹೊಸ ವ್ಯಕ್ತಿಯನ್ನು ಭೇಟಿ ಮಾಡಬಹುದು. ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಅವಕಾಶ ಸಿಗಲಿದೆ. ದಂಪತಿ ಒಟ್ಟಿಗೆ ಕುಳಿತು ನಿಮ್ಮ ಕುಟುಂಬದ ವಿಷಯಗಳನ್ನು ಪರಿಹರಿಸಿಕೊಳ್ಳಬೇಕು, ಆಗ ಮಾತ್ರ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ.
ಕುಂಭ ರಾಶಿ
ಇಂದು ಹೊಸ ಕೆಲಸವನ್ನು ಆರಂಭಿಸಬಹುದು. ಮತ್ತೊಬ್ಬರ ಮಾತನ್ನು ಕೇಳಿ ನೀವು ದೊಡ್ಡ ಮೊತ್ತದ ಹೂಡಿಕೆ ಮಾಡದಿರಿ. ಇಲ್ಲದಿದ್ದರೆ ನಷ್ಟ ಉಂಟಾಗಬಹುದು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಬಾಕಿ ಇದ್ದ ಕೆಲಸಗಳು ಪೂರ್ಣಗೊಳ್ಳಬಹುದು. ನೀವು ಕುಟುಂಬದ ಯಾವುದೇ ವಿಚಾರವನ್ನು ಹೊರಗಿನವರಿಗೆ ಬಹಿರಂಗಪಡಿಸಬಾರದು, ಇಲ್ಲದಿದ್ದರೆ ಅವರು ಅದರ ಲಾಭ ಪಡೆಯಲು ಪ್ರಯತ್ನಿಸುತ್ತಾರೆ.
ಮೀನ ರಾಶಿ
ಇಂದು ಬಹಳ ದಿನಗಳ ನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗುವುದರಿಂದ ನೀವು ಖುಷಿಯಾಗಿರುತ್ತೀರಿ. ನಿಮ್ಮ ಮನೆಗೆ ಹೊಸ ಅತಿಥಿಯ ಆಗಮನದಿಂದ ಉತ್ತಮ ವಾತಾವರಣ ಇರಲಿದೆ. ಕುಟುಂಬದ ಸದಸ್ಯರ ವಿವಾಹದಲ್ಲಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ರಾಜಕೀಯದಲ್ಲಿರುವವರಿಗೆ ಒಳ್ಳೆ ಸ್ಥಾನಮಾನ ಸಿಗಲಿದೆ. ಮಕ್ಕಳ ಆರೋಗ್ಯದ ಕಡೆ ಗಮನವಿರಲಿ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.