ಪ್ರತಿದಿನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದಲ್ಲಾ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ಜುಗಾಡ್ ವಿಡಿಯೋ ವೈರಲ್ ಆದರೆ, ಇನ್ನು ಕೆಲವೊಮ್ಮೆ ಜನರ ಜಗಳದ ವಿಡಿಯೋ, ಮತ್ತೆ ಕೆಲವೊಮ್ಮೆ ಮುದ್ದಾದ ಮಕ್ಕಳ ವಿಡಿಯೋಗಳು ವೈರಲ್ ಆಗುತ್ತವೆ. ರೀಲ್ಸ್ ಲೈಕ್ಸ್ ಪಡೆಯಲು ಅಪಾಯಕಾರಿ ಸಾಹಸ ಮತ್ತು ವಿಚಿತ್ರ ಚಟುವಟಿಕೆಗಳನ್ನು ಮಾಡುವ ಜನರ ವಿಡಿಯೋಗಳು ಸಹ ವೈರಲ್ ಆಗದೆ ಇರಲಾರವು ಅಲ್ಲವೇ. ಆದರೆ ಕೆಲವೊಮ್ಮೆ ಇವೆಲ್ಲಕ್ಕಿಂತ ವಿಭಿನ್ನವಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಜನರ ಗಮನ ಸೆಳೆದು ಕುತೂಹಲ ಮೂಡಿಸುತ್ತವೆ. ಇದೀಗ ಅಂತಹ ವಿಡಿಯೋವೊಂದು ವೈರಲ್ ಆಗಿದ್ದು ನಿಮಗೆ ಅಚ್ಚರಿ ಮೂಡಿಸುತ್ತದೆ. ಹಾಗಾದರೆ ಆ ವಿಡಿಯೋ ಯಾವುದು? ಎಂದು ನೋಡೋಣ ಬನ್ನಿ…
इसे खाना है या ओढ़ना है। कितने लोग खाएंगे एक रोटी को और कैसे खायेंगे इतनी बड़ी रोटी pic.twitter.com/DkyQlSUcfQ
— छपरा जिला (@ChapraZila) January 8, 2025
ವೈರಲ್ ವಿಡಿಯೋದಲ್ಲಿ ಇರುವುದೇನು?
ಕೆಲವು ಮನೆಗಳಲ್ಲಿ ನೀವು ಪ್ರತಿದಿನ ಮುದ್ದೆ, ಕಡುಬು, ಚಪಾತಿ, ದೋಸೆ ತಿನ್ನುವವರನ್ನು ನೋಡಿರಬೇಕು. ಹಾಗೆಯೇ ರೊಟ್ಟಿ ಕೂಡ ಕೆಲವರ ಮನೆಯಲ್ಲಿ ದಿನನಿತ್ಯದ ಬ್ರೇಕ್ಫಾಸ್ಟ್. ರೊಟ್ಟಿ ವಿಚಾರಕ್ಕೆ ಬಂದಾಗ ನಾವೆಲ್ಲಾ ಸಾಮಾನ್ಯವಾಗಿ ದೋಸೆ ಅಥವಾ ಚಪಾತಿ ಗಾತ್ರದ ರೊಟ್ಟಿಯನ್ನು ನೋಡಿದ್ದೇವೆ. ಜೊತೆಗೆ ಇದನ್ನು ಹೆಂಚಿನಲ್ಲಿ ತಯಾರಿಸುವುದನ್ನು ಅಥವಾ ಮಷಿನ್ ಸಹಾಯದಿಂದ ಮಾಡುವುದನ್ನು ನೋಡಿರಬಹುದು. ಆದರೆ ಅವುಗಳ ಗಾತ್ರ ಒಂದು ಹೊದಿಕೆಯಷ್ಟು ದೊಡ್ಡ ಇರುವುದನ್ನು ನೀವು ಎಂದಾದರೂ ನೋಡಿದ್ದೀರಾ?. ಹೌದು, ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇದೇ ರೀತಿ ರೊಟ್ಟಿ ಮಾಡುತ್ತಿರುವುದು ಕಂಡು ಬಂದಿದೆ. ವ್ಯಕ್ತಿಯೊಬ್ಬರು ಹಾಳೆಯಂತಹ ದೊಡ್ಡ ರೊಟ್ಟಿಗಳನ್ನು ತಯಾರಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ರೊಟ್ಟಿಯ ಗಾತ್ರವೇ ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ಕಾರಣವಾಗಿದೆ. ನೀವೂ ಒಮ್ಮೆ ವಿಡಿಯೋ ನೋಡಿ
ಬಳಕೆದಾರರು ಹೇಳಿದ್ದೇನು?
ನೀವು ಈಗಷ್ಟೇ ವೀಕ್ಷಿಸಿದ ವೀಡಿಯೊವನ್ನು @ChapraZila ಹೆಸರಿನ ಖಾತೆಯಿಂದ X ಪ್ಲಾಟ್ಫಾರ್ಮ್ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋವನ್ನು ಪೋಸ್ಟ್ ಮಾಡುವಾಗ, ‘ಇದನ್ನು ತಿನ್ನಬೇಕೆ ಅಥವಾ ಧರಿಸಬೇಕೆ’ ಎಂಬ ಶೀರ್ಷಿಕೆಯನ್ನು ನೋಡಬಹುದು. ಬಳಕೆದಾರರು “ಒಂದು ರೊಟ್ಟಿಯನ್ನು ಎಷ್ಟು ಜನರು ತಿನ್ನುತ್ತಾರೆ ಮತ್ತು ಅವರು ಅಷ್ಟು ದೊಡ್ಡ ರೊಟ್ಟಿಯನ್ನು ಹೇಗೆ ತಿನ್ನುತ್ತಾರೆ?, ಇದರ ಸೃಷ್ಟಿಕರ್ತ ಕೂಡ ತುಂಬಾ ಪ್ರತಿಭಾವಂತ ವ್ಯಕ್ತಿ ಎಂದು ತೋರುತ್ತದೆ. ನೀವು ಇದನ್ನು ಚಳಿಗಾಲದಲ್ಲಿ ಸಹ ಧರಿಸಬಹುದು, ಇದು ಹಾಸಿಗೆಯಂತೆ ತೋರುತ್ತದೆ, ಅನೇಕ ಜನರು ಇಂತಹ ರೊಟ್ಟಿ ಒಟ್ಟಿಗೆ ತಿನ್ನುತ್ತಾರೆ” ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಸುದ್ದಿ ಬರೆಯುವವರೆಗೂ 7 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ.