ವರ್ಷದ ಮೊದಲ ಚಂದ್ರಗ್ರಹಣವು ಮಾರ್ಚ್ 14ರಂದು ಸಂಭವಿಸಲಿದೆ. ಆಗಸವು ಬ್ಲಡ್ ಮೂನ್ ಎಂಬ ಅದ್ಭುತವಾದ ಬದಲಾವಣೆಗೆ ಸಾಕ್ಷಿಯಾಗಲಿದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಗೋಚಾರವಾಗಲಿರುವ ಚಂದ್ರಗ್ರಹಣವು ಭಾರತದಲ್ಲಿಯೂ ಕಾಣಿಸಿಕೊಳ್ಳಲಿದೆಯಾ…? ಈ ಬ್ಲಡ್ಮೂನ್ನ ವಿಶೇಷತೆಯೇನು…? ಎಂಬುದರ ಮಾಹಿತಿ ಇಲ್ಲಿದೆ….ಓದಿ
ಕೆಂಬಣದಲ್ಲಿ ಹೊಳೆಯಲಿರುವ ಚಂದ್ರನು ಕೆಲವು ಭಾಗಗಳಲ್ಲಿ ಮಾತ್ರ ಗೋಚರಿಸಲಿದ್ದಾನೆ. ಉತ್ತರ ಮತ್ತು ದಕ್ಷಿಣ ಅಮೆರಿಕಾ ಭಾಗದಲ್ಲಿ ಬ್ಲಡ್ ಮೂನ್ ಗೋಚರಿಸಲ್ಲಿದ್ದು, 65 ನಿಮಿಷಕ್ಕಿಂತ ಹೆಚ್ಚು ಕಾಲ ಇದನ್ನು ಕಾಣಬಹುದಾಗಿದೆ. ಮಾರ್ಚ್ 14ರಂದು 03:57:28 ಯುಟಿಸಿ ಅಂದರೆ ಭಾರತೀಯ ಕಾಲಮಾನ(IST) 9:27:28ಕ್ಕೆ ಪ್ರಾರಂಭವಾಗಲಿದೆ. 06:58:43 UTC ಅಂದರೆ IST 12:28:43ಕ್ಕೆ ಚಂದ್ರಗ್ರಹಣವು ತನ್ನ ಗರಿಷ್ಠ ಮಟ್ಟ ತಲುಪಲಿದೆ. ಇನ್ನು 10:00:09 UTC ಅಂದರೆ 15:30:09ಕ್ಕೆ ಚಂದ್ರಗ್ರಹಣ ಅಂತ್ಯಗೊಳ್ಳಲಿದೆ.
ಭಾರತದಲ್ಲಿ ಗೋಚಾರವಿಲ್ಲ:
ಅಮೆರಿಕಾ, ಪಶ್ಚಿಮ ಯುರೋಪ್, ಪಶ್ಚಿಮ ಆಫ್ರಿಕಾ ಹಾಗೂ ಉತ್ತರ ಮತ್ತು ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿ ಮಾತ್ರ ಬ್ಲಡ್ ಮೂನ್ ಗೋಚಾರವಾಗಲಿದ್ದು, ಭಾರತದಲ್ಲಿ ಚಂದ್ರಗ್ರಹಣ ಕಾಣಸಿಗುವುದಿಲ್ಲ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.

ರಕ್ತ ಚಂದ್ರಗ್ರಹಣದ ಕಥೆಗಳು:
ಪ್ರತಿಯೊಂದು ಚಂದ್ರಗ್ರಹಣವು ರಕ್ತಚಂದ್ರಗ್ರಹಣ ಎಂದು ಕರೆಯಲಾಗುವುದಿಲ್ಲ. ಆದರೆ, ಪ್ರತಿ ರಕ್ತ ಚಂದ್ರನು ಸಂಪೂರ್ಣ ಚಂದ್ರಗ್ರಹಣವನ್ನು ಪ್ರತಿನಿಧಿಸುತ್ತದೆ. ಪುರಾಣದಲ್ಲಿ ಇದರ ಕುರಿತು ಹಲವು ಕಥೆಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ನಾರ್ಸ್ ಟೇಲ್ ಆಫ್ ಹತಿ, ಚಂದ್ರನನ್ನು ದೈತ್ಯ ತೋಳಗಳು ಬೆನ್ನಟ್ಟುತ್ತವೆ ಆದ್ದರಿಂದ ರಕ್ತಚಂದ್ರ ಗ್ರಹಣ ಕಾಣಸಿಗುತ್ತದೆ ಎಂದು ಹೇಳುತ್ತಾರೆ. ಇನ್ನು ಅಮೃತವನ್ನು ಕುಡಿದ ರಾಹುವಿನ ಶಿರಚ್ಛೇದನ ವಿಷ್ಣುವಿನಿಂದ ಆಗುತ್ತದೆ ಎಂದು ಹಿಂದೂ ಪುರಾಣದಲ್ಲಿ ಹೇಳಲಾಗುತ್ತದೆ.
ಖಗೋಳಶಾಸ್ತ್ರಜ್ಞರ ಪ್ರಕಾರ……
ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ನೇರವಾಗಿ ಬಂದಾಗ ರಕ್ತ ಚಂದ್ರಗ್ರಹಣ ಸಂಭವಿಸುತ್ತದೆ. ರೇಲೀ ಸ್ಕ್ಯಾಂಟರಿಂಗ್ ಎಂಬ ಪ್ರಕ್ರಿಯೆಯು ಚಂದ್ರನನ್ನು ಕೆಂಪು ಬಣ್ಣದಲ್ಲಿ ಕಾಣುವಂತೆ ಮಾಡುತ್ತದೆ. ಕಡಿಮೆ ತರಂಗಾಂತರದ ಬೆಳಕು(ನೀಲಿ) ಚದುರಿ ಹೋಗುತ್ತದೆ ಹಾಗೂ ಹೆಚ್ಚು ತರಂಗಾಂತರದ ಕೆಂಪು ಬೆಳಕು ಭೂಮಿಯ ವಾತಾವರಣದ ಮೂಲಕ ಹಾದು ಹೋಗುವುದರಿಂದ ಚಂದ್ರನು ಕೆಂಪು ಬಣ್ಣದಲ್ಲಿ ಕಾಣಸಿಗುತ್ತದೆ. ವಾತಾವರಣದ ಪರಿಸ್ಥಿತಿಗಳು ಹಾಗೂ ಬೆಳಕಿನ ಮಾಲಿನ್ಯದಂತಹ ಬಾಹ್ಯ ಅಂಶಗಳ ಕಾರಣದಿಂದ ಬ್ಲಡ್ ಮೂನ್ ಸಂದರ್ಭದಲ್ಲಿ ಚಂದ್ರನು ಕೆಂಪು, ಕೇಸರಿ ಅಥವಾ ತಾಮ್ರ ಬಣ್ಣದಲ್ಲಿ ಗೋಚರಿಸುತ್ತದೆ.