ಹೆಡ್ ಬುಷ್ ಸಿನಿಮಾದ ವಿವಾದ ಕೊನೆಗೂ ಅಂತ್ಯವಾಗಿದೆ. ಸಿನಿಮಾದಲ್ಲಿ ಬೆಂಗಳೂರಿನ ಪ್ರಸಿದ್ಧ ಕರಗೋತ್ಸವಕ್ಕೆ ಹಾಗೂ ವೀರಗಾಸೆ ಕುಣಿತಕ್ಕೆ ಹಾಗೂ ವೀರಗಾಸೆ ಕಲಾವಿದರಿಗೆ ಅಪಮಾನ ಮಾಡಲಾಗಿದೆ ಅಂತ ಭಾರೀ ವಿವಾದ ಹುಟ್ಟಿಕೊಂಡಿತ್ತು. ಇದೀಗ ಪಿಲ್ಮ್ ಚೇಂಬರ್ ಹಾಗೂ ಚಿತ್ರ ತಂಡ ಜಂಟಿಯಾಗಿ ಸುದ್ದಿಗೋಷ್ಠಿ ಕರೆದು, ವಿವಾದ ಅಂತ್ಯವಾಗಿದ್ದಾಗಿ ಘೋಷಿಸಿದೆ. ಬೆಂಗಳೂರಿನಲ್ಲಿಂದು ಫಿಲ್ಮ್ ಚೇಂಬರ್ನಲ್ಲಿ ಹಾಗೂ ಹೆಡ್ ಬುಷ್ ಚಿತ್ರತಂಡ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿತು. ನಟ ಡಾಲಿ ಧನಂಜಯ, ಅಗ್ನಿ ಶ್ರೀಧರ್, ಕರಗ ಸಮಿತಿ ಹಾಗೂ ಫಿಲ್ಮ್ ಚೇಂಬರ್ ಪಧಾದಿಕಾರಿಗಳು ಭಾಗಿಯಾಗಿ, ಸ್ಪಷ್ಟನೆ ನೀಡಿದ್ರು. ಹೆಡ್ ಬುಷ್ ಚಿತ್ರದಲ್ಲಿ ಕರಗ ಹಾಗೂ ವೀರಗಾಸೆ ಕುಣಿತಕ್ಕೆ ಅವಮಾನ ಮಾಡಲಾಗಿದೆ ಎಂದು ವಿವಾದ ಉಂಟಾಗಿತ್ತು. ಆದರೆ ಈಗ ಸಮಸ್ಯೆ ಬಗೆಹರಿದಿದೆ ಎಂದು ಮಾಹಿತಿ ನೀಡಿದ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಸುಂದರ್ ರಾಜ್ ಹೇಳಿದ್ದಾರೆ.

ಇನ್ನು ಈ ವೇಳೆ ಮಾತನಾಡಿದ ನಟ ಡಾಲಿ ಧನಂಜಯ, ಎಲ್ಲ ಇಲ್ಲಿ ಕೂತು ಮಾತನಾಡಿದ್ದು ತುಂಬಾ ಖಷಿಯಾಯ್ತು. ಎಲ್ಲರೂ ನೀಟಾಗಿ ಅ ವಿಚಾರದ ಬಗ್ಗೆ ಮಾತನಾಡಿದ್ರು ಸಣ್ಣಪುಟ್ಟ ತಪ್ಪುಗಳಾಗಿದ್ರೆ ಕ್ಷಮೆ ಕೇಳ್ತಿನಿ. ಎಲ್ಲರಿಗೂ ಧನ್ಯವಾದಗಳು ಸಪೋರ್ಟ್ ಮಾಡಿದ್ದಕ್ಕೆ. ಖಂಡಿತ ನಾನು ಆಡೈಲಾಗ್ ಮ್ಯೂಟ್ ಮಾಡ್ತಿನಿ ವೀರಗಾಸೆ ವಿಚಾರವನ್ನು ಕ್ಲಿಯರ್ ಮಾಡಿದ್ದೀನಿ. ನಾನು ಇಲ್ಲಿದೆ ಬಂದಿರೋದು ಸಿನಿಮಾ ಮಾಡೋಕೆ ಕಾಂಟ್ರವರ್ಸಿ ಮಾಡೋಕಲ್ಲ ಅಂತ ಹೇಳಿದರು.
ಚಿತ್ರದಲ್ಲಿ ಬರುವ ವಿವಾದಾತ್ಮಕ ಸಂಭಾಷಣೆಯನ್ನ ಮ್ಯೂಟ್ ಮಾಡಲು ಚಿತ್ರತಂಡ ಒಪ್ಪಿದೆ ಅಂತ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಎರಡು ದಿನದಲ್ಲಿ ಆಕ್ಷೇಪಾರ್ಹ ಸಂಭಾಷಣೆಗೆ ಕತ್ತರಿ ಹಾಕಲು ಒಪ್ಪಿದ್ದಾಗಿ ಹೇಳಿದ್ದಾರೆ. ಮಾತನಾಡಿದ ಅಗ್ನಿ ಶ್ರೀಧರ್, ವೇದಿಕೆ ಮೇಲೆ ಎದುರಾಳಿಗಳಾಗಿ ಕೂತಿರೋರು ಎಲ್ಲ ನನ್ನವರೇ. ನಮ್ಮ ಸಮಸ್ಯೆ ಹಾಗೂ ಅವರ ನೋವು ನಮಗೆ ಅರ್ಥ ಆಗುತ್ತೆ. ನಿನ್ನೆ ನಾನು ಕೋಪದಲ್ಲಿ ಕಿಡಿಗೇಡಿಗಳ ವಿರುದ್ದ ಕೂಗಾಡಿದ್ದೆ. ಈ ವಿವಾದ ಮಾಡಿದ್ದು ಅರ್ ಎಸ್ ಎಸ್ ಅಲ್ಲ ಕಿಡಿಗೇಡಿಗಳು ಅಂತ ಅವರು ಹೇಳಿದರು.