ನಟ ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನಾ ನಿಧನರಾಗಿ ಇಂದಿಗೆ 12 ದಿನಗಳಾಗಿವೆ. ಆಗಸ್ಟ್ 6 ರಂದು ಸ್ಪಂದನಾ ಬ್ಯಾಂಕಾಕ್ ಪ್ರವಾಸದಲ್ಲಿದ್ದಾಗ ಹಠಾತ್ ಹೃದಯಾಘಾತದಿಂದ ನಿಧನರಾದರು. ಈ ಸಾವು ಇಡೀ ರಾಜ್ಯವನ್ನೇ ವ್ಯಪಿಸಿಕೊಂಡಿತ್ತು. ಇದೀಗ ವಿಜಯ ರಾಘವೇಂದ್ರ ತಮ್ಮ ಪ್ರೀತಿಯ ಮಡದಿಯನ್ನು ನೆನಪಿಸಿಕೊಂಡಿದ್ದು, ಸ್ಪಂದನಾ ಅವರ ಬಗ್ಗೆ ಭಾವನಾತ್ಮಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ, ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ವಿಜಯ್ ರಾಘವೇಂದ್ರ, ‘ಸ್ಪಂದನ. ಹೆಸರಿಗೆ ತಕ್ಕ ಜೀವ. ಉಸಿರೆಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದೆ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ, ಕೇವಲ ನಿನ್ನವ. ಚಿನ್ನ’ ಎಂದು ತನ್ನದೇ ಧ್ವನಿಯಲ್ಲಿ ತನ್ನ ಪ್ರೀತಿಯ ಪತ್ನಿಯನ್ನು ನೆನಪಿಸಿಕೊಂಡಿದ್ದಾರೆ.
ಸ್ಪಂದನ ಸಾವಿನ ಬಳಿಕ ವಿಜಯ್ ರಾಘವೇಂದ್ರ ಅವರು ಹಂಚಿಕೊಂಡ ಮೊದಲ ವಿಡಿಯೋ ಇದಾಗಿದ್ದು, ಅನೇಕರು ಚಿನ್ನಾರಿ ಮುತ್ತ ಪ್ರೀತಿಯ ಮಡದಿಯ ಬಗ್ಗೆ ಬರೆದಿರುವುದನ್ನು ಕಂಡು ಅನೇಕರು ಕಾಮೆಂಟ್ ಮಾಡಿದ್ದಾರೆ .ಕೆಲವರು ಚಿನ್ನಾರಿ ಮುತ್ತನಿಗೆ ಧೈರ್ಯ ಹೇಳಿದರೆ, ಮತ್ತೆ ಕೆಲವರು ವಿಜಯ-ಸ್ಪಂದನಾ ಅವರಂತಹ ಒಳ್ಳೆಯ ಜೋಡಿಯನ್ನು ಬೇರ್ಪಡಿಸಿದ ದೇವರನ್ನು ಶಪಿಸುತ್ತಿದ್ದಾರೆ.