ನವೆಂಬರ್ 8ರಂದು ಸಂಜೆ ವೇಳೆ ಪೂರ್ಣ ಚಂದ್ರಗ್ರಹಣ ಸಂಭವಿಸಲಿದ್ದು, ಕೋಲ್ಕತ್ತ, ಕೊಹಿಮಾ, ಅಗರ್ತಲಾ, ಗುವಾಹಟಿಗಳಲ್ಲಿ ಪೂರ್ಣವಾಗಿ ಗೋಚರಿಸಲಿದೆ. ಬೆಂಗಳೂರಿನಲ್ಲಿ ಚಂದ್ರೋದಯದ 5.57ರ ವೇಳೆ ಶೇ 23ರಷ್ಟು ಗ್ರಹಣ ಕಾಣಿಸಲಿದೆ.
ನವೆಂಬರ್ 8ರಂದು ಮಧ್ಯಾಹ್ನ 2.39ಕ್ಕೆ ಗ್ರಹಣ ಆರಂಭವಾಗಲಿದ್ದು, 3.46ಕ್ಕೆ ಸಂಪೂರ್ಣ ಗ್ರಹಣ ಸಂಭವಿಸುತ್ತದೆ. ಗ್ರಹಣವು 4.29ಕ್ಕೆ ಗರಿಷ್ಠ ಮಟ್ಟದಲ್ಲಿ ಇರಲಿದೆ. ಸಂಜೆ 5.11ಕ್ಕೆ ಪೂರ್ಣ ಗ್ರಹಣ ಕೊನೆಗೊಳ್ಳುತ್ತದೆ. ಬಳಿಕ ಭಾಗಶಃ ಗ್ರಹಣ ಗೋಚರಿಸಲಿದ್ದು, ಸಂಜೆ 6.19ಕ್ಕೆ ಗ್ರಹಣ ಕೊನೆಗೊಳ್ಳುತ್ತದೆ’ ಎಂದು ಖಗೋಳ ಭೌತಶಾಸ್ತ್ರಜ್ಞ ದೇವಿ ಪ್ರಸಾದ್ ದುವಾರಿ ತಿಳಿಸಿದರು.
ಚಂದ್ರೋದಯಕ್ಕೆ ಮೊದಲೇ ಪೂರ್ಣ ಚಂದ್ರಗ್ರಹಣ ಆರಂಭವಾಗುತ್ತದೆ. ಹೀಗಾಗಿ ದೇಶದಲ್ಲಿ ಮೊದಲಿಗೆ ಚಂದ್ರೋದಯ ಆಗುವ ಭಾಗಗಳಲ್ಲಿ ಮಾತ್ರ ಸಂಜೆ ಹೊತ್ತು ಪೂರ್ಣ ಗ್ರಹಣ ಗೋಚರಿಸಲಿದೆ ಎಂದು ಅವರು ಮಾಹಿತಿ ನೀಡಿದರು.