ಡಾ. ರಾಜ್ಕುಮಾರ್ ಮನೆಯ ಕುಡಿ ಯುವರಾಜ್ ಕುಮಾರ್ ಅವರ ಸಿನಿಮಾ ಒಂದು ಸೆಟ್ಟೇರುತ್ತಿದೆ. ಹೊಂಬಾಳೆ ಫಿಲ್ಮಗ್ಸ್ ಅನೌನ್ಸ್ ಮಾಡಿರುವ ಈ ಸಿನಿಮಾಗೆ ಈ ಅಡಿಷನ್ ನಡೆಸಲಾಗುತ್ತಿದೆ. ಒಂದು ವೇಳೆ ನಿಮಗೂ ಆಸಕ್ತಿ ಇದ್ದರೆ ನೀವು ಇದರಲ್ಲಿ ಭಾಗವಹಿಸಬಹುದು. ಚಿತ್ರರಂಗದಲ್ಲಿ ಹೆಸರು ಗಳಿಸಬೇಕು, ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂಬ ಆಸೆ ಇರುವವರಿಗೆ ಸಂತೋಷ್ ಆನಂದ್ ರಾಮ್ ಹಾಗೂ ಯುವ ರಾಜ್ಕುಮಾರ್ ಕಾಂಬಿನೇಶನ್ನಲ್ಲಿ ಬರುತ್ತಿರುವ ಸಿನಿಮಾ ಉತ್ತಮ ವೇದಿಕೆಯಾಗಿದೆ. ಪುನೀತ್ ರಾಜ್ಕುಮಾರ್ ನಿ*ಧ*ನದ ಬಳಿಕ ಅಪ್ಪು ಉತ್ತರಾಧಿಕಾರಿ ಎಂದೇ ಕರೆಸಿಕೊಳ್ಳುತ್ತಿರುವ ಯುವ ರಾಜ್ಕುಮಾರ್ ಅಭಿನಯಿಸಲಿರುವ ಮೊದಲ ಚಿತ್ರದ ಮೇಲೆ ಅಪ್ಪು ಅಭಿಮಾನಿಗಳು ಕ್ರೇಜ್ ಇಟ್ಟುಕೊಂಡಿದ್ದಾರೆ.

ಚಿತ್ರದ ಬಗ್ಗೆ ಅಪ್ಡೇಟ್ ನೀಡಿ ಎಂದು ಚಿತ್ರತಂಡಕ್ಕೆ ಮನವಿ ಇಟ್ಟಿದ್ದರು. ಸಂತೋಷ್ ಆನಂದ್ರಾಮ್ ನಿರ್ದೇಶದ ಅಡಿಯಲ್ಲಿ ದೊಡ್ಮನೆ ಕುಡಿ ಯುವ ರಾಜ್ಕುಮಾರ್ ಲಾಂಚ್ ಅಗುತ್ತಿದ್ದು, ಈ ಚಿತ್ರವನ್ನು ಹಲವು ದಿನಗಳ ಹಿಂದೆಯೇ ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡಿತ್ತು. ಫೋಟೋಶೂಟ್ ಮಾಡಿಸಿ ಯುವ ರಾಜ್ಕುಮಾರ್ ಲುಕ್ ಹಂಚಿಕೊಂಡಿದ್ದ ಚಿತ್ರತಂಡ ನಂತರದ ದಿನಗಳಲ್ಲಿ ಚಿತ್ರದ ಬಗ್ಗೆ ಹೆಚ್ಚೇನೂ ಮಾಹಿತಿ ನೀಡಿರಲಿಲ್ಲ.
ಚಿತ್ರೀಕರಣವನ್ನು ಶುರು ಮಾಡಲಿದ್ದೇವೆ ಎಂದು ಇತ್ತೀಚೆಗಷ್ಟೆ ಟ್ವೀಟ್ ಮಾಡಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಇದೀಗ ಚಿತ್ರ್ಕಕಾಗಿ ಆಡಿಷನ್ ನಡೆಸುತ್ತಿರುವ ವಿಷಯವನ್ನು ಹಂಚಿಕೊಂಡಿದ್ದು ಚಿತ್ರದಲ್ಲಿ ಅಭಿನಯಿಸಲು ಇಚ್ಛಿಸುವವರಿಗೆ ಸ್ವಾಗತ ಕೋರಿದ್ದಾರೆ. ಇನ್ನು 16ರಿಂದ 25 ವರ್ಷದೊಳಗಿನವರು ಆಡಿಷನ್ನಲ್ಲಿ ಭಾಗವಹಿಸಬಹುದು ಎಂಬುದನ್ನೂ ಸಹ ತಿಳಿಸಲಾಗಿದೆ.
ಮಂಗಳೂರು ನಗರದ ಕೂಟಕ್ಕಳ ಆಡಿಟೋರಿಯಂನಲ್ಲಿ ನವೆಂಬರ್ 26ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಡಿಷನ್ ನಡೆಯಲಿದ್ದು, ಈ ಚಿತ್ರತಂಡದ ಜತೆ ಕೆಲಸ ಮಾಡಬೇಕು ಎನ್ನುವ ಆಸೆ ಇರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಹುದಾಗಿದೆ.