ಇದು ನಾವು ದಿನನಿತ್ಯ ನೋಡುತ್ತಲೇ ಇರುವ ಸಮಸ್ಯೆಗಳಲ್ಲಿ ಒಂದು. ನಮ್ಮ ದೇಶದಲ್ಲಿ ಬೀದಿ ನಾಯಿಗಳ ಸಂಖ್ಯೆ ವಿಪರೀತ ಇದೆ. ಅವುಗಳನ್ನು ತಡೆಗಟ್ಟಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ದಿನದಿಂದ ಬೀದಿನಾಯಿಗಳ ಸಂಖ್ಯೆ ಜಾಸ್ತಿ ಆಗುತ್ತಿರುವುದಂತು ಸುಳ್ಳಲ್ಲ. ಸಾಮಾನ್ಯವಾಗಿ ರಸ್ತೆಯಲ್ಲಿ ಓಡಾಡುವ ಜನರಿಗೆ ಬೀದಿ ನಾಯಿಗಳು ಓಡಿಸಿಕೊಂಡು ಬರುವುದು, ಅದರಲ್ಲೂ ಬೈಕ್ ಸವಾರದ ಹಿಂದೆ ಬೀಳುವುದು ನಡೆಯುತ್ತದೆ. ಇದು ಕಾಮನ್ ಎಂದು ಅನ್ನಿಸಿದರೂ ಸಹ, ಕೆಲವೊಮ್ಮೆ ಇದರಿಂದ ದೊಡ್ಡ ಸಮಸ್ಯೆಯೇ ಆಗಬಹುದು. ಬೈಕ್ ಸವಾರ ಆಯತಪ್ಪಿ ಬಿದ್ದು ಬಿಡಬಹುದು. ಇಂಥ ಘಟನೆಗಳು ಸಹ ರಿಪೋರ್ಟ್ ಆಗಿವೆ. ಹಾಗಿದ್ದಲ್ಲಿ ಈ ರೀತಿ ನಾಯಿಗಳು ಅಟ್ಟಿಸಿಕೊಂಡು ಬರೋದು ಯಾಕೆ ? ಈ ರೀತಿ ಆದಾಗ ಏನು ಮಾಡಬೇಕು? ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ..

ನಮ್ಮಲ್ಲಿ ನಾಯಿಗಳಿಗೆ ವಿಶೇಷವಾದ ಸ್ಥಾನ ನೀಡಲಾಗಿದೆ. ಈಗಿನ ಜೆನೆರೇಷನ್ ನಲ್ಲಿ ನಾಯಿಗಳನ್ನು ತಮ್ಮ ಸ್ವಂತ ಮಕ್ಕಳ ಹಾಗೆ ನೋಡಿಕೊಳ್ಳುವವರು ಇದ್ದಾರೆ. ಮನೆಯ ಸದಸ್ಯರಂತೆ ನಾಯಿಗಳನ್ನು ಟ್ರೀಟ್ ಮಾಡುತ್ತಾರೆ, ಮಗುವಿನ ಹಾಗೆ ಪ್ರೀತಿ ಮಾಡುತ್ತಾರೆ. ಆದರೆ ಬೀದಿ ನಾಯಿಗಳ ವಿಷಯವೇ ಬೇರೆ. ಅವುಗಳನ್ನು ಯಾರು ನೋಡಿಕೊಳ್ಳುವುದಿಲ್ಲ, ಸಿಕ್ಕಿದ್ದನ್ನು ಯಾರಾದರೂ ಹಾಕಿದ್ದನ್ನು ತಿಂದುಕೊಂಡು ಬೆಳೆಯುತ್ತವೆ. ಇವುಗಳು ಸ್ವಲ್ಪ ವೈಲೆಂಟ್ ಕೂಡ ಹೌದು. ಬೀದಿ ನಾಯಿಗಳು ಬೈಕ್ ಗಳನ್ನು ಅಟ್ಟಿಸಿಕೊಂಡು ಬರುತ್ತವೆ, ಅವುಗಳು ಈ ರೀತಿ ಮಾಡುವುದರ ಹಿಂದೆ ಒಂದು ವೈಜ್ಞಾನಿಕವಾದ ಹಾಗೂ ಮಾನಸಿಕವಾದ ಕಾರಣ ಎರಡು ಸಹ ಇದೆ. ಹಾಗಿದ್ದಲ್ಲಿ ಅದು ಏನು? ನಾಯಿಗಳು ಈ ರೀತಿ ಮಾಡುವುದು ಯಾಕೆ ಎಂದು ನೋಡುವುದಾದರೆ..

ಬೀದಿ ನಾಯಿಗಳಿಗೆ ಈ ಹಿಂದೆ ಯಾರಾದರೂ ತೊಂದರೆ ಕೊಟ್ಟಿದ್ದರೆ, ಆ ವ್ಯಕ್ತಿಗಳು ಬಂದಾಗ ಅವರುಗಳನ್ನು ಹೀಗೆ ಓಡಿಸಿಕೊಂಡು ಹೋಗುವುದು ಉಂಟು. ಅದಲ್ಲದೇ ನಾಯಿಗಳು ವಾಸನೆಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಜೀವಿಗಳು ಎಂದು ನಮಗೆ ಗೊತ್ತೇ ಇದೆ. ಬೈಕ್ ಗಳು ಎಂದರೆ ಹಲವು ಕಡೆಗಳಲ್ಲಿ ಬೈಕ್ ಪಾರ್ಕ್ ಮಾಡಿರುತ್ತೀರಿ. ಸಾಮಾನ್ಯವಾಗಿ ಎಲ್ಲಾ ಕಡೆ ಬೀದಿ ನಾಯಿಗಳು ಬೈಕ್ ಟೈರ್ ಗಳ ಮೇಲೆ ಮೂತ್ರ ವಿಸರ್ಜನೆ ಮಾಡಿರುತ್ತದೆ. ಆಕಸ್ಮಾತ್ ನಿಮ್ಮ ಬೀದಿನಾಯಿಗೆ ಬೇರೆ ನಾಯಿಯ ಮೂತ್ರ ವಿಸರ್ಜನೆಯ ವಾಸನೆ ನಿಮ್ಮ ಬೈಕ್ ಟೈರ್ ಮೂಲಕ ಬಂದರೆ ಅವುಗಳು ಅದನ್ನು ಸಹಿಸುವುದಿಲ್ಲ. ಸಾಮಾನ್ಯವಾಗಿ ನಾಯಿಗಳು ತಮ್ಮ ಜಾಗಕ್ಕೆ ಮತ್ತೊಂದು ಪ್ರದೇಶದ ನಾಯಿಗಳು ಬರುವುದನ್ನು ಸಹಿಸುವುದಿಲ್ಲ ಹಾಗಾಗಿ ಬೇರೆ ನಾಯಿಯ ವಾಸನೆ ಬರುತ್ತಿದೆ ಅನ್ನಿಸಿದಾಗ ಹಾಗೆ ಅಟ್ಯಾಕ್ ಮಾಡುತ್ತದೆ.

ನಾಯಿಗಳು ಈ ರೀತಿ ಅಟ್ಯಾಕ್ ಮಾಡಿದಾಗ, ಸವಾರರಿಗೆ ಗಾಬರಿ ಆಗುವುದು ನಿಜ. ಕಾರ್ ಓಡಿಸುವಾಗ ಈ ರೀತಿ ಆದರೆ ಪರವಾಗಿಲ್ಲ, ಏನು ಆಗೋದಿಲ್ಲ. ಆದರೆ ಬೈಕ್ ಓಡಿಸುವಾಗ ಈ ರೀತಿ ಆಗಿಬಿಟ್ಟರೆ, ಸಮಸ್ಯೆ ಜಾಸ್ತಿ. ನಾಯಿಗಳು ದಿಢೀರ್ ಎಂದು ಆ ರೀತಿ ಬಂದಾಗ, ಬೈಕ್ ಬ್ಯಾಲೆನ್ಸ್ ತಪ್ಪಿ ಹೋಗುತ್ತದೆ. ಮೈಂಡ್ ಬ್ಲ್ಯಾಂಕ್ ಆಗುತ್ತದೆ. ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ಆದರೆ ನೀವು ಇದೇ ರೀತಿ ವರ್ತಿಸಿದರೆ ಅದರಿಂದ ಸಮಸ್ಯೆಗಳೇ ಹೆಚ್ಚು. ಅವುಗಳು ನಿಮ್ಮನ್ನು ಕಚ್ಚಿಬಿಡಬಹುದು. ಒಂದು ವೇಳೆ ನೀವು ಬೈಕ್ ಸ್ಪೀಡ್ ಜಾಸ್ತಿ ಮಾಡಿ, ಸ್ಪೀಡ್ ಆಗಿ ಹೋದರೆ ಅವುಗಳು ಇನ್ನು ಸ್ಪೀಡ್ ಆಗಿ ನಿಮ್ಮ ಹಿಂದೆ ಓಡಿಸಿಕೊಂಡು ಬರುತ್ತದೆ..ಇದರಿಂದ ನಿಮಗೆ ಹೆಚ್ಚು ತೊಂದರೆ, ಬಿದ್ದು ಫ್ರಾಕ್ಚರ್ ಸಹ ಆಗಿಬಿಡಬಹುದು. ಹಾಗಾಗಿ ಇಂಥ ಸಮಯದಲ್ಲಿ ನೀವು ತುಂಬಾ ಹುಷಾರಾಗಿ ಹ್ಯಾಂಡಲ್ ಮಾಡಬೇಕು, ಅದು ತುಂಬಾ ಮುಖ್ಯ.

ಬೀದಿ ನಾಯಿಗಳು ನಿಮ್ಮನ್ನು ಓಡಿಸಿಕೊಂಡು ಬಂದಾಗ, ಪ್ಯಾನಿಕ್ ಆಗಿ ಸ್ಪೀಡ್ ಆಗಿ ಹೋಗುವುದನ್ನು ಮಾಡದೆ, ಸ್ವಲ್ಪ ಕಾಮ್ ಆಗಿ ಯೋಚಿಸಿ, ನಿಮ್ಮ ಬೈಕ್ ಅನ್ನು ಸ್ವಲ್ಪ ಸ್ಲೋ ಆಗಿ ಓಡಿಸಿ, ಆಗ ಇವುಗಳಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ನಾಯಿಗಳು ಬಹಳ ಸೂಕ್ಷ್ಮ ಜೀವಿ ಆಗಿದ್ದು, ಅದರಲ್ಲೂ ಬೀದಿ ನಾಯಿಗಳ ವಿಚಾರದಲ್ಲಿ ಬಹಳ ಹುಷಾರಾಗಿ ಇರಬೇಕು. ಯಾರೋ ಮಾಡಿರುವುದಕ್ಕೆ ನಿಮ್ಮನ್ನು ಅಟ್ಟಿಸಿಕೊಂಡು ಬರಬಹುದು ಅಥವಾ ಬೇರೆ ನಾಯಿಯ ವಾಸನೆಯ ಜಾಡು ಹಿಡಿದು, ನಿಮ್ಮ ಬೈಕ್ ಹಿಂದೆ ಓಡಿ ಬರಬಹುದು. ಈ ವಿಷಯಗಳು ಕಾರಣಗಳು ಏನೇ ಇದ್ದರೂ ಸಹ, ನೀವು ಈ ವಿಷಯದಲ್ಲಿ ಎಷ್ಟು ಹುಷಾರಾಗಿ ಇರುತ್ತೀರೋ ಅಷ್ಟೇ ನಿಮಗೂ ಒಳ್ಳೆಯದು.