ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ರಾಜಧಾನಿ ದೆಹಲಿಯಲ್ಲಿ ಪಟಾಕಿಗಳ ಮೇಲಿನ ಸಂಪೂರ್ಣ ನಿಷೇಧವನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯ ತುರ್ತು ವಿಚಾರಣೆಗಾಗಿ ಕೋರಲಾಗಿದ್ದು, ಸುಪ್ರೀಂ ಕೋರ್ಟ್ ಅದನ್ನ ವಜಾಗೊಳಿಸಿದೆ.
ಡಿಪಿಸಿಸಿ ವಿರುದ್ಧ ಸಲ್ಲಿಸಲಾದ ಅರ್ಜಿಯಲ್ಲಿ, ಪಟಾಕಿ ವ್ಯಾಪಾರಿಗಳು ಸೆಪ್ಟೆಂಬರ್ 14 ರಂದು ಡಿಪಿಸಿಸಿ ವಿಧಿಸಿದ ನಿಷೇಧವು ಕಾನೂನುಬಾಹಿರ ಮತ್ತು ನಿರಂಕುಶವಾಗಿದೆ ಎಂದು ಹೇಳಿದ್ದರು. ಡಿಪಿಸಿಸಿ ನಿರ್ಧಾರವು ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ. ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಹೈಕೋರ್ಟ್ ಅನುಮತಿ ನೀಡಬೇಕೆಂದು ಈ ವ್ಯಾಪಾರಿಗಳು ಒತ್ತಾಯಿಸಿದ್ದರು.
ಬೇಡಿಕೆಯನ್ನ ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು ಒಂದು ದೊಡ್ಡ ಪ್ರತಿಕ್ರಿಯೆಯನ್ನು ನೀಡಿದೆ. ‘ಜನರು ಶುದ್ಧ ಮತ್ತು ತೆರೆದ ಗಾಳಿಯನ್ನ ಉಸಿರಾಡಲಿ ಮತ್ತು ತಮ್ಮ ಸ್ವಂತ ಹಣದಿಂದ ಸಿಹಿತಿಂಡಿಗಳನ್ನ ಖರೀದಿಸಲಿ’ ಎಂದಿದೆ.
ದೆಹಲಿಯಲ್ಲಿ ಪಟಾಕಿಗಳನ್ನ ಖರೀದಿಸಲು ಮತ್ತು ಮಾರಾಟ ಮಾಡಲು ಸಹ ನಿಷೇಧವಿದೆ. ಇದನ್ನು ಉಲ್ಲಂಘಿಸಿದರೆ 200 ರೂ.ಗಳ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆಯನ್ನ ವಿಧಿಸಲಾಗುತ್ತೆ.