ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಈ ವಾರದ ವೀಕೆಂಡ್ ಎಪಿಸೋಡ್ಸ್ ಭರ್ಜರಿಯಾಗಿ ನಡೆಯುತ್ತಿದೆ. ನಿನ್ನೆಯ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಮನೆಯ ಸ್ಪರ್ಧಿಗಳಿಗೆ ಕೆಲವು ಉತ್ತಮವಾದ ಸಲಹೆಗಳನ್ನು ನೀಡಿದರು. ಯಾರು ಏನು ತಪ್ಪು ಮಾಡುತ್ತಿದ್ದಾರೆ ಎನ್ನುವುದನ್ನು ತೋರಿಸಿಕೊಟ್ಟರು. ಇದೆಲ್ಲವೂ ಸ್ಪರ್ಧಿಗಳಿಗೆ ಇನ್ನಷ್ಟು ದಿವಸ ಮನೆಯಲ್ಲಿರಲು ಬೇಕಾದ ಉತ್ತಮವಾದ ಸಲಹೆ ಆಗಿದೆ. ಇನ್ನು ಈ ವಾರ ಮನೆಯಿಂದ ಹೊರಬರುವ ಸ್ಪರ್ಧಿ ಯಾರು ಎನ್ನುವ ಕುತೂಹಲವಿತ್ತು, ಅದಕ್ಕೀಗ ಉತ್ತರ ಸಿಕ್ಕಿದ್ದು, ಧರ್ಮ ಕೀರ್ತಿ ರಾಜ್ ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.

ಹೌದು, ಈಗಾಗಲೇ ಎಲ್ಲಾ ಸ್ಪರ್ಧಿಗಳು ಅರ್ಧ ಸೀಸನ್ ಮುಗಿಸಿದ್ದಾರೆ. 50 ದಿನಗಳ ಸ್ಪರ್ಧಿಗಳ ಪ್ರಯಾಣ ಮುಗಿದಿದೆ. ಒಂದಷ್ಟು ಜನರು ಈಗಾಗಲೇ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದು, ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಗಳು ಮನೆಯೊಳಗೆ ಬಂದಿದ್ದಾರೆ. ಅವರುಗಳ ಪರ್ಫಾರ್ಮೆನ್ಸ್ ಕೂಡ ಉತ್ತಮವಾಗಿದೆ ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಬೇರೆ ಸ್ಪರ್ಧಿಗಳಲ್ಲಿ ಕೆಲವರು ಉತ್ತಮ ಅಭಿಪ್ರಾಯ ಹೊಂದಿದ್ದರೆ, ಇನ್ನು ಕೆಲವರು ಉತ್ತಮವಾದ ಪ್ರದರ್ಶನ ಕೊಡುತ್ತಿಲ್ಲ. ಇವರು ಮುಂದಿನ ದಿನಗಳಲ್ಲೂ ಇದನ್ನೇ ಮುಂದುವರೆಸಿಕೊಂಡು ಹೋದರೆ, ಎಲಿಮಿನೇಟ್ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ.
ಇನ್ನು ಕಳೆದ ವಾರ ಒಳ್ಳೆಯ ಮನಸ್ಸಿನ ಹುಡುಗಿ, ಯಾರ ಜೊತೆಗೂ ಜಗಳ ಮಾಡಿಕೊಳ್ಳದೇ ತಾನಾಯಿತು, ತನ್ನ ಪಾಡಾಯ್ತು ಎಂದು ಇದ್ದ ಅನುಷಾ ರೈ ಅವರು ಎಲಿಮಿನೇಟ್ ಆಗಿ ಹೊರಬಂದರು. ಇನ್ನು ಈ ವಾರ ಅನುಷಾ ಅವರ ಬೆಸ್ಟ್ ಫ್ರೆಂಡ್ ಧರ್ಮ ಕೀರ್ತಿ ರಾಜ್ ಅವರು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಈ ವಿಚಾರ ಈಗ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾಗಳ ಮೂಲಕ ಧರ್ಮ ಕೀರ್ತಿರಾಜ್ ಅವರು ಎಲಿಮಿನೇಟ್ ಆಗಿರುವ ವಿಚಾರ ಎಲ್ಲೆಡೆ ಸದ್ದು ಮಾಡುತ್ತಿದೆ. ಧರ್ಮ ಅವರು ಹೆಸರಿಗೆ ತಕ್ಕ ಹಾಗೆ ಬಹಳ ಒಳ್ಳೆಯ ಮನಸ್ಸಿನ ವ್ಯಕ್ತಿ. ಇವರು ಇಷ್ಟು ಬೇಗ ಎಲಿಮಿನೇಟ್ ಆಗಬಹುದು ಎಂದು ಯಾರು ಊಹಿಸಿರಲಿಲ್ಲ.

ಅದರೆ ಧರ್ಮ ಅವರು ಎಲಿಮಿನೇಟ್ ಆಗಿದ್ದಾರೆ, ಇದಕ್ಕೆ ಕಾರಣ ಧರ್ಮ ಅವರ ಅತಿಯಾದ ಒಳ್ಳೇತನ ಎಂದು ಹೇಳಿದರೆ ತಪ್ಪಲ್ಲ. ಯಾಕೆಂದರೆ ಧರ್ಮ ಅವರು ಒಳ್ಳೆಯ ಸ್ಪರ್ಧಿಯೇ ಆದರು ಸಹ, ಹೆಚ್ಚಾಗಿ ಸೈಲೆಂಟ್ ಆಗಿಯೇ ಇರುತ್ತಿದ್ದರು, ಯಾರ ವಿಷಯಕ್ಕೂ ಹೋಗುತ್ತಿರಲಿಲ್ಲ. ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲು ಇಲ್ಲ. ಸುದೀಪ್ ಅವರು ಸಹ ಈ ಬಗ್ಗೆ ಧರ್ಮ ಅವರಿಗೆ ಕಿವಿಮಾತು ಹೇಳಿದ್ದರು, ಆದರೆ ಯಾಕೋ ಈ ಅತಿಯಾದ ಒಳ್ಳೇತನ ಧರ್ಮ ಅವರಿಗೆ ಸಹಾಯ ಮಾಡಲಿಲ್ಲ. ಈ ವಾರ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಧರ್ಮ ಅವರು ಕನ್ನಡದ ಹಿರಿಯನಟ ಕೀರ್ತಿ ರಾಜ್ ಅವರ ಮಗ. ನವಗ್ರಹ ಸಿನಿಮಾ ಮೂಲಕ ಹೀರೋ ಆದರು.
ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದರು ಸಹ ಹೇಳಿಕೊಳ್ಳುವಂಥ ಯಶಸ್ಸು ಸಿಗಲಿಲ್ಲ. ಅಂಥ ಸಮಯದಲ್ಲಿ ಇವರಿಗೆ ಬಿಗ್ ಬಾಸ್ ಶೋ ಒಳ್ಳೆಯ ಅವಕಾಶ ಆಗಿತ್ತು. ಆದರೆ ಯಾಕೋ ಇದು ಕೂಡ ಅವರ ಕೈ ಹಿಡಿಯಲಿಲ್ಲ. ಈ ವಾರ ಧರ್ಮ ಕೀರ್ತಿರಾಜ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ಇವರಿಗೆ ಸಿಕ್ಕಿರುವ ಸಂಭಾವನೆ ಎಷ್ಟು ಎಂದು ನೋಡುವುದಾದರೆ, ಒಂದು ವಾರಕ್ಕೆ 50 ಸಾವಿರದಂತೆ, 8 ವಾರಕ್ಕೆ 4 ಲಕ್ಷ ಸಿಕ್ಕಿದೆ ಜೊತೆಗೆ 2 ಲಕ್ಷ ಬೆಲೆ ಬಾಳುವ ಗಿಫ್ಟ್ ಕೂಡ ಸಿಕ್ಕಿದೆ. ಹೊರಬಂದ ನಂತರ ಧರ್ಮ ಅವರು ಸಿನಿಮಾಗಳಲ್ಲಿ ತೊಡಗಿಕೊಳ್ಳಲಿದ್ದಾರೆ.