ಸೆಪ್ಟೆಂಬರ್ 30 ರಿಂದ ಆರಂಭವಾಗಲಿರುವ ಏಷ್ಯಾ ಕಪ್ ಗೆ ಇದುವರೆಗೂ ಟೀಂ ಇಂಡಿಯಾವನ್ನು ಪ್ರಕಟಿಸಿಲ್ಲ, ಸುದ್ದಿಯ ಪ್ರಕಾರ ಸೋಮವಾರದೊಳಗೆ ಭಾರತವನ್ನು ಪ್ರಕಟಿಸುವ ಸಾಧ್ಯತೆಗಳಿವೆ, ಇದಕ್ಕೆ ಕಾರಣವು ಇದ್ದು, ಇಂಜುರಿಯ ಸಮಸ್ಯೆಯಿಂದ ಪ್ರಸ್ತುತ ಚೇತರಿಸಿಕೊಳ್ಳುತ್ತಿರುವ ತಂಡದ ಸ್ಟಾರ್ ವಿಕೆಟ್ ಕೀಪರ್ ಕಂ ಬ್ಯಾಟ್ಸ್ ಮ್ಯಾನ್ ಕೆ.ಎಲ್ ರಾಹುಲ್ ರವರ ಫಿಟ್ ನೆಸ್ ಬಗ್ಗೆ ಮಾಹಿತಿ ಕಲೆಹಾಕಿರುವ ಸಲುವಾಗಿ ಟೀಂ ಇಂಡಿಯಾ ಈ ನಿರ್ಧಾರಕ್ಕೆ ಬಂದಿದೆ, ಎಂದು ಹೇಳಲಾಗುತ್ತಿದೆ.

ಮಾಧ್ಯಮಗಳ ವರದಿಯ ಪ್ರಕಾರ ಕೆ.ಎಲ್ ರಾಹುಲ್ ರವರು ಭಾನುವಾರ ಅಥವಾ ಸೋಮವಾರ 50 ಓವರ್ ಗಳ ಅಭ್ಯಾಸ ಪಂದ್ಯವನ್ನು ಆಡಲಿದ್ದಾರೆ, ಈ ಪಂದ್ಯದಲ್ಲಿ ಕೆ.ಎಲ್ ರಾಹುಲ್ ರವರ ಫಿಟ್ ನೆಸ್ ಮೇಲೆ ಗಮನ ಇಡಲಾಗುತ್ತಿದ್ದು, ಇಲ್ಲಿ ರಾಹುಲ್ ಪಾಸ್ ಆದರೆ ಏಷ್ಯಾ ಕಪ್ ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಟೆಲಿಗ್ರಾಫ್ ವರದಿಯ ಪ್ರಕಾರ ಕೆ.ಎಲ್ ರಾಹುಲ್ ರವರನ್ನು ಇನ್ನೂ ಫಿಟ್ ಎಂದು ಘೋಷಿಸಲಾಗಿಲ್ಲ, ಏಕೆಂದರೆ ಅವರು ಮೊದಲ ಅಭ್ಯಾಸ ಪಂದ್ಯವನ್ನು ಆಡಬೇಕೆಂದು N.C.A ಬಯಸಿದೆ
ಹೀಗಾಗಿ ಈ ಅಭ್ಯಾಸ ಪಂದ್ಯವನ್ನು ಭಾನುವಾರ ಅಥವಾ ಸೋಮವಾರ ಆಯೊಜಿಸುವ ಸಾಧ್ಯತೆಗಳಿವೆ, ಈ ಪಂದ್ಯದಲ್ಲಿ ಕೆ.ಎಲ್ ರಾಹುಲ್ ರವರ ದೇಹ ಯಾವ ರೀತಿಯಾಗಿ ಪ್ರತಿಕ್ರಿಯಿಸುತ್ತದೆ ಎಂಬುವುದನ್ನು ತಿಳಿದು ನಂತರವೇ N.C.A ಅವರನ್ನು ಫಿಟ್ ಎಂದು ಘೋಷಿಸುತ್ತದೆ. ವರದಿಗಳ ಪ್ರಕಾರ ಟೀಂ ಇಂಡಿಯಾದ ಮುಖ್ಯ ಕೋಚ ರಾಹುಲ್ ದ್ರಾವಿಡ್ ರವರು ತಂಡದಲ್ಲಿ ಕೆ.ಎಲ್ ರಾಹುಲ್ ರವರ ಉಪಸ್ಥಿತಿ ಇರಬೇಕೆಂದು ಬಯಸಿದ್ದಾರೆ.
ಇದಕ್ಕೆ ಕಾರಣವೂ ಇದ್ದು ರಾಹುಲ್ ವಿಕೆಟ್ ಕೀಪಿಂಗ್ ಜೊತೆ ಜೊತೆಗೆ ಪ್ರಸ್ತುತ ಇರುವ 4 ನೇ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಯನ್ನು ನಿವಾರಿಸಬಲ್ಲರು, ಅಲ್ಲದೆ ರಾಹುಲ್ ಆಗಮನದಿಂದ ಬ್ಯಾಟಿಂಗ್ ವಿಭಾಗದಲ್ಲಿ ಸಾಕಷ್ಟು ಸಮತೋಲನ ಇರುತ್ತದೆ,ಈ ಕಾರಣಕ್ಕೆ ಸ್ವತಃ ರಾಹುಲ್ ದ್ರಾವಿಡ್ ಕೂಡ N.C.A ಮುಖ್ಯಸ್ಥ ವಿ.ವಿ.ಎಸ್ ಲಕ್ಷ್ಮಣ್ ರವರನ್ನು ಸಂಪರ್ಕಿಸಿದ್ದಾರೆ, ಅಲ್ಲದೆ ಸ್ವತಃ ಲಕ್ಷ್ಮಣ್ ರವರು ಕೆ.ಎಲ್ ರಾಹುಲ್ ರವರ ಫಿಟ್ ನೆಸ್ ಬಗ್ಗೆ ವೈಯಕ್ತಿಕವಾಗಿ ನಿಗಾ ವಹಿಸುತ್ತಿದ್ದಾರೆ, ಎಂದು ವರದಿಯಾಗಿದೆ.
ಕೆ.ಎಲ್ ರಾಹುಲ್ ರವರು ಫಿಟ್ ಆಗುವ ಸಾಧ್ಯತೆ ಹೆಚ್ಚು ಇದೆ ಏಕೆಂದರೆ ಇತ್ತೀಚೆಗಷ್ಟೆ ಕೆ.ಎಲ್ ರಾಹುಲ್ ರವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಅಭ್ಯಾಸ ಮಾಡುತ್ತಿರುವ ವೀಡಿಯೋವನ್ನು ಪೋಸ್ಟ್ ಮಾಡಿದ್ದರು, ಅಂದಹಾಗೆ ಏಷ್ಯಾಕಪ್ ನಲ್ಲಿ ಸ್ಪೆಷಲಿಸ್ಟ್ ಬ್ಯಾಟ್ಸ್ ಮ್ಯಾನ್ ಆಗಿ ಕೆ.ಎಲ್ ರಾಹುಲ್ ಗೆ ಟೀಂ ಇಂಡಿಯಾ ಅವಕಾಶ ನೀಡಬಹುದು ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನುಇಶಾನ್ ಕಿಶನ್ ಗೆ ನೀಡಬಹುದು ಎಂಬ ವರದಿಗಳು ಇವೆ.