ತಲೆ ಹೊಟ್ಟು ಒಂದು ರೀತಿಯ ದೊಡ್ಡ ಸಮಸ್ಯೆ ಹೌದು. ಇದರಿಂದ ಅನೇಕ ಭಯಗಳು ಉಂಟಾಗುವುದು ಸಹಜ. ಇದಕ್ಕೆ ಯಾವೆಲ್ಲ ಶ್ಯಾಂಪುಗಳನ್ನು ಟ್ರೀಟ್ಮೆಂಟ್ ಆಗಿ ತೆಗೆದುಕೊಂಡವರು ಗುಣವಾಗದೆ ಹೆಚ್ಚಾಗಿ ಪರಿನಿಸುತ್ತಿರುತ್ತದೆ. ಯಾರಲ್ಲಿ ನೀರಿನ ಅಂಶದ ಕೊರತೆ ಉಂಟಾಗುತ್ತದೆ. ಅವರಲ್ಲಿ ಕೂದಲಿನ ಸಮಸ್ಯೆ ಉಂಟಾಗುತ್ತದೆ. ಇಲ್ಲಿ ದೇಹ ಒಂದು ರೀತಿಯಾಗಿ ಒಣಗುತ್ತಿದೆ ಎನ್ನುವ ಸೂಚನೆಯಾಗಿದೆ. ದೇಹ ಒಣಗುತ್ತಿರುವುದರಿಂದ ತಲೆ ಹೊಟ್ಟು ಹೆಚ್ಚಾಗುತ್ತಿದೆ. ಕೂದಲ ಮತ್ತು ಪೋಷಣೆ ಮಾಡುವಂತಹ ಜೀವಕೋಶಗಳೆಲ್ಲ ಸಾಯುತ್ತಿದೆ ಅಂತಾನೆ ಹೇಳಬಹುದು.
ಕೂದಲ ಪೋಷಣೆಗೆ ಬೇಕಾಗುವ ಜೀವಶಕ್ತಿ ಜೀವಕೋಶಗಳಿಗೆ, ಜೀವಶಕ್ತಿಗೆ ಬೇಕಾಗುವಂತಹ ಪೋಷಣೆ ಮಾಡುತ್ತಿಲ್ಲ ಅದೇ ಕಾರಣವಾಗಿದೆ. ಕೇವಲ ಶಾಂಪೂ ಬದಲಾವಣೆಯಿಂದ ಏನು ಉಪಯೋಗವಿಲ್ಲ. ಇಂತಹ ಸಮಸ್ಯೆ ಎದುರಿಸುತ್ತಿರುವವರು ಮಾಡುತ್ತಿರುವ ತಪ್ಪೇನೆಂದರೆ ತಲೆಗೆ ಎಣ್ಣೆ ಹಾಕುವುದನ್ನು ಮರೆಯುವುದು. ಹಾಕಿದರೆ ಬೇಜಾರು ಅನ್ನುತ್ತಿರುತ್ತಾರೆ. ಹೀಗೆ ಇದರಿಂದ ತಲೆ ಹೊಟ್ಟುಗಳು ಹೆಚ್ಚಾಗುತ್ತದೆ. ಹೀಗೆ ಮೂರು ಬಾರಿ ಅಭ್ಯಂಗದಿಂದ ಅಂದರೆ ತಲೆ ಸ್ನಾನದಿಂದ ತಲೆ ಹೊಟ್ಟನ್ನು ತೆಗೆಯಬಹುದು. ಇದಕ್ಕೆ ಹೆಸರುಕಾಳಿನ ಹುಡಿ ,ಕಡಲೆ ಹಿಟ್ಟನ್ನು ಸೇರಿಸಿ ಅದರಿಂದ ನಿಮ್ಮ ತಲೆಯನ್ನು ಸ್ವಚ್ಛ ಮಾಡುವುದರಿಂದ ತಲೆ ಹೊಟ್ಟಿನ ಸಮಸ್ಯೆಯನ್ನು ದೂರ ಮಾಡಬಹುದು.
4 ರಿಂದ 5 ಚಮಚ ಮೊಸರು ,ಅಲೋವೆರಾ , ಮೆಂತ್ಯ ಹುಡಿ ,ಕರಿಬೇವಿನ ಎಲೆಗಳನ್ನು ಸೇರಿಸಿ ಪೇಸ್ಟ್ ಮಾಡಿ ಕೂದಲ ಬುಡಕ್ಕೆ ಲೇಪನ ಮಾಡುವುದರಿಂದ, ಈ ಮಿಶ್ರಣದಿಂದ ತಲೆ ಹೊಟ್ಟಿನಿಂದ ನಿವಾರಣೆಯನ್ನು ಪಡೆದುಕೊಳ್ಳಬಹುದು.ಇದು ಹೊರಭಾಗದಿಂದ ಆಗುವ ತೊಂದರೆಗಳು. ಹೊರಗೆ ತಿನ್ನುವ ಆಹಾರಗಳು ಮೈದಾ ,ಗೋಧಿ ಮಾಡುವ ಆಹಾರ ಹೊರಗಿನ ಆಹಾರ ಮತ್ತು ಜಂಕ್ ಫುಡ್ ಅಭ್ಯಾಸಗಳಿಂದ ದೂರವಿರಬೇಕು. ಇದು ಅಜೀರ್ಣ ಸಮಸ್ಯೆಯಿಂದ ಅನೇಕ ತೊಂದರೆಗಳನ್ನು ಉಂಟಾಗಿಸುತ್ತದೆ. ಎಂಟು ಗಂಟೆಗಳ ತನಕ ಪ್ರತಿ ಗಂಟೆ ಒಂದು ಲೊಟ ನೀರು ಸೇವನೆ ಒಳ್ಳೆಯದು. ಇದರಿಂದ ಚರ್ಮ ವಾದ್ಯಿಗಳು ಸರಿಯಾಗುತ್ತದೆ. ಆರೈಕೆ ಚೆನ್ನಾಗಿದ್ದಾಗ ಸಮಸ್ಯೆಗಳು ಪರಿಹಾರವಾಗುತ್ತದೆ.