ರಾಮ್ ಚರಣ್ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ನಟರಲ್ಲಿ ಒಬ್ಬರು. ಇತ್ತೀಚಿಗೆ ತೆರೆಕಂಡ ಆರ್. ಆರ್. ಆರ್ ಚಿತ್ರದ ಮೂಲಕ ಸಾಕಷ್ಟು ಹೆಸರು ಗಳಿಸಿದ್ದರು. ಅಷ್ಟೇ ಅಲ್ಲದೆ ಇವರು ಡ್ಯಾನ್ಸ್ ಮಾಡಿದ್ದ ನಾಟು ನಾಟು ಸಾಂಗ್ ಆಸ್ಕರ್ ಪಡೆದುಕೊಳ್ಳುವಲ್ಲಿ ಕೂಡ ಯಶಸ್ಸು ಕಂಡಿತ್ತು. ಕೆಲ ದಿನಗಳ ಹಿಂದೆಯಷ್ಟೇ 11ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ರಾಮ್ ಚರಣ್ ಹಾಗೂ ಪತ್ನಿ ಉಪಾಸನಾ ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇಂದು ಮುಂಜಾನೆ ಟಾಲಿವುಡ್ ಸಿನಿಮಾ ಅಭಿಮಾನಿಗಳಿಗೆ ರಾಮ್ ಚರಣ್ ದಂಪತಿಗಳು ಶುಭ ಸುದ್ದಿ ನೀಡಿದ್ದಾರೆ.

ರಾಮ್ ಚರಣ್ ಪತ್ನಿ ಉಪಾಸನ ಸೋಮವಾರ ರಾತ್ರಿ ಹೈದರಾಬಾದ್ ಜುಬಲಿ ಹಿಲ್ಸ್ ಸಮೀಪ ವಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮುಂಜಾನೆ ವೈದ್ಯರಿಂದ ಹೆಲ್ತ್ ಬುಲೆಟಿನ್ ಬಿಡುಗಡೆಗೊಂಡಿದ್ದು, ರಾಮ್ ಚರಣ್ ಪತ್ನಿ ಉಪಾಸನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎನ್ನುವ ಸುದ್ದಿ ಹೊರಬಿದಿದ್ದೆ. ತಾಯಿ ಹಾಗೂ ಮಗು ಸುರಕ್ಷಿತವಾಗಿದ್ದಾರೆ ಎಂದು ವೈದ್ಯರು ಈಗಾಗಲೇ ಮಾಹಿತಿ ನೀಡಿದ್ದು, ಮೆಗಾ ಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ಅಭಿಮಾನಿಗಳು ರಾಮ್ ಚರಣ್ ಹಾಗೂ ಉಪಾಸನಾ ದಂಪತಿಗಳ ಹೆಣ್ಣು ಮಗುವನ್ನ ನೋಡಲು ಕಾಯುತ್ತಿದ್ದಾರೆ. ರಾಮ್ ಚರಣ್ ಹಾಗೂ ಉಪಾಸಾನ 2012 ಜೂನ್ 14ಕ್ಕೆ ವಿವಾಹವಾಗಿದ್ದರು. ಮದುವೆಯಾದ ದಶಕಗಳ ಬಳಿಕ ಮಗು ಪಡೆಯುವ ನಿರ್ಧಾರ ಮಾಡಿದ ದಂಪತಿಗಳಿಗೆ ಇದೀಗ ಹೆಣ್ಣು ಮಗು ಪ್ರಾಪ್ತಿಯಾಗಿದೆ. ಅಭಿಮಾನಿಗಳು ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಸಂತಸವನ್ನ ವ್ಯಕ್ತಪಡಿಸಿದ್ದು, ರಾಮ್ ಚರಣ್ ಹಾಗೂ ಉಪಾಸಾನ ದಂಪತಿಗಳಿಗೆ ಅಭಿನಂದನೆಗಳ ಮಹಾಪುರವೇ ಹರಿದು ಬರುತ್ತಿದೆ.
ಮಗಧೀರ ಚಿತ್ರದಲ್ಲಿ ತನ್ನ ಅಮೋಘ ನಟನೆಯಿಂದ ತೆಲುಗು ಚಿತ್ರರಂಗದಲ್ಲಿ ತನ್ನದೇ ಲ್ಯಾಂಡ್ ಮಾರ್ಕ್ ಕ್ರಿಯೇಟ್ ಮಾಡಿದ ರಾಮ್ ಚರಣ್, ನಂತರ ತೆಲುಗುನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇತ್ತೀಚಿಗೆ ಬಿಡುಗಡೆ ಕಂಡ ಆರ್ ಆರ್ ಆರ್ ಚಿತ್ರ ಕೂಡ ರಾಮ್ ಚರಣ್ ಗೆ ಒಂದೊಳ್ಳೆ ಬ್ರೇಕ್ ಕೊಟ್ಟ ಸಿನಿಮಾವಾಗಿತ್ತು. ಮದುವೆಯಾದ ಬಳಿಕ ಇಬ್ಬರು ದಂಪತಿಗಳು ದಶಕಗಳ ನಂತರವೇ ಮಗುವನ್ನ ಪಡೆಯುವ ಬಯಕೆ ಹೊಂದಿ,ಈಗ ಹೆಣ್ಣು ಮಗುವಿಗೆ ರಾಮ್ ಚರಣ್ ಪತ್ನಿ ಉಪಾಸಾನ ಜನ್ಮ ನೀಡಿದ್ದಾರೆ.
ಮೆಗಾ ಸ್ಟಾರ್ ಫ್ಯಾಮಿಲಿ ಕಳೆದ ಹಲವಾರು ದಶಕಗಳಿಂದ ಟಾಲಿವುಡ್ ಚಿತ್ರರಂಗದಲ್ಲಿ ತನ್ನದೇಯಾದಂತ ಛಾಪು ಮೂಡಿಸಿದ್ದು, 90 ರ ದಶಕದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಟಾಲಿವುಡ್ ಚಿತ್ರರಂಗದಲ್ಲಿ ಹೆಸರು ಮಾಡಿದ್ರು, ಇನ್ನೂ 20 ರ ದಶಕದ ನಂತರ ರಾಮ್ ಚರಣ್ ಕೂಡ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಒಟ್ಟಾರೆ ಮೆಗಾ ಸ್ಟಾರ್ ಕುಟುಂಬಕ್ಕೆ ಹೊಸ ಪುಟಾಣಿಯ ಆಗಮನವಾಗಿದ್ದು, ಅಭಿಮಾನಿಗಳು ಹಾಗೂ ಕುಟುಂಬದವರಿಗೆ ಸಾಕಷ್ಟು ಖುಷಿ ನೀಡಿದೆ. ಅಭಿಮಾನಿಗಳು ಮಾತ್ರ ಮಗುವಿನ ಮುಖ ನೋಡಲು ಉತ್ಸುಕರಾಗಿದ್ದು, ಸೋಷಿಯಲ್ ಮೀಡಿಯಾ ಮೂಲಕ ದಂಪತಿಗಳು ಮಗುವಿನ ಫೋಟೋ ಹಂಚಿಕೊಳ್ಳುವ ನಿರೀಕ್ಷೆಯಿದೆ.