ರಿಷಬ್ ಶೆಟ್ಟಿ ಸಿನಿಮಾ ‘ಕಾಂತಾರ’ ದೇಶಾದ್ಯಂತ ಅಷ್ಟೇ ಅಲ್ಲ, ವಿಶ್ವದಲ್ಲಿ ಎಲ್ಲೆಲ್ಲಿ ರಿಲೀಸ್ ಆಗಿದೆಯೋ ಅಲ್ಲಿ ಎಲ್ಲಾ ಕಡೆ ಫೇಮಸ್ ಆಗಿದೆ. ಕಾಂತಾರ’ ಸಿನಿಮಾವನ್ನು ಬಿಡುಗಡೆಯಾದ ಎಲ್ಲಾ ಭಾಷೆಯಲ್ಲೂ ಜನರು ನೋಡಿ ಆನಂದಿಸುತ್ತಿದ್ದಾರೆ. ಕನ್ನಡ, ತೆಲುಗು, ಹಿಂದಿ ಭಾಷೆಯಲ್ಲಿ ಸಿನಿಮಾ ತುಂಬಾನೇ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ಇದೀಗ ಕಾಂತಾರ’ ಅಭಿಮಾನಿಗಳನ್ನು ಖುಷಿ ಪಡಿಸುವ ಸುದ್ದಿಯೊಂದು ಹರಿದಾಡುತ್ತಿದೆ. ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ‘ಕಾಂತಾರ’ ಸಿನಿಮಾ ನೋಡುತ್ತಾರೆ ಅನ್ನೋ ಚರ್ಚೆ ಕೂಡ ಆಗುತ್ತಿದೆ.
ನರೇಂದ್ರ ಮೋದಿ ನೆವೆಂಬರ್ 14 ರಂದು ‘ಕಾಂತಾರ’ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ. ರಿಷಬ್ ಶೆಟ್ಟಿ ಜೊತೆ ಮೋದಿ ಸಿನಿಮಾ ನೋಡಲು ವೇದಿಕೆ ಸಜ್ಜಾಗಿದೆ ಅನ್ನೋದು ಸದ್ಯದ ಸುದ್ದಿ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಆದರೆ ಇದು ಕೇವಲ ರೂಮರ್ ಎನ್ನಲಾಗಿದೆ. ಯಾರೋ ಬೇಕೆಂದೇ ಸೋಷಿಯಲ್ ಮೀಡಿಯಾದಲ್ಲಿ ಇಂತಹ ಸುದ್ದಿಯನ್ನು ಹರಿಯಬಿಟ್ಟಿದ್ದಾರೆ ಎನ್ನಲಾಗಿದೆ. ಪ್ರಧಾನಿ ಮೋದಿ ಅವರು ಸಿನಿಮಾ ನೋಡುತ್ತಾರೆ ಅನ್ನುವ ಸುದ್ದಿ ಫೇಕ್’ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ.