ಸದಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಡ್ರೆಸ್ ವಿಚಾರವಾಗಿ ಟ್ರೆಂಡ್ ಆಗುತ್ತಿರುವ ಉರ್ಫಿ ಜಾದೇವ್ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ವಿಚಿತ್ರ ಉಡುಗೆಯಿಂದ ಸದಾ ಕಾಲ ಟ್ರೊಲ್ ಆಗುತ್ತಿದ್ದ ಉರ್ಫಿ ಜಾದೇವ್, ಟ್ರೋಲ್ಗಳಿಗೂ ತಲೆಕೆಡಿಸಿಕೊಳ್ಳದೆ ತನ್ನ ಇಷ್ಟದಂತೆ ಬಟ್ಟೆ ಧರಿಸುತ್ತಿದ್ದು, ಪದೇ ಪದೇ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಉರ್ಫಿ ಜಾಧವ್ ಅನೇಕ ರೀಲ್ಸ್ ಗಳನ್ನು ಮಾಡುತ್ತಿದ್ದು, ವಿಚಿತ್ರ ಬಟ್ಟೆಯನ್ನು ಧರಿಸಿ ಫೋಟೋ ಶೂಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಸಾಂಗ್ ಶೂಟಿಂಗ್ ಮಾಡುವ ಸಂದರ್ಭದಲ್ಲಿ ಉಯ್ಯಾಲೆಯಲ್ಲಿ ತೂಗಾಡುವ ಸಂದರ್ಭ ಎದುರಾಗಿದ್ದು, ಈ ವೇಳೆ ಬ್ಯಾಲೆನ್ಸ್ ತಪ್ಪಿ ಉರ್ಫಿಯವರು ಕೆಳಕ್ಕೆ ಬಿದ್ದ ಘಟನೆ ನೆಡೆದಿದ್ದು, ತಕ್ಷಣ ಬಂದ 9 ಗಂಡಸರು ಉರ್ಫಿಯವರನ್ನು ಹಿಡಿದುಕೊಂಡಿದ್ದಾರೆ.

ಉರ್ಫಿ ಉಯ್ಯಾಲೆಯಿಂದ ಕೆಳಕ್ಕೆ ಬೀಳುವ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಉರ್ಫಿಗೆ ಇದು ಬೇಕಿತ್ತಾ ಎನ್ನುವ ಅನೇಕ ಹಾಸ್ಯಭರಿತ ಕಾಮೆಂಟ್ ಎಲ್ಲೆಡೆ ಬರುತ್ತಿದೆ. ಇದಷ್ಟೇ ಅಲ್ಲದೆ ಅವರು ಬಿದ್ದ ವಿಡಿಯೋವನ್ನು ಸ್ವತಃ ಅವರೇ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ಅದನ್ನ ನೋಡಿದ ಅಭಿಮಾನಿಗಳು ಅನೇಕ ರೀತಿಯ ಕಾಮೆಂಟ್ ಗಳನ್ನು ನೀಡಿದ್ದಾರೆ. ಉರ್ಫಿ ಈ ವಿಡಿಯೋ ಹಂಚಿಕೊಂಡ ಕೆಲವೇ ಕೆಲವು ಘಂಟೆಗಳಲ್ಲಿ 12 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡುಬಂದಿದೆ.
ಉರ್ಫಿಯವರು ಬೀಳುವ ವಿಡಿಯೋ ಹಾಗೂ ಅವರನ್ನ ಹಿಡಿದುಕೊಳ್ಳಲು ಅಲ್ಲಿ ನಿಂತಿರುವ ಯುವಕರನ್ನು ನೋಡಿ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಅವರ ವಿಡಿಯೋವನ್ನು ಅವರೇ ಹಂಚಿಕೊಳ್ಳುವ ಮೂಲಕ ಮತ್ತಷ್ಟು ಟ್ರೊಲ್ ಗೆ ಇಡಾಗಿದ್ದಾರೆ ಉರ್ಫಿ ಜಾವೇದ್. ಉರ್ಫಿ ಜಾವೇದ್ ರವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿದ್ದು, ಹಿಂದಿ ಬಿಗ್ ಬಾಸ್ ಮೂಲಕ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದ್ದು, ಅನೇಕ ರೀಲ್ಸ್ ಹಾಟ್ ಲುಕ್ ನಿಂದ ಪದೇ ಪದೇ ಟ್ರೋಲ್ ಆಗುತ್ತಿದ್ದು, ಈ ಮೂಲಕ ಉರ್ಫಿ ಜಾವೇದ್ ರವರ ಸೋಷಿಯಲ್ ಮೀಡಿಯಾ ಹಿಂಬಾಲಕರ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ.
ಪುನಮ್ ಪಾಂಡೆ ಕೂಡ ಈ ಹಿಂದೆ ಇದೆ ರೀತಿಯ ವಿಡಿಯೋ ಮಾಡುವ ಮುಖಾಂತರ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದು, ಉರ್ಫಿ ಜಾವೇದ್ ಕೂಡ ಈ ಗುಂಪಿಗೆ ಸೇರಿಕೊಂಡಿದ್ದಾರೆ. ಬಾಲಿವುಡ್ ಸಿನಿ ಜಗತ್ತು ಹಾಗೂ ಸೀರಿಯಲ್ ಜಗತ್ತಿನ ಒಂದಿಷ್ಟು ಹೀರೋಯಿನ್ ಗಳು ಬೋಲ್ಡ್ ಲುಕ್ ಫೋಟೋ ಶೂಟ್ ಗಳಿಂದ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಾ ಬಂದಿದ್ದು, ಬೋಲ್ಡ್ ಲುಕ್ ಮುಖಾಂತರ ತಮ್ಮ ಫಲೋವರ್ಸ್ಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಕ್ರಮೇಣ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಷ್ಟು ರೀಲ್ಸ್ ಹಾಗೂ ಇನ್ನಿತರೇ ವಿಡಿಯೋಗಳಿಂದ ಸುದ್ದಿಯಾಗುವ ಅನೇಕ ಮಂದಿಗಳ ಒಂದು ಗುಂಪು ಸೋಷಿಯಲ್ ಮೀಡಿಯಾಗಳನ್ನು ಆವರಿಸಿಕೊಂಡಿದ್ದು, ಬಾಲಿವುಡ್ ಮಾತ್ರವಲ್ಲದೆ ಸ್ಯಾಂಡಲ್ ವುಡ್ ನಲ್ಲಿ ಕೂಡ ಸಾಕಷ್ಟು ಮಂದಿ ಇಂತಹ ನೆಗೆಟಿವ್ ಪಬ್ಲಿಸಿಟಿಯ ಮೂಲಕ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಸದಾ ಸೋಷಿಯಲ್ ಮೀಡಿಯಾ ಮೂಲಕ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುವ ಉರ್ಫಿ ಜಾವೇದ್ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಕ್ಟಿವ್ ಆಗಿದ್ದು, ತಮ್ಮ ಬೋಲ್ಡ್ ಲುಕ್ ಮುಖಾಂತರ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿ ಬಿಟ್ಟಿದ್ದಾರೆ.