ಅನೇಕ ಸೆಲೆಬ್ರಿಟಿಗಳು ಕಾಂತಾರ ಸಿನಿಮಾವನ್ನು ನೋಡಿ ಹೊಗಳುತ್ತಿದ್ದಾರೆ. ಕನ್ನಡದ ಬಹುತೇಕ ಸ್ಟಾರ್ ಕಲಾವಿದರು ರಿಷಬ್ ಶೆಟ್ಟಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಈಗ ನವರಸ ನಾಯಕ ಜಗ್ಗೇಶ್ ಅವರು ‘ಕಾಂತಾರ’ ನೋಡಿದ್ದಾರೆ. ಅದು ಕೂಡ ವಿದೇಶದಲ್ಲಿ. ಅಮೆರಿಕಕ್ಕೆ ತೆರಳಿರುವ ಅವರು ಅಲ್ಲಿಯೇ ಸಿನಿಮಾ ನೋಡಿದ್ದಾರೆ. ಬಳಿಕ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ.
ಕಾಂತಾರ ಸಿನಿಮಾದಲ್ಲಿ ರಿಷಬ್ ಮನೆ ದೇವರು ಗುಳಿಗ ದೈವ ಆರಾಧನೆ ಇದೆ. ಗುಳಿಗ ದೈವರ ರೂಪದಲ್ಲಿಯೇ ರಿಷಬ್ ಶೆಟ್ಟಿ ಅಭಿನಯಿಸಿದ್ದಾರೆ. ರಿಷಬ್ ಶೆಟ್ಟಿ ಅಭಿನಯ ಕಂಡ ಜಗ್ಗೇಶ್ ಮಂತ್ರಮುಗ್ಧರಾಗಿದ್ದಾರೆ.
ರಿಷಬ್ ಶೆಟ್ಟಿ ಅಭಿನಯದ ಕೊನೆಯ 20 ನಿಮಿಷ ಕಂಡ ಜಗ್ಗೇಶ್ ಮೂಕ ವಿಸ್ಮಿತರಾಗಿದ್ದಾರೆ. ಸಿನಿಮಾ ನೋಡಿ ಹೊರ ಬಂದು ಕೆಲ ಕ್ಷಣ ಮೌನವಾಗಿದ್ದಾರೆ. ಸಿನಿಮಾ ನೋಡುವಾಗ ಎಲ್ಲವನ್ನೂ ಮರೆತು ತನ್ಮಯತೆಯಿಂದಲೇ ಸಿನಿಮಾ ವೀಕ್ಷಿಸಿದ್ದಾರೆ.
ಸಾಮಾಜಿಕ ಜಾಲ ತಾಣದ ತಮ್ಮ ಅಧಿಕೃತ ಖಾತೆಯಲ್ಲಿಯೇ ಜಗ್ಗೇಶ್ ಹೀಗೆ ಬರೆದುಕೊಂಡಿದ್ದಾರೆ. ದೇವರು ರಿಷಬ್ ಗೆ ಆಯುಷ್ಯ, ಆರೋಗ್ಯ ಕೊಡಲಿ, ಸಿನಿಮಾರಂಗದಲ್ಲಿ ರಿಷಬ್ ಸೇವೆ ಹೀಗೆ ಮುಂದುವರೆಯಲಿ ಅಂತಲು ಶುಭ ಹಾರೈಸಿದ್ದಾರೆ.
ಸಿನಿಮಾ ನೋಡಿ ಬಂದ್ಮೇಲೆ ನನಗೆ ಅನಿಸಿರೋದು. ಇದು ರಿಷಬ್ ಮಾಡಿದ ಸಿನಿಮಾ ಅಲ್ಲ. ಆತನ ವಂಶಿಕರ, ಆತನ ತಂದೆ-ತಾಯಿ ಆಶೀರ್ವಾದಿಂದಲೇ ಇದು ಸಾಧ್ಯವಾಗಿದೆ. ನಶಿಸುತ್ತಿರೋ ಆಧ್ಯಾತ್ಮ ಭಾವವನ್ನ ಮತ್ತೆ ಮನುಷ್ಯರಿಗೆ ನೆನಪಿಸಲು, ದೇವರೆ ಬಂದು ರಿಷಬ್ ಕೈಯಲ್ಲಿ ಇಂತಹ ಸಿನಿಮಾ ಮಾಡಿಸಿದೆ” ಎಂದು ಹೇಳಿದ್ದಾರೆ.



