ಈಗಿನ ಪ್ರಪಂಚ ಹೇಗಿದೆ ಅಂದ್ರೆ ತಮಗೆ ಉಪಯೋಗ ಆಗುತ್ತೆ ಅಂದ್ರೆ ಯಾರ ಹೆಸರನ್ನು ಬೇಕಾದರೂ ದುರುಪಯೋಗ ಪಡಿಸಿಕೊಳ್ಳೋಕೆ ಜನರು ರೆಡಿ ಇರ್ತಾರೆ. ತಮಗೆ ಅವರು ಗೊತ್ತಿಲ್ಲ ಅಂದ್ರು ಗೊತ್ತು ಅಂತ ಹೇಳಿಕೊಂಡು ಓಡಾಡ್ತಾ ಇರ್ತಾರೆ. ಈ ರೀತಿ ಇರೋ ಪ್ರಪಂಚದಲ್ಲಿ ದೀಪಿಕಾ ದಾಸ್ ಅವರು ತುಂಬಾ ಡಿಫರೆಂಟ್. ಇವರು ರಾಕಿಂಗ್ ಸ್ಟಾರ್ ಯಶ್ ಅವರ ತಂಗಿ ಆಗಿದ್ದರೂ ಸಹ, ಇದುವರೆಗೂ ಎಲ್ಲಿಯು ಈ ವಿಷಯವನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ. ದೀಪಿಕಾ ಅವರು ಹೇಳಿಕೊಂಡಿಲ್ಲ ಅನ್ನೋದಕ್ಕೆ ಜನರು ಹಲವಾರು ಕಾರಣ ಹೇಳುತ್ತಾರೆ, ಎರಡು ಕುಟುಂಬದ ನಡುವೆ ಜಗಳ ಇರಬಹುದಾ ಅನ್ನೋ ಕುತೂಹಲ ಕೂಡ ಇತ್ತು. ಆದರೆ ಅಸಲಿ ವಿಷಯ ಬೇರೆಯೇ ಇದೆ. ಅದನ್ನು ಖುದ್ದು ದೀಪಿಕಾ ದಾಸ್ ಅವರೇ ತಿಳಿಸಿದ್ದಾರೆ.
ಯಶ್ ಅವರು ಎಷ್ಟು ದೊಡ್ಡ ಸ್ಟಾರ್, ಇಂದು ಎಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನುವ ವಿಷಯ ಗೊತ್ತೇ ಇದೆ. ಇಷ್ಟು ಜನಪ್ರಿಯತೆ ಇರುವ ವ್ಯಕ್ತಿ ತಮ್ಮ ಅಣ್ಣ ಆಗಿರುವಾಗ, ಅದನ್ನು ಯಾಕೆ ಎಲ್ಲಿಯೂ ಹೇಳಿಕೊಂಡಿಲ್ಲ ಎನ್ನುವ ಪ್ರಶ್ನೆ ಉಂಟಾಗುವುದು ಸಹಜ. ಆದರೆ ಎಲ್ಲರೂ ಅಂದುಕೊಂಡಿರುವ ಹಾಗೆ ಇವರ ಕುಟುಂಬದ ನಡುವೆ ಆಗಲಿ, ಯಶ್ ಅವರ ಜೊತೆಗಾಗಲಿ ಯಾವುದೇ ಜಗಳ ಇಲ್ಲ. ಅಸಲಿ ವಿಷಯವೇ ಬೇರೆ ಇದೆ, ಅದನ್ನು ಆರ್.ಜೆ. ರಾಜೇಶ್ ಅವರ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಖುದ್ದು ದೀಪಿಕಾ ದಾಸ್ ಅವರೇ ಹೇಳಿಕೊಂಡಿದ್ದಾರೆ. ಆ ಕಾರಣ ಏನು ಎಂದು ದೀಪಿಕಾ ಅವರ ಮಾತುಗಳಲ್ಲೇ ತಿಳಿಯೋಣ..

“ಎಲ್ಲರೂ ಅಂದುಕೊಂಡಿರೋ ಹಾಗೆ ನಮ್ಮ ಕುಟುಂಬಗಳ ನಡುವೆ ಯಾವುದೇ ಜಗಳ, ಮನಸ್ತಾಪ ಇಲ್ಲ. ನಮ್ಮಿಬ್ಬರ ಪ್ರೊಫೆಷನ್ ಬೇರೆ ಬೇರೆ ರೀತಿ ಇರಬೇಕು ಅನ್ನೋದು ನನಗಿಷ್ಟ. ಅದೇ ನಿಟ್ಟಿನಲ್ಲಿ ಪ್ರಯತ್ನ ಪಡ್ತಿದ್ದೀನಿ, ನಮ್ಮಿಬ್ಬರಿಗೂ ನಮ್ಮ ಮೇಲೆ ಗೌರವವಿದೆ. ನನಗೆ ಮೊದಲಿನಿಂದಲು ಅಣ್ಣ, ತಂಗಿ ಅಂತ ಹೇಳಿಕೊಳ್ಳೋಕೆ ಇಷ್ಟವಿಲ್ಲ. ಮೊದಲಿನಿಂದ ಎಲ್ಲಿಯು ಕೂಡ ಹೇಳಿಕೊಂಡಿರಲಿಲ್ಲ, ಈಗಲೂ ಕೂಡ ಅದನ್ನೇ ಮುಂದುವರೆಸಿಕೊಂಡು ಹೋಗ್ತಾ ಇದ್ದೀನಿ. ನನ್ನ ಕೆಲಸ ಅವರಿಗೆ ಇಷ್ಟ ಆದಾಗ, ಮೆಚ್ಚುಗೆ ಸೂಚಿಸುತ್ತಾರೆ, ಆದರೆ ಅದನ್ನ ನಾನು ಎಲ್ಲಿಗೂ ಬಹಿರಂಗವಾಗಿ ಹೇಳಿಕೊಂಡಿಲ್ಲ., ಹೇಳಿಕೊಳ್ಳೋಕೆ ಇಷ್ಟ ಕೂಡ ಇಲ್ಲ. ಇಷ್ಟೇ ವಿಷಯ, ಇದನ್ನು ಬಿಟ್ಟು ಇನ್ನೇನು ಇಲ್ಲ. ನಮ್ಮಿಂದ ಒಳ್ಳೇದು ನಡೆದರೆ, ಜನರು ಕೂಡ ಅದನ್ನು ಖುಷಿಯಿಂದ ಸ್ವೀಕರಿಸುತ್ತಾರೆ.
ಆದರೆ ನಮ್ಮಿಂದ ಕೆಟ್ಟದ್ದು ನಡೆದರೆ, ಅದರಿಂದ ಉಂಟಾಗೋ ಪರಿಣಾಮವೇ ಬೇರೆ. ಸಮಸ್ಯೆಗಳು ಶುರುವಾಗಬಹುದು. ನಮ್ಮ್ಕ್ ಲೈಫ್ ನಲ್ಲಿ ಏನಾದರೂ ಒಳ್ಳೇದಾಗೋವರೆಗೂ ನಾವು ವೇಟ್ ಮಾಡಬೇಕು. ಅದುವರೆಗೂ ನನ್ನ ಪರ್ಸನಲ್ ಲೈಫ್ ನ ಪರ್ಸನಲ್ ಆಗಿಯೇ ಇಟ್ಟುಕೊಳ್ಳೋಕೆ ಇಷ್ಟಪಡ್ತೀನಿ. ನಾವು ಇದ್ದಿದ್ದು ಹಾಸನದಲ್ಲಿ, ಯಶ್ ಅವರು ಮೈಸೂರಲ್ಲಿ ಇದ್ರು. ಚಿಕ್ಕೋರಿದ್ದಾಗ ಆಗಾಗ ಭೇಟಿ ಮಾಡ್ತಿದ್ವಿ, ಯಶ್ ಅವರು ನನಗೆ ಯಾವಾಗ್ಲೂ ಮೋಟಿವೇಶನ್, ಜನರು ಅವರನ್ನು ಎಷ್ಟು ಇಷ್ಟ ಪಟ್ಟು ಹೊಗಳಿಕೆಯ ಮಾತುಗಳನ್ನಾಡುತ್ತಾರೋ, ಅದಕ್ಕಿಂತ ಜಾಸ್ತಿ ನಾನು ಅವರನ್ನ ಹೊಗಳುತ್ತೀನಿ. ಇಂಟರ್ನ್ಯಾಷನಲ್ ಲೆವೆಲ್ ಹೆಸರು ಮಾಡಿರೋ ಯಶ್ ಅವರು ಭಾಗವಾಗಿರೋ ಇಂಡಸ್ಟ್ರಿಯಲ್ಲೇ ನಾನು ಇರೋದು ತುಂಬಾ ಖುಷಿ ಇದೆ..” ಎನ್ನುತ್ತಾರೆ ದೀಪಿಕಾ.

ಯಶ್ ಹಾಗೂ ದೀಪಿಕಾ ದಾಸ್ ಅವರು ಇಬ್ಬರು ಕೂಡ ನಮಗೆಲ್ಲಾ ಸ್ಪೂರ್ತಿ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಯಶ್ ಅವರ ತಾಯಿ ಮತ್ತು ದೀಪಿಕಾ ಅವರ ತಾಯಿ ಇಬ್ಬರು ಅಕ್ಕ ತಂಗಿಯರು. ಅಷ್ಟು ಹತ್ತಿರದ ಸಂಬಂಧ ಆಗಿದ್ದರು ಸಹ, ಎರಡು ಕುಟುಂಬಗಳು ಎಲ್ಲಿಯೂ ಬಹಿರಂಗವಾಗಿ ತಮ್ಮ ಬಗ್ಗೆ ಹೇಳಿಕೊಂಡಿಲ್ಲ. ಯಶ್ ಅವರ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ದೀಪಿಕಾ ಅವರು ಕಾಣಿಸಿಕೊಂಡಿರೋದನ್ನ ನೋಡಿಲ್ಲ, ದೀಪಿಕಾ ಅವರ ಮದುವೆಗೆ ಯಶ್ ಅವರ ಕುಟುಂಬ ಬಂದಿದ್ದು ನೋಡಿಲ್ಲ. ಈ ಮಟ್ಟಿಗೆ ಸ್ವಾಭಿಮಾನದಲ್ಲಿ ಬದುಕೋದು, ನಿಜಕ್ಕೂ ಸುಲಭ ಅಲ್ಲ. ದೀಪಿಕಾ ದಾಸ್ ಅವರು ನಾಗಿಣಿ ಧಾರಾವಾಹಿ ಮೂಲಕ ಫೇಮ್ ಪಡೆದವರು, ಬಳಿಕ ಬಿಗ್ ಬಾಸ್ ಶೋ ಕೂಡ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಇತ್ತೀಚೆಗೆ ಮದುವೆಯಾಗಿ ಸಂತೋಷವಾಗಿದ್ದಾರೆ.