ಕನ್ನಡ ಚಿತ್ರರಂಗದಲ್ಲಿ ಸ್ನೇಹಕ್ಕೆ ಹೆಸರುವಾಸಿಯಾಗಿದ್ದ ನಟರೆಂದರೆ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರು. ಅವರ ನಂತರ ಸ್ನೇಹಕ್ಕೆ ಹೆಸರುವಾಸಿಯಾದ ಇನ್ನಿಬರು ನಟರು ಕಿಚ್ಚ ಸುದೀಪ್ ಮತ್ತು ಡಿಬಾಸ್ ದರ್ಶನ್. ವಿಷ್ಣು ಅಂಬರೀಶ್ ಅವರ ಹಾದಿಯಲ್ಲೇ ಇವರಿಬ್ಬರು ನಡೆಯುತ್ತಿದ್ದರು. ಇವರಿಬ್ಬರ ಸ್ನೇಹ ಕಂಡು, ಈ ಇಬ್ಬರು ನಟರ ಅಭಿಮಾನಿಗಳು ಕೂಡ ವಿಷ್ಣು ಅಂಬಿ ಸ್ನೇಹಕ್ಕೆ ಹೋಲಿಕೆ ಮಾಡುತ್ತಿದ್ದರು. ದರ್ಶನ್ ಸಿನಿಮಾಗೆ ಸುದೀಪ್ ಸಪೋರ್ಟ್ ಮಾಡುತ್ತಿದರು, ಸುದೀಪ್ ಸಿನಿಮಾಗೆ ದರ್ಶನ್ ಸುದೀಪ್ ಸಪೋರ್ಟ್ ಮಾಡುತ್ತಿದ್ದರು. ಇನ್ನು, ಹಲವಾರು ಸಮಾರಂಭಗಳಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಕೆಲವು ಅವಾರ್ಡ್ ಫಂಕ್ಷನ್ ಗಳಲ್ಲಿ ಜೊತೆಯಾಗಿ ಡ್ಯಾನ್ಸ್ ಕೂಡ ಮಾಡಿದ್ದರು, ದರ್ಶನ್ ಅವರಿಗೆ ಮುಂಗೋಪ, ಸುದೀಪ್ ಅವರು ಅದನ್ನು ಕಂಟ್ರೋಲ್ ಮಾಡುತ್ತಿದ್ದರು. ಈ ಇಬ್ಬರು ನಟರ ಪತ್ನಿಯರು ಕೂಡ ಬಹಳ ಒಳ್ಳೆಯ ಸ್ನೇಹಿತರು.

ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಆದರೆ ಇವರ ಸ್ನೇಹದ ಮೇಲೆ ಯಾರ ಕೆಟ್ಟ ದೃಷ್ಟಿ ಬಿದ್ದಿತೋ, ಕಾರಣಾಂತರಗಳಿಂದ ದರ್ಶನ್ ಸುದೀಪ್ ಸ್ನೇಹ ಮುರಿದು ಬಿತ್ತು. ಒಬ್ಬರು ಬರುವ ಕಡೆಗೆ ಮತ್ತೊಬ್ಬರು ಬರುವುದಿಲ್ಲ. ಎನ್ನುವ ಮಟ್ಟಕ್ಕೆ ಬಂದು ನಿಂತಿದೆ ಇವರಿಬ್ಬರ ಸ್ನೇಹ. ಈಗಲೂ ದರ್ಶನ್ ಅವರ ಬಗ್ಗೆ ಸುದೀಪ್ ಅವರಿಗೆ ಮಾಧ್ಯಮಗಳಲ್ಲಿ ಹಲವು ಬಾರಿ ಪ್ರಶ್ನೆ ಕೇಳಲಾಗಿದೆ. ಆಗೆಲ್ಲಾ ಸುದೀಪ್ ಅವರು ದರ್ಶನ್ ಅವರ ಬಗ್ಗೆ ಒಳ್ಳೆಯದನ್ನೇ ಹೇಳಿದ್ದಾರೆ, ವೀಕೆಂಡ್ ವಿತ್ ರಮೇಶ್ ಶೋನಲ್ಲಿ ದರ್ಶನ್ ಅವರ ಬಗ್ಗೆ ಮಾತನಾಡಿದ ಸುದೀಪ್ ಅವರು, ದರ್ಶನ್ ಯಾವಾಗಲೂ ನನ್ನ ಗೆಳೆಯ, ಆ ಸ್ಥಾನ ಅವರಿಗೆ ಯಾವಾಗಲೂ ಇರುತ್ತದೆ ಎಂದು ಹೇಳಿದ್ದರು.
ಜೀಕನ್ನಡ ವಾಹಿನಿಯ ಅವಾರ್ಡ್ ಕಾರ್ಯಕ್ರಮದಲ್ಲಿ ಸಹ, ದರ್ಶನ್ ಅವರ ಬಗ್ಗೆ ಮಾತನಾಡಿ, ಮಾತಾಡ್ತಾ ಇಲ್ಲ ಜೊತೆಯಾಗಿಲ್ಲ ಅಂತ ಆತ ನನ್ನ ಸ್ನೇಹಿತ ಅಲ್ಲ ಅಂತ ಹೇಳೋಕೆ ಸಾಧ್ಯವಿಲ್ಲ, ದರ್ಶನ್ ಯಾವಾಗಲೂ ನನ್ನ ಗೆಳೆಯ ಎಂದು ಹೇಳಿದ್ದರು. ನಾನು ಯಾರಿಗಾದರೂ ಜೀವನದಲ್ಲಿ ಒಂದು ಸ್ಥಾನ ಕೊಟ್ಟಾಗ ಅದನ್ನು ಅಷ್ಟು ಬೇಗ ಕಿತ್ತಾಕಲು ಸಾಧ್ಯವಿಲ್ಲ. ನಾನು ಎಲ್ಲೇ ಹೋಗಲಿ ದರ್ಶನ್ ಹೆಸರು ಹೇಳ್ತೀನಿ, ಅವರ ಬಗ್ಗೆ ಮಾತನಾಡ್ತೀನಿ. ಆದರೆ ಅಲ್ಲಿಂದ ನೀವು ಕೇಳಿರಲಿಕ್ಕೆ ಸಾಧ್ಯವೇ ಇಲ್ಲ. ಅಲ್ಲಿ ನನ್ನ ಹೆಸರೇ ಬರಲ್ಲ. ಸ್ನೇಹ ಎನ್ನುವುದು ಒನ್ ವೇ ಅಲ್ಲ. ಫೋಟೋ ಹಾಕಿದ್ದೀನಿ ಎಂದ ಮಾತ್ರಕ್ಕೆ ಇದು ನಾನು” ಎಂದಿದ್ದಾರೆ.
“ನಾನು ಯಾರಿಗಾದರೂ ಒಂದು ಸ್ಥಾನ ಕೊಟ್ಟರೆ, ಆ ಬಾಂಧವ್ಯವನ್ನು ಮತ್ತೊಬ್ಬರು ಕಿತ್ತಾಕಿದರೆ ನನ್ನ ಎಮೋಷನ್ ತಪ್ಪಾಗುತ್ತದೆ. ಸುಳ್ಳು, ತಾತ್ಕಾಲಿಕ ಅಂತ ಅನ್ನಿಸಿಬಿಡುತ್ತದೆ. ನಾನೊಬ್ಬರಿಗೆ ಜಾಗ ಕೊಟ್ಟಿದ್ದೀನಿ ಎಂದರೆ ನನ್ನ ಜತೆಗೆ ಇರಬೇಕು ಎಂದೇನು ಇಲ್ಲ. ನಾನು ಬದುಕಿರುವ ತನಕ ಆ ಜಾಗ ಕೊಟ್ಟಿರುತ್ತೀನಿ. ಸಾಯೋತನಕ ಆ ಜಾಗ ಕೊಟ್ಟಿರುತ್ತೀನಿ. ಹಾಗಂತ ಆ ಕಡೆಯಿಂದಲೂ ಅದೇ ರೀತಿ ಬರಬೇಕು ಎಂದು ನಿರೀಕ್ಷಿಸುವ ಜಾತಿಗೆ ನಾನು ಸೇರಿದವನಲ್ಲ” ಎದು ಹೇಳಿದ್ದಾರೆ ಸುದೀಪ್.
ಒಳ್ಳೆಯ ಮನಸ್ಸಿರುವ ಇವರಿಬ್ಬರು ಬೇಗ ಒಂದಾಗಲಿ ಎನ್ನುತ್ತಾರೆ ಅಭಿಮಾನಿಗಳು.ಸುದೀಪ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ವೈರಲ್ ಆಗಿದೆ. ಸುದೀಪ್ ಮತ್ತು ದರ್ಶನ್ ಫ್ಯಾನ್ ಪೇಜ್ಗಳು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಮತ್ತೊಮ್ಮೆ ಸ್ನೇಹದ ಹಸ್ತ ಚಾಚುವಂಥಹಾ ಮಾತನ್ನಾಡಿರುವ ಸುದೀಪ್ ಸಹೃದಯತೆ ಬಗ್ಗೆ ಹೊಗಳಿಕೆಯ ಮಹಾಪೂರವೇ ಟ್ವಿಟ್ಟರ್ ಫೇಸ್ಬುಕ್ನಲ್ಲಿ ಆಗುತ್ತಿದೆ.