ಮೂರು ವರ್ಷವಾಯ್ತು ರಾಜ್ಯದಲ್ಲಿ ಜಿಲ್ಲಾಪಂಚಾಯತ್ ಚುನಾವಣೆ 2025 ಕ್ಕೆ ಅಭ್ಯರ್ಥಿಗಳ ಅಧಿಕಾರಾವಧಿ ಮುಗಿದಿದೆ. ಇನ್ನೂ ಚುನಾವಣೆ ನಡೆದಿಲ್ಲ; ಹಲವಾರು ಕಾರಣಗಳಿಂದ ಅದನ್ನು ಮುಂದೂಡುತ್ತಲೇ ಬಂದಿತ್ತು. ಆದರೆ ಕೊನೆಗೂ ಜಿಲ್ಲಾಪಂಚಾಯತ್ ಚುನಾವಣೆ 2025 ನ್ನು ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೈಕೋರ್ಟ್ಗೆ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದ್ದು, ಅಡ್ವೋಕೇಟ್ ಜನರಲ್ ಶಶಿಕಿರಣ್ ಅವರು ಮೇ ತಿಂಗಳ ಬಳಿಕ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ಗಳಿಗೆ ಚುನಾವಣೆಯನ್ನು ನಡೆಸುವುದಾಗಿ ಹೈಕೋರ್ಟ್ಗೆ ತಿಳಿಸಿದ್ದಾರೆ. ಈ ಪ್ರಕಾರ ನೋಡಿದರೆ, ಜೂನ್, ಜುಲೈ ತಿಂಗಳಲ್ಲಿ ತಾಲ್ಲೂಕು ಹಾಗೂ ಜಿಲ್ಲಾಪಂಚಾಯತ್ ಚುನಾವಣೆ ನಡೆಯುವುದು ಬಹುತೇಕ ಫಿಕ್ಸ್ ಆಗಿದೆ. ಅಂದರೆ, ಮೂರು ವರ್ಷಗಳಿಂದ ಹಿಡಿದಿದ್ದ ಗ್ರಹಣ ಬಹುತೇಕ ಬಿಟ್ಟಂತಾಗಿದೆ.
ಅಂದಹಾಗೆ, ರಾಜ್ಯದಲ್ಲಿ 175 ತಾಲ್ಲೂಕು ಪಂಚಾಯತ್ಗಳು ಮತ್ತು 30 ಜಿಲ್ಲಾಪಂಚಾಯತ್ಗಳಿವೆ. 175 ತಾಲ್ಲೂಕು ಪಂಚಾಯತ್ಗಳಿಂದ 3884 ಸದಸ್ಯರು ಆಯ್ಕೆಯಾಗಬೇಕಾಗಿದೆ, ಮತ್ತು 30 ಜಿಲ್ಲಾಪಂಚಾಯತ್ಗಳಿಂದ 1080 ಸದಸ್ಯರು ಆಯ್ಕೆಯಾಗಬೇಕಾಗಿದೆ. 2016ರಲ್ಲಿ ಚುನಾವಣೆ ನಡೆದಿತ್ತು, ಆದರೆ 2021ಕ್ಕೆ ಜಿಲ್ಲಾಪಂಚಾಯತ್ ಚುನಾವಣೆ 2025ಗೆ ಅಧಿಕಾರಾವಧಿ ಮುಗಿದಿದ್ದರೂ ಇನ್ನೂ ಚುನಾವಣೆಯು ನಡೆದಿಲ್ಲ. ಈಗೀಗ ನ್ಯಾಯಾಂಗ ನಿಂದನೆ ಕೇಸ್ ಒಂದರ ಅರ್ಜಿ ವಿಚಾರಣೆ ವೇಳೆ, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿಯವರು ಸರ್ಕಾರದ ಪರವಾಗಿ ಕೋರ್ಟ್ ಮುಂದೆ ಮೇ ತಿಂಗಳ ನಂತರ ಚುನಾವಣೆ ನಡೆಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆ, ಬಹುತೇಕ ಮೇ ನಂತರ ಜಿಲ್ಲೆಯ ಹಾಗೂ ತಾಲ್ಲೂಕು ಪಂಚಾಯತ್ಗಳಲ್ಲಿ ಚುನಾವಣೆ ನಡೆಯಲಿದೆ. ಕಳೆದ ಮೂರೂವರೆ ವರ್ಷದಿಂದ ಅಧಿಕಾರಿಗಳದ್ದೇ ದರ್ಬಾರ್ ಆಗಿದ್ದು, ಅಧಿಕಾರಿಗಳು ಜಿಲ್ಲೆ ಮತ್ತು ತಾಲ್ಲೂಕು ಪಂಚಾಯತ್ಗಳ ನಿರ್ವಹಣೆ ಮಾಡುತ್ತಿದ್ದರು. ಆದರೆ ಇನ್ನು ಆರು ತಿಂಗಳಲ್ಲಿ ಮತ್ತೆ ಚುನಾಯಿತ ಪ್ರತಿನಿಧಿಗಳು ಬರಲಿದ್ದಾರೆ, ಇದಕ್ಕಾಗಿ ಇನ್ನೂ ಸಿದ್ಧತೆ ನಡೆಯಬೇಕಾಗಿದೆ.

ಚುನಾವಣೆ ಅಂದಮೇಲೆ ಝಣಝಣ ಕಾಂಚಾಣದ ಸದ್ದು ಜೋರಾಗಿರುತ್ತದೆ.. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳು ವಿಧಾನಸಭಾ ಚುನಾವಣೆಗಳಷ್ಟೇ ಜಿದ್ದಾಜಿದ್ದಿನಿಂದ ಕೂಡಿರುತ್ತವೆ.. ಎಲ್ಲಾ ಕೋಟಿ ಕುಳಗಳೇ ಇದರಲ್ಲಿ ಅಖಾಡದಲ್ಲಿರುತ್ತಾರೆ.. ಹೀಗಾಗಿ ಈ ಚುನಾವಣೆಗಳಲ್ಲೂ ಹಣ, ಹೆಂಡ ನೀರಿನಂತೆ ಹರಿಯುತ್ತದೆ.. ಕಳೆದ ಮೂರು ವರ್ಷಗಳಿಂದ ಚುನಾವಣೆಗಾಗಿ ಸಾವಿರಾರು ಆಕಾಂಕ್ಷಿಗಳು ಕಾಯುತ್ತಿದ್ದಾರೆ.. ಇದೀಗ ಸರ್ಕಾರವೇ ಚುನಾವಣೆ ಬಗ್ಗೆ ಸ್ಪಷ್ಟನೆ ಕೊಟ್ಟಿರುವುದರಿಂದ ಇನ್ನ ಮೇಲೆ ಲಾಬಿ ಶುರುವಾಗಲಿದೆ.. ಎಲ್ಲಾ ಪಕ್ಷಗಳಲ್ಲೂ ಟಿಕೆಟ್ ಹಾಗೂ ಮೀಸಲಾತಿಗಾಗಿ ದೊಡ್ಡ ಲಾಬಿ ಶುರುವಾಗಲಿದೆ.. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಕ್ಷೇತ್ರಗಳಿಗೆ ಮೀಸಲಾತಿ ನೀಡಲಾಗುತ್ತದೆ.. ಹೀಗಾಗಿ ಆಕಾಂಕ್ಷಿಗಳು ತಮಗೆ ಬೇಕಾದ ಮೀಸಲಾತಿ ಹಾಕಿಸಿಕೊಂಡು ಬರೋದಕ್ಕೂ ಲಾಬಿ ಮಾಡುತ್ತಾರೆ.. ಹೀಗಾಗಿ ಇನ್ಮೇಲೆ ತಾಲ್ಲೂಕು ಹಾಗೂ ಜಿಲ್ಲಾ ಪಂಚಾತ್ ಚುನಾವಣೆಗಳಿಗಾಗಿ ರಾಜಕಾರಣಿಗಳು ಸನ್ನದ್ದರಾಗಲಿದ್ದಾರೆ.. ಹಳ್ಳಿಗಳಲ್ಲಿ ರಾಜಕೀಯ ಇನ್ಮೇಲೆ ಜೋರಾಗಲಿದೆ.. ಎಲ್ಲೆಡೆ ಇದೇ ಚರ್ಚೆಗಳು ನಡೆಯಲಿವೆ..

ಗ್ರಾಮ ಪಂಚಾಯತ್ ಚುನಾವಣೆಯಲ್ಲೇ ಒಬ್ಬೊಬ್ಬರು 20 ಲಕ್ಷ ರೂಪಾಯಿಯವರೆಗೂ ಖರ್ಚು ಮಾಡಲಿದ್ದಾರೆ.. ಇನ್ನು ತಾಲ್ಲೂಕು ಪಂಚಾಯತ್ ಚುನಾವಣೆಯಾದರೆ ಒಬ್ಬ ಅಭ್ಯರ್ಥಿ ಕನಿಷ್ಠ ಎಂದರೂ ಐವತ್ತು ಲಕ್ಷ ರೂಪಾಯಿ ಖರ್ಚು ಮಾಡಲಿದ್ದಾರೆ.. ಹೀಗಾಗಿ ಲಕ್ಷ ಲಕ್ಷ ಹಣ ಖರ್ಚು ಮಾಡುವ ತಾಕತ್ತು ಇರುವವರೇ ಇಲ್ಲಿ ಗೆಲ್ಲೋದು.. ವಿಧಾನಸಭಾ ಚುನಾವಣೆಯಂತೆಯೇ ಇಲ್ಲಿಯೂ ಪ್ರತಿ ಮತದಾರನಿಗೂ ಹಣ ಹಂಚಲಾಗುತ್ತದೆ.. ಹೀಗೆ ಒಟ್ಟು 3884 ತಾಲ್ಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ತಲಾ ಮೂವರು ಅಭ್ಯರ್ಥಿಗಳು ತಲಾ 50 ಲಕ್ಷ ಖರ್ಚು ಮಾಡಿದರೆ ಬರೋಬ್ಬರಿ 58 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ ಎಂದು ಅಂದಾಜಿದೆ. ಇನ್ನು ಜಿಲ್ಲಾ ಪಂಚಾಯತ್ ಚುನಾವಣೆಗೆ ಒಬ್ಬೊಬ್ಬರ ಖರ್ಚು ಕೋಟಿ ದಾಟುತ್ತದೆ ಎಂದು ಅಂದಾಜಿಸಲಾಗುತ್ತದೆ.. ರಾಜ್ಯದಲ್ಲಿ ಒಟ್ಟು 1080 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿವೆ.. ಒಂದು ಕ್ಷೇತ್ರದಿಂದ ಮೂವರು ಪ್ರಮುಖವಾಗಿ ಸ್ಪರ್ಧೆ ಮಾಡಿದರೂ ಒಟ್ಟು ಅಭ್ಯರ್ಥಿಗಳ ಸಂಖ್ಯೆ 3240 ಆಗುತ್ತದೆ.. ಅಂದರೆ ಒಬ್ಬೊಬ್ಬರು ಒಂದೊಂದು ಕೋಟಿ ರೂಪಾಯಿ ಖರ್ಚು ಮಾಡಿದರೂ ಬರೋಬ್ಬರಿ 3240 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ.. ಇದರ ಜೊತೆಗೆ ಪಕ್ಷೇತರರು ಕೂಡಾ ಖರ್ಚು ಮಾಡಲಿದ್ದು, ಈ ಚುನಾವಣೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಹರಿದಾಡಲಿದೆ.
ಚುನಾವಣೆಯಲ್ಲಿ ಮತದಾರರಿಗೆ ಆಮಿಷ ಒಡ್ಡುವುದು, ಹಣ ಹಂಚುವುದು ಅಪರಾಧ. ಆದ್ರೆ ಯಾರೂ ಕೂಡಾ ಕಾನೂನು ಪಾಲನೆ ಮಾಡೋದಿಲ್ಲ.. ಎಷ್ಟೇ ಬಿಗಿಯಾಗಿ ಚುನಾವಣೆ ನಡೆಸಿದರೂ ಹಣ ಹಾಗೂ ಹೆಂಡದ ಹಂಚಿಕೆ ಆಗೇ ಆಗುತ್ತದೆ..