ರಾಕಿಂಗ್ ಸ್ಟಾರ್ ಯಶ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಕೆಜಿಎಫ್1 ಹಾಗೂ ಕೆಜಿಎಫ್2 ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಇವರಿಗೆ ಹೆಸರು ತಂದುಕೊಟ್ಟಿದೆ ಎಂದು ನಮಗೆಲ್ಲಾ ಗೊತ್ತೇ ಇದೆ. ಯಶ್ ಅವರು ಈಗ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ರಾಮಾಯಣ ಸಿನಿಮಾ ಕೂಡ ನಡೆಯುತ್ತಿದೆ. ಇದೆಲ್ಲವೂ ಒಂದು ಕಡೆಯಾದರೆ, ಯಶ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಮನೆಯವರ ಜೊತೆಗೆ ಮಕ್ಕಳ ಜೊತೆಗೆ ಸಮಯ ಕಳೆಯುತ್ತಾರೆ. ಯಶ್ ಅವರು ಅಪ್ಪ ಅಮ್ಮನಿಗೆ ಆಗಲಿ, ಪತ್ನಿ ಮಕ್ಕಳಿಗೆ ಆಗಲಿ ಯಾವುದಕ್ಕೂ ಕಡಿಮೆ ಮಾಡಿಲ್ಲ. ಆದರೆ ಯಶ್ ಅವರ ತಾಯಿ ಪುಷ್ಪ ಅವರು ಮಾತ್ರ ಪ್ಯಾನ್ ಇಂಡಿಯಾ ಸ್ಟಾರ್ ಹೀರೋ ತಾಯಿ ಆಗಿದ್ದರೂ ಸಹ ಇವತ್ತಿಗೂ ಸರಳ ಜೀವನ ನಡೆಸುತ್ತಿದ್ದಾರೆ.. ಪುಷ್ಪ ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಹಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದು, ಸೊಸೆಯ ಬಗ್ಗೆ ಹೇಳಿರುವ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿಕ್ಕರೆ ಇಂಥ ಅತ್ತೆ ಸಿಗಬೇಕು ಅಂತಿದ್ದಾರೆ ನೆಟ್ಟಿಗರು.
ನಟ ಯಶ್ ಅವರ ತಾಯಿ ಪುಷ್ಪ, ತಂದೆ ಅರುಣ್ ಕುಮಾರ್ ಅವರು. ಇವರಿಬ್ಬರು ಮೂಲತಃ ಹಾಸನದವರೇ ಆದರು, ಯಶ್ ಅವರು ಚಿಕ್ಕವರಿದ್ದಾಗ ಇವರೆಲ್ಲರೂ ಇದ್ದಿದ್ದು ಮೈಸೂರಿನಲ್ಲಿ. ಅರುಣ್ ಕುಮಾರ್ ಅವರು ಕೆ.ಎಸ್.ಆರ್.ಟಿ.ಸಿ ಬಸ್ ಡ್ರೈವರ್ ಆಗಿದ್ದವರು. ಮಕ್ಕಳನ್ನು ಕಷ್ಟಪಟ್ಟು ಬೆಳೆಸಿದರು, ಇಂದು ಆ ಮಕ್ಕಳು ಇವರನ್ನು ಬಹಳ ಸಂತೋಷದಿಂದ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಯಶ್ ಅವರ ತಂದೆ ಅರುಣ್ ಕುಮಾರ್ ಅವರು ಮಗ ಸ್ಟಾರ್ ಹೀರೋ ಆಗಿದ್ದರು ಸಹ, ತಾವು ಕೆ.ಎಸ್.ಆರ್.ಟಿ.ಸಿ ಯಲ್ಲಿ ಕೆಲಸಕ್ಕೆ ಹೋಗೋದನ್ನ ನಿಲ್ಲಿಸಿರಲಿಲ್ಲ. ರಿಟೈರ್ ಆಗುವವರೆಗು ಕೆಲಸಕ್ಕೆ ಹೋಗುತ್ತಿದ್ದರು. ಹೀಗೆ ಸ್ವಾಭಿಮಾನಿ ಜೀವನ ಸಾಗಿಸಿ, ಎಲ್ಲರಿಗೂ ಮಾದರಿ ಆಗಿರುವವರು ಯಶ್ ಅವರ ತಂದೆ ತಾಯಿ. ಈಗಲೂ ಸಹ ಇವರು ಹಾಸನದ ಫಾರ್ಮ್ ಹೌಸ್ ನಲ್ಲಿ, ಸರಳವಾಗಿ ಜೀವನ ಸಾಗಿಸುತ್ತಿದ್ದಾರೆ. ಒಬ್ಬ ಸ್ಟಾರ್ ಹೀರೋ ತಂದೆ ತಾಯಿಯ ಹಾಗೆ ಇವರಿಬ್ಬರು ಇಲ್ಲ.

ಇನ್ನು ಯಶ್ ಅವರ ತಾಯಿಯ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಹಲವು ಸಂದರ್ಶನಗಳಲ್ಲಿ ಪುಷ್ಪ ಅವರು ಮಾತನಾಡಿದ್ದಾರೆ, ಮಗ ಅಂದರೆ ಎಲ್ಲರಿಗೂ ಪ್ರೀತಿ ಇದ್ದೇ ಇರುತ್ತದೆ. ಆಸರೆ ಸೊಸೆ ಬಂದಮೇಲೆ ಇದು ಬದಲಾಗುವುದು ಇದೆ. ಅತ್ತೆ ಸೊಸೆ ಅಂದರೆ ಅಲ್ಲಿ ಸ್ವಲ್ಪ ಮನಸ್ತಾಪ, ಜಗಳ ಇದೆಲ್ಲವೂ ನಡೆಯುವುದು ಸಹಜ. ಆದರೆ ಪುಷ್ಪ ಅವರು ಮತ್ತು ರಾಧಿಕಾ ಪಂಡಿತ್ ಅವರ ವಿಚಾರದಲ್ಲಿ ಇದ್ಯಾವುದು ಇಲ್ಲವೇ ಇಲ್ಲ. ಸೊಸೆಯ ಬಗ್ಗೆ ಪುಷ್ಪ ಅವರಿಗೆ ತುಂಬಾ ಪ್ರೀತಿ ಇದೆ. ಇನ್ನು ರಾಧಿಕಾ ಅವರಿಗೂ ಅತ್ತೆ ಅಂದ್ರೆ ಅಷ್ಟೇ ಗೌರವ ಇದೆ. ಮದುವೆ ಅಗುವುದಕ್ಕಿಂತ ಮೊದಲು ಕೂಡ ಯಶ್ ಅವರ ತಾಯಿಗೆ ರಾಧಿಕಾ ಪಂಡಿತ್ ಅಂದ್ರೆ ತುಂಬಾ ಇಷ್ಟ. ಬಹಳ ಚೆನ್ನಾಗಿ ಮಾತನಾಡಿಸುತ್ತಾ, ನೋಡಿಕೊಳ್ಳುತ್ತಾ ಇದ್ದರು. ಮದುವೆಯಾದ ಮೇಲೆ ಕೂಡ ಅದೇ ಪ್ರೀತಿ, ಬಾಂಧವ್ಯ ಮುಂದುವರೆದಿದೆ. ಸೊಸೆಯನ್ನು ಮಗಳ ಹಾಗೆ ನೋಡಿಕೊಳ್ಳುತ್ತಾರೆ, ಪ್ರೀತಿ ಮಾಡುತ್ತಾರೆ, ಯಶ್ ಅವರ ತಾಯಿ ಪುಷ್ಪ.
ಇನ್ನು ರಾಧಿಕಾ ಪಂಡಿತ್ ಅವರಿಗೂ ಅಷ್ಟೇ, ಯಶ್ ಅವರ ತಂದೆ ತಾಯಿ ಅಂದ್ರೆ ತುಂಬಾ ಇಷ್ಟ. ಅತ್ತೆ ಮಾವನನ್ನು ಗೌರವದಿಂದ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅತ್ತೆ ಸೊಸೆ ಅಂದ್ರೆ ಅವರ ನಡುವೆ ಜಗಳ ಬರೋದು ಕಾಮನ್, ಆದರೆ ಇವರಿಬ್ಬರ ನಡುವೆ ಅದ್ಯಾವುದು ಕೂಡ ಇಲ್ಲ. ಅಷ್ಟು ಚೆನ್ನಾಗಿದೆ ಅತ್ತೆ ಸೊಸೆ ಸಂಬಂಧ. ಇನ್ನು ಇತ್ತೀಚೆಗೆ ಯಶ್ ಅವರ ತಾಯಿ ಪುಷ್ಪ ಅವರು ರಾಧಿಕಾ ಪಂಡಿತ್ ಅವರು ಮನೆ ಕೆಲಸ ಮಾಡುವ ವಿಷಯದ ಬಗ್ಗೆ ಮಾತನಾಡಿದ್ದು, ಸೊಸೆಗೆ ಸಪೋರ್ಟ್ ಮಾಡಿ ಮಾತನಾಡಿರುವ ಅತ್ತೆಯ ಬಗ್ಗೆ ನೆಟ್ಟಿಗರ ಪೈಕಿ ಪ್ರಶಂಸೆ ಜೋರಾಗಿದೆ. ಅಷ್ಟಕ್ಕೂ ಪುಷ್ಪ ಅವರು ಹೇಳಿರೋದು ಏನು ಎಂದರೆ.. “ನಮ್ಮ ಕುಟುಂಬದಲ್ಲಿ ಸೊಸೆ ಕಷ್ಟಪಡೋದು, ಕೆಲಸ ಮಾಡೋದು ನನಗೆ ಇಷ್ಟವಿಲ್ಲ. ನಾವೆಲ್ಲರೂ ಕಷ್ಟಪಟ್ಟಿರೋದು ಸಾಕು, ಅವರುಗಳು ಕಷ್ಟಪಡೋದು ಬೇಡ. ರಾಧಿಕಾ ಕೆಲಸ ಮಾಡೋದು ನನಗೆ ಇಷ್ಟ ಇಲ್ಲ. ಸೊಸೆ ಯಾಕೆ ಮನೆಕೆಲಸ ಮಾಡಬೇಕು?

ನನ್ನ ಮಗಳು ನಂದಿನಿಗೆ ಸ್ವಲ್ಪ ಆದರೂ ಕೆಲಸ ಮಾಡಿ ಅಭ್ಯಾಸ ಇದೆ, ಹಾಗಿದ್ದರೂ ಅವಳು ಕೆಲಸ ಮಾಡೋಕೆ ನಾವು ಬಿಡೋದಿಲ್ಲ. ಇನ್ನು ಸೊಸೆ ರಾಧಿಕಾ, ಪಾಪ ಯಾವತ್ತಿಗೂ ಕೆಲಸ ಮಾಡಿದವಳಲ್ಲ. ಮೊದಲೆಲ್ಲಾ ರಾಧಿಕಾ ಶೂಟಿಂಗ್ ಗಳಲ್ಲಿ ಯಾವಾಗಲೂ ಬ್ಯುಸಿ ಇರ್ತೀದ್ಲು, ಕೆಲಸ ಮಾಡೋದಕ್ಕೆ ಟೈಮ್ ಕೂಡ ಸಿಗ್ತಿರಲಿಲ್ಲ. ಆದರೆ ರಾಧಿಕಾಗೆ ಕೆಲಸ ಮಾಡೋದು ಅಂದ್ರೆ ತುಂಬಾ ಇಷ್ಟ. ಈಗ ಯಶ್ ಗೆ ತನ್ನಿಂದ ಆಗುವಷ್ಟು ಎಲ್ಲಾ ಕೆಲಸಗಳನ್ನ ಮಾಡಿಕೊಡ್ತಾಳೆ. ಇದೆಲ್ಲವೂ ಸಂತೋಷ, ಜೊತೆಗೆ ನನ್ನ ಸೊಸೆ ರಾಧಿಕಾ ಥರ ಆಕ್ಟ್ ಮಾಡೋದಕ್ಕೆ ಸಹ ಯಾರಿಂದಲೂ ಸಾಧ್ಯವಿಲ್ಲ..” ಎಂದು ಸೊಸೆ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ ಯಶ್ ಅವರ ತಾಯಿ ಪುಷ್ಪ. ಒಬ್ಬ ಸ್ಟಾರ್ ಹೀರೋ ತಾಯಿ, ತನ್ನ ಸೊಸೆ ಕೂಡ ಸ್ಟಾರ್ ಹೀರೋಯಿನ್ ಆಗಿದ್ದಾಗ, ಆಕೆಯ ಬಗ್ಗೆ ಈ ರೀತಿ ಹೇಳುವುದು, ನಿಜಕ್ಕೂ ಮೆಚ್ಚಿಕೊಳ್ಳುವಂಥ ವಿಷಯ. ಪುಷ್ಪ ಅವರಂಥ ಅತ್ತೆ ಎಲ್ಲರಿಗೂ ಸಿಗಬೇಕು.
ಇನ್ನು ಪುಷ್ಪ ಅವರು ಹೇಳುವ ಹಾಗೆ, ಅವರು ಯಾವತ್ತಿಗೂ ಕೂಡ ಮನೆಯಲ್ಲಿ ಕೆಲಸದವರನ್ನು ಇಟ್ಟುಕೊಂಡವರಲ್ಲವಂತೆ. ಅವರ ಕೆಲಸವನ್ನು ಅವರೇ ಮಾಡಿಕೊಳ್ಳಬೇಕು ಅನ್ನೋ ಭಾವನೆ, ಸ್ವಾಭಿಮಾನ ಅವರದ್ದು. ಮೊದಲಿನಿಂದಲೂ ತಮ್ಮ ಕೆಲಸಗಳನ್ನ ತಾವೇ ಮಾಡಿಕೊಂಡು ಬಂದವರು, ಯಶ್ ಅವರು 10 ಸಿನಿಮಾಗಳನ್ನು ಮಾಡಿದ ಬಳಿಕ, ಬೆಂಗಳೂರಿನ ಮನೆಗೆ ಕೆಲಸದವರನ್ನು ಇಟ್ಟುಕೊಂಡಿದ್ದರಂತೆ. ಆದರೆ ಈಗ ಯಶ್ ಅವರ ತಂದೆ ತಾಯಿ ಇಬ್ಬರು ಕೂಡ ಹಾಸನದಲ್ಲಿರುವ ಫಾರ್ಮ್ ಹೌಸ್ ನಲ್ಲಿದ್ದಾರೆ. ಇಬ್ಬರು ಕೃಷಿ ಕೆಲಸ ನೋಡಿಕೊಳ್ಳುತ್ತಿದ್ದಾರೆ. ಹಾಸನದ ಫಾರ್ಮ್ ಹೌಸ್ ನಲ್ಲಿ, ಯಾವುದೇ ಕೆಲಸಗಾರರನ್ನು ಇಟ್ಟುಕೊಂಡಿಲ್ಲವಂತೆ. ಶಕ್ತಿ ಇರೋವರೆಗೂ ನಮ್ಮ ಕೆಲಸಗಳನ್ನ ನಾವೇ ಮಾಡಿಕೊಳ್ಳಬೇಕು, ಮುಂದೆ, ಆಗದೇ ಇದ್ದ ಕಾಲಕ್ಕೆ ನೋಡೋಣ ಅನ್ನುತ್ತಾರ್ರ್ ಪುಷ್ಪ ಅವರು.

ಇನ್ನು ಮಗ ಯಶ್ ಕೂಡ ಇದೆ ವಿಷಯಕ್ಕೆ ಜಗಳ ಆಡುತ್ತಾರಂತೆ. ಯಶ್ ಅವರ ತಂದೆ ತಾಯಿ ಇಬ್ಬರು ಸಹ ಒಬ್ಬ ಸ್ಟಾರ್ ಹೀರೋ ಮನೆಯವರ ಹಾಗೆ ಇರದೇ, ಬಹಳ ಸರಳವಾಗಿ ಬದುಕುತ್ತಿದ್ದಾರೆ. ಇವರಿಬ್ಬರಿಗು ಕೃಷಿ ಮಾಡಬೇಕು ಎಂದು ತುಂಬಾ ಆಸೆ ಇತ್ತಂತೆ, ಆಗ ಅದೆಲ್ಲವನ್ನು ಈಡೇರಿಸಿಕೊಳ್ಳಲು ಸಾಧ್ಯ ಆಗಲಿಲ್ಲ. ಆದರೆ ಈಗ ಕೃಷಿಕರ ಹಾಗೆ, ಸರಳ ಸಾಮಾನ್ಯ ಜೀವನ ನಡೆಸುತ್ತಾ, ಸಂತೋಷವಾಗಿದ್ದಾರೆ. ಯಶ್ ಅವರ ತಂದೆ ತಾಯಿ ನಿಜಕ್ಕೂ ಎಲ್ಲರಿಗೂ ಮಾದರಿ ಎಂದು ಹೇಳಿದರು ಸಹ ತಪ್ಪಲ್ಲ. ಇನ್ನು ಯಶ್ ಅವರು ಸಹ ತಂದೆ ತಾಯಿಯ ಹಾಗೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ, ಜೊತೆಗೆ ಸಿನಿಮಾಗಳ ಮೂಲಕ, ಜನರಿಗೆ ಒಳ್ಳೆಯ ಸಂದೇಶ ನೀಡುತ್ತಿದ್ದಾರೆ. ಎಲ್ಲರಿಗೂ ಮಾದರಿ ಆಗಿದ್ದಾರೆ. ಎಲ್ಲರಿಗು ಇಂಥ ಮಕ್ಕಳೇ ಜನಿಸಲಿ..