ಶೀತ ಮತ್ತು ಉಷ್ಣ ಒಂದೇ ಸಮನೆ ಏಕೆ ಆಗುತ್ತಿದ. ಶೀತ ನೆಗಡಿ ಆಗುವುದು ಕಫದಿಂದಾಗಿ. ಉಷ್ಣವಾಗುವಾಗವುದು ಹೊಟ್ಟೆ ನೋವು ಹೆಚ್ಚಾಗುವುದು. ಶೀತಕ್ಕೆ ಔಷಧಿ ಮಾಡಿದರೆ ಹೊಟ್ಟೆ ನೋವಿಗೆ ತಂಪು ಮಾಡಿದರೆ ಶೀತ ಜಾಸ್ತಿ ಆಗುತ್ತದೆ. ಇಲ್ಲಿ ಮೂಲವೆಂದರೆ ಯಾವಾಗ ದೇಹದ ಜೀರ್ಣವಾಗದೆ ಇದ್ದಾಗ ಹೊಟ್ಟೆಯಲ್ಲಿ ಕಲ್ಮಶಗಳು ಇರುವುದರಿಂದ ಶೀತವಾಗುತ್ತದೆ
ಯಾವಾಗ ನಿಮ್ಮ ದೇಹದಲ್ಲಿ ಹೊಟ್ಟೆ ನೋವು ಉಷ್ಣತೆಗಳು ಹೆಚ್ಚುತ್ತವೆಯೋ ಅಂತಹ ಸಂದರ್ಭದಲ್ಲಿ ಜೀರ್ಣವಾಗುವ ಆಹಾರಗಳನ್ನು ಸೇವಿಸಬೇಕು. ನೀರಿನ ಅಂಶಗಳನ್ನು ಹೆಚ್ಚಳ ಮಾಡಬೇಕು.
ನಂತರ ದೇಹ ತಂಪು ಮಾಡುವುದು. ಮಜ್ಜಿಗೆ ಸೇವನೆ ಮಾಡುವುದರಿಂದ ಕಫ ಹೆಚ್ಚಾಗುತ್ತದೆ. ಎರಡು ಸಮಸ್ಯೆಯ ಸಂದರ್ಭದಲ್ಲಿ ಶುದ್ಧ ಹರಳೆಣ್ಣೆ ಸೇವನೆ ಮಾಡುವುದು. ಸತತ ಎಂಟು ದಿನಗಳ ಕಾಲ ಸೇವನೆ ಮಾಡುವುದರಿಂದ, ನಿಮ್ಮ ಹೊಟ್ಟೆ ಶುದ್ದಿಯಾಗುವುದರ ಜೊತೆಗೆ ಕಫ ಶುದ್ಧಿ ಆಗುತ್ತದೆ. ಇದರ ಜೊತೆಗೆ ಹೆಚ್ಚಳವಾದ ಕಫ ದೋಷ ನಿವಾರಣೆ ಮಾಡಲು, ಶೀತನೆಗಡಿಯನ್ನು ಹೋಗಿಸಲು ಅಥವಾ ಹಣೆಬಾಗ ತಲೆನೋವು ಇದನ್ನು ನಿವಾರಣೆ ಮಾಡಲು, ಬೆಳಗ್ಗೆ ಎದ್ದಕೂಡಲೇ ಬಿಸಿ ಕೊಬ್ಬರಿಯನ್ನು ಎರಡು ಹನಿ ಮೂಗಿಗೆ ಬಿಡುವುದರಿಂದ ಒಳಿತು.
ನಂತರ ಸ್ಟೀಮ್ ತೆಗೆದುಕೊಳ್ಳುವುದು ಒಳ್ಳೆಯದು. ಇದರಿಂದ ತಲೆ ಮತ್ತು ಮೆದುಳಿನ ಭಾಗದಲ್ಲಿರುವಂತಹ ಕಫ ಶ್ವಾಸನಾಳದಲ್ಲಿರುವಂತಹ ಕಫ ಎಲ್ಲವನ್ನು ಗಮನಿಸಲು ಸ್ಟೀಮ್ ಸಹಾಯಕವಾಗಿದೆ. ನಂತರ ಬಿಸಿ ನೀರಿನ ಗಾರ್ಗಿಲ್ಗಳು ಕಫ ಹೊರಹಾಕಲು ಸಹಾಯಕವಾಗಿದೆ. ಇದರೊಂದಿಗೆ ಶೀತ ನೆಗಡಿ, ಉಷ್ಣ ಸಮಸ್ಯೆಗಳು ಪರಿಹಾರವಾಗುತ್ತದೆ. ಇದು ಸಂಪೂರ್ಣ ಸರಿಯಾದ ಮೇಲೆ ದೇಹ ತಂಪು ಮಾಡುವ ಆಹಾರಗಳು ದೇಹ ತಂಪು ಮಾಡುವಂತಹ ಪಾನೀಯಗಳನ್ನು ಬಳಸುವುದು ಮುಖ್ಯ. ಹೀಗೆ ಶೀತ ಬೇರೆ ಉಷ್ಣತೆ ಬೇರೆಯಾಗಿದೆ. ಈ ರೀತಿ ಮಾಡುವುದರಿಂದ ಎರಡು ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಹೊರಗಿನ ಆಹಾರ, ಜಂಕ್ ಫುಡ್ ಗಳು ಮತ್ತು ಬಿಸಿ ಬಿಸಿ ಕರಿದಂತಹ ಎಣ್ಣೆಯುಕ್ತವಾದಂತ ಆಹಾರಗಳನ್ನು, ಸೇವನೆ ಮಾಡುವುದನ್ನು ನಿಲ್ಲಿಸುವುದು ಉತ್ತಮ. ನಂತರ ದೇಹದ ಸಮಸ್ಯೆ ಯಾವುದೇ ರೀತಿಯ ಸಮಸ್ಯೆಗಳು ಸಂಭವಿಸುವುದಿಲ್ಲ. ನಮ್ಮ ಆರೋಗ್ಯವನ್ನು ನಾವೇ ಚೆನ್ನಾಗಿ ಇಟ್ಟುಕೊಳ್ಳಬೇಕು. ಮತ್ತು ಇಂತಹ ಆಯುರ್ವೇದ ಯುತವಾದ ಆಹಾರ ಮತ್ತು ಆಹಾರ ಪದ್ಧತಿಗಳನ್ನು ಪಾಲಿಸುವುದರಿಂದ ಒಳ್ಳೆಯದಾಗುತ್ತದೆ.