ವೇದ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ರಗಡ್ ಲುಕ್ನಲ್ಲಿ ಮಿಂಚಿದ್ದು, ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.ಈ ವೇಳೆ ನಟ ಶಿವರಾಜ್ ಕುಮಾರ್ ಹಲವು ವಿಚಾರಗಳನ್ನು ಹಂಚಿಕೊಂಡರು. ಆಕ್ಷನ್ ಅಂತಾ ಬಂದಾಗ ಬೇರೆನೇ ಫೀಲ್ ಇದೆ. ವೇದ ಸಿನಿಮಾ ನೋಡಿದಾಗ ಇದು ಗೊತ್ತಾಗುತ್ತದೆ. ಸಂದರ್ಭಗಳೆಲ್ಲಾ ಹೇಳದೆ ಬರುವಂತದ್ದಾಗಿದ್ದು, ಅದು ಸಿನಿಮಾ ನೋಡಿದಾಗಲೇ ಗೊತ್ತಾಗುತ್ತದೆ ಆ ಲೈನ್ ಸಿಗುತ್ತದೆ ಎಂದು ಶಿವಣ್ಣ ತಿಳಿಸಿದರು. ಮೇನ್ ಮೂರು ಆಕ್ಷನ್ ಇದ್ದು, ಒಂದು ಸಾಂಗ್ ಜತೆ ಬರುತ್ತದೆ.

ಇನ್ನೊಂದು ಇಂಟ್ರವಲ್ ಅಲ್ಲಿ ಬರುತ್ತದೆ ಮತ್ತೊಂದು ಕ್ಲೈಮ್ಯಾಕ್ಸ್ ಅಲ್ಲಿ ಬರುತ್ತದೆ. ಮಿಕ್ಕಿದ್ದು ಚಿಕ್ಕಚಿಕ್ಕ ಫೈಟ್ಗಳಿವೆ. ಹೆಣ್ಣು ಮಕ್ಕಳಿಗೆ ತುಂಬಾ ಕನೆಕ್ಟ್ ಆಗುತ್ತಾ ಹೋಗುತ್ತದೆ, ಹೆಣ್ಣು ಮಕ್ಕಳಿಗೆ ಬಹಳ ಹತ್ತಿರವಾದ ವಿಷಯ ಇದೆ. ನಮ್ಮ ಜೀವನದಲ್ಲಿ ಎಲ್ಲಿ ಎಡವಟ್ಟು ಆಗ್ತಾ ಇದೆ ಎನ್ನುವುದು ಈ ಸಿನಿಮಾದಿಂದ ಎಲ್ಲರಿಗೂ ಲೆಸನ್ ಆಗುತ್ತದೆ ಎಂದರು ಶಿವಣ್ಣ. ಇದು ಯಾವುದೇ ನೈಜ ಕಥೆಯನ್ನು ಆಧರಿಸಿದ ಸಿನಿಮಾ ಅಲ್ಲ. ಸ್ವಲ್ಪ ಚೇಂಜ್ ಇರಲಿ ಅಂತಾ ಈ ಸಿನಿಮಾ ಆಕ್ಷನ್ ಕಂಟೆಟ್ಗಳು ಡಿಫರೆಂಟ್ ಆಗಿ ಇದೆ ಎಂದು ಹೇಳಿದರು ಶಿವಣ್ಣ.
ವೇದ ಎನ್ನುವುದು ಒಂದು ಭಾವನೆ, ವೇದ ಪಾತ್ರ ಎನ್ನುವುದು ಹೂ ಮತ್ತು ಬೆಂಕಿ. ಗತ್ತು-ಗಾಂಭೀರ್ಯ ರೋಚಕತೆ, ಸಿಟ್ಟು ಸೇಡಿನ ಜೊತೆ ಒಂದು ಲವ್ ಸೆಂಟಿಮೆಂಟ್ ಸಿನಿಮಾ ವೇದ. ಶಿವಣ್ಣ ಅವರ ಈ ಡಿಫರೆಂಟ್ ಕಾನ್ಸೆಪ್ಟ್ ಸಿನಿಮಾಗೆ ಭರ್ಜರಿಯಾಗಿ ರೆಸ್ಪಾನ್ಸ್ ಕೂಡಾ ಸಿಗುತ್ತಿದೆ. ಅಂತೂ ಈಗ ಸಿನಿಮಾ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಜನರು ಗುಂಪಾಗಿ ಥಿಯೇಟರ್ನತ್ತ ಹೆಜ್ಜೆ ಹಾಕಿದ್ದು ಎಲ್ಲರೂ ಈ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.