ಪ್ರಪಂಚದ ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ಎನಿಸಿಕೊಂಡಿರುವ ವಾಟ್ಸಾಪ್ ಹೊಸ ಹೊಸ ಫೀಚರ್ಸ್ ಗಳನ್ನು ಜಾರಿ ಮಾಡುತ್ತಲೇ ಇದೆ. ಆದರೂ ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಕರೆಗಳ ಮೂಲಕ ಜನರಿಗೆ ಮೋಸ ಮಾಡುವ ಒಂದು ಜಾಲವೆ ಹುಟ್ಟುಕೊಂಡಿದ್ದು, ಇದರಿಂದ ವಾಟ್ಸಾಪ್ ಬಳಕೆದಾರರು ಹೈರಾಣಾಗಿ ಹೋಗಿದ್ದಾರೆ. ಎಷ್ಟೋ ಜನರು ಇಂತಹ ಅಪರಿಚಿತ ಕರೆಗಳಿಂದ ಲಕ್ಷಾಂತರ ಹಣ ಕಳೆದುಕೊಂಡವರಿದ್ದಾರೆ. ಆದರೆ ಇದೆಲ್ಲವನ್ನು ಗಂಭೀರವಾಗಿ ಪರಿಗಣಿಸಿರುವ ಕಂಪೆನಿಯು ಇದೀಗ ಗ್ರಾಹಕರ ರಕ್ಷಣೆಗಾಗಿ ನೂತನ ಫೀಚರ್ ಒಂದನ್ನು ಪರಿಚಯಿಸಿದ್ದು ಇದನ್ನು ಅಳವಡಿಸಿಕೊಂಡರೆ ಇನ್ಮುಂದೆ ನೀವು ಅಂತಹ ಕರೆಗಳಿಂದ ರಕ್ಷಣೆ ಪಡೆಯಬಹುದು.

ಈ ನೂತನ ಫೀಚರ್ ಅನ್ನು ನೀವು ನಿಮ್ಮ ವಾಟ್ಸಾಪ್ ಖಾತೆಗೂ ಅಳವಡಿಸಿಕೊಳ್ಳಲು ಮೊದಲು ನೀವು ವಾಟ್ಸಾಪ್ ಒಪನ್ ಮಾಡಬೇಕು ನಂತರ ಬಲಭಾಗದಲ್ಲಿ ಕಾಣುವ ಮೆನು ಬಟನ್ ಕ್ಲಿಕ್ ಮಾಡಬೇಕು. ಅಲ್ಲಿ ಸೆಟ್ಟಿಂಗ್ ಆಯ್ಕೆ ಮಾಡಿದ ನಂತರ , ಸೆಟ್ಟಿಂಗ್ ನಲ್ಲಿ ಪ್ರೈವೆಸಿ ಆಯ್ಕೆಯನ್ನು ಕ್ಲಿಕ್ ಮಾಡಿ. ಅಲ್ಲಿ ಕಾಲ್ಸ್ ಆಯ್ಕೆ ಬರುತ್ತದೆ ಅದನ್ನು ಕ್ಲಿಕ್ ಮಾಡಿ ‘ಸೈಲೆನ್ಸ್ ಅನೋನ್ ಕಾಲರ್ಸ್ ಎನೆಬಲ್’ ಮಾಡಿ. ಹೀಗೆ ಮಾಡುವುದರಿಂದ ವಾಟ್ಸಾಪ್ ಬಳಕೆದಾರರಿಗೆ ಬರುವ ಅಪರಿಚಿತ ಕರೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದಾಗಿದೆ.
ಇಷ್ಟೇ ಅಲ್ಲದೆ ವಾಟ್ಸಾಪ್ ತನ್ನ ಬಳಕೆದಾರರ ಮನರಂಜನೆ ಹಾಗೂ ಸುರಕ್ಷತೆಗಾಗಿ ಹಲವು ಈಗಾಗಲೇ ಹಲವು ಫೀಚರ್ ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಚಾಟ್ ಲಾಕ್ ಫೀಚರ್ ಕೂಡ ಒಂದು. ಇದನ್ನು ಅಳವಡಿಸಿಕೊಳ್ಳುವುದರಿಂದ ಪ್ರೈವೆಸಿ ಮೆಸೆಜ್ ಗಳನ್ನು ಕಾಣದಂತೆ ಲಾಕ್ ಮಾಡಿಕೊಳ್ಳಬಹದು. ಮತ್ತೊಂದು ಪ್ರಮುಖ ಫೀಚರ್ ಎಂದರೆ ‘ಎಡಿಟ್ ಮೆಸೆಜ್’. ಇದನ್ನು ಅಳವಡಿಸಿಕೊಳ್ಳುವುದರಿಂದ ತಪ್ಪಾಗಿ ಕಳುಹಿಸಿದ ಸಂದೇಶಗಳನ್ನು 15 ನಿಮಿಷದ ಒಳಗೆ ಮತ್ತೆ ಎಡಿಟ್ ಮಾಡಿ ಕಳುಹಿಸಬಹುದಾಗಿದೆ ಎಂದು ವಾಟ್ಸಾಪ್ ಮಾತೃ ಸಂಸ್ಥೆ ಹೇಳಿಕೊಂಡಿದೆ.