ಕರುನಾಡ ಚಕ್ರವರ್ತಿ ಡಾ. ಶಿವ ರಾಜ್ ಕುಮಾರ್ ಅಭಿನಯಿಸಿರುವ ಬಹು ನಿರೀಕ್ಷಿತ ಸಿನಿಮಾ ಭೈರತಿ ರಣಗಲ್ ನವೆಂಬರ್ 15ರಂದು ಅಂದರೆ ಶುಕ್ರವಾದ ತೆರೆಕಂಡು ಅದ್ಧೂರಿಯಾಗಿ ಓಪನಿಂಗ್ ಪಡೆದುಕೊಂಡಿದೆ. ಶಿವಣ್ಣ ಅವರ ಸ್ಕ್ರೀನ್ ಪ್ರೆಸೆನ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಭೈರತಿ ರಣಗಲ್ ಮಾಸ್ ಲುಕ್, ಆ ಕಥೆ ಎಲಿವೇಶನ್ ಇದೆಲ್ಲವೂ ಸಹ ಜನರಿಗೆ ತುಂಬಾ ಇಷ್ಟವಾಗಿದ್ದು, ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಎಲ್ಲೆಡೆ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆದರೆ ಇದೆಲ್ಲದರ ನಡುವೆ ಅಭಿಮಾನಿಗಳಿಗೆ ಒಂದು ವಿಷಯದಿಂದ ಬೇಸರ ಆಗಿದೆ.

ಅದು ಏನು ಎಂದರೆ ಭೈರತಿ ರಣಗಲ್ ಸಿನಿಮಾ ಆರಂಭದಲ್ಲಿ ಅಪ್ಪು ಅವರ ಫೋಟೋ ಹಾಕಿಲ್ಲ. ಹೌದು, ಈಗ ನಾವು ಯಾವುದೇ ಕನ್ನಡ ಸಿನಿಮಾ ನೋಡಿದರು ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ಅಪ್ಪು ಅವರ ಫೋಟೋ ನೋಡಬಹುದು. ಆದರೆ ಭೈರತಿ ರಣಗಲ್ ಶಿವಣ್ಣ ಅವರ ಸಿನಿಮಾ, ಈ ಸಿನಿಮಾವನ್ನು ನಿರ್ಮಾಣ ಮಾಡಿರುವುದು ಕೂಡ ಶಿವಣ್ಣ ಅವರ ಪತ್ನಿ ಗೀತಾ ಶಿವ ರಾಜ್ ಕುಮಾರ್. ಹಾಗಾಗಿ ಸಿನಿಮಾದಲ್ಲಿ ಅಪ್ಪು ಅವರ ಒಂದು ಫೋಟೋ ಕೂಡ ಹಾಕಿಲ್ಲ ಎಂದು ಅಭಿಮಾನಿಗಳಿಗೆ ಅಸಮಾಧಾನ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಾಕಷ್ಟು ಜನರ ಈ ವಿಷಯದ ಬಗ್ಗೆ ಪೋಸ್ಟ್ ಮಾಡಿದ್ದರು.
ಹಾಗಾಗಿ ಈ ವಿಚಾರದ ಬಗ್ಗೆ ಕ್ಲಾರಿಟಿ ಸಿಕ್ಕರೆ ಒಳ್ಳೆಯದು ಎಂದು ಒಂದು ಕಾರ್ಯಕ್ರಮದಲ್ಲಿ ಶಿವಣ್ಣ ಅವರನ್ನು ಈ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅಪ್ಪು ಅವರ ಫೋಟೋ ಯಾಕೆ ಹಾಕಿಲ್ಲ ಅನ್ನೋದಕ್ಕೆ ಶಿವಣ್ಣ ಕ್ಲಾರಿಟಿ ಕೊಟ್ಟರೆ ಒಳ್ಳೆಯದು ಎಂದು ಕೇಳಲಾಗಿದೆ. ಅದಕ್ಕೆ ಶಿವಣ್ಣ ಉತ್ತರ ಕೊಟ್ಟಿದ್ದಾರೆ. ಅಪ್ಪು ಇಲ್ಲ ಎಂದು ನಾನು ಭಾವಿಸಿಯೇ ಇಲ್ಲ ಎನ್ನುತ್ತಾರೆ ಶಿವಣ್ಣ. ನನ್ನಲ್ಲಿ ನೀವು ಅಪ್ಪುನ ನೋಡಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಅಭಿಮಾನಿಗಳಗಿ ನಿಮಗೆ ಅಪ್ಪು ಬಗ್ಗೆ ಪ್ರೀತಿ ಇದೆ, ನೀವೆಲ್ಲಾ ಅಪ್ಪು ಅಭಿಮಾನಿ ಆಗೋದಕ್ಕಿಂತ ಮೊದಲೇ ನಾನು ಅಪ್ಪು ಅಭಿಮಾನಿ, ಅವನನ್ನ ಆಗಿಂದಾನು ನೋಡಿದ್ದೀನಿ..

ನನ್ನ ತಮ್ಮ ಅವನು, ನನ್ನ ತಮ್ಮನನ್ನ ಹೇಗೆ ನೋಡ್ಕೋಬೇಕು ಅಂತ ನನಗೆ ಗೊತ್ತಿಲ್ವಾ.. ಅವನು ಇಲ್ಲ ಅಂತ ನಾನು ಅನ್ಕೊಂಡೆ ಇಲ್ಲ, ಫೋಟೋ ಹಾಕಿ ಅಪ್ಪುನ ನಾನು ದೂರ ಮಾಡೋದಿಲ್ಲ ಎಂದು ಶಿವಣ್ಣ ಕ್ಲಾರಿಟಿ ಕೊಟ್ಟಿದ್ದಾರೆ. ಹೌದು, ಈ ವಿಚಾರಕ್ಕೆ ಈಗ ಕ್ಲಾರಿಟಿ ಸಿಕ್ಕಿದೆ. ಹಲವರು ಅಪ್ಪು ಅವರ ಫೋಟೋ ಹಾಕಿಲ್ಲ ಎನ್ನುವ ಕಾರಣಕ್ಕೆ ಬೇರೆ ರೀತಿ ಮಾತನಾಡುತ್ತಿದ್ದರು, ಶಿವಣ್ಣನಿಗೆ ಅಪ್ಪು ಮೇಲೆ ಪ್ರೀತಿ ಇಲ್ಲ, ಎಲ್ಲವೂ ತೋರಿಕೆಗೆ ಎನ್ನುವ ಅಭಿಪ್ರಾಯಗಳು ಕೂಡ ಕೇಳಿಬಂದಿದ್ದವು. ಆದರೆ ಶಿವಣ್ಣ ಅವರ ಮನಸ್ಸಲ್ಲಿ ನಿಜಕ್ಕೂ ಏನಿದೆ ಎನ್ನುವುದು ಈ ಮಾತುಗಳಲ್ಲೇ ಗೊತ್ತಾಗುತ್ತದೆ. ಅಪ್ಪು ಅವರು ಶಿವಣ್ಣ ಅವರಿಗೆ ತಮ್ಮ ಎನ್ನುವುದರ ಜೊತೆಗೆ ಮಗ ಇದ್ದ ಹಾಗೆ..
ಇದನ್ನು ಖುದ್ದು ಶಿವಣ್ಣ ಅವರೇ ಹಲವು ಸಾರಿ ಹೇಳಿಕೊಂಡಿದ್ದಾರೆ. ಒಂದೇ ಕುಟುಂಬದವರು ಎಂದಾಗ ಅವರ ನಡುವೆ ಪ್ರೀತಿ ಬಾಂಧವ್ಯ ಹೇಗಿರುತ್ತದೆ ಎನ್ನುವುದು ಅವರಿಗೆ ಗೊತ್ತಿರುತ್ತದೆ. ಹಾಗಾಗಿ ಅಭಿಮಾನಿಗಳು ಈ ವಿಚಾರಕ್ಕೆಲ್ಲಾ ಬೇಸರ ಮಾಡಿಕೊಳ್ಳದೇ ಇರುವುದೇ ಒಳ್ಳೆಯದು. ಇನ್ನು ಭೈರತಿ ರಣಗಲ್ ಸಿನಿಮಾ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ. ಇದರ ನಡುವೆಯೇ ಶಿವಣ್ಣ ಮುಂದಿನ ತಿಂಗಳು ಅಮೆರಿಕಾಗೆ ಟ್ರೀಟ್ಮೆಂಟ್ ಗಾಗಿ ಹೋಗಲಿದ್ದು, ಸರ್ಜರಿ ಮಾಡಿಸಿಕೊಂಡು, ರೆಸ್ಟ್ ಪಡೆದು ಬರುತ್ತಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಶಿವಣ್ಣ ಅವರು ಬೇಗ ಹುಷಾರಾಗಿ ಬಂದರೆ ಒಳ್ಳೆಯದು.