ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನು ಮಾಗಡಿ ಇನ್ಸ್ಪೆಕ್ಟರ್ ಗೆ ವರ್ಗಾವಣೆ ಮಾಡಲಾಗಿದೆ.
ಕುದೂರು ಠಾಣೆಯ ಇನ್ ಸ್ಪೆಕ್ಟರ್ ಎಪಿ ರವಿಕುಮಾರ್ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದರು, ಆದರೆ ಪ್ರಕರಣದಲ್ಲಿ ಅವರೇ ದೂರುದಾರರಾದ ಹಿನ್ನೆಲೆ ಪ್ರಕರಣದ ತನಿಖೆಯನ್ನು ಮಾಗಡಿ ಇನ್ಸ್ಪೆಕ್ಟರ್ ರವಿ ಅವರಿಗೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಕರಣದ ತನಿಖೆಯನ್ನು ಇನ್ ಸ್ಪೆಕ್ಟರ್ ರವಿ ನೇತೃತ್ವದ ತಂಡ ಮುಂದುವರೆಸಲಿದೆ.
ಸದ್ಯ, ಸ್ವಾಮೀಜಿಯ ಕಾರು ಚಾಲಕ ಜ್ಯೋತಿ ಹಾಗೂ ದೇವಸ್ಥಾನದ ಆರ್ಚಕ ಅಂಬರೀಷ್ ಅವರ ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರಿಬ್ಬರೂ ಸ್ವಾಮೀಜಿಗೆ ಹೆಚ್ಚು ಆಪ್ತರಾಗಿದ್ದವರು ಎಂದು ಹೇಳಲಾಗಿದೆ. ಪ್ರಕರಣ ಸಂಬಂಧ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು, ವಿಡಿಯೊ ಕಾಲ್ ಮಾಡಿದ ಯುವತಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ ಎಂದು ತಿಳಿದುಬಂದಿದೆ.ಪ್ರಕರಣದ ತನಿಖೆಯನ್ನು ಇನ್ ಸ್ಪೆಕ್ಟರ್ ರವಿ ನೇತೃತ್ವದ ತಂಡ ಮುಂದುವರೆಸಲಿದೆ.