ಬಿಗ್ ಬಾಸ್ ಶೋ ಅಂದ್ರೆ ಪ್ರತಿ ವಾರ ಒಂದೊಂದು ರೀತಿ ವಿಭಿನ್ನವಾದ ಟ್ವಿಸ್ಟ್ ಗಳು ಇದ್ದೇ ಇರುತ್ತದೆ. ಪ್ರತಿ ವಾರ ಎಲಿಮಿನೇಷನ್, ನಾಮಿನೇಷನ್ ಇದೆಲ್ಲವೂ ಕೂಡ ಇರುತ್ತದೆ. ವಾರಕ್ಕೆ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿ ಹೊರ ಬರಲೇಬೇಕು. ಫಿನಾಲೆಗೆ 5 ಸ್ಪರ್ಧಿಗಳು ಇರಲೇಬೇಕು, ಅವರುಗಳ ಪೈಕಿ ಒಬ್ಬರು ಮಾತ್ರ ವಿನ್ನರ್ ಆಗಬೇಕು. ಇದು ಬಿಗ್ ಬಾಸ್ ಮನೆಯಲ್ಲಿ ಪ್ರತಿ ಸೀಸನ್ ನಲ್ಲಿ ನಡೆಯುವ ವಿಚಾರ. ಅದರಂತೆಯೇ ಬಿಗ್ ಬಾಸ್ ಕನ್ನಡ ಸೀಸನ್ 11ನಲ್ಲಿ ಈ ವಾರ ಮನೆಯಿಂದ ಹೊರಬಂದಿರುವ ಸ್ಪರ್ಧಿ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.. ಅದಕ್ಕೆ ಉತ್ತರ ಕೂಡ ಈಗಾಗಲೇ ತಿಳಿದುಬಂದಿದೆ..

ಕಲರ್ಸ್ ಕನ್ನಡ ವಾಹಿನಿಯು ಈ ವಾರದ ಎಲಿಮಿನೇಷನ್ ಬಗ್ಗೆ ಈಗಾಗಲೇ ಪ್ರೊಮೋ ಬಿಡುಗಡೆ ಮಾಡಿದೆ. ಈ ವಾರ ನಾಮಿನೇಟ್ ಆಗಿದ್ದವರು ತ್ರಿವಿಕ್ರಂ, ಹನುಮಂತ, ಮೋಕ್ಷಿತಾ, ಐಶ್ವರ್ಯ ಮತ್ತು ರಜತ್. ಇವರುಗಳಲ್ಲಿ ತ್ರಿವಿಕ್ರಂ ಅವರು ಸೆಲ್ಫ್ ನಾಮಿನೇಟ್ ಅಂದರೆ ಹೊರ ಹೋಗುವುದಕ್ಕೆ ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡರು. ತ್ರಿವಿಕ್ರಂ ಅವರು ತೆಗೆದುಕೊಂಡ ಈ ನಿರ್ಧಾರ ಮನೆಯಲ್ಲಿದ್ದ ಬಹುತೇಕರಿಗೆ ಇಷ್ಟವಾಗಲಿಲ್ಲ. ರಜತ್ ಅವರು ನೇರವಾಗಿಯೇ, ತ್ಯಾಗರಾಜ ಆಗೋದು ಬೇಡ ಎಂದು ಕೂಡ ಹೇಳಿದ್ದರು. ಈ ವಿಷಯದ ಬಗ್ಗೆ ನಿನ್ನೆಯ ಸಂಚಿಕೆಯಲ್ಲಿ ಕೂಡ ಚರ್ಚೆ ಉಂಟಾಯಿತು.
ಕಿಚ್ಚ ಸುದೀಪ್ ಅವರು ತ್ರಿವಿಕ್ರಂ ಅವರಿಗೆ ತಮ್ಮನ್ನು ತಾವೇ ಯಾಕೆ ನಾಮಿನೇಟ್ ಮಾಡಿಕೊಂಡಿದ್ದು ಎಂದು ಕೇಳಿದ್ದಕ್ಕೆ ಉತ್ತರ ಕೊಟ್ಟ ತ್ರಿವಿಕ್ರಂ, ತಾವು ತೆಗೆದುಕೊಂಡ ಕೆಲವು ನಿರ್ಧಾರಗಳ ಬಗ್ಗೆ ತಮಗೆ ಇಷ್ಟವಾಗದ ಕಾರಣ ಸೆಲ್ಫ್ ನಾಮಿನೇಟ್ ಮಾಡಿಕೊಂಡಿದ್ದಾಗಿ ಹೇಳಿದರು. ಆಗ ಕಿಚ್ಚ ಸುದೀಪ್ ಅವರು, ನೀವು ಸೇಫ್ ಆಗಿ ಮನೆಯಲ್ಲೇ ಉಳ್ಕೊತಿರಾ ಅಂತ ಅಷ್ಟು confidence ಇದ್ಯಾ ಎಂದು ಕೂಡ ಪ್ರಶ್ನೆ ಮಾಡಿದರು, ಹಾಗೆಯೇ ತ್ರಿವಿಕ್ರಂ ಅವರಿಗೆ ಈ ನಿರ್ಧಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಹ ತಿಳಿಸಿ, ಆದ ತಪ್ಪೇನು ಅನ್ನೋದನ್ನ ಮನವರಿಕೆ ಮಾಡಿಸಿದರು. ತ್ಯಾಗರಾಜ ಆಗುಗ ಅವಶ್ಯಕತೆ ಇಲ್ಲ ಎಂದು ಸಹ ಹೇಳಿದರು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇಷ್ಟೆಲ್ಲಾ ಆದ ನಂತರ ಎಲಿಮಿನೇಶನ್ ಬಗ್ಗೆ ತ್ರಿವಿಕ್ರಂ ಅವರಿಗೆ ಭಯ ಇದ್ದಿದ್ದು ನಿಜ. ಇಂದು ಕಲರ್ಸ್ ವಾಹಿನಿ ಶೇರ್ ಮಾಡಿರುವ ಪ್ರೊಮೋದಲ್ಲಿ ಹನುಮಂತ, ರಜತ್, ಮೋಕ್ಷಿತಾ, ಐಶ್ವರ್ಯ ನಾಲ್ವರನ್ನು ಸೇವ್ ಮಾಡಿದ ಸುದೀಪ್ ಅವರು ತ್ರಿವಿಕ್ರಂ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ಹೇಳುತ್ತಾರೆ. ಇದು ಮನೆಯ ಎಲ್ಲರಿಗೂ ದೊಡ್ಡ ಶಾಕ್ ನೀಡಿತು. ತ್ರಿವಿಕ್ರಂ ಸಹ ಬಹಳ ಶಾಕ್ ಹಾಗೂ ಬೇಸರದಲ್ಲೇ ಮುಖ್ಯದ್ವಾರದ ಬಳಿ ಬಂದರು, ಅಲ್ಲಿಯವರೆಗೂ ಹೋದ ನಂತರ ಸುದೀಪ್ ಅವರು ತಾವು ಪ್ರಾಂಕ್ ಮಾಡಿದ್ದು ಎಂದು ಹೇಳಿ, ಈ ವಾರ ಯಾವುದೇ ಎಲಿಮಿನೇಷನ್ ಇಲ್ಲ ಎಂದು ಹೇಳಿದರು. ಆದರೆ ಈ ಪ್ರಾಂಕ್ ಎಲ್ಲರಲ್ಲೂ ಭಯ ಮತ್ತು ಸೀರಿಯಸ್ನೆಸ್ ತರಿಸಿದ್ದಂತೂ ನಿಜ.

ಸುದೀಪ್ ಅವರು ಸತ್ಯ ಹೇಳಿದ ನಂತರ ಎಲ್ಲರಿಗೂ ಸಮಾಧಾನ ಆಗಿದೆ. ತ್ರಿವಿಕ್ರಂ ಬಹಳ ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಒಬ್ಬರು, ಅಂಥ ಸ್ಪರ್ಧಿ ಎಲಿಮಿನೇಟ್ ಆಗುತ್ತಾರೆ ಅಂದ್ರೆ ಎಲ್ಲರಿಗೂ ಅದು ಸಹಿಸಲು ಕಷ್ಟ ಅನ್ನಿಸುವ ವಿಷಯವೇ ಹೌದು. ಅದೇ ರೀತಿ ಎಲ್ಲರಿಗೂ ಆಗಿತ್ತು. ತ್ರಿವಿಕ್ರಂ ಅವರು ಸೇಫ್ ಆಗಿದ್ದು ಎಲ್ಲರಿಗೂ ಸಂತೋಷವೆ ಆಗಿದೆ. ಬಿಗ್ ಬಾಸ್ ಶೋ ಮುಗಿಯಲು ಇನ್ನು ಉಳಿದಿರುವುದು 4 ವಾರಗಳು ಮಾತ್ರ. ಈಗಿರುವ ಸ್ಪರ್ಧಿಗಳ ಪೈಕಿ ಯಾರು ಫಿನಾಲೆ ತಲುಪುತ್ತಾರೆ? ವಿನ್ನರ್ ಆಗಿ 50 ಲಕ್ಷ ಗೆದ್ದು, ಬಿಗ್ ಬಾಸ್ ಟ್ರೋಫಿ ಪಡೆಯೋದು ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಶುರುವಾಗಿದೆ.