ಭಾರತದಂತಹ ವೈವಿದ್ಯಮಯ ರಾಷ್ಟ್ರವು ಉಡುಗೆ-ತೊಡುಗೆಯಲ್ಲಿ ಮಾತ್ರವಲ್ಲಾ ಆಹಾರ ಶೈಲಿಯಲ್ಲಿಯೂ ಸಹ ವೈವಿಧ್ಯತೆಯನ್ನು ಕಾಯ್ದುಕೊಂಡಿದೆ. ಆಯಾ ರಾಜ್ಯದ ವಾತಾವರಣ ಹಾಗೂ ಅಭಿರುಚಿಗೆ ಅನುಗುಣವಾಗಿ ಆಹಾರ ಪದ್ಧತಿಯಲ್ಲಿ ಭಿನ್ನತೆಯಿದ್ದು, ಸೇವಿಸುವ ಪ್ರಮಾಣದಲ್ಲಿಯೂ ಭಾರೀ ವ್ಯತ್ಯಾಸವಿದೆ. ಭಾರತವನ್ನು ಅತಿ ಹೆಚ್ಚು ಸಸ್ಯಹಾರಿ ಪ್ರಿಯರಿರುವ ದೇಶ ಎಂದು ಪರಿಗಣಿಸಲಾಗುತ್ತದೆ. ಆದರೆ ಈಗಿನ ಅಧ್ಯಯನದ ಪ್ರಕಾರ ಭಾರದಲ್ಲಿಯೂ ನಾನ್ವೆಜ್ ತಿನ್ನುವವರ ಪ್ರಮಾಣ ಹೆಚ್ಚಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆ(NFHS-5) ಪ್ರಕಾರ, ಬಹುತೇಕ ರಾಜ್ಯಗಳು ಮಾಂಸಾಹಾರ ಸೇವಿಸುವ ಜನಸಂಖ್ಯೆಯನ್ನು ಹೊಂದಿವೆ ಎಂದು ವರದಿ ಬಿಡುಗಡೆಗೊಳಸಿದೆ. ಈ ಸಮೀಕ್ಷೆಯ ಪ್ರಕಾರ ಶೇ.85ರಷ್ಟು ಜನರು ಮಾಂಸಾಹಾರ ಸೇವಿಸುತ್ತಾರೆ ಎಂದು ತಿಳಿದುಬಂದಿದೆ. ಹಾಗೆಯೇ, ಟಾಪ್ 10 ಮಾಂಸಾಹಾರಕ್ಕೆ ಆದ್ಯತೆ ಕೊಡುವ ರಾಜ್ಯಗಳನ್ನು ಪಟ್ಟಿ ಮಾಡಿದೆ. ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ರಾಜ್ಯಗಳು ಯಾವುವು? ನಮ್ಮ ಕರ್ನಾಟಕ ಯಾವ ಸ್ಥಾನದಲ್ಲಿದೆ ಎಂಬುದರ ಬಗೆಗಿನ ಸಂಕ್ಷಿಪ್ತ ಮಾಹಿತಿ ಇಲ್ಲಿದೆ….

ಮೊದಲ ಸ್ಥಾನದಲ್ಲಿ ನಾಗಾಲ್ಯಾಂಡ್:
ನಾಗಾಲ್ಯಾಂಡ್ನಲ್ಲಿ ಶೇ.99.8ರಷ್ಟು ಮಂದಿ ಮಾಂಸಾಹಾರ ಸೇವಿಸುತ್ತಾರೆ. ಹಂದಿಮಾಂಸ, ಸ್ಮೂಕ್ ಮಾಂಸ ಹಾಗೂ ಬಿದಿರಿನಲ್ಲಿ ಬೇಯಿಸಿದ ಮೀನುಗಳನ್ನು ಹೆಚ್ಚು ಸೇವಿಸುತ್ತಾರೆ.
ಎರಡನೇ ಸ್ಥಾನ ಪಶ್ಚಿಮ ಬಂಗಾಳ:
ಶೇ.99.3ರಷ್ಟು ಬಂಗಾಳವಾಸಿಗಳು ಮಾಂಸಾಹಾರವನ್ನು ಸೇವಿಸುತ್ತಿದ್ದು, ಮೀನಿನಿಂದ ತಯಾರಿಸಿದ ಹಲವು ಬಗೆಯ ಆಹಾರಗಳೇ ಇಲ್ಲಿ ಪ್ರಮುಖವಾದದ್ದು.
ಕೇರಳ:
ಕೇರಳದಲ್ಲಿನ 99.1ರಷ್ಟು ಜನರು ಮಾಂಸಾಹಾರ ಪ್ರಿಯರಾಗಿದ್ದು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಮಲಬಾರ್ ಫಿಶ್ ಕರಿ, ಬಿರಿಯಾನಿ ಹಾಗೂ ಸಮುದ್ರಾಹಾರ ಅತಿ ಹೆಚ್ಚು ಜನಪ್ರಿಯ ಖಾದ್ಯಗಳಾಗಿವೆ.

ಆಂಧ್ರಪ್ರದೇಶ:
ನಾಲ್ಕನೇ ಸ್ಥಾನದಲ್ಲಿರುವ ಆಂಧ್ರಪ್ರದೇಶದಲ್ಲಿ 98.25ರಷ್ಟು ಮಂದಿ ಮಾಂಸಹಾರವನ್ನು ಸೇವಿಸುತ್ತಾರೆ. ಚಿಕನ್ ಕರಿ ಮತ್ತು ಸಮುದ್ರಾಹಾರ ಖಾದ್ಯಗಳು ಇಲ್ಲಿನ ಬೇಡಿಕೆಯ ಪಟ್ಟಿಯಲ್ಲಿವೆ.
ತಮಿಳುನಾಡು:
97.6೫ ಶೇಕಡದಷ್ಟು ತಮಿಳಿಗರು ಮಾಂಸಾಹಾರ ಸೇವಿಸುವವರಾಗಿದ್ದು, ಈ ರಾಜ್ಯವು ರ್ಯಾಂಕಿಂಗ್ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ. ಮಟನ್ ಮಸಾಲ, ಪಾಂಡಿ ಕರಿ ಹಾಗೂ ಮಾಂಸದಿಂದ ಇತರ ಖಾದ್ಯಗಳನ್ನು ಇಲ್ಲಿ ತಯಾರಿಸಲಾಗುತ್ತದೆ.
6ನೇ ಸ್ಥಾನದಲ್ಲಿ ಒಡಿಶಾ:
ಇಲ್ಲಿನ ಜನರು ಸಮುದ್ರಾಹಾರವನ್ನು ಹೆಚ್ಚು ಇಷ್ಟ ಪಡುವವರಾಗಿದ್ದು, ಮುಧಿ ಘಂಟಾ, ಚುಂಗ್ಡಿ ಮಲೈ ಇಲ್ಲಿನ ಬೇಡಿಕೆಯ ರೆಸಿಪಿಯಾಗಿದೆ.
7ನೇ ಸ್ಥಾನದಲ್ಲಿ ತ್ರಿಪುರ:
ಶೇ.95ರಷ್ಟು ತ್ರಿಪುರಾವಾಸಿಗಳು ಮಾಂಸಾಹಾರಿಗಳಾಗಿದ್ದು, ಮುಯಿ ಬೊರೊಕ್, ಚಿಖ್ವಿ, ವಹಾನ್ ಮೊಸ್ಟೆಂಗ್ ಮತ್ತು ಬೆಂಗೆನಾ ಬಟ್ವಿ ಖಾದ್ಯಗಳು ಇಲ್ಲಿನ ಪ್ರಸಿದ್ಧ ತಿನ್ನಿಸಾಗಿದೆ.
ಗೋವಾ:
ಗೋವಾ ಎಂದಾಕ್ಷಣ ಕಣ್ಣಮುಂದೆ ತೇಲಿ ಬರುವುದೇ ಸಮುದ್ರ. ಇಲ್ಲಿನ 93.8ರಷ್ಟು ವಾಸಿಗಳು ಮಾಂಸಾಹಾರವನ್ನು ಇಷ್ಟಪಡುವುದರಿಂದ ಈ ರಾಜ್ಯಕ್ಕೆ 8ನೇ ಸ್ಥಾನ ನೀಡಲಾಗಿದೆ. ಹಂದಿ ಮಾಂಸ, ವಿಂಡಾಲೂ, ಸೀಗಡಿ ಬಾಲ್ಚಾವೊ, ಏಡಿ ಝಕುಟಿ, ಮೀನು ಕರಿ ಮತ್ತು ಸೀಗಡಿ ಮಸಾಲಕ್ಕೆ ಭಾರೀ ಬೇಡಿಕೆಯಿದೆ.
9ರಲ್ಲಿ ಜಾರ್ಖಂಡ್:
97ರಷ್ಟು ಮಂದಿ ಮಾಂಸಾಹಾರಿಗಳಾಗಿದ್ದು, ಡಬ್ಕಿ, ಕೊಯಿನಾರ್ ಸಾಗ್ ಹಾಗೂ ಮೀನಿನಿಂದ ಮಾಡಿದ ಭಕ್ಷ್ಯಗಳು ಇಲ್ಲಿ ಟ್ರೈ ಮಾಡಲೇಬೇಕಾದ ಖಾದ್ಯಗಳಾಗಿವೆ.

ತೆಲಂಗಾಣ:
ತೆಲಂಗಾಣದಲ್ಲಿ ಕೇವಲ ಶೇ.2.7ರಷ್ಟು ಜನರು ಮಾತ್ರ ಸಸ್ಯಹಾರಿಗಳಾಗಿದ್ದು, ಮಿಕ್ಕ ಜನಸಂಖ್ಯೆ ಮಾಂಸಾಹಾರಿಗಳಾಗಿದ್ದಾರೆ. ಕೋಳಿ, ಎಮ್ಮೆ ಮಾಂಸ, ಮೇಕೆ ಮಾಂಸ, ಮೀನು, ಮೊಟ್ಟೆ ಇಲ್ಲಿ ಹೆಚ್ಚಾಗಿ ಸೇವಿಸಲ್ಪಡುವ ಖಾದ್ಯಗಳಾಗಿವೆ.
ಕರ್ನಾಟಕ, ಮಹಾರಾಷ್ಟ್ರದಲ್ಲಿ ಮಾಂಸಾಹಾರ ಸೇವನೆ ಕಡಿಮೆ:
ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ 81.2%ನಷ್ಟು ಜನರು ಮಾಂಸಾಹಾರ ಸೇವಿಸಿದರೆ, ಮಾಹಾರಾಷ್ಟ್ರದಲ್ಲಿ 77.4%ನಷ್ಟು ಜನರು ಮಾತ್ರ ಮಾಂಸಾಹಾರ ರೂಢಿಸಿಕೊಂಡಿದ್ದಾರೆ. ದೇಶದ ಇನ್ನಿತರ ರಾಜ್ಯಗಳಿಗೆ ಹೋಲಿಸಿದರೆ ಈ ಎರಡು ರಾಜ್ಯಗಳಲ್ಲಿ ಕಡಿಮೆ ಪ್ರಮಾಣದ ಮಾಂಸಾಹಾರ ಪ್ರಿಯರಿದ್ದಾರೆ ಎಂಬುದು ಸಮಿಕ್ಷೆಯಿಂದ ತಿಳಿದು ಬಂದಿದೆ.