ಚಳಿಗಾಲ ಶುರುವಾದರೆ ಅನೇಕರಿಗೆ ಆರೋಗ್ಯ ಸಮಸ್ಯೆ ಶುರುವಾಗುತ್ತದೆ. ಜ್ವರ, ನೆಗಡಿ, ಕೆಮ್ಮು, ಚರ್ಮದ ಸಮಸ್ಯೆ, ಅಸ್ತಮಾ ಇಂಥ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಬರುತ್ತದೆ. ಮತ್ತೆ ನಾರ್ಮಲ್ ಅಗೋದಕ್ಕೆ ಎಲ್ಲರೂ ಡಾಕ್ಟರ್ ಕ್ಲಿನಿಕ್ ಗಳಿಗೆ ಹೋಗುತ್ತಾರೆ. ಹೀಗಿರುವಾಗ ನಾವು ಈ ಸಮಸ್ಯೆಗಳಿಂದ ಹೇಗೆ ತಪ್ಪಿಸಿಕೊಳ್ಳಬಹುದು? ಚಳಿಗಾಲದಲ್ಲಿ ಈ ರೀತಿ ಆಗೋದು ಯಾಕೆ? ವೈದ್ಯರು ಈ ಸಮಸ್ಯೆಗೆ ನೀಡುವ ಪರಿಹಾರ ಏನು? ಈ ಎಲ್ಲಾ ಮಾಹಿತಿಯನ್ನು ಇಂದು ತಿಳಿಸಿಕೊಡುತ್ತೇವೆ ನೋಡಿ..
ವೈದ್ಯರು ಹೇಳುವ ಪ್ರಕಾರ, ಚಳಿಗಾಲದಲ್ಲಿ ಹವಾಮಾನದಲ್ಲಿ ವ್ಯತ್ಯಾಸ ಆಗುತ್ತದೆ. ಟೆಂಪರೇಚರ್ ಡ್ರಾಪ್ ಆಗುತ್ತದೆ. ಆರೋಗ್ಯ ಹದಗೆಡಲು ಮುಖ್ಯ ಕಾರಣ ಇದು. ಈ ರೀತಿ ವ್ಯತ್ಯಾಸ ಆದಾಗ, ಇಮ್ಯುನಿಟಿ ಕಡಿಮೆ ಇರುವವರಿಗೆ ಜ್ವರ, ಕೆಮ್ಮು, ನೆಗಡಿ, ಚರ್ಮದ ಸಮಸ್ಯೆ ಇದೆಲ್ಲವೂ ಶುರುವಾಗುತ್ತದೆ. ಇಂಥ ಸಮಸ್ಯೆಗಳು ಕಡಿಮೆ ಆಗಬೇಕು ಎಂದರೆ ಏನು ಮಾಡಬಹುದು ಎಂದು ನೋಡುವುದಾದರೆ.. ಮೊದಲಿಗೆ ನಿಯಮಿತ ವ್ಯಾಯಾಮ ಮಾಡಿದರೆ, ಈ ರೀತಿ ಆಗುವುದಿಲ್ಲ. ವ್ಯಾಯಾಮ ಮಾಡುತ್ತಿದ್ದು, ಜೊತೆಗೆ ಪೌಷ್ಟಿಕ ಆಹಾರ ಸೇವನೆ ಮಾಡಬೇಕು, ನಾರಿನ ಅಂಶ ಇರುವ ಆಹಾರವನ್ನು ಹೆಚ್ಚು ತಿನ್ನಬೇಕು..
ಆಗ ಆರೋಗ್ಯ ಸಮಸ್ಯೆಗಳು ನಿಮ್ಮತ್ತ ಸುಳಿಯುವುದಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಸಾವಯವ ಕೃಷಿ ಇಂದ ಬೆಳೆದಿರುವ ಆಹಾರ ಸಿಕ್ಕರೆ ಅದು ಇನ್ನು ಒಳ್ಳೆಯದು. ಇದೆಲ್ಲದರ ಜೊತೆಗೆ ನಿಮ್ಮ ಮನಸ್ಥಿತಿ ಚೆನ್ನಾಗಿರಬೇಕು. ಆಗ ಯಾವುದೇ ಕಾಲ ಬಂದರು ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ಒಂದು ವೇಳೆ ಸಮಸ್ಯೆ ಬಂದರು ಸಹ ಅದನ್ನು ಹೇಗೆ ಪರಿಹಾರ ಮಾಡಿಕೊಳ್ಳಬಹುದು ಎಂದರೆ, ಮೊದಲಿಗೆ ನಿಮ್ಮ ದೇಹದ ಸ್ಥಿತಿ ಮತ್ತು ಆರೋಗ್ಯ ಸ್ಥಿತಿ ಎಲ್ಲವನ್ನು ಸಹ ಮೊದಲು ಅರ್ಥ ಮಾಡಿಕೊಳ್ಳಬೇಕು. ಸಮಸ್ಯೆ ಬಂದಿರುವುದು ಯಾವ ಕಾರಣಕ್ಕೆ, ಯಾವ ಸಮಯದಲ್ಲಿ ಹೆಚ್ಚಾಗುತ್ತದೆ, ಏನು ತಿಂದರೆ ಕಡಿಮೆ ಆಗುತ್ತದೆ, ದೇಹದ ಸ್ಥಿತಿ ಹೇಗಿದೆ..
ಸಮಸ್ಯೆ ಇರುವಾಗ ಆತನ ದೇಹ ಹೇಗೆ ಕೆಲಸ ಮಾಡುತ್ತಿದೆ, ತಲೆ ನೋವು ಬರುತ್ತಿದ್ಯಾ? ಬಿಸಿ ನೀರು ಕೊಟ್ಟರೆ ಕಡಿಮೆ ಆಗುತ್ತಾ ಇದೆಲ್ಲವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಇದೆಲ್ಲವನ್ನು ಗಮನಿಸಿ ವ್ಯಕ್ತಿಗೆ ಸರಿ ಹೊಂದುವಂತ ಮೆಡಿಸಿನ್ ತೆಗೆದುಕೊಂಡರೆ ಬಹಳ ಬೇಗ ಜ್ವರ ಅಥವಾ ಇನ್ನೇನೇ ಸಮಸ್ಯೆ ಇದ್ದರು ಕಡಿಮೆ ಆಗುತ್ತದೆ.. ಹೋಮಿಯೋಪತಿಯಲ್ಲಿ ಎಲ್ಲರಿಗು ಒಂದೇ ಥರದ ಮೆಡಿಸಿನ್ ಕೊಡುವುದಿಲ್ಲ. ಆ ವ್ಯಕ್ತಿಯ ಬಗ್ಗೆ ತಿಳಿದುಕೊಂಡು, ಅವರಿಗೆ ಹೊಂದುವಂತ ಮೆಡಿಸಿನ್ ಕೊಡಲಾಗುತ್ತದೆ..ಹೀಗೆ ಎಲ್ಲಾ ಸಮಸ್ಯೆಗಳಿಗೂ ಸಹ ತನ್ನದೇ ರೀತಿಯಲ್ಲಿ ಪರಿಹಾರ ಕೊಡಲಾಗುತ್ತದೆ. ಒಬ್ಬೊಬ್ಬ ವ್ಯಕ್ತಿಯ ದೇಹಸ್ಥಿತಿ ಮತ್ತು ಮನಸ್ಥಿತಿ ಎರಡು ವಿಭಿನ್ನವಾಗಿರುತ್ತದೆ..
ಅವೆಲ್ಲವನ್ನೂ ಅರಿತು ನಂತರ ಟ್ರೀಟ್ಮೆಂಟ್ ಕೊಡಲಾಗುತ್ತದೆ. ಇದರಿಂದಾಗಿ ಸಮಸ್ಯೆ ಬೇಗ ಪರಿಹಾರ ಆಗುತ್ತದೆ. ಮುಂದೆ ಇಂಥ ಸಮಸ್ಯೆಗಳು ಬರುವುದು ತಡೆಗಟ್ಟುತ್ತದೆ. ಹೋಮಿಯೋಪತಿ ಟ್ರೀಟ್ಮೆಂಟ್ ಆಯ್ಕೆ ಮಾಡಿಕೊಳ್ಳುವುದು ಎಲ್ಲಾ ವಯಸ್ಸಿನವರಿಗೂ ಒಳ್ಳೆಯದು. ಈ ಮೆಡಿಸನ್ ಗಳನ್ನು ತಯಾರಿಸಲು ಯಾವುದೇ ಕೆಮಿಕಲ್ ಬಳಕೆ ಮಾಡುವುದಿಲ್ಲ ಎನ್ನುವುದು ಮತ್ತೊಂದು ವಿಶೇಷತೆ. ಹೀಟ್ ಹಲವು ಕಾರಣಗಳಿಂದ ಹೋಮಿಯೋಪತಿ ಉತ್ತಮವಾದ ವೈದ್ಯಕೀಯ ಪದ್ಧತಿ ಆಗಿದ್ದು, ನಮ್ಮ ಜನರು ಹೋಮಿಯೋಪತಿ ಟ್ರೀಟ್ಮೆಂಟ್ ಶುರು ಮಾಡಬಹುದು. ಇದರಿಂದ ಹೆಚ್ಚು ನೋವಿಲ್ಲದೇ ನಿಮ್ಮ ಸಮಸ್ಯೆಗಳು ಪರಿಹಾರ ಆಗುತ್ತದೆ..