“ಅಗ್ನಿಸಾಕ್ಷಿ” ಈ ಹೆಸರು ಎಲ್ಲರಿಗೂ ನೆನಪಿದ್ದೆ ಇರುತ್ತದೆ. ಈ ಹೆಸರಿನ ಧಾರಾವಾಹಿ ಒಂದು ಕಾಲದಲ್ಲಿ ಎಲ್ಲಾ ಧಾರಾವಾಹಿಗಳ ನ್ನು ಹಿಂದಿಕ್ಕಿ ತನ್ನ ಟಿ ಆರ್ ಒನ್ ಯನ್ನು ಸತತ ಆರು ವರ್ಷ ಕೂಡ ಮೊದಲ ಸ್ಥಾನದದಲ್ಲಿ ನೆಲೆಯೂರಿತ್ತು ಎಂದರೆ ತಪ್ಪಾಗಲಾರದು. ಈ ಧಾರವಾಹಿ ಎಷ್ಟರ ಮಟ್ಟಿಗೆ ಜನರ ಮನಸ್ಸು ಗೆದ್ದಿತ್ತು ಎಂದು ನಾವು ಹೊಸದಾಗಿ ಹೇಳಬೇಕಾಗೇ ಇಲ್ಲ.ಇಂದಿಗೂ ಆ ಧಾರಾವಾಹಿಯ ಎರಡನೇ ಭಾಗ ಬರಲಿ ಎಂದು ಬಯಸುವವರೆ ಹೆಚ್ಚಾಗಿದ್ದಾರೆ.ಇನ್ನು ಅದ್ರಲ್ಲೂ ಈ ಧಾರಾವಾಹಿಯ ಪ್ರತಿಯೊಂದು ಪಾತ್ರದರಿಯು ಕೂಡ ಸಾಕಷ್ಟು ಧಾರಾವಾಹಿಗಳಲ್ಲಿ ಗುರುತಿಸಿಕೊಂದ್ದರು ಇಂದಿಗೂ ಅದೇ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಾರೆ. ಅದ್ರಲ್ಲೂ “ಸನ್ನಿಧಿ” ಪಾತ್ರದಾರಿಯಾದ “ವೈಷ್ಣವಿ” ಅವರಿಗೆ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.ಇನ್ನು ಈ ನಟಿ ಸ್ವಭಾವ ಹೇಗಿದೆ ಎಂದರೆ ಧಾರಾವಾಹಿಯಲ್ಲಿ ತೋರಿಸುವಂತೆ ನಟಿಯರ ಗುಣಗಳನ್ನು ನೈಜ ಜೀವನದಲ್ಲಿ ಹೊಂದಿದ್ದಾರೆ.

ಇವರನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳಲು ಸಿಕ್ಕ ವೇದಿಕೆ ಎಂದರೆ ಅದು ಕನ್ನಡ ಬಿಗ್ ಬಾಸ್. ಹೌದು ಸಿಸನ್ 8ರ ಸ್ಪರ್ದಿಯಾಗಿ ವೈಷ್ಣವಿ ಅವರು ಭಾಗವಹಿಸಿದ್ದರು.ಆಗ ಅವರ ಗುಳಿ ಕೆನ್ನೆಯ ಆ ನಗು ಅವರ ಸಾಧಾರಣ ಮೇಕಪ್ ಉಳ್ಳ ಅವರ ಸೌಂದರ್ಯ ಎಲ್ಲರನ್ನು ಸೆಳೆದಿತ್ತು. ಅದಕ್ಕಿಂತ ಹೆಚ್ಚಾಗಿ ಇವರ ಸರಳತೆ ಎಲ್ಲರ ಮನಸ್ಸು ಹೊಕ್ಕಿತ್ತು ಎಂದರೆ ತಪ್ಪಾಗಲಾರದು. ಈ ನಟಿ ಬಿಗ್ ಬಾಸ್ ಮೊದಲ ಇನ್ನಿಂಗ್ಸ್ ನಲ್ಲಿ ಮನೋರಂಜನೆ ಮೂಲಕ ಎಲ್ಲರ ಕಣ್ಣು ಹಾಗೂ ಮನಸ್ಸು ಹೊಕಿದ್ದರು.ಆದರೆ ಕೋವಿಡ್ ಕಾರಣದಿಂದ ಬಿಗ್ ಬಾಸ್ 8ಅರ್ಧಕ್ಕೆ ನಿಂತಿತ್ತು.
ಕರೋನ ಅಲೆ ಕಡಿಮೆಯಾದ ನಂತರ ತನ್ನ ಎರಡನೇ ಇನ್ನಿಂಗ್ಸ್ ಮುಕಾಂತರ ಮತ್ತೆ ಆರಂಭವಾಗಿತ್ತು. ಆಗ ಮತ್ತೆ ಸುದೀಪ್ ಅವರು ಎಲ್ಲಾ ಸ್ಪರ್ದಿಗಳನ್ನು ಮಾತನಾಡಿಸಿ ಹೇಗಿತ್ತು ಬಿಗ್ ಬಾಸ್ ಮುಗಿದ ನಂತರದ ಅವರ ಜರ್ನಿ ಎಂದು ಪರ್ಶಿನಿಸಿದ್ದಾಗ ವೈಷವಿ ಅವರು ನನಗೆ 200 ಕ್ಕೂ ಹೆಚ್ಚು ಮದುವೆ ಪ್ರೊಪೋಸಲ್ ಬಂದಿತ್ತು ಎಂದಿದ್ದರು. ಹೀಗೆ ಮುಂದು ವರೆದು ಮಾತನಾಡಿದ ಸುದೀಪ್ ಹೇಗಿರಬೇಕು ನಿಮ್ಮ ಭಾವಿ ಪತಿ ಎಂದಾಗ ವೈಷ್ಣವಿ ಅವರು ನಾನು ಮದುವೆಯಾಗುವ ಹುಡುಗನಿಗೆ ಮೀಸೆ-ದಾಡಿ ಇರಬೇಕು, ಆಡಂಬರವಿಲ್ಲದೇ ಸರಳವಾಗಿ ಇರಬೇಕು.
ಈಗ ಜಗತ್ತು ಹೇಗೆ ನಡೆಯುತ್ತೆ ಅಂದ್ರೆ, ಜನರು ತುಂಬ ಗೊಂದಲ ಮಾಡ್ಕೊಂಡು ಯೋಚನೆ ಮಾಡ್ಕೊಂಡು ಇರ್ತಾರೆ. ಎಲ್ಲ ವಿಷಯವನ್ನು ಲೈಟ್ ಆಗಿ ತಗೋಬೇಕು. ಜೀವನವನ್ನು ಎಂಜಾಯ್ ಮಾಡಬೇಕು. ಜೀವನ ಅಂದ್ರೆ ಕಷ್ಟ ಸುಖ ಎಲ್ಲ ಇರತ್ತೆ. ಅದನ್ನು ಸಿಂಪಲ್ ಆಗಿ ತಗೋಬೇಕು. ನಗ್ ನಗ್ತಾ ಇರಬೇಕು. ಅವರ ಪಾಡಿಗೆ ಅವರು ಆರಾಮಾಗಿದ್ರೆ ಸಾಕು. ಮಿಕ್ಕಿದ್ದೆಲ್ಲ ನಾನು ನೋಡ್ಕೋತಿನಿ..’’ ವೈಷ್ಣವಿ ಗೌಡ ಹೇಳಿಕೊಂಡಿದ್ದರು.ಇದೀಗ ಆ ಮಾತಿನ ನಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ವೈರಲ್ ಆಗಿದೆ.
ಆ ಫೋಟೋನಲ್ಲಿ ವೈಷ್ಣವಿ ಅವರು ಸೀರೆ ತೊಟ್ಟು ಹಾರ ಹಾಕಿ ನಿಂತಿದ್ದಾರೆ.ಇನ್ನು ಅವರ ಪಕ್ಕದಲ್ಲಿ ಹ್ಯಾಂಡ್ಸಮ್ ಹುಡುಗ ಕೂಡ ಹಾರ ತೊಟ್ಟು ನಿಂತಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.ಇನ್ನು ವೈಷವಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರುತ್ತಿದ್ದಾರೆ.ಆದರೆ ಇನ್ನೂ ಯಾವ ಪ್ರತಿಕ್ರಿಯೆ ನೀಡದೆ ಇರುವುದು ಜನರಲ್ಲಿ ಗೊಂದಲ ಮೂಡಿಸಿದೆ.ಈ ವಿಚಾರವಾಗಿ ವೈಷ್ಣವಿ ಅವರೇ ಪ್ರತಿಕ್ರಿಯೆ ನೀಡುವ ವರೆಗೂ ನಾವು ಕಾದು ನೋಡಬೇಕಿದೆ.