ನಟ ದರ್ಶನ್ ಅವರು ಕಳೆದ ವರ್ಷದಿಂದ ಅದೊಂದು ಕೇಸ್ ವಿಚಾರದಲ್ಲಿ ಎಷ್ಟು ಕಷ್ಟ ಅನುಭವಿಸುತ್ತಿದ್ದಾರೆ ಎಂದು ನಮಗೆಲ್ಲಾ ಗೊತ್ತೇ ಇದೆ. 6 ತಿಂಗಳ ಅವಧಿಯಲ್ಲಿ ಎರಡೆರಡು ಸಾರಿ ಜೈಲುಗಳು ಟ್ರಾನ್ಸ್ಫರ್ ಆಗಿ, ಕೊನೆಗೆ ಕಳೆದ ವರ್ಷ ಡಿಸೆಂಬರ್ ನಲ್ಲಿ ದರ್ಶನ್ ಅವರಿಗೆ ಜಾಮೀನು ಸಿಕ್ಕಿತು. ಅದು ಸಿಕ್ಕಿದ್ದು ಆರೋಗ್ಯ ಸಮಸ್ಯೆ ಇದ್ದ ಕಾರಣಕ್ಕೆ. ಸರ್ಜರಿ ಮಾಡಿಸಬೇಕು, ಇಲ್ಲದೇ ಹೋದರೆ ಬೆನ್ನಿಗೆ ತುಂಬಾ ಸಮಸ್ಯೆ ಆಗುತ್ತದೆ ಎನ್ನುವ ಕಾರಣಕ್ಕೆ ಕೋರ್ಟ್ ದರ್ಶನ್ ಅವರಿಗೆ ಜಾಮೀನು ಮಂಜೂರು ಮಾಡಿತು. ಬಳಿಕ ದರ್ಶನ್ ಅವರಿಗೆ ಪೂರ್ಣ ಪ್ರಮಾಣದಲ್ಲಿ ಜಾಮೀನು ಸಿಕ್ಕಿ, ಹೊರಗಡೆ ಬಂದರು. ಹೊರಗಡೆ ಬಂದ ನಂತರ ಒಂದಷ್ಟು ದಿವಸಗಳ ಕಾಲ ದರ್ಶನ್ ಅವರು ಎಲ್ಲಿಯೂ ಹೊರಗಡೆ ಕಾಣಿಸಿಕೊಂಡಿರಲಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದರು.
ಮೈಸೂರಿನ ಫಾರ್ಮ್ ಹೌಸ್ ನಲ್ಲೇ ಹೆಚ್ಚು ದಿವಸ ಇದ್ದರು, ತಮ್ಮ ಕುಟುಂಬದವರನ್ನು ಬಿಟ್ಟು ಇನ್ಯಾರನ್ನು ಕೂಡ ಅವರು ಭೇಟಿ ಮಾಡುತ್ತಿರಲಿಲ್ಲ. ನಿಧಾನವಾಗಿ ಹೊರಗಡೆ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದರು. ದರ್ಶನ್ ಅವರಿಗೆ ಹೆಚ್ಚು ಹೊತ್ತು ನಿಲ್ಲಲು ಆಗುವುದಿಲ್ಲ, ಆರೋಗ್ಯ ಇನ್ನು ಕೂಡ ಸರಿ ಹೋಗಿಲ್ಲ ಎನ್ನುವ ಕಾರಣಕ್ಕೆ, ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳುವುದಕ್ಕೆ ಅವರಿಂದ ಸಾಧ್ಯ ಆಗಲೂ ಇಲ್ಲ. ಒಂದು ವಿಡಿಯೋ ಶೇರ್ ಮಾಡುವ ಮೂಲಕ, ಎಲ್ಲಾ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದರು. ಮೀಟ್ ಮಾಡಲು ಸಾಧ್ಯ ಆಗದೇ ಹೋದರು ಸಹ, ದರ್ಶನ್ ಅವರ ಫ್ಯಾನ್ಸ್ ಮಾತ್ರ ತಮ್ಮ ಡಿಬಾಸ್ ಬರ್ತ್ ಡೇ ಸೆಲೆಬ್ರೇಟ್ ಮಾಡದೇ ಹಾಗೆಯೇ ಬಿಡಲಿಲ್ಲ. ವಿಭಿನ್ನವಾಗಿ ಬಡವರಿಗೆ, ಹಿರಿಯರಿಗೆ, ಮಕ್ಕಳಿಗೆ ಸಹಾಯ ಮಾಡುವ ಮೂಲಕ ದರ್ಶನ್ ಅವರ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ.

ಹಾಗೆಯೇ ದರ್ಶನ್ ಅವರಿಗೆ ಫ್ಯಾನ್ಸ್ ಅಂದ್ರೆ ಎಷ್ಟು ಪ್ರೀತಿ ಇದೆಯೋ, ಫ್ಯಾನ್ಸ್ ಗೆ ದರ್ಶನ್ ಅವರು ಅಂದ್ರೆ ಅದಕ್ಕಿಂತ ಡಬಲ್ ಪ್ರೀತಿ ಎಂದು ಹೇಳಿದರೆ ತಪ್ಪಲ್ಲ. ದರ್ಶನ್ ಅವರನ್ನು ಯಾವತ್ತಿಗೂ ಅವರ ಫ್ಯಾನ್ಸ್ ಬಿಟ್ಟುಕೊಟ್ಟಿಲ್ಲ. ಎಂಥಾ ಕಷ್ಟದ ಸಮಯದಲ್ಲೇ ಆದರೂ ದರ್ಶನ್ ಅವರ ಜೊತೆಗೆ ನಿಂತಿದ್ದು, ಅವರ ಪತ್ನಿ ಫ್ಯಾಮಿಲಿ ಹಾಗೂ ಅವರ ಫ್ಯಾನ್ಸ್. ಯಾರು ಏನೇ ಅಂದರು ಕೂಡ ದರ್ಶನ್ ಅವರ ಫ್ಯಾನ್ಸ್ ಮಾತ್ರ, ಡಿಬಾಸ್ ಅನ್ನು ಬಿಟ್ಟುಕೊಡುತ್ತಿರಲಿಲ್ಲ. ಯಾರಾದರೂ ದರ್ಶನ್ ಅವರ ಬಗ್ಗೆ ನೆಗಟಿವ್ ಆಗಿ ಮಾತನಾಡಿದರೆ, ಫ್ಯಾನ್ಸ್ ಅವರಿಗೆ ಉತ್ತರ ಕೊಡುತ್ತಿದ್ದರು. ಈ ಕಾರಣಕ್ಕೆ ದರ್ಶನ್ ಅವರಿಗೂ ಕೂಡ ಫ್ಯಾನ್ಸ್ ಅಂದ್ರೆ ಪ್ರಾಣ. ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫ್ಯಾನ್ಸ್ ಈ ರೀತಿ ಒಳ್ಳೆಯ ಕೆಲಸ ಮಾಡಿರುವ 100ಕ್ಕಿಂತ ಹೆಚ್ಚು ಪೋಸ್ಟ್ ಗಳನ್ನು ಶೇರ್ ಮಾಡಿದ್ದರು.
ದರ್ಶನ್ ಫ್ಯಾನ್ಸ್ ಸರಿ ಇಲ್ಲ ಎಂದು ಹೇಳುವ ಎಲ್ಲರಿಗೂ ಈ ಪೋಸ್ಟ್ ಗಳು ಸರಿಯಾದ ತಿರುಗೇಟು ನೀಡಿದ ಹಾಗಿತ್ತು ಎಂದರೂ ತಪ್ಪಲ್ಲ. ಇನ್ನು ನಟ ದರ್ಶನ್ ಅವರು ಕಷ್ಟದಲ್ಲಿದ್ದಾರೆ ಎಂದು ನಮಗೆಲ್ಲಾ ಗೊತ್ತೇ ಇದೆ. ಅವರು ಹೊರಗಡೆ ಬರುತ್ತಿದ್ದ ಹಾಗೆ, ಪತ್ನಿ ವಿಜಯಲಕ್ಷ್ಮಿ ಅವರು ಹಾಗೂ ದರ್ಶನ್ ಅವರ ತಾಯಿ ಇಬ್ಬರು ಕೂಡ ಚಾಮುಂಡೇಶ್ವರಿ ತಾಯಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇನ್ನು ದರ್ಶನ್ ಅವರು ಮತ್ತು ಧನವೀರ್ ಅವರು ಉಕ್ಕಡದ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇನ್ನು ವಿಜಯಲಕ್ಷ್ಮಿ ಅವರು ಕಾಮ್ಯಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು, ಶೃಂಗೇರಿಯಲ್ಲಿ ವಿಶೇಷ ಪೂಜೆಯನ್ನು ಸಹ ಮಾಡಿಸಿದ್ದರು. ಕೆಲವೇ ದಿನಗಳ ಹಿಂದೆ ಭಗವತಿ ದೇವಸ್ಥಾನಕ್ಕೆ ಸಹ ಭೇಟಿ ನೀಡಿದ್ದರು. ಕುಟುಂಬ ಸಮೇತ ದರ್ಶನ್ ಅವರು ಭಗವತಿ ದೇವಸ್ಥಾನಕ್ಕೆ ಹೋಗಿಬಂದರು.
ಅಲ್ಲಿ ಶತ್ರುಸಂಹಾರ ಪೂಜೆ ಮಾಡಿಸಿದ್ದಾರೆ ಎನ್ನುವ ವಿಚಾರ ಸಿಕ್ಕಾಪಟ್ಟೆ ವೈರಲ್ ಆಯಿತು. ಇದಾದ ಬಳಿಕ ದರ್ಶನ್ ಅವರು ಶೂಟಿಂಗ್ ಗಾಗಿ ರಾಜಸ್ಥಾನಕ್ಕೆ ಹೋದರು, ಮೊನ್ನೆಯಷ್ಟೇ ಧನವೀರ್ ಅವರ ಸಿನಿಮಾ ನೋಡಿ ಇಷ್ಟಪಟ್ಟು, ಮಾಧ್ಯಮದ ಎದುರು ಕೂಡ ಸಿನಿಮಾ ಬಗ್ಗೆ ಮಾತನಾಡಿದರು. ಎಲ್ಲವು ಈಗ ಒಂದು ಹಂತಕ್ಕೆ ನಾರ್ಮಲ್ ಆಗಿಯೇ ಸಾಗುತ್ತಿದೆ. ಆದರೆ ವಿಜಯಲಕ್ಷ್ಮೀ ಅವರು ಮಾತ್ರ ದರ್ಶನ್ ಅವರ ಕ್ಷೇಮವನ್ನು ಮರೆತಿಲ್ಲ. ದರ್ಶನ್ ಅವರಿಗೆ ಒಳ್ಳೆದಾಗ್ಲಿ ಎಂದು ಟೆಂಪಲ್ ರನ್ ಮಾಡುತ್ತಲೇ ಇದ್ದಾರೆ. ಇದೀಗ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವ ಅಣ್ಣಮ್ಮ ದೇವಸ್ಥಾನಕ್ಕೆ ವಿಜಯಲಕ್ಷ್ಮೀ ಅವರು ಭೇಟಿ ನೀಡಿ, ವಿಶೇಷ ಪೂಜೆ ಮಾಡಿಸಿದ್ದಾರೆ.
ಪತ್ನಿಗೆ ದರ್ಶನ್ ಅವರು ಸಾಥ್ ನೀಡಿದ್ದಾರೆ. ದರ್ಶನ್ ಅವರು ಜೈ*ಲಿನ ಒಳಗೆ ಇದ್ದಾಗ, ಬೇಗ ಹೊರಗಡೆ ಬರಲಿ ಎಂದು ದರ್ಶನ್ ಅವರಿಗಾಗಿ ವಿಶೇಷ ಹರಕೆ ಕಟ್ಟಿಕೊಂಡಿದ್ದರಂತೆ ವಿಜಯಲಕ್ಷ್ಮಿ ಅವರು. ಇದೀಗ ಆ ಹರಕೆಯನ್ನು ತೀರಿಸಿದ್ದು, ಅಣ್ಣಮ್ಮ ದೇವಸ್ಥಾನಕ್ಕೆ ಬಂದಿದ್ದಾರೆ. ಪತ್ನಿಗೆ ದರ್ಶನ್ ಅವರು ಸಾಥ್ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ, ಪೂಜೆ ಮಾಡಿಸಿದ ನಂತರ ವಿಜಯಲಕ್ಷ್ಮಿ ದರ್ಶನ್ ಅವರು ಈಗ ಅಣ್ಣಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಗಂಡನಿಗೋಸ್ಕರ ಎಷ್ಟೆಲ್ಲಾ ಮಾಡ್ತಿದ್ದಾರೆ ಅನ್ನೋದನ್ನ ನಾವು ಮೆಚ್ಚಿಕೊಳ್ಳಲೇಬೇಕು. ಇನ್ನು ದರ್ಶನ್ ಅವರ ಮಗ ಕೂಡ ಅಪ್ಪನಿಗೆ ಒಳ್ಳೆದಾಗ್ಲಿ ಎಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಇನ್ನು ದರ್ಶನ್ ಅವರು ಈಗ ಡೆವಿಲ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಡೆವಿಲ್ ಸಿನಿಮಾದ ಶೂಟಿಂಗ್ ರಾಜಸ್ಥಾನದಲ್ಲಿ ನಡೆಯಿತು, ದರ್ಶನ್ ಅವರೊಡನೆ ಪತ್ನಿ ವಿಜಯಲಕ್ಷ್ಮೀ ಮತ್ತು ಮಗ ವಿನಿಷ್ ಸಹ ಭಾಗಿಯಾಗಿದ್ದರು. ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸ್ ಬಂದ ನಂತರ ದರ್ಶನ್ ಅವರು ಧನವೀರ್ ಅಭಿನಯದ ವಾಮನ ಸಿನಿಮಾ ವೀಕ್ಷಿಸಿದರು. ಈಗ ಮಾಧ್ಯಮಗಳ ಎದುರು ಸಹ ಮಾತಾನಾಡುವುದಕ್ಕೆ ಶುರು ಮಾಡಿದ್ದಾರೆ. ಅಭಿಮಾನಿಗಳು ಸಧ್ಯಕ್ಕೆ ಡೆವಿಲ್ ಸಿನಿಮಾ ಅಪ್ಡೇಟ್ ಗಾಗಿ ಕಾಯುತ್ತಿದ್ದು, ಇದೇ ವರ್ಷ ಡೆವಿಲ್ ಸಿನಿಮಾ ತೆರೆ ಕಾಣುತ್ತಾ ಎಂದು ಕಾದು ನೋಡಬೇಕಿದೆ.