ಬೆಂಗಳೂರು : ಟಿವಿ9 ಸಂಸ್ಥೆ ನಡೆಸಿದ 7ನೇ ಆವೃತ್ತಿಯ ಎಜ್ಯುಕೇಷನ್ ಎಕ್ಸ್ ಪೋಗೆ ಬೆಂಗಳೂರಿನಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. 80ಕ್ಕೂ ಹೆಚ್ಚು ದೇಶ-ವಿದೇಶಗಳ ವಿದ್ಯಾಸಂಸ್ಥೆಗಳು ಎಕ್ಸ್ಫೋದಲ್ಲಿ ಭಾಗಿಯಾಗಿದ್ದು ವಿಶೇಷ. ನಗರದ ಅರಮನೆ ಮೈದಾನದಲ್ಲಿ ಜೂನ್ 09ರಿಂದ ಆರಂಭವಾದ ಈ ಎಜ್ಯುಕೇಷನ್ ಎಕ್ಸ್ ಪೋ ಮೂರು ದಿನಗಳ ಕಾಲ ನಡೆದಿದ್ದು, ರಾಜ್ಯದ ನಾನಾ ಭಾಗದ ವಿದ್ಯಾರ್ಥಿಗಳು ಆಗಮಿಸಿ, ತಮ್ಮ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದ, ದೇಶ-ವಿದೇಶಗಳ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಮಾಹಿತಿಯನ್ನು ಪಡೆದುಕೊಂಡರು. ರಾಜ್ಯ ಉನ್ನತ ಶಿಕ್ಷಣ ಸಚಿವ ಎಮ್.ಸಿ. ಸುಧಾಕರ್ ಅವರು, ಎಜ್ಯುಕೇಷನ್ ಎಕ್ಸ್ ಪೋಗೆ ಚಾಲನೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಎಚ್ ಎಸ್ ಆರ್ ಮೂರ್ತಿ , ಅಸಿಸ್ಟೆಂಟ್ ಡೈರೆಕ್ಟರ್ ಮೀಡಿಯಾ ಅಂಡ್ ಅಡ್ಮಿಷನ್ ಕೆಎಲ್ ಡೀಮ್ಡ್ ಯೂನಿವರ್ಸಿಟಿ ಹಾಗೇ ಡಾಕ್ಟರ್ ಮುರಳಿಧರ G.V. ಡೈರೆಕ್ಟರ್ ICFAI ಬ್ಯುಸಿನೆಸ್ ಸ್ಕೂಲ್ ಬೆಂಗಳೂರು, ನೋಬಲ್ ಸೀನಿಯರ್ ವಿಪಿ ಸೌತ್ ಟಿವಿನೈನ್ ನೆಟ್ ವರ್ಕ್ ರಿಂದ ಎಕ್ಸ್ ಪೋ ಚಾಲನೆಗೆ ಸಾಥ್ ನೀಡಿದರು. ಇದೇ ವೇಳೆ ಮಾತನಾಡಿದ ಸಚಿವ ಎಮ್.ಸಿ. ಸುಧಾಕರ್ ಅವರು, ರಾಜ್ಯದ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಎಜ್ಯುಕೇಷನ್ ಎಕ್ಸ್ ಪೋ ನಡೆಸುತ್ತಿರುವ ಟಿವಿ9 ಸಂಸ್ಥೆಗೆ ನನ್ನ ಅಭಿನಂದನೆಗಳು.

ಈ ರೀತಿಯ ಎಜ್ಯುಕೇಷನ್ ಎಕ್ಸ್ ಪೋಗಳು ವಿದ್ಯಾರ್ಥಿಗಳ ಅನಿಸಿಕೆಗಳು ಮತ್ತು ಆಲೋಚನೆಯ ಅನುಗುಣವಾಗಿ ಅವರ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಈ ರೀತಿಯ ವೇದಿಕೆ ಅವಶ್ಯಕವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಶೈಕ್ಷಣಿಕ ಪ್ರಗತಿಯನ್ನು ಹೆಚ್ಚಿಸಲು ನಾವು ಹೇಗೆ ವಿಧ್ಯಾರ್ಥಿಗಳಿಗೆ ಶಿಕ್ಷಣ ನೀಡಬಹುದು ಎಂಬದನ್ನು ದೃಷ್ಟಿಯಲ್ಲಿಟ್ಟುಕೊಂಡು ವೇಗವಾಗಿ ಕೆಲಸ ಮಾಡುತ್ತೇವೆ. ಉತ್ತಮ ಶಿಕ್ಷಣ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಶ್ರಮಿಸಲಿದೆ ಎಂಬ ಭರವಸೆ ನೀಡಿದರು.

ಲಕ್ಕಿ ವಿನರ್ಗೆ ಇ ಬೈಕ್ ಗಿಫ್ಟ್..!
ಇನ್ನು ಎಜುಕೇಷನ್ ಎಕ್ಸ್ ಪೋದಲ್ಲಿ ನಡೆದ ಲಕ್ಕಿ ಡ್ರಾನಲ್ಲಿ ಗಾನವಿ ಎಂಬ ಬೆಂಗಳೂರಿನ ಯುವತಿ ವಿನ್ ಆಗಿದ್ದಾರೆ. ಇ ಬೈಕನ್ನು ಗೆದ್ದ ಲಕ್ಕಿ ವಿನರ್ ಗಾನವಿಗೆ ಟಿವಿನೈನ್ ನೆಟ್ ವರ್ಕ್ ವಿಪಿ ನೋಬಲ್ ಡೈರೆಕ್ಟರ್ ಉಮೇಶ್ ಗೌಡ ಅವರು ನೀಡಿ ಶುಭ ಆರೈಸಿದರು. ಮಕ್ಕಳನ್ನು ಪಿಯುಸಿ ನಂತರ ಯಾವ ಕಾಲೇಜಿಗೆ ಸೇರಿಸಬೇಕು. ಯಾವ ಕೋರ್ಸ್ ತೆಗೆದುಕೊಂಡರೆ ಒಳ್ಳೆಯದು, ಕೋರ್ಸ್ಗಳ ಶುಲ್ಕ ಎಷ್ಟು, ಉತ್ತಮ ಕಾಲೇಜುಗಳು ಯಾವವು ಮುಂತಾದ ಪೋಷಕರ ಗೊಂದಲಗಳಿಗೆ ಎಕ್ಸ್ಪೋದಲ್ಲಿ ಉತ್ತರ ನೀಡಲಾಯಿತು.